ಆ ಘಟನೆ ದೊಡ್ಡ ಪರಿಣಾಮ ಬೀರಿದೆ; ಬಿಗ್ ಬಾಸ್ ಸಿರಿ ಮದುವೆ ರಿಜಿಕ್ಟ್ ಮಾಡಲು ಕಾರಣ ಬಿಚ್ಚಿಟ್ಟ ಅಕ್ಕ
ಪದೇ ಪದೇ ಮದುವೆಯನ್ನು ಮುಂದೂಡಲು ಕಾರಣ ಏನೆಂದು ರಿವೀಲ್ ಮಾಡಿದ ನಟಿ ಸಿರಿ ಅಕ್ಕ....
ಕನ್ನಡ ಕಿರುತೆರೆಯಲ್ಲಿ ಹಲವು ವರ್ಷಗಳಿಂದ ಮಿಂಚುತ್ತಿರುವ ನಟಿ ಸಿರಿ ಈಗ ಬಿಗ್ ಬಾಸ್ ಸೀಸನ್ 10ರಲ್ಲಿ ಸ್ಪರ್ಧಿಸುತ್ತಿದ್ದಾರೆ. ಸಿರಿ ಸಿಂಪ್ಲಿಸಿಟಿ ಮತ್ತು ಮೃದು ಸ್ವಭಾವ ಅನೇಕರಿಗೆ ಇಷ್ಟವಾಗಿದೆ. ಬಿಗ್ ಬಾಸ್ ಮುಗಿದೆ ಮೇಲೆ ಮದುವೆ ಆಗಲು ಆಫರ್‌ಗಳು ಹರಿದು ಬರುವುದು ಗ್ಯಾರಂಟಿ. ಅದರಲ್ಲೂ ನಟಿ ತಾರಾ ಅನುರಾಧ ಮದುವೆ ಬಗ್ಗೆ ಪ್ರಶ್ನೆ ಮಾಡಿದಾಗ ನಾನು ಮದುವೆ ಮಾಡಿಕೊಳ್ಳಲು ರೆಡಿಯಾಗಿರುವೆ ಆದರೆ ಸೂಕ್ತವಾದ ವ್ಯಕ್ತಿ ಸಿಕ್ಕಿಲ್ಲ ಎಂದು ಕಾರಣ ಕೊಟ್ಟಿದ್ದರು. ಸಿರಿ ಮದುವೆ ನಿರ್ಧಾರದ ಬಗ್ಗೆ ಸಹೋದರಿ ಮಾತನಾಡಿದ್ದಾರೆ.
'ಮತ್ತೊಬ್ಬರು ನಮ್ಮನ್ನು ಪ್ರಶ್ನೆ ಮಾಡಿದಾಗಲೇ ನಮಗೆ ಮದುವೆ ಮುಖ್ಯನಾ ಅನಿಸುವುದು. ವೃತ್ತಿ ಜೀವನದಲ್ಲಿ ಬ್ಯುಸಿಯಾಗಿರುವವರಿಗೆ ಅಥವಾ ಆರ್ಟಿಸ್ಟ್‌ಗಳಿಗೆ ಪಾತ್ರದಲ್ಲಿ ಮುಳುಗಿ ವೈಯಕ್ತಿಕ ಜೀವನಕ್ಕೆ ಸಮಯ ಕೊಡಲು ಆಗುವುದಿಲ್ಲ. ಇದೇ ಸಮಯಕ್ಕೆ ಮದುವೆ ಆಗಬೇಕು ಈ ವರ್ಷನೇ ಮದುವೆ ಆಗಬೇಕು ಎಂದು ಹೇಳಲು ಆಗಲ್ಲ' ಎಂದು ಸಿರಿ ಸಹೋದರಿ ಖಾಸಗಿ ಟಿವಿ ಸಂದರ್ಶನದಲ್ಲಿ ಹೇಳಿದ್ದಾರೆ.
ಡ್ರೋನ್ ಸಿನಿಮಾ ರಿಲೀಸ್ ಆದ್ರೆ ಬಿಗ್ ಬಾಸ್ ಪ್ರತಾಪ್ ಸೋಲೋಕೆ ನಾನೇ ಕಾರಣ ಅಂತಾರೆ: ಒಳ್ಳೆ ಹುಡುಗ ಪ್ರಥಮ್
'ಮದುವೆ ಆಗದೇ ಇರಲು ಮತ್ತೊಂದು ಕಾರಣ ಏನೆಂದರೆ ವೈಯಕ್ತಿಕ ಜೀವನದಲ್ಲಿ ನಾವು ಸಹೋದರಿಯರಿಬ್ಬರು ಸಾಕಷ್ಟು ಕಷ್ಟಗಳನ್ನು ಎದುರಿಸಿದ್ದೀವಿ. ಇಬ್ಬರೂ ವೈಯಕ್ತಿಕ ಜೀವನದಲ್ಲಿ ಲಾಸ್‌ಗಳನ್ನು ಎದುರಿಸಿದ್ದೀವಿ ಅದೊಂದು ಸಿರಿ ಮೇಲೆ ತುಂಬಾ ಪರಿಣಾಮ ಬೀರಿದೆ. ಮದುವೆ ಮಾಡಿಕೊಳ್ಳಬೇಕಿತ್ತು ಆದರೆ ಟೈಮ್ ಸರಿಯಾಗಿರಲಿಲ್ಲ. ಸಿರಿ ಒಪ್ಪಿಕೊಳ್ಳುವಂತ ವ್ಯಕ್ತಿ ಇನ್ನು ಸಿಕ್ಕಿಲ್ಲ. ಮದುವೆ ಎಲ್ಲಾದಕ್ಕೂ ಕೊನೆ ಅಲ್ಲ ಅದೊಂದು ಜೀವನದ ಹಂತ ಅಷ್ಟೆ. ಮದುವೆ ಮಾಡಿಕೊಳ್ಳುವುದಿಲ್ಲ ಎಂದು ಹೇಳಲ್ಲ ಸರಿಯಾದ ಸಮಯಕ್ಕೆ ಮದುವೆ ಆಗಬೇಕು ಅನ್ನೋದು.ಸಿರಿ ಅಕ್ಕ ಆಗಿ ನಾನು ಬೇಗ ಮದುವೆ ಮಾಡಿಕೊಂಡೆ ನನ್ನ ಜೀವನದಿಂದ ಆಕೆ ಏನೋ ಕಲಿತಿರಬಹುದು ಹೀಗಾಗಿ ಮದುವೆ ತಡ ಮಾಡುತ್ತಿದ್ದಾಳೆ' ಎಂದಿದ್ದಾರೆ ಸಿರಿ ಸಹೋದರಿ.
ದೋಷ ಪರಿಹಾರಕ್ಕೆ ಬಂದ್ರಾ?; ಮುಂಡಾ ಮೋಚ್ತು ಅನ್ಕೊಂಡೇ ಬಿಗ್ ಬಾಸ್‌ಗೆ ಎಂಟ್ರಿ ಕೊಟ್ಟ ಬ್ರಹ್ಮಾಂಡ ಗುರೂಜಿ
'ತಂದೆ ಕಳೆದುಕೊಂಡ ಮೇಲೆ ನಮಗೆ ತಾಯಿನೇ ಎಲ್ಲಾ. ಮದುವೆ ಮಾಡಿಕೊಳ್ಳಿ ಎಂದು ಹೇಳಿದಾಗ ಸಿನಿಮಾ ಶೂಟಿಂಗ್ ಇದೆ ಚೆನ್ನೈಗೆ ಪ್ರಯಾಣ ಮಾಡಬೇಕು, ಮತ್ತೊಬ್ಬರ ಮದುವೆ ಮುರಿದಿರುವುದನ್ನು ನೋಡಿ ನನ್ನ ಜೀವನನೂ ಹೀಗೆ ಅದ್ರೆ ಏನ್ ಮಾಡ್ಲಿ ಎಂದು ಸಿರಿ ಯೋಚನೆ ಮಾಡಿ ಇನ್ನು ಮದುವೆ ನಿರ್ಧಾರಕ್ಕೆ ಬಂದಿಲ್ಲ' ಎಂದು ಸಿರಿ ಸಹೋದರಿ ಮಾತನಾಡಿದ್ದಾರೆ.