ಬ್ರೇಕಪ್ ಬೆನ್ನಲೆ ಬಿಗ್ ಬಾಸ್‌ಗೆ ಕಾಲಿಡುತ್ತಿರುವ ವರ್ಷಾ-ವರುಣ್; ಬೈಯೋರು ಯಾರಿಲ್ಲ ಎಂದ ನೆಟ್ಟಿಗರು!
ಬ್ರೇಕಪ್ ಬೆನ್ನಲ್ಲೆ ಬಿಬಿ ಮನೆ ಪ್ರವೇಶಿಸುತ್ತಾರಂತೆ ರೀಲ್ಸ್ ಜೋಡಿ. ಪುಲ್ ಗರಂ ಆದ ನಟ್ಟಿಗರು....
ಕಲರ್ಸ್ ಕನ್ನಡ ಬಿಗ್ ಬಾಸ್ ಸೀಸನ್ 10ಕ್ಕೆ ಖ್ಯಾತ ರೀಲ್ಸ್ ಹಾಗೂ ಯುಟ್ಯೂಬ್ ಜೋಡಿ ವರ್ಷಾ ಕಾವೇರಿ ಮತ್ತು ವರುಣ್ ಬರಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ.
ವರ್ಷಾ ಕಾವೇರಿ ಮತ್ತು ವರುಣ್ ಜೋಡಿಯಾಗಿ ಎಂಟ್ರಿ ಕೊಡುವ ಸಾಧ್ಯತೆಗಳು ಹೆಚ್ಚಿತ್ತು ಆದರೆ ಬ್ರೇಕಪ್ ಆಗಿರುವ ಕಾರಣ ಕೊಂಚ ಗೊಂದಲವಿದೆ.
ಕೆಲವು ದಿನಗಳ ಹಿಂದೆ ವರ್ಷಾ ಮತ್ತು ವರುಣ್ ಬ್ರೇಕಪ್ (BreakUp) ಮಾಡಿಕೊಂಡರು. ಹೀಗಾಗಿ ಬಂದರೂ ಬರಬಹುದು ಇಲ್ಲದೆನೂ ಇರಬಹುದು.
ಆದರೆ ಈ ಜೋಡಿ ಎಂಟ್ರಿ ಕೊಟ್ಟರೆ ಖುಷಿಗಿಂತ ಕೋಪ ಮಾಡಿಕೊಳ್ಳುವವರೇ ಜಾಸ್ತಿ. ಏಕೆಂದರೆ ಟ್ಯಾಲೆಂಟ್ ಇರುವವರನ್ನು ಕಳುಹಿಸಿ ಲಿಪ್ ಸಿಂಕ್ ಮಾಡುವವರನ್ನು ಅಲ್ಲ ಎನ್ನುತ್ತಾರೆ.
ಕಳೆದ ಬಾರಿ ಧನುಶ್ರೀ ಎಂಟ್ರಿ ಪಡೆದುಕೊಂಡಿದ್ದರು ಆಗ ಮಿಶ್ರ ಅಭಿಪ್ರಾಯ ವ್ಯಕ್ತವಾಗಿತ್ತು. ಇನ್ನು ಟ್ಯಾಲೆಂಟ್ ಇರುವವರು ಇದ್ದಾರೆ ಎಂದು.
ವರುಣ್ ಮತ್ತು ವರ್ಷಾ ಬ್ರೇಕಪ್ ಸಖತ್ ಸುದ್ದಿಯಾಗಿದೆ. ಯಾವ ಟ್ರೋಲ್ ಮೀಮ್ಸ್ ಮತ್ತು ವೆಬ್‌ಸೈಟ್‌ಗಳನ್ನು ನೋಡಿದರೂ ಇವರಿಬ್ಬರ ವಿಡಿಯೋ ಹಾಗೂ ಫೋಟೋನೇ ಇದೆ.
ಬಿಗ್ ಬಾಸ್ ಸೀಸನ್ 10 ಓಪನಿಂಗ್ ಕಾರ್ಯಕ್ರಮದ ದಿನ ಕಿಚ್ಚ ಸುದೀಪ್ ಸ್ಪರ್ಧಿಗಳನ್ನು ವೇದಿಕೆ ಮೇಲೆ ಕರೆಯುವವರೆಗೂ ಯಾರು ಎಂಟ್ರಿ ಕೊಡುತ್ತಾರೆಂದು ಸೀಕ್ರೆಟ್ ಆಗಿಟ್ಟಿರುತ್ತಾರೆ.