ಡ್ರೋನ್ ಪ್ರತಾಪ್ ಸರಿ ತಪ್ಪುಗಳ ಬಗ್ಗೆ ಚರ್ಚೆ ಮಾಡುತ್ತಿರುವ ನೆಟ್ಟಿಗರು. ಸಂಗೀತಾ ಡಬಲ್ ಗೇಮ್‌ನಿಂದ ಬೇಸರ...
ಬಿಗ್ ಬಾಸ್ ಸೀಸನ್ 10ರಲ್ಲಿ ಈ ವಾರದ ಎಪಿಸೋಡ್‌ನಲ್ಲಿ ಎರಡು ತಂಡಗಳ ರಚನೆ ಆಗಿದೆ. ಒಂದು ತಂಡಕ್ಕೆ ಡ್ರೋನ್ ಪ್ರತಾಪ್ ಕ್ಯಾಪ್ಟನ್ ಮತ್ತೊಂದು ತಂಡಕ್ಕೆ ಮೈಕಲ್ ಕ್ಯಾಪ್ಟನ್. ವಿನಯ್ ಆಂಡ್ ಗ್ಯಾಂಗ್ ಮೈಕಲ್ ತಂಡ ಸೇರಿದಂತೆ ನಮ್ರತಾ ಮಾತ್ರ ಡ್ರೋನ್ ಪ್ರತಾಪ್ ತಂಡ ಸೇರಿಬಿಟ್ಟರು. ಟಾಸ್ಕ್ ಆರಂಭದಲ್ಲೇ ನಮ್ರತಾಳನ್ನು ಕ್ಯಾಪ್ಟನ್ ಟಾಸ್ಕ್‌ನಿಂದ ಡ್ರೋನ್ ದೂರವಿಟ್ಟರು. ನಂಬಿಕೆಯಿಂದ ತಂಡ ಸೇರಿದೆ ಆದರೆ ಡ್ರೋನ್ ನಿರ್ಧಾರ ಸರಿ ಇಲ್ಲ ಎಂದು ನಮ್ರತಾ ಕಣ್ಣೀರಿಟ್ಟಿದ್ದಾರೆ.
ನಮ್ರತಾ ಬೇಸರದಲ್ಲಿ ಕಣ್ಣೀರಿಡುವಾಗ ಸಂಗೀತಾ ಸಮಾಧಾನ ಮಾಡಲು ಬರುತ್ತಾರೆ. 'ಅವನದು ಇವತ್ತೇ ಮಗಿಯುವುದಿಲ್ಲ. ಪ್ರತಾಪ್ ಲಿಸ್ಟ್‌ನಲ್ಲಿ ನಾನು ಇದ್ದೀನಿ. ಈ ಮನೆಯಲ್ಲಿ ಯಾರು ನನ್ನನ್ನು ನಾಮಿನೇಟ್ ಮಾಡುತ್ತಾರೆ. ಉಳಿದಿರುವ 5 ಜನರಲ್ಲಿ ಅವನೇ ಮಾಡಬೇಕು ಎಂದು ಸಂಗೀತಾ ಅಳುತ್ತಿರುವ ನಮ್ರತಾ ಬಳಿ ಹೇಳುತ್ತಾರೆ. ಇವರಿಬ್ಬರು ರೂಮಿನಲ್ಲಿ ಚರ್ಚೆ ಮಾಡುವ ಸಮಯದಲ್ಲಿ ಡ್ರೋನ್ ತಂಡ ಗಾರ್ಡನ್ ಏರಿಯಾದಲ್ಲಿ ಮಾತುಕತೆ ಮಾಡುತ್ತಿರುತ್ತಾರೆ.
ದರ್ಶನ್ ಫ್ಯಾನ್ಸ್‌ಗೆ ಗುಡ್ ನ್ಯೂಸ್; ಡಿ-ಬಾಸ್ ಗಾಗಿ ಈ ದಿನ ಫ್ರೀ ಇಟ್ಕೊಳ್ಳಿ....
'ನೀವು ನನಗೆ ಅವಕಾಶ ಕೊಡ್ತೀನಿ. ನಾನು ಆಟವಾಗಿ ತೋರಿಸಬೇಕು. ನಿಮ್ಮನ್ನು ನಾನು ನಂಬುತ್ತಿರುವೆ ಎಂದು ಹೇಳಿ ಬಂದ ಮೇಲೂ ನೀವು ನಾಮಿನೇಟ್ ಮಾಡುವುದು ತಪ್ಪು' ಎಂದು ಸಿರಿ ಪ್ರತಾಪ್ ಬಳಿ ಚರ್ಚೆ ಮಾಡುತ್ತಾರೆ. ಈ ಮನೆಯಲ್ಲಿ ಎಲ್ಲರೂ ಆಟವಾಡಲು ಬಂದಿರುವುದು. ಒಬ್ಬರನ್ನು ಈ ಸಲ ಮಾಡಿದರೆ ಮತ್ತೊಬ್ಬರನ್ನು ಮತ್ತೊಂದು ಸಲ ಮಾಡಲೇ ಬೇಕು. ನನ್ನ ತಂಡ ರಚನೆ ಆಗುವ ಮುನ್ನವೇ ನಾನು ಹೇಳಿದ್ದೆ..ನಾನು ಏನೇ ನಿರ್ಧಾರ ತೆಗೆದುಕೊಂಡರೂ ಅದನ್ನು ಒಪ್ಪಿಕೊಳ್ಳಬೇಕು ಎಂದು ಆಗ ಒಪ್ಪಿಕೊಂಡು ತಂಡ ಸೇರಿದವರು ಈಗ ಆಗಲ್ಲ ಅಂತ ಹೇಳಿದರೆ ಹೇಗೆ? ಎಲ್ಲರಿಗೂ ಇಷ್ಟ ಆಗುವಂತ ನಿರ್ಧಾರ ತೆಗೆದುಕೊಂಡರೆ ಮಾತ್ರ ನಾನು ಓಕೆ ಇಲ್ಲವಾದರೆ ಕೆಟ್ಟವನು. ನಾಳೆ ಮತ್ತೊಬ್ಬರ ಹೆಸರು ಹೇಳುತ್ತೀನಿ ಆಗ ಏನ್ ಮಾಡ್ತಾರೆ?' ಎಂದು ಪ್ರತಾಪ್ ತಮ್ಮ ತಲೆಯಲ್ಲಿರುವ ಯೋಚನೆಗಳನ್ನು ಹೇಳಿದ್ದಾರೆ.
