ಕಿರುತೆರೆ ನಟಿ ಜೊತೆ ವರುಣ್ ಆರಾಧ್ಯ ಲವ್ವಿ ಡವ್ವಿ?; ಟ್ರೋಲಿಗರಿಗೆ ಉತ್ತರ ಕೊಟ್ಟ ನಟ!
ಮತ್ತೆ ಪ್ರೀತಿಯಲ್ಲಿ ಬಿದ್ದ ವರುಣ್ ಆರಾಧ್ಯ ಎಂದು ಟ್ರೋಲ್. ಅಮೂಲ್ಯಳಿಗೋಸ್ಕರ ಟ್ರೋಲ್‌ಗಳಿಗೆ ಉತ್ತರ ಕೊಟ್ಟ ವರುಣ್.....
ಸೋಷಿಯಲ್ ಮೀಡಿಯಾ ಇನ್‌ಫ್ಲೂಯನ್ಸರ್ ವರುಣ್ ಆರಾಧ್ಯ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಬೃಂದಾವನಾ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದರು. ತಾಂತ್ರಿಕ ಸಮಸ್ಯೆಯಿಂದ ಧಾರಾವಾಹಿಯನ್ನು ಗಡಿಬಿಡಿಯಲ್ಲಿ ನಿಲ್ಲಿಸಿಬಿಟ್ಟರು ಆದರೆ ಪ್ರತಿಯೊಬ್ಬ ಕಲಾವಿದರ ಜೊತೆ ವರುಣ್ ಇನ್ನೂ ಸಂಪರ್ಕದಲ್ಲಿದ್ದಾರೆ. ಆಕಾಶ್ ಪಾತ್ರದಲ್ಲಿ ಮಿಂಚುತ್ತಿದ್ದ ವರುಣ್‌ಗೆ ಅಮೂಲ್ಯ ಜೋಡಿಯಾಗಿದ್ದರು, ಆನ್ ಸ್ಕ್ರೀನ್ ಮಾತ್ರವಲ್ಲದೆ ಆಫ್ ಸ್ಕ್ರೀನ್‌ನಲ್ಲೂ ಸಖತ್ ಮಿಂಚುತ್ತಿದ್ದರು.
ಯೂಟ್ಯೂನ್ ಚಾನೆಲ್ ಹೊಂದಿರುವ ವರುಣ್ ಆಗಾಗ ವ್ಲಾಗ್ ಮತ್ತು ರೀಲ್ಸ್ ಮಾಡಿ ಅಪ್ಲೋಡ್ ಮಾಡುತ್ತಿದ್ದರು. ಒಂದೆರಡು ಸಲ ಅಮೂಲ್ಯಳ ಜೊತೆಗೂ ಡ್ಯಾನ್ಸ್ ಮಾಡಿದ್ದಾರೆ. ಇದನ್ನು ನೋಡಿ ಅನೇಕರು ಇಬ್ಬರು ಪ್ರೀತಿಸುತ್ತಿದ್ದಾರೆ, ಓಡಾಡುತ್ತಿದ್ದಾರೆ ಅಲ್ಲದೆ ವರ್ಷ ಕಾವೇರಿಗೆ ಮೋಸ ಮಾಡಲು ಇದೇ ಕಾರಣ ಎಂದು ಟ್ರೋಲ್ ಮಾಡುತ್ತಿದ್ದರು. ಹೀಗಾಗಿ ವಿಡಿಯೋ ಮೂಲ ವರುಣ್ ಸ್ಪಷ್ಟನೆ ಕೊಟ್ಟಿದ್ದಾರೆ.
ವರ್ಷಗಳೇ ಕಳೆದರೂ ಅಂದ ಕಮ್ಮಿ ಅಗಿಲ್ಲ; ಸುದೀಪ್ ಫ್ಯಾಮಿಲಿ ಜೊತೆ 'ಮಾಣಿಕ್ಯ' ವರ!
'ಸುಮಾರು ಜನ ಕಾಮೆಂಟ್ ಮಾಡಿದ್ದೀರಾ ನಾನು ಮತ್ತು ಅಮೂಲ್ಯ ಕಪಲ್ಸ್ ನಾವು ಲವ್ ಮಾಡ್ತಿದ್ದೀವಿ ನಾವು ಕಮಿಟ್ ಆಗಿದ್ದೀವಿ ಎಂದು ಹೀಗಾಗಿ ಕ್ಲಾರಿಫಿಕೇಷನ್ ಕೊಡಲು ಈ ವಿಡಿಯೋ ಮಾಡುತ್ತಿರುವುದು. ನಾವಿಬ್ಬರೂ ಪರಿಚಯವಾಗಿ ಸುಮಾರು 5 ತಿಂಗಳು ಆಗಿರಬಹುದು ನೀವು ಅಂದುಕೊಂಡ ರೀತಿಯಲ್ಲಿ ನಾವು ಕಪಲ್ಸ್ ಅಲ್ಲ ಲವರ್ಸ್ ಅಲ್ಲ. ನಾವಿಬ್ಬರೂ ತುಂಬಾ ಒಳ್ಳೆಯ ಸ್ನೇಹಿತರು ಅಷ್ಟೇ. ಏನ್ ಏನೋ ಫೇಕ್ ತರ ವಿಡಿಯೋಗಳನ್ನು ಮಾಡುತ್ತಿದ್ದೀರಾ ನಾವು ಆ ತರ ಅಲ್ವೇ ಅಲ್ಲ. ಫ್ರೆಂಡ್ಸ್ ಆಗಿ ತುಂಬಾನೇ ಚೆನ್ನಾಗಿದ್ದೀವಿ ಲವು ಗಿವು ಮಾಡೋಕೆ ಹೋಗಿಲ್ಲ' ಎಂದು ವರುಣ್ ಆರಾಧ್ಯ ಸ್ಪಷ್ಟನೆ ನೀಡಿದ್ದಾರೆ.