Asianet Suvarna News Asianet Suvarna News

ಚಡ್ಡಿ, ಬ್ರಾ ಹಾಕ್ಕೊಂಡಾಗಲೇ ಗುರು ನಂದು ಎಲ್ಲಿ ನೇತಾಡುತ್ತಿದೆ ಅಂತ ಗೊತ್ತಾಗುವುದು: ನಟಿ ಚಿತ್ರಾಲ್ ರಂಗಸ್ವಾಮಿ

ಸಿಕ್ಕಾಪಟ್ಟೆ ವರ್ಕೌಟ್ ಮಾಡಿ ಫಿಟ್ ಆಗಿರುವ ನಟಿ ಚಿತ್ರಾಲ್ ರಂಗಸ್ವಾಮಿ ಸಖತ್ ಬೋಲ್ಡ್ ಆಗಿ ಸ್ಪೋರ್ಟ್ಸ್‌ ಬ್ರಾ ಬಗ್ಗೆ ಮಾತನಾಡಿದ್ದಾರೆ.....

Kannada actress Chitral Rangaswamy talks about fitness workout sports bra vcs
Author
First Published Oct 5, 2023, 10:59 AM IST | Last Updated Oct 5, 2023, 10:59 AM IST

ಕನ್ನಡ ಚಿತ್ರರಂಗದ ಅದ್ಭುತ ನಟಿ, ಮಾಡಲ್ ಹಾಗೂ ಬಾಡಿ ಬಿಲ್ಡರ್ ಚಿತ್ರಾ ರಂಗಸ್ವಾಮಿ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಚಿತ್ರಾಲ್ ವರ್ಕೌಟ್ ಮಾಡುವುದನ್ನು ನೋಡಿ ಅದೆಷ್ಟೋ ಮಂದು ನಾವು ಫಿಟ್ ಆಗಿರಬೇಕು ಎಂದು ಮೋಟಿವೇಟ್ ಆಗುತ್ತಾರೆ. ಹೀಗಿರುವಾಗ ಅಲ್ಲೋಬ್ಬ ಇಲ್ಲೊಬ್ಬ ಡ್ರೆಸ್‌ ಬಗ್ಗೆ ನೆಗೆಟಿವ್ ಕಾಮೆಂಟ್ ಮಾಡುತ್ತಾರೆ. ಈ ವಿಚಾರದ ಬಗ್ಗೆ ನಟಿ ಸಖತ್ ಬೋಲ್ಡ್ ಉತ್ತರ ಕೊಟ್ಟಿದ್ದಾರೆ. 

'ಸ್ಪೋರ್ಟ್ಸ್‌ ಬಾ ಹಾಕ್ಕೊಂಡು ವರ್ಕೌಟ್ ಮಾಡೋದು ನಮ್ಮ ಇಷ್ಟ. ಇತ್ತೀಚಿಗೆ ಯಾರೋ ಸೆಲೆಬ್ರಿಟಿ ಸ್ಪೋರ್ಟ್ಸ್‌ ಬ್ರಾ ಹಾಕೊಂಡು ವರ್ಕೌಟ್ ಮಾಡುತ್ತಿದ್ದರು ಅಂತ ದೊಡ್ಡ ದುಡ್ಡಿದ್ದರು. ನಿಜ ಹೇಳಬೇಕು ಅಂದ್ರೆ ನನಗೆ ಸ್ಪೋರ್ಟ್ಸ್ ಬ್ರಾ ಹಾಕಿಕೊಂಡು ವರ್ಕೌಟ್ ಮಾಡೋದು ತುಂಬಾ ಇಷ್ಟ ಆಮೇಲೆ ಕಂಫರ್ಟ್ ಇರುತ್ತದೆ. ಹುಡುಗರಿಗೆ ಶೆಕೆ ಆದಾಗ ಬರ್ಮುಡಾ ಅಥವಾ ಚಡ್ಡಿ ಹಾಕುತ್ತಾರೆ ಯಾರೂ ಅದನ್ನು ಕೇಳುವುದಿಲ್ಲ ಹಾಗೆ ನಾನು ಕೂಡ ಸ್ಪೋರ್ಟ್ಸ್‌ ಬ್ರಾ ಹಾಕುತ್ತೀನಿ. ಚಡ್ಡಿ ಹಾಕೊಂಡಾಗಲೇ ಗುರು ನಂದು ಎಲ್ಲಿ ನೇತಾಡುತ್ತಿದೆ ಅಂತ ಗೊತ್ತಾಗುವುದು. ಬಟ್ಟೆ individual ಆಯ್ಕೆ ಆಗಿರಬೇಕು. ಸ್ಪೋರ್ಟ್ಸ್‌ ಬ್ರಾ ಹಾಕೊಂಡು ಬರುವ ಹುಡುಗಿಯರನ್ನು ಒಂದು ರೀತಿ ನೋಡುವುದು ಇದೆಲ್ಲಾ ತುಂಬಾ ಕಡಿಮೆ ಆಗಬೇಕು. ಕೆಲವೊಂದು ಜಿಮ್‌ನಲ್ಲಿ ಸ್ಪೋರ್ಟ್ಸ್ ಬ್ರಾ ಹಾಕ್ತಾರೆ ಅಂದ್ರೆ ಸೇರಿಸಿಕೊಳ್ಳುವುದಿಲ್ಲ. ವರ್ಕೌಟ್ ಮಾಡುವುದಕ್ಕೆ ಮೂಡ್‌ ಇರಲ್ಲ ಆಗ ನಾವು ಒಂದೊಳ್ಳೆ ಔಟ್‌ಫಿಟ್‌ ಹಾಕೊಂಡ್ರೆ ವರ್ಕೌಟ್ ಮಾಡಬೇಕು ಅನಿಸುತ್ತದೆ. ಒಂದು ಚೂರು ಬ್ರೇಕ್ ತೆಗೆದುಕೊಂಡು ವರ್ಕೌಟ್ ಮಿಸ್ ಮಾಡಿದರೆ ಏನ್ ಮೇಡಂ ದಪ್ಪ ಆಗಿದ್ದೀರಾ ವರ್ಕೌಟ್ ಮಾಡುತ್ತಿಲ್ವಾ ಎಂದು ಕಾಮೆಂಟ್ ಮಾಡುತ್ತಾರೆ. ಸ್ಪೋರ್ಟ್ಸ್‌ ಬ್ರಾ ಹಾಕಿಕೊಳ್ಳುವುದು ತಪ್ಪಲ್ಲ' ಎಂದು ಕನ್ನಡ ಖಾಸಗಿ ಯುಟ್ಯೂಬ್ ಚಾನಲ್‌ನಲ್ಲಿ ಚಿತ್ರಾಲ್ ಮಾತನಾಡಿದ್ದಾರೆ. 

3 ತಿಂಗಳು ದುಬೈನಲ್ಲಿ ಬಾರ್‌ ಡ್ಯಾನ್ಸರ್‌ ಆಗಿದ್ದ ಕಿರುತೆರೆ ನಟಿ ಚಿತ್ರಾಲ್ ರಂಗಸ್ವಾಮಿ; ರೋಚಕ ಸಾಧನೆ ಕಥೆ ವೈರಲ್

'ಗೂಗಲ್ ನೋಡಿಕೊಂಡು ವಿಡಿಯೋ ಮಾಡುವುದಕ್ಕೆ ಕೆಲವರು ಶುರು ಮಾಡಿದ್ದಾರೆ. ಅದಲ್ಲಿ ಒಬ್ಬ ಬೂಬ್ಸ್‌ (ಸ್ತನ) ಸೈಜ್ ಹೆಚ್ಚಿಸಿಕೊಳ್ಳಲು ಏನು ಮಾಡಬೇಕು ಎಂದು ಒಬ್ಬ ವಿಡಿಯೋ ಮಾಡಿದ್ದ.  ಗುರು ನಿನಗಿಂತ ಚೆನ್ನಾಗಿ ಹೇಗೆ ಸ್ತನ ಸೈಜ್‌ ಮಾಡಿಕೊಳ್ಳಬೇಕು ಕಾಪಾಡಿಕೊಳ್ಳಬೇಕು ಎಂದು ಗೊತ್ತು ಅಂತ ಕಾಮೆಂಟ್ ಹಾಕಬೇಕು ಅನ್ನೋಷ್ಟು ಕೋಪ ಬಂದಿತ್ತು. ಏಕೆಂದರೆ ಸ್ತನದ ಸೈಜ್‌ ಜಾಸ್ತಿ ಅಥವಾ ಕಡಿಮೆ ಮಾಡಿಕೊಳ್ಳಲು ಆಗಲ್ಲ ಅಲ್ಲಿರುವ muscles ಮಾತ್ರ ಟೋನ್ ಮಾಡಬಹುದು. ದಯವಿಟ್ಟು ಗೂಗಲ್‌ನ ನೋಡಿ ಏನೂ ಮಾಡಲು ಹೋಗಬೇಡಿ ನೀವು ಹಾಳಾಗಬೇಡಿ' ಎಂದು ಚಿತ್ರಾಲ್ ಹೇಳಿದ್ದಾರೆ.

Latest Videos
Follow Us:
Download App:
  • android
  • ios