Bigg Boss Kannada Season 12 House: ಕಲರ್ಸ್ ಕನ್ನಡ ವಾಹಿನಿಯಲ್ಲಿ 'ಬಿಗ್ ಬಾಸ್ ಕನ್ನಡ ಸೀಸನ್ 12' ಶೋ ಪ್ರಸಾರ ಆಗಲಿದೆ. ಈ ಬಾರಿ ಎಲ್ಲಿ ಶೂಟಿಂಗ್ ನಡೆಯಲಿದೆ?
'ಬಿಗ್ ಬಾಸ್ ಕನ್ನಡ ಸೀಸನ್ 12' ಶೋ ( Bigg Boss Kannada Season 12 ) ಆರಂಭಕ್ಕೆ ಸಕಲ ಸಿದ್ಧತೆ ನಡೆಯುತ್ತಿದೆ. ಹೀಗಿರುವಾಗ ಈ ಬಾರಿ ಬಿಗ್ ಬಾಸ್ ಶೋ ಎಲ್ಲಿ ನಡೆಯುವುದು ಎಂಬ ಕುತೂಹಲ ಕಾಡಿದೆ. ಇಷ್ಟು ವರ್ಷಗಳ ಕಾಲ ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ಬಿಗ್ ಬಾಸ್ ಕನ್ನಡ ಶೋ ನಡೆಯುತ್ತಿತ್ತು. ಆದರೆ ಸೀಸನ್ 11 ಮಾತ್ರ ಬೇರೆ ಕಡೆ ಶೂಟ್ ಆಗಿತ್ತು. ಈ ಬಾರಿ ಮತ್ತೆ ಬಿಡದಿ ಬಳಿ ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ 'ಬಿಗ್ ಬಾಸ್ ಕನ್ನಡ ಸೀಸನ್ 12' ಶೋ ನಡೆಯಲಿದೆ ಎನ್ನಲಾಗುತ್ತಿದೆ.
ಬಿಗ್ ಬಾಸ್ ಕನ್ನಡ 3-10 ಸೀಸನ್ ಎಲ್ಲಿ ನಡೆಯಿತು?
2011ರಲ್ಲಿ ಕನ್ನಡದಲ್ಲಿ ಬಿಗ್ ಬಾಸ್ ಶೋ ಶುರುವಾಯ್ತು. ಆರಂಭದ ಮೊದಲ ಎರಡು ಸೀಸನ್‌ಗಳನ್ನು, ಮಹಾರಾಷ್ಟ್ರದ ಪುಣೆಯ ಲೋನಾವಾಲದಲ್ಲಿ ಶೂಟ್ ಮಾಡಲಾಯ್ತು. ಅಲ್ಲಿ ಸಾಮಾನ್ಯವಾಗಿ ಬಿಗ್ ಬಾಸ್ ಹಿಂದಿ ಶೋ ಸೀಸನ್‌ಗಳು ನಡೆಯುತ್ತದೆ. ಹಿಂದಿ, ಕನ್ನಡ ಶೋಗಳು ಬಹುತೇಕ ಏಕಕಾಲಕ್ಕೆ ಪ್ರಸಾರ ಆಗುತ್ತವೆ ಎಂದು, ಮೂರನೇ ಸೀಸನ್‌ಗಾಗಿ ಬೆಂಗಳೂರಿನ ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ಮನೆ ಸೆಟ್ ಹಾಕಲಾಯ್ತು. ಬಿಗ್ ಬಾಸ್ ಕನ್ನಡ ಮೂರನೇ ಸೀಸನ್‌ನಿಂದ ಹತ್ತನೇ ಸೀಸನ್‌ವರೆಗೆ ಇಲ್ಲಿಯೇ ಶೋ ನಡೆದಿದೆ.
ಬೆಂಗಳೂರಿನ ರಾಮೋಹಳ್ಳಿ ಬಳಿ ಬಿಗ್ ಬಾಸ್ ಕನ್ನಡ ಸೀಸನ್ 11 ಶೋ ಶೂಟಿಂಗ್ ಮಾಡಲಾಗಿತ್ತು. ಆದರೆ ಈ ಬಾರಿ ಇನೋವೇಟಿವ್ ಫಿಲ್ಮ್ ಸಿಟಿಯಲ್ಲಿ ಈ ಸೀಸನ್ ಶೂಟಿಂಗ್ ನಡೆಯಲಿದೆ ಎಂಬ ಗುಸು ಗುಸು ಶುರು ಆಗಿದೆ. ಈ ಬಗ್ಗೆ ವಾಹಿನಿಯಾಗಲೀ, ಬಿಗ್ ಬಾಸ್ ಟೀಂ ಆಗಲೀ ಅಧಿಕೃತವಾಗಿ ಹೇಳಿಕೆ ನೀಡಿಲ್ಲ.
ಆಕರ್ಷಣೀಯ ಸ್ಥಳವಾದ ದೊಡ್ಮನೆ!
ಬಿಗ್ ಬಾಸ್ ಶೋನಲ್ಲಿ ಒಂದು ಸೀಸನ್‌ಗಾಗಿ ಕಟ್ಟಲಾದ ಮನೆಯನ್ನು ಮುಂದಿನ ಸೀಸನ್ ಶುರು ಆಗೋವರೆಗೂ ಉಳಿಸಿಕೊಳ್ಳಲಾಗುತ್ತದೆ. ಶೋ ಮುಗಿದ ಬಳಿಕ ಜನರು ಅಲ್ಲಿಗೆ ಬಂದು ಹೋಗೋದುಂಟು. ಇದು ಓಂಥರ ಆಕರ್ಷಣೀಯ ಸ್ಥಳ ಎನ್ನಬಹುದು.
ಮನೆಯಲ್ಲಿ ಏನೇನು ಇರುವುದು?
ಬಿಗ್ ಬಾಸ್ ಮನೆಯ ವೈಭವಕ್ಕೆ ಮನಸೋಲದಿರೋರೇ ಇಲ್ಲ. ವಿಶಾಲವಾದ ಜಾಗದಲ್ಲಿ ದೊಡ್ಡ ಮನೆ ಸೆಟ್ ಹಾಕಲಾವುದು. ಆಟ ಆಡಲು ಗಾರ್ಡನ್ ಏರಿಯಾ, ದೊಡ್ಡ ಹಾಲ್, ಕಿಚನ್, ಸಿಟ್ಟಿಂಗ್ ಏರಿಯಾ, ಬೆಡ್ ರೂಮ್, ಡ್ರೆಸ್ಸಿಂಗ್ ರೂಮ್, ಕ್ಯಾಪ್ಟನ್ ರೂಮ್, ಕನ್ಫೆಶನ್ ರೂಮ್, ಸ್ಮೋಕಿಂಗ್ ಏರಿಯಾ, ಬಾತ್‌ರೂಮ್, ಸ್ವಿಮ್ಮಿಂಗ್ ಫೂಲ್, ಸೀಕ್ರೇಟ್ ರೂಮ್, ಜಿಮ್ ಏರಿಯಾ ಕೂಡ ಇರುವುದು. ದೇವರ ಮನೆ ಇರುವುದು. ಬದುಕಲು ಬೇಕಾದಷ್ಟು ವ್ಯವಸ್ಥೆಗಳನ್ನು ನೀಡಲಾಗುವುದು. ಒಟ್ಟಿನಲ್ಲಿ ಈ ಮನೆಯಲ್ಲಿ ಊಟಕ್ಕೆ ದೊಡ್ಡ ಮಟ್ಟದಲ್ಲಿ ಜಗಳ ಆಗುವುದು. ಉಳಿದಂತೆ ಆಟಗಳಿಗೋ, ಗಾಸಿಪ್‌ಗಳಿಗೋ ಗಲಾಟೆ ಮಾಡಿಕೊಳ್ತಾರೆ.
ಸ್ಪರ್ಧಿಗಳು ಯಾರು?
ಈ ಬಾರಿಯೂ ಕಿಚ್ಚ ಸುದೀಪ್ ನಿರೂಪಣೆ ಮಾಡಲಿದ್ದಾರೆ. ಸ್ಪರ್ಧಿಗಳ ಆಯ್ಕೆಯಲ್ಲಿ ತಾನು ತಲೆ ಹಾಕೋದಿಲ್ಲ ಎಂದು ಅವರು ಹೇಳಿದ್ದಾರೆ. ಹೀಗಾಗಿ ಈ ಬಾರಿ ವಿವಾದಿತ ಸ್ಪರ್ಧಿಗಳು ಸೇರಿ ವಿವಿಧ ಕ್ಷೇತ್ರಗಳ, ವಿವಿಧ ವ್ಯಕ್ತಿತ್ವವುಳ್ಳ ಸ್ಪರ್ಧಿಗಳು ಬಂದರೂ ಬರಬಹುದು.

