ಬೆಂಗಳೂರು(ಮಾ. 07)  ಬಿಗ್‌  ಬಾಸ್ ಮನೆಯಿಂದ ಮೊದಲ ವಾರದ ಎಲಿಮಿನೇಶನ್ ಆಗಿದೆ. ಹದಿನೇಳು ಜನರಲ್ಲಿ ಟಿಕ್ ಟಾಕ್ ಮೂಲಕ ಹೆಸರು ಮಾಡಿದ್ದ ಧನುಶ್ರೀ ಮನೆಯಿಂದ ಹೊರಬಂದಿದ್ದಾರೆ.  ಆದರೆ ವೇದಿಕೆ ಮೇಲೆ ಕಿಚ್ಚನ ಸೇರಿಕೊಂಡ ಮೇಲೆಯೂ ಮೇಕಪ್ ದೇ ಮಾತು.

ಕಿಚ್ಚ ಧನುಶ್ರೀ ಅವರನ್ನು ಮತ್ತೆ ವೇದಿಕೆಗೆ ಬರಮಾಡಿಕೊಂಡು ನೇರವಾದ ಪ್ರಶ್ನೆ ಕೇಳಿದರು. ಯಾವ ಕಾರಣಕ್ಕೆ ಮನೆಯಿಂದ ಹೊರಬರುವ ಸ್ಥಿತಿ ನಿಮಗೆ ಬಂತು? ಒಂದು ಕ್ಯಾಮರಾ ಇದ್ದಾಗ ತೋರಿಸುವಷ್ಟು ಎಜರ್ಜಿ(ಟಿಕ್ ಟಾಕ್) ಈಗ ಯಾಕೆ ತೋರಿಸಲಿಲ್ಲ ಎಂದು  ಕೇಳಿದರು.

ರನ್‌ ರನ್‌... ಮೊದಲ ವಾರವೇ ಮನೆಯಿಂದ ಹೊರಬಂದ ಟಿಕ್ ಟಾಕ್ ಸುಂದರಿ

ನಾನು ಓಪನ್ ಅಪ್ ಆಗಲು ತುಂಬಾ ಸಮಯ ತೆಗೆದುಕೊಂಡೆ. ಇಂಥ ದೊಡ್ಡ ವೇದಿಕೆಯನ್ನು  ಬಳಸಿಕೊಳ್ಳಲು ನನಗೆ ಸಾಧ್ಯವಾಗದ್ದು ನಿರಾಶೆ ತಂದಿದೆ ಎಂದರು.  ನಾನು ತುಂಬಾ ಕಾನ್ಸಿಯಸ್ ಆದೆ. ಬೇರೆ ಕಡೆ ಬಂದವರು ಡಾಮಿನೆಟ್ ಮಾಡುತ್ತಾರೆ ಎಂದು ಕೊಂಡೆ ಎಂದರು.

ಮೇಕಪ್ ಇಲ್ಲದೆ ನೀವು ಹೇಗೆ  ಕಾಣಿಸುತ್ತೀರಿ? ಎಂದು ಕಿಚ್ಚಕೇಳಿದ್ದಕ್ಕೆ  ನಕ್ಕ ಧನುಶ್ರೀ ಮೇಕಪ್ ಇಲ್ಲದೆ ಹೇಗೆ ಕಾಣಿಸುತ್ತೀನಿ ಅಂದರೆ ಎಂದು ಕಿಚ್ಚನಿಗೆ ಮರು ಪ್ರಶ್ನೆ ಮಾಡಿದರು. ಮೇಕಪ್ ಇಲ್ಲದೆ ನಾನು ನಾನಾಗಿ ಕಾಣಿಸುತ್ತೇನೆ ಎಂದರು. ಮತ್ತೆ ಯಾಕೆ  ಮೇಕಪ್ ಎಂದಾಗ.. ಮೇಕಪ್ ಇದ್ದರೆ ಆತ್ಮವಿಶ್ವಾಸ ಬರುತ್ತದೆ ಎಂದು ಧನುಶ್ರೀ ಉತ್ತರ ಕೊಟ್ಟರು.

ಯಾವ್ ನನ್ನ ಮಗ ಹೇಳಿದ್ದು..  ಕಾನ್ಳಿಡೆನ್ಸ್ ಮೇಕಪ್ ಮೇಲೆ ನಿಂತಿಲ್ಲ. ನೀವು ಮೇಕಪ್ ಇಲ್ಲದೆ ಹೇಗೆ  ಕಾಣಿಸುತ್ತೀರಿ ಎಂಬುದನ್ನು ನೋಡಿಯೇ ಇಲ್ಲ.  ಈ  ವೇದಿಕೆಯಿಂದ ಏನನ್ನಾದರೂ ತೆಗೆದುಕೊಂಡು ಹೋಗ್ತಾರೆ ಎಂಬುದು ನಮ್ಮ ಸಂತಸ ಎಂದು  ಕಿಚ್ಚ ಹೇಳಿ ಎಪಿಸೋಡ್ ಗೆ ತೆರೆ ಎಳೆದರು.