Asianet Suvarna News Asianet Suvarna News

ದೋಷ ಪರಿಹಾರಕ್ಕೆ ಬಂದ್ರಾ?; ಮುಂಡಾ ಮೋಚ್ತು ಅನ್ಕೊಂಡೇ ಬಿಗ್ ಬಾಸ್‌ಗೆ ಎಂಟ್ರಿ ಕೊಟ್ಟ ಬ್ರಹ್ಮಾಂಡ ಗುರೂಜಿ

ಸ್ಪರ್ಧಿಗಳ ಮೈಂಡ್ ಕೂಲ್ ಮಾಡಲು ಬಿಗ್ ಸರ್ಪ್ರೈಸ್ ಕೊಟ್ಟ ಬಿಗ್ ಬಾಸ್. ಮುಂಡಾ ಮೋಚ್ತು ಅಂತ ಕೇಳಿ ನೆಟ್ಟಿಗರು ಖುಷ್.....

Colors Kannada Brahmanda Guruji enters bigg boss season 10 promo goes viral vcs
Author
First Published Nov 20, 2023, 11:12 AM IST

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ರಿಯಾಲಿಟಿ ಶೋನ ದಿನದಿಂದ ದಿನಕ್ಕೆ ವಿಭಿನ್ನವಾಗಿದೆ.ಕಳೆದ ವೀಕೆಂಡ್‌ನಲ್ಲಿ ಡಬಲ್ ಎಲಿಮಿನೇಷನ್, ಫೇಕ್ ಮತ್ತು ಜೆನ್ಯೂನ್‌ಗಳ ಚರ್ಚೆ ನಡೆದು ಸ್ಪರ್ಧಿಗಳ ಮೂಡ್ ಬದಲಾಗಿದೆ. ಹೀಗಾಗಿ ಸೋಮವಾರ ಬೆಳಗ್ಗೆ ಕೂಲ್ ಮಾಡಲು ಬಿಗ್ ಬಾಸ್ ಬಿಗ್ ಸರ್ಪ್ರೈಸ್ ಕೊಟ್ಟಿದ್ದಾರೆ. ಅದುವೇ ಸ್ಪೆಷಲ್ ವ್ಯಕ್ತಿಯ ಸ್ಪೆಷಲ್ ಎಂಟ್ರಿ....

ಹೌದು!  ಬೆಳಬೆಳಿಗ್ಗೆಯೇ ಬಿಗ್‌ಬಾಸ್ ಮನೆಯ ಓಪನ್ ಆದಾಗ ಎಲ್ಲ ಸ್ಫರ್ಧಿಗಳೂ ಅಚ್ಚರಿಯಿಂದ ಅತ್ತ ನೋಡಿದರು. ತೆರೆದ ಬಾಗಿಲಿಂದ ಗುರೂಜಿ ಒಳಬರುತ್ತಿದ್ದಂತೆಯೇ ಎಲ್ಲರ ಮುಖದಲ್ಲಿಯೂ ನಗು. ಮನೆಯಿಡೀ ಓಡಾಡುತ್ತ, ಕ್ಯಾಮೆರಾಗಳಿಗೆ ಆರ್ಡರ್ ಮಾಡುತ್ತ, ಬಾಳೆಹಣ್ಣು ತಿನ್ನುತ್ತ ಬ್ರಹ್ಮಾಂಡ ಗುರೂಜಿ ಸ್ಪೆಷಲ್‌ ವೈಬ್ ಕ್ರಿಯೇಟ್ ಮಾಡಿದ್ದಾರೆ. ಈ ಸ್ಪೆಷಲ್ ಎಂಟ್ರಿಯಿಂದ ಸದ್ಯಕ್ಕಂತೂ ಬಿಗ್‌ಬಾಸ್ ಸ್ಪರ್ಧಿಗಳ ಮುಖದಲ್ಲಿ ನಗು ಕಾಣಿಸಿಕೊಂಡಿದೆ. ಆದರೆ ಆ ನಗು ಎಷ್ಟು ಕಾಲ ಇರುತ್ತದೆ? ಬಿಗ್‌ಬಾಸ್ ಮನೆಯಲ್ಲಿ ಗುರೂಜಿ ಎಷ್ಟು ಸಮಯ ಇರುತ್ತಾರೆ? ಯಾರು ಯಾರಿಗೆ ಏನು ಹೇಳುತ್ತಾರೆ? 

ಕೊನೆಯ ದಿನಗಳಲ್ಲಿ ನೆಮ್ಮದಿಗೆ ಹಂಬಲಿಸುವ ಕಥಾನಕ: ರಾಜ್ ಬಿ ಶೆಟ್ಟಿ

'ಇವಾಗ ಮಜಾ ಇದೆ ನೋಡಿ', 'ಗುರೂಜಿ ಬಂದವ್ರೇ ಕಾಮಿಡಿ ಖಂಡಿತ,' ಬಿಗ್ ಬಾಸ್ ಮನೆಯಲ್ಲಿ ದೋಷ ಪರಿಹಾರ ಮಾಡೋಕೆ ಬಂದಿರಬೇಕು, ಈ ವರ್ಷ ಯಾರು ಗೂರುಜಿಗಳು ಬಂದಿಲ್ಲ ಅದಿಕ್ಕೆ ಬ್ರಹ್ಮಾಂಡ ಎಂಟ್ರಿ' ಎಂದು ನೆಟ್ಟಿಗರು ಸೆನ್ಸೇಷನಲ್ ಕಾಮೆಂಟ್ ಮಾಡಿದ್ದಾರೆ. 'ಬ್ರಹ್ಮಾಂಡ ಗುರೂಜಿ ಬೈಯೋಕೆ ಶುರು ಮಾಡಿದರೆ ಮಜಾನೇ ಬೇರೆ' ಎಂದು ವಿನಯ್ ಹೇಳಿದ್ದಾರೆ. ಗುರೂಜಿ ಯಾಕೆ ಬಂದಿದ್ದಾರೆ ಮೊದಲು ಹೇಳಿ ಎಂದು ತನಿಷಾ ಕ್ಯಾಮೆರಾ ಮುಂದೆ ಕೇಳಿದ್ದಾರೆ. ಬರುತ್ತಿದ್ದಂತೆ ಎಲ್ಲಾ ಸ್ಪರ್ಧಿಗಳಿಗೂ statue ಹೇಳಬೇಕು ಅಂತಾ ಆದರೂ ಯಾರೂ ಬ್ರಹ್ಮಾಂಡ ಮಾತು ಕೇಳದ ಕಾರಣ ಅಯ್ಯೋ ಸುಸ್ತಾಯ್ತು ನಂಗೆ ನಡೆಯೋಕೆ ಆಗಲ್ಲ ನಾನು ಮನೆ ಬಿಟ್ಟು ಹೋಗ್ತೀನಿ ಅಂತಾ ಹೇಳೋದು ಜನರಿಗೆ ನಗು ತಂದಿದೆ. 
 

Follow Us:
Download App:
  • android
  • ios