ಎಂಟ್ರಿ ಕೊಡುತ್ತಿದ್ದಂತೆ ಕ್ಲಾಸ್ ತೆಗೆದುಕೊಂಡ ಹಿಟ್ಲರ್:ಬಿಗ್ ಬಾಸ್ ಒಳಗೆ ಎಂಟ್ರಿ ಕೊಟ್ಟ ಪ್ರಥಮ್!
ಮನೆಯೊಳಗೆ ಕಾಲಿಡುತ್ತಿದ್ದಂತೆ ಸ್ಪರ್ಧಿಗಳ ಮೇಲೆ ಗರಂ ಆದ ಪ್ರಥಮ್. ಲಾ ಅಂದ್ರೆ ಪ್ರಥಮ್, ಪ್ರಥಮ್ ಅಂದ್ರೆ ಲಾ........
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಸೀಸನ್ 10 ಕೊಂಚ ಇಂಟ್ರೆಸ್ಟಿಂಗ್ ಮಾಡಲು ಒಳ್ಳೆ ಹುಡುಗ ಪ್ರಥಮ್ ಎಂಟ್ರಿ ಕೊಟ್ಟಿದ್ದಾರೆ. ಸೀಸನ್ 4ರಲ್ಲಿ ಪ್ರಥಮ್ ಇದ್ದಾಗ ತುಂಬಾ ಜಗಳ ಮಾತುಕಥೆ ಹಾಗೂ ಚರ್ಚೆ ನಡೆಯುತ್ತಿತ್ತು. ಇದರಿಂದ ಟಿಆರ್‌ಪಿ ಜಾಸ್ತಿ ಆಗಿದ್ದೂ ಇದೆ.. ಹೀಗಾಗಿ ಪ್ರಥಮ್ ಒಂದೊಂದು ಸೀಸನ್‌ಗೆ ಎಂಟ್ರಿ ಕೊಡುತ್ತಾರೆ.
ಸೀಸನ್ 10ರಲ್ಲಿ ಮೊದಲ ವಿಶೇಷ ಅತಿಥಿಯಾಗಿ ಸಚಿವ ಪ್ರದೀಪ್ ಈಶ್ವರ್ ಆಗಮಿಸಿ ಮನೆಯಲ್ಲಿರುವ ಸ್ಪರ್ಧಿಗಳನ್ನು ಮೋಟಿವೇಟ್ ಮಾಡಿದ್ದರು. ಅದರ ಬೆನ್ನಲೆ ಒಳ್ಳೆ ಹುಡುಗರ ಪ್ರಥಮ್ ಎಂಟ್ರಿ ಕೊಟ್ಟಿದ್ದಾರೆ. ಪ್ರಥಮ್ ಕೂಡ ಸ್ಪರ್ಧಿ ಎಂದುಕೊಂಡ ಮನೆ ಮಂದಿಗೆ ಕ್ಲಾಸ್ ತೆಗೆದುಕೊಂಡು ನಾನು ಆಟವಾಡಿಸಲು ಬಂದಿರುವುದು ಎಂದಿದ್ದಾರೆ. ಸ್ವಾಗತ ಮಾಡಲು ಕೈ ಕೊಟ್ಟರೆ ಗರಂ ಅಗಿ ಸೆಲ್ಯೂಟ್ ಮಾಡಿಸಿಕೊಂಡಿದ್ದಾರೆ. 'ನ್ಯಾಯ ಅಂದ್ರೆ ಪ್ರಥಮ್ ಸರ್ ಪ್ರಥಮ್ ಸರ್ ಅಂದ್ರೆ ನ್ಯಾಯ' ಎಂದು ಮನೆಯವರಿಂದ ಹೇಳಿಸಿ ನಮಸ್ಕಾರ ಮಾಡಿಸಿಕೊಂಡಿದ್ದಾರೆ.
ಡ್ರೋನ್ Issue ಕೆದಕಿ ಪ್ರತಾಪ್ ಕಾಲೆಳೆದು ರೇಗಿಸಿ ಮಜಾ ತೆಗೆದುಕೊಳ್ಳುತ್ತಿರುವ ಸ್ಪರ್ಧಿಗಳು!
ಯಾರೆಲ್ಲಾ ಪ್ರಥಮ್‌ನ ಗುರಾಯಿಸುವುದು ಅಥವಾ ಯಾಕಪ್ಪಾ ಬಂದ ಅನ್ನೋ ತರ ಮಾತನಾಡಿಕೊಂಡರೆ ಅಥವಾ ನೋಡಿದರೆ ಅವರನ್ನು ಮನೆ ಬಾಗಿಲಿನಿಂದ ದೂರ ಇಟ್ಟಿದ್ದರು. ಎಲ್ಲರಿಗೂ ಔಟ್ ಔಟ್ ಎನ್ನುತ್ತಿದ್ದರು. ಎಲ್ಲರಿಗೂ ಒತ್ತಾಯದಿಂದ ಚಪ್ಪಾಳೆ ಹೊಡೆಸಿದ್ದಾರೆ...'ಈ ಚಪ್ಪಾಳೆ ಯಾಕಂದ್ರೆ ನಾನು ಈ ಸೀಸನ್ ಬಿಗ್ ಬಾಸ್ ಮನೆಗೆ ಬಂದಿರುವುದಕ್ಕೆ' ಎನ್ನುತ್ತಾರೆ.
ಪ್ರಥಮ್ ಹಿಟ್ಲರ್ ಅವತಾರ ನೋಡಿ ನೆಟ್ಟಿಗರು ಶಾಕ್ ಅಗಿದ್ದಾರೆ ಅಲ್ಲದೆ ಸೂಪರ್ ಎಪಿಸೋಡ್, ನಿರೀಕ್ಷೆ ಇರುವ ಎಪಿಸೋಡ್ ಎಂದು ಕಾಮೆಂಟ್‌ಗಳು ಬರುತ್ತಿದೆ.