Asianet Suvarna News Asianet Suvarna News

118 ಕೆಜಿ ಇದ್ದಾಗ 10 ದಿನಗಳಲ್ಲಿ 8 ಕೆಜಿ ಇಳಿಸಿದೆ, ಎರಡು ವರ್ಷ ನಾನ್‌-ವೆಜ್‌ ತಿಂದಿಲ್ಲ: ಬಿಗ್ ಬಾಸ್ ವಿನಯ್

ಶಿವ ಪಾತ್ರ ಮಾಡಲು ಕಲ್ಪನೆಗೂ ಮೀರಿದ ಶ್ರಮ ಹಾಕಿದ ವಿನಯ್ ಗೌಡ. ಶಿವ ಪಾತ್ರ ನಿಜ ಜೀವನದ ಮೇಲೆ ಎಷ್ಟು ಪರಿಣಾಮ ಬೀರಿತ್ತು?

Colors Kannada Bigg boss Vinay Gowda talks about Shiva character Hara hara mahadeva vcs
Author
First Published Jan 19, 2024, 2:39 PM IST | Last Updated Jan 19, 2024, 2:39 PM IST

ಹರಹರ ಮಹಾದೇವ್ ಮತ್ತು ಯಡಿಯೂರು ಸಿದ್ಧಲಿಂಗೇಶ್ವರ ಧಾರಾವಾಹಿಯಲ್ಲಿ ಅಭಿನಯಿಸಿರುವ ವಿನಯ್ ಗೌಡ ಈಗ ಬಿಗ್ ಬಾಸ್‌ ಮನೆಯಲ್ಲಿದ್ದಾರೆ. ಸೀಸನ್ 10ರಲ್ಲಿ ಟಫ್ ಫೈಟ್‌ ಕೊಡುತ್ತಿರುವ ವಿನಯ್‌ 2 ವರ್ಷಗಳ ಕಾಲ ಮಾಂಸವನ್ನು ತ್ಯಜಿಸಿದ್ದರಂತೆ. ಅಲ್ಲದೆ ಕೇವಲ 10 ದಿನಗಳಲ್ಲಿ ತೂಕ ಇಳಿಸಿಕೊಂಡ ಘಟನೆ ವಿವರಿಸಿದ್ದಾರೆ.

'ಶಿವ ನಮ್ಮ ಮನೆ ದೇವರು. ಮನೆಯಲ್ಲಿ ಶಿವ ಪೋಸ್ಟರ್‌, ಶಿವನ ಡಾಲರ್, ಉಂಗುರದಲ್ಲಿ ಶಿವ...ಅದನ್ನು ನೋಡಿ ನೋಡಿ ಶಿವ ನಮ್ಮವನು ಎನ್ನುವ ಫೀಲಿಂಗ್. ನಾನು ಮತ್ತೊಂದು ಪ್ರಾಜೆಕ್ಟ್‌ನಲ್ಲಿ ಬ್ಯುಸಿಯಾಗಿರುವಾಗ ಹರಹರ ಮಹಾದೇವ ತಂಡ ಕರೆ ಮಾಡಿತ್ತು. ಗಾದಿ ಕಟ್ ಮಾಡಿ ಲುಕ್‌ ಟೆಸ್ಟ್‌ ಮಾಡಿಸಿದ ನಂತರ ನಾನು 118ಕೆಜಿ ಇದ್ದ ಕಾರಣ ಸಣ್ಣಗಾಗಬೇಕು ಎಂದು ಹೇಳಿದರು. 10 ದಿನಗಳಲ್ಲಿ ಡಬಲ್ ವರ್ಕೌಟ್ ಮಾಡಿ 8 ಕೆಜಿ ಕಡಿಮೆ ಮಾಡಿದೆ. ಇದನ್ನು ನೋಡಿ ಪ್ರೊಡಕ್ಷನ್ ಕಂಪನಿಯವರು ಇಷ್ಟ ಪಟ್ಟರು. ನಾಳೆ ಶೂಟಿಂಗ್ ಇದೆ ಆದರೂ ನಾನು ಶಿವ ಪಾತ್ರ ಮಾಡುವುದಕ್ಕೆ ಯೋಚನೆ ಮಾಡುತ್ತಿದ್ದೆ. ನನ್ನ ಚಿತ್ರತಂಡದಲ್ಲಿ ದೊಡ್ಡ ಕಲಾವಿದರು ಆ ಪಾತ್ರ ಮಾಡಿದ್ದಾರೆ ನಾನು ಹೇಗೆ ಮಾಡಲಿ ಅಂತ ಯೋಚನೆ ಬಂತು. ಮೇಕಪ್ ಧರಿಸಿ ಮೊದಲ ಡೈಲಾಗ್  ಹೇಳಿದೆ ಅದಾದ ನಂತರ ಹಿಂತಿರುಗಿ ನೋಡಿಲ್ಲ' ಎಂದು ಖಾಸಗಿ ಟಿವಿ ಸಂದರ್ಶನಲ್ಲಿ ಈ ಹಿಂದೆ ವಿನಯ್ ಮಾತನಾಡಿದ್ದರು. 

ನನ್ನಿಂದ ಸಮಸ್ಯೆ ಅಥವಾ ಅವಮಾನ ಆಯ್ತಾ?; ಪತ್ನಿಗೆ ವಿನಯ್ ಗೌಡ ಪ್ರಶ್ನೆ

ಹರಹರ ಮಹಾದೇವ ನಂತರ ನಾನು ಯಡಿಯೋರು ಸಿದ್ಧಲಿಂಗೇಶ್ವರ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳಲು ಶುರು ಮಾಡಿದೆ. ಮುಂಬೈನಲ್ಲಿ ಹರ ಹರ ಮಹಾದೇವ ಚಿತ್ರೀಕರಣ ಮಾಡಿದ್ದು ಸುಮಾರು 2 ವರ್ಷ 8 ತಿಂಗಳು ಚಿತ್ರೀಕರಣ ಮಾಡಿದೆ. ಆ ಅವಧಿಯಲ್ಲಿ ನಾನು ನಾನ್‌-ವೆಜ್‌ ತಿನ್ನುವುದನ್ನು ನಿಲ್ಲಿಸಿಬಿಟ್ಟೆ. ಯಾರೂ ನನಗೆ ಬಿಡಬೇಕು ಹೀಗೆ ಇರಬೇಕು ಅನ್ನೋದು ಹೇಳಿಲ್ಲ ಆದರೆ ನನ್ನ ಮನಸ್ಸಿಗೆ ಬಂತು ಎಂದು ಮಾಡಿದೆ. ಮೊದಲು ನಾನು ತುಂಟ ಓಡಾಡಿಕೊಂಡು ಮೂಗು ಧಾರ ಇಲ್ಲದ ಗೂಳಿ ಇರ ಓಡಾಡಿಕೊಂಡು ಇದ್ದೆ ಆದರೆ ಶಿವ ಪಾತ್ರ ಮಾಡಲು ಶುರು ಮಾಡಿದ ಮೇಲೆ ಜವಾಬ್ದಾರಿ ಹೆಚ್ಚಾಯ್ತು. ಏಕೆಂದರೆ ನಾನು ಏನೇ ಮಾಡಿದರೂ ಪಾತ್ರದ ಮೇಲೆ ಪರಿಣಾಮ ಬೀರುತ್ತದೆ ಎಂದು ವಿನಯ್ ಗೌಡ ಹೇಳಿದ್ದಾರೆ. 

ಕಿರುತೆರೆ ನಟಿ ಇಳಾ ಪತಿ ಮೇಲೆ ಹಲ್ಲೆ ಮಾಡಿದ ಬಿಗ್ ಬಾಸ್ ವಿನಯ್ ಗೌಡ; ದುರಹಂಕಾರದ ಮಾತುಗಳು ಬೇಡ!

ಶಿವನ ಪಾತ್ರ ಮಾಡುವಾಗ ಮುಖದಲ್ಲಿ ನಗು ಇರಬೇಕು ಶಾಂತಿ ಇರಬೇಕು ನನಗೆ ಕೋಪ ಜಾಸ್ತಿ. ಹೀಗಾಗಿ ಏನು ಮಾಡಬೇಕು ಎಂದು ಯೋಚನೆ ಮಾಡುತ್ತಿರುವಾಗ ನನ್ನ ಹೆಂಡತಿ ಧ್ಯಾನ ಮಾಡಲು ಸಲಹೆ ಕೊಟ್ಟರು. ಅಲ್ಲಿಂದ ಧ್ಯಾನ ಮಾಡಲು ಶುರು ಮಾಡಿದೆ. ದಿನ ಶೂಟಿಂಗ್‌ಗೆ ಹೋಗುವಾಗ ಧ್ಯಾನ ಮಾಡಿನೇ ಹೋಗುವುದು ಎಂದಿದ್ದಾರೆ ವಿನಯ್ ಗೌಡ.

Latest Videos
Follow Us:
Download App:
  • android
  • ios