ಬಾಯಿ ಅವ್ರದು ಸಿಗರೇಟ್ ಇವ್ರದು; ಬಿಗ್ ಬಾಸ್ ಮನೆಯ Smoking Zone ಬಗ್ಗೆ ಸುದೀಪ್ ಉತ್ತರ
ಬಿಗ್ ಬಾಸ್ ಮನೆಯಲ್ಲಿ ಎಣ್ಣೆ ಸಿಗರೇಟ್ ಇರುತ್ತೆ ಎಂದು ವಾದ ಮಾಡುವವರಿಗೆ ಸ್ಪಷ್ಟನೆ ಕೊಟ್ಟ ಕಿಚ್ಚ ಸುದೀಪ್...

ಅಕ್ಟೋಬರ್ 10ರಂದು ರಾತ್ರಿ 9.30ಕ್ಕೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಆರಂಭವಾಗುತ್ತಿರುವ ಬಿಗ್ ಬಾಸ್ ಸೀಸನ್ 10 ದಿನದಿಂದ ದಿನಕ್ಕೆ ಕ್ಯೂರಿಯಾಸಿಟಿ ಹೆಚ್ಚಿಸುತ್ತಿದೆ. 9 ಸೀಸನ್‌ಗಳಲ್ಲಿ ಇದ್ದ ಮನೆಗಿಂತ ಈ ಸಲ ಮನೆ ಸಂಪೂರ್ಣವಾಗಿ ಬದಲಾಯಿಸಿದ್ದಾರೆ. ಮನೆ ನಿರ್ಮಾಣದಲ್ಲಿ ಎಷ್ಟೆಲ್ಲಾ ಕೆಲಸಗಳು ಇರುತ್ತದೆ ಯಾರೆಲ್ಲಾ ಕೈ ಜೋಡಿಸುತ್ತಾರೆ ಎಂದು ಈಗಾಗಲೆ ವಾಹಿನಿ ವಿಡಿಯೋ ರಿವೀಲ್ ಮಾಡಿದೆ. ಮನೆ ಹೇಗಿರಬಹುದು ಅನ್ನೋ ಐಡಿಯಾ ಜನರಿಗೆ ಬಂದಿದೆ ಆದರೆ ಸಂಪೂರ್ಣ ಮಾಹಿತಿ ಗ್ರ್ಯಾಂಡ್ ಓಪನಿಂಗ್ ದಿನ ಕಿಚ್ಚನೇ ನೀಡಬೇಕು. ಇನ್ನು ಅದು ಇದು ಗಾಸಿಪ್ ಆಂಡ್ ಕಾಂಟ್ರವರ್ಸಿ ಇದ್ದಿದ್ದೇ....ಹೀಗಿರುವ ಸಿರೇಟ್ ಮತ್ತು ಎಣ್ಣೆ ಅಭ್ಯಾಸ ಮಾಡಿಕೊಂಡಿರುವವ ಕಥೆ?
ರಾತ್ರಿ ಎರಡು ಗಂಟೆಗೆ ಬಂದು ಬೆಳಗ್ಗೆವರೆಗೂ ಬಿಗ್ ಬಾಸ್ ನೋಡುತ್ತೀನಿ; Stress ಬಗ್ಗೆ ಮಾತನಾಡಿದ ಕಿಚ್ಚ ಸುದೀಪ್
ಹೌದು! ಇತ್ತೀಚಿಗೆ ನಡೆದ ಪ್ರೆಸ್‌ಮೀಟ್‌ನಲ್ಲಿ ಕಿಚ್ಚ ಸುದೀಪ್‌ಗೆ ಮಾಧ್ಯಮ ಸ್ನೇಹಿತರೊಬ್ಬರು ಪ್ರಶ್ನೆ ಮಾಡಿದರು. ಪ್ರತಿ ಸೀಸನ್‌ನಲ್ಲೂ ಸಿಗರೇಟ್ ಸೇದುವವರು ಇರುತ್ತಾರೆ ಈ ಸೀಸನ್‌ನಲ್ಲೂ ಇರುತ್ತಾ ಎಂದು.ಬಾಯಿ ಅವ್ರದು ಸಿಗರೇಟ್ ಇವ್ರದು ಸರ್ ಎಂದು ಸುದೀಪ್ ಹೇಳುತ್ತಾರೆ. ದಿನದಲ್ಲಿ ಸ್ಪರ್ಧಿಗಳು ಎಷ್ಟು ಸಿಗರೇಟ್ ಸೇದಬಹುದು ಎಂದು ಮತ್ತೊಮ್ಮೆ ಪ್ರಶ್ನೆ ಕೇಳಿದಕ್ಕೆ ' ಯಾಕೆ ನೀವು ಹೋಗಬೇಕಾ' ಎಂದು ಸುದೀಪ್ ಕಾಲೆಳೆಯುತ್ತಾರೆ.
ಬಿಗ್ ಬಾಸ್ ಕನ್ನಡ ಶೋ ವೀಕ್ಷಿಸಲು ಹಲವು ದಾರಿಗಳಿವೆ; ಚಿಂತೆ ಬಿಟ್ಟು ಬಿಡಿ..!
'ಯಾವುದೇ ಕ್ರೀಡೆ ತೆಗೆದುಕೊಳ್ಳಿ ಅದರಲ್ಲಿರುವ ನಿಯಮಗಳು ಸೆಲ್ಫ್ ಅಗಿರುತ್ತದೆ. ಈಗ ನೀವು ಏನೇ ಮಾಡಲು ಯಾವುದೇ ತರ ಕೆಲಸವಿರಲಿ ನಾವು ನಿಯಮಗಳನ್ನು ಹಾಕಲು ಆಗುವುದಿಲ್ಲ. ಅದೆಷ್ಟೋ ಸೆಲೆಬ್ರಿಟಿಗಳು ಕ್ರೀಡಾಪಟುಗಳಿಗೆ ಹೊರಗಡೆ ಅವರದ್ದೇ ಹ್ಯಾಬಿಟ್‌ಗಳು ಇರುತ್ತದೆ. ಇದು ಇದ್ದರೆ ಮಾತ್ರ ಬರುತ್ತೀನಿ ಇದು ಇಲ್ಲ ಅಂದ್ರೆ ಆಗಲ್ಲ ಎನ್ನುತ್ತಾರೆ. ಆಗ ಅಲ್ಲಿ ಅತಿ ಹೆಚ್ಚಾಗಿ ಸೇದಲು ಸಿಗರೇಟ್ ಕೊಡುವುದಿಲ್ಲ ಅಥವಾ Zero liquor. ಏನೂ ಕೊಡುವುದಿಲ್ಲ. ಮಾಧ್ಯಮದಲ್ಲಿರುವ ಸ್ನೇಹಿತರಿಗೆ ಸಿಗರೇಟ್ ಬಿಡಿಸಲು ನಾನು ಸಖತ್ ಕಷ್ಟ ಪಟ್ಟಿರುವೆ. ನೀವು ಸಿಗರೇಟ್ ಸೇದುವುದಾದರೆ ಕೆಸಿಸಿಯಲ್ಲಿ ಆಟ ಆಡುವಂತಿಲ್ಲ ಎಂದಿದ್ದಕ್ಕೆ ಪ್ರಮಾಣ ಮಾಡಿ ಬಾತ್‌ರೂಮ್‌ನಲ್ಲಿ ಸೇದಿ ಬಂದಿದ್ದಾರೆ. ಹಾಗಂತ ನೀವು ಆಟ ಆಡುವಂತಿಲ್ಲ ಎಂದು ಹೇಳಲು ಆಗಲ್ಲ. 3-4 ಪ್ಯಾಕೆಟ್ ಸೇದುವ ಚಕ್ರವರ್ತಿ ಕೂಡ ಸಾತು ಸಂತರಾಗಿ ಕಡಿಮೆ ಮಾಡಿಕೊಂಡು ಹೊರ ಬಂದರು. ಸಂಪೂರ್ಣವಾಗಿ ನಾವು ಕಂಟ್ರೋಲ್ ಮಾಡಲು ಆಗಲ್ಲ ಹಾಗಂತೆ ಕೊಡುವುದರಲ್ಲಿ ತಪ್ಪಿಲ್ಲ..ಏನೇ ಕೊಟ್ಟರೂ ಕಂಟ್ರೋಲ್‌ನಲ್ಲಿರುತ್ತದೆ.