ಪ್ರತಿ ವಾರವೂ ಬಿಗ್ ಬಾಸ್‌ ಮನೆಯಲ್ಲಿ ಟಾಸ್ಕ್ ಇದ್ದೇ ಇರುತ್ತದೆ. ಅತ್ಯುತ್ತಮವಾಗಿ ಸ್ಪರ್ಧಿಸಿದರೆ ಅವರೇ ಬೆಸ್ಟ್‌ ಎಂದು ಮೆಡಲ್ ನೀಡಲಾಗುತ್ತದೆ ಹಾಗೂ ಕಳಪೆ ಪ್ರದರ್ಶನ ನೀಡಿದವರಿಗೆ  ವರ್ಸ್ಟ್‌ ಸ್ಪರ್ಧಿ ಎಂದು ಜೈಲಿಗೆ ಕಳುಹಿಸಲಾಗುತ್ತದೆ. ಈ ವಾರ ಕ್ಯಾಪ್ಟನ್ ಆಯ್ಕೆ ಹಾಗೂ ನಾಮಿನೇಶನ್‌ ವರ್ಗಾವಣೆ ಟಾಸ್ಕ್‌ನಿಂದಲೇ ಸಮಯ ಕಳೆದಿತ್ತು.

ನಿರ್ಮಲಾ ಗೋಮುಖವ್ಯಾಘ್ರಿ, ಅಧಿಕ ಪ್ರಸಂಗಿ ಎಂದ ಸಂಬರಗಿ; ಕಾಫಿ ಬೇಡ ಸೂಟ್‌ಕೇಸ್‌ ಓಕೆ! 

ಎಲ್ಲರೂ ಒಮ್ಮತದಿಂದ ಪ್ರಶಾಂತ್ ಸಂಬರಗಿಯನ್ನು ವಾರದ ಉತ್ತಮ ಸ್ಪರ್ಧಿ ಹಾಗೂ ಧನುಶ್ರೀಯನ್ನು ಕಳಪೆ ಸದಸ್ಯೆಯನ್ನು ಆಯ್ಕೆ ಮಾಡಿದ್ದಾರೆ. ಕಳಪೆ ಪ್ರದರ್ಶನ ಕೊಟ್ಟ ಸ್ಪರ್ಧಿ ಜೈಲಿನಿಂದ ಹೊರ ಬರುವವರೆಗೂ ಬಿಗ್‌ಬಾಸ್‌ ಮನೆಯ ಯಾವ ಸೌಲಭ್ಯ ಬಳಸುವಂತಿಲ್ಲ. ಗಂಜಿ ಕುಡಿದು ರಾತ್ರಿ ಕಳೆಯಬೇಕು ಹಾಗೂ ಮನೆಯಲ್ಲಿ ಅಡುಗೆಗೆ ಬೇಕಾದ ತರಕಾರಿಯನ್ನು ಕಟ್ ಮಾಡಿಕೊಡಬೇಕು ಎಂಬ ನಿಯಮವಿದೆ. ಈ ವಾರ ಧನುಶ್ರೀ ಜೈಲಿಗೆ ಹೋದ ಕಾರಣ ಈ ಶಿಕ್ಷೆ ಅನುಭವಿಸಬೇಕಿದೆ. 

ಪ್ರಶಾಂತ್ ಸಂಬರಗಿ ನನ್ನ ಮಾವ ಹುಷಾರ್ ಅಂದ್ರೆ ಯಾರೂ ಮಾತನಾಡೋಲ್ಲ: ಮಂಜು ಪಾವಗಡ! 

ಶನಿವಾರ ಮತ್ತು ಭಾನುವಾರ ಸುದೀಪ್‌ ಆಗಮಿಸಲಿದ್ದಾರೆ. ಒಬ್ಬ ಸ್ಪರ್ಧಿಯನ್ನು ಮನೆಯಿಂದ ಹೊರಗೆ ಕರೆಯುತ್ತಾರೆ. ಇಡೀ ವಾರ ಮನೆಯಲ್ಲಿ ನಡೆದ ಘಟನೆಗಳ ಬಗ್ಗೆ ಚರ್ಚೆ ಮಾಡುತ್ತಾರೆ, ತಪ್ಪು ಸರಿಗಳನ್ನು ತಿದ್ದುತ್ತಾರೆ. ಶುಭ ಪೂಂಜಾ, ವಿಶ್ವನಾಥ್, ರಘು ಗೌಡ, ಧನುಶ್ರೀ ಮತ್ತು ನಿರ್ಮಲಾ ಈಗಾಗಲೇ ಬ್ಯಾಕ್ ಪ್ಯಾಕ್ ಮಾಡಿಕೊಂಡಿದ್ದಾರೆ.  ಎರಡನೇ ವಾರವೂ ಬ್ರೋ ಗೌಡ ಕ್ಯಾಪ್ಟನ್ ಆಗಿರುವ ಕಾರಣ ಮುಂದಿನ ವಾರವೂ ನಾಮಿನೇಶನ್ ಪ್ರಕ್ರಿಯೆಯಿಂದ ಶಮಂತ್ ಸೇಫ್‌ ಝೋನ್‌ನಲ್ಲಿ ಇರುತ್ತಾರೆ.