ಬ್ಯಾಕ್ ಟು ಬ್ಯಾಕ್ ಶೂಟಿಂಗ್ ಇದ್ದರೂ ಫ್ರೀ ಮಾಡಿಕೊಂಡು ಬಿಗ್ ಬಾಸ್ ನೋಡುತ್ತಾರೆ ಕಿಚ್ಚ ಸುದೀಪ್. ಸ್ಟ್ರೆಸ್ ಬಗ್ಗೆ ನಟನ ಮಾತು...
ಕಲರ್ಸ್ ಕನ್ನಡ ವಾಹಿನಿಯಲ್ಲಿ ಬಹು ನಿರೀಕ್ಷಿತ ಬಿಗ್ ಬಾಸ್ ಸೀಸನ್ 10 ಆರಂಭವಾಗಲಿದೆ. ಅಕ್ಟೋಬರ್ 8ರಂದು ಸೀಸನ್ 10 ಆರಂಭವಾಗಲಿದ್ದು ಪ್ರೆಸ್‌ಮೀಟ್‌ನಲ್ಲಿ ಕಿಚ್ಚ ಸುದೀಪ್ ಹಲವಾರು ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದಾರೆ. ಈ ವೇಳೆ ಸಿನಿಮಾ ಶೂಟಿಂಗ್ ಮತ್ತು ಬಿಗ್ ಬಾಸ್ ಶೂಟಿಂಗ್ ಹೇಗೆ ಮ್ಯಾನೇಜ್ ಮಾಡುತ್ತಾರೆ ಎಂದು ಮಾಧ್ಯಮ ಸ್ನೇಹಿತರು ಪ್ರಶ್ನೆ ಮಾಡಿದಾಗ ಸುದೀಪ್ ಉತ್ತರಿಸಿದ್ದಾರೆ.
'ನಾನು ಎಲೇ ಶೂಟಿಂಗ್ ಮಾಡುತ್ತಿರಲಿ ಎಲ್ಲೇ ಇರಲಿ ಮನೆಗೆ ಹೋದಾಗ ನನ್ನ ತಂದೆ ತಾಯಿಗೆ ಮಗನೇ, ಹೆಂಡತಿಗೆ ಗಂಡ ಆಗಬೇಕು, ಮಗಳಿಗೆ ತಂದೆ ಆಗಬೇಕು...ನನ್ನ ಸ್ನೇಹಿತರಿಗೆ ಸ್ನೇಹಿತನಾಗಬೇಕು. ಅವರ ಬಳಿ ಹೋಗಿ ನಾನು ಇಷ್ಟು ದಿನ ನಾನ್ ಸ್ಟಾಪ್ ಕೆಲಸ ಮಾಡಿದ್ದೀನಿ ಇಷ್ಟು ಗಂಟೆ ಕೆಲಸ ಮಾಡಿದ್ದೀನಿ ಮಾತನಾಡಲು ಅಗಲ್ಲ ಅಂತ ಹೇಳೋಕೆ ಆಗಲ್ಲ. ಹಾಗೆ ಎಷ್ಟೇ ಬ್ಯುಸಿಯಾಗಿದ್ದರೂ ಎಪಿಸೋಡ್ ನೋಡಲು ಮಿಸ್ ಮಾಡುವುದಿಲ್ಲ. ಕೆಲವೊಮ್ಮೆ ಬಿಗ್ ಬಾಸ್ ಮನೆ ತಲುಪಿರುವುದು ರಾತ್ರಿ 2 ಗಂಟೆಯಲ್ಲಿ..ಶೂಟಿಂಗ್ ಮುಗಿಸಿಕೊಂಡು ಫ್ಲೈಟ್ ತೆಗೆದುಕೊಂಡು ಅಲ್ಲಿಗೆ ಹೋಗುವಷ್ಟರಲ್ಲಿ 2 ಗಂಟೆ ಅಲ್ಲಿಂದ 8ವರೆಗೂ ಬಿಗ್ ಬಾಸ್ ನೋಡಿದ್ದೀನಿ...ಕಷ್ಟ ಆದ್ರೂ ಬಿಸಿ ನೀರಿನಲ್ಲಿ ಕಾಲಿಟ್ಟು ಕಣ್ಣಿಗೆ ತನ್ನೀರು ಬಟ್ಟೆ ಇಟ್ಟು ಸೀರಿಸ್ ನೋಡಿದ್ದೀನಿ' ಎಂದು ಸುದೀಪ್ ಮಾತನಾಡಿದ್ದಾರೆ.
ಚಡ್ಡಿ, ಬ್ರಾ ಹಾಕ್ಕೊಂಡಾಗಲೇ ಗುರು ನಂದು ಎಲ್ಲಿ ನೇತಾಡುತ್ತಿದೆ ಅಂತ ಗೊತ್ತಾಗುವುದು: ನಟಿ ಚಿತ್ರಾಲ್ ರಂಗಸ್ವಾಮಿ
'ಅದಾದ ಮೇಲೆ ಮಲಗಿಕೊಳ್ಳಲ್ಲದೆ ಶೂಟಿಂಗ್ ಮಾಡಿದ್ದೀನಿ. ಖಂಡಿತಾ ಸ್ವಲ್ಪ stress ಅಗುತ್ತದೆ ಆದರೂ ಆ ವೇದಿಕೆ ಮೇಲೆ ನಿಂತುಕೊಂಡಾಗ ಎಲ್ಲವೂ ಕ್ರಿಡಿಟ್ ಕೊಡುತ್ತದೆ. ನಾನು ಬಿಗ್ ಬಾಸ್‌ನ ನೋಡುತ್ತೀನಿ ಟೀಂ ಜಡ್ಜ್‌ಮೆಂಟ್ ಮೇಲೆ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ನನ್ನ ತಾಯಿ ಜೊತೆ ಟಿವಿ ನೋಡುವಾಗ ಅವರು ಯಾವುದೋ ಒಂದು ಸೀನ್‌ಗೆ ಅಯ್ಯೋ ಪಾಪ ಎಂದು ಹೇಳಿದರೆ ನನಗೆ ಹೌದಾ...ಅನಿಸುತ್ತದೆ. ಪ್ರತಿಯೊಬ್ಬರ ದೃಷ್ಟಿಯಲ್ಲಿ ಒಂದೊಂದು ರೀತಿ ಕಾಣಿಸುತ್ತದೆ ಆದರೆ ನಾನು ಒಬ್ಬನೇ ನೋಡುತ್ತೀನಿ ಪ್ರಶ್ನೆಗಳನ್ನು ಬರೆದುಕೊಳ್ಳುತ್ತೀನಿ ಆನಂತರ ವೀಕೆಂಡ್‌ನಲ್ಲಿ ಚರ್ಚೆ ಮಾಡುತ್ತೀನಿ' ಎಂದು ಸುದೀಪ್ ಹೇಳಿದ್ದಾರೆ.
