ಡ್ರೋನ್‌ಗೆ 72 ಲಕ್ಷ ವೋಟ್ ಲೆಕ್ಕಾಚಾರ; ಪ್ರತಾಪ್ ಕಾಗೆ ಅಂದ್ರೆ ಇಶಾನಿ ಕಕ್ಕ ಎಂದು ಟೀಕೆ ಮಾಡಿದ ನೆಟ್ಟಿಗರು!

ಬಿಬಿ ಮನೆಯೊಳಗೆ ಎಂಟ್ರಿ ಕೊಟ್ಟು ಟ್ರೋಲ್‌ಗೆ ಗುರಿಯಾದ ಇಶಾನಿ. ಡ್ರೋನ್ ಪ್ರತಾಪ್‌ ಫ್ಯಾನ್ಸ್‌ ಎಷ್ಟಿದ್ದಾರೆ ಗೊತ್ತಾ? 

Colors Kannada Bigg Boss Eshani post gets 72 Lakhs comment about drone prathap vcs

ಬಿಗ್ ಬಾಸ್ ಸೀಸನ್ 10 ಸೀಸನ್ ಫಿನಾಲೆ ವಾರಕ್ಕೆ ಕಾಲಿಟ್ಟಿದೆ. ಟಿಕೆಟ್‌ ಟು ಫಿನಾಲೆ ಟಾಸ್ಕ್‌ ಗೆದ್ದು ಸಂಗೀತಾ ಶೃಂಗೇರಿ ಖುಷಿಯಾಗಿ ಮುಂದಿನ ವಾರಕ್ಕೆ ಕಾಲಿಟ್ಟಿದ್ದಾರೆ. ಪ್ರತಾಪ್‌ ಅಂಕ ಹೆಚ್ಚು ಪಡೆದ ಕಾರಣ ಸಂಗೀತ ಆತನನ್ನು ಸೇಫ್ ಮಾಡುತ್ತಾರೆ. ಈ ವಾರ ನಾಮಿನೇಟ್ ಆಗಿದ್ದ ವರ್ತೂರ್ ಸಂತೋಷ್, ತುಕಾಲಿ ಸಂತೋಷ್, ವಿನಯ್ ಗೌಡ, ನಮ್ರತಾ ಗೌಡ ಮತ್ತು ತನಿಷಾ ನಾಮಿನೇಟ್ ಅಗಿದ್ದರು. ಆದರೆ ಬಿಗ್ ಬಾಸ್ ಇದ್ದಕ್ಕಿದ್ದಂತೆ ಮಿಡ್ ವೀಕ್ ಎಲಿಮಿನೇಷ್‌ ಎಂದು ತನಿಷಾರನ್ನು ಹೊರ ಹಾಕಿದ್ದಾರೆ. ಅಲ್ಲದೆ ಈ ವಾರ ಡಬಲ್ ಎಲಿಮಿನೇಷನ್‌ ಬಿಸಿ ಸ್ಪರ್ಧಿಗಳಿಗೆ ಮುಟ್ಟಿದೆ. 

ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಅರಂಭದಿಂದ ಈ ವರೆಗೂ ಎಲಿಮಿನೇಟ್ ಆಗಿರುವ ಸ್ಪರ್ಧಿಗಳನ್ನು ಮತ್ತೆ ಒಂದು ದಿನದ ಮಟ್ಟಕ್ಕೆ ಪ್ರವೇಶ ಮಾಡಿಕೊಟ್ಟಿದ್ದರು. ಈ ವೇಳೆ ಫಿನಾಲೆಗೆ ಹತ್ತಿರವಾಗಿರುವ ಸ್ಪರ್ಧಿಗಳಲ್ಲಿ ಯಾರು ಹೊರ ಇರಬೇಕಿತ್ತು ಮತ್ತು ಯಾರು ಗೆಲ್ಲಬೇಕು ಎಂದು ಹೇಳಿದರು. ಆಗ ಮಾತನಾಡಲು ಶುರು ಮಾಡುತ್ತಿದ್ದಂತೆ ಇಶಾನಿ ಪ್ರತಾಪ್ ವಿರುದ್ಧ ಕಿಡಿ ಕಾರಿದ್ದಾರೆ. ನೇರವಾಗಿ ನನಗೆ ನೀನು ಇಷ್ಟವಿಲ್ಲ ನೀನು ಇಲ್ಲ ಇರ್ಬಾರದು ಅಂತ ಹೇಳಿದ್ದಾರೆ. ಪ್ರತಾಪ್ ಗೇಮ್‌ ಆಡುತ್ತಿದ್ದಾನೆ ಎಂದು ಸಂಗೀತಾಗೆ ಅರ್ಥ ಮಾಡಿಸುತ್ತಾರೆ. ಪ್ರತಾಪ್‌ನ ಕಾಗೆ ಎಂದು ಕರೆದು ಟೀಕೆಗೆ ಗುರಿಯಾಗಿದ್ದಾರೆ.

Colors Kannada Bigg Boss Eshani post gets 72 Lakhs comment about drone prathap vcs

ಬಿಗ್ ಬಾಸ್‌ ಮನೆಯಿಂದ ಹೊರ ಬಂದ ಮೇಲೆ ಇಶಾನಿ ಸೆಲ್ಫಿ ಅಪ್ಲೋಡ್ ಮಾಡಿದ್ದಾರೆ. ನಮ್ಮ ಸಂಪ್ರದಾಯ ಮತ್ತು ಆಚರಣೆಯನ್ನು ವಿವರಿಸಲಾಗದಷ್ಟು ಸುಂದರವಾಗಿದೆ ಎಂದು ಇಶಾನಿ ಬರೆದುಕೊಂಡಿದ್ದರು. ಈ ಫೋಟೋಗೆ ನೆಟ್ಟಿಗರು ಡ್ರೋನ್ ಪ್ರತಾಪ್ ಗೆಲ್ಲಬೇಕು, ಪ್ರತಾಪ್‌ ಫ್ಯಾನ್ಸ್‌ ನಾವು, ಪ್ರತಾಪ್ ಕಾಗೆ ಅಂದ್ರೆ ನೀನು ಬೆಳ್ಳಗಿರುವುದಕ್ಕೆ ಅದರ ಕಕ್ಕ ಎಂದು ನೆಗೆಟಿವ್ ಆಗಿ ಕಾಮೆಂಟ್ ಮಾಡುತ್ತಿದ್ದಾರೆ. ಸುಮಾರು 75 ಸಾವಿರ ಮಂದಿ ನೆಗೆಟಿವ್ ಕಾಮೆಂಟ್ ಮಾಡಿದ್ದಾರೆ. ಪರೋಕ್ಷವಾಗಿ ಇಶಾನಿನೇ ಪ್ರತಾಪ್‌ಗೆ ಸಹಾಯ ಆಗುವಂತೆ ಮಾಡಿದ್ದಾರೆ. 

ಶೂಟೌಟ್‌ ಆರ್ಡರ್‌ ಬಂದಿತ್ತಂತೆ, ಊಟಕ್ಕೆ ವಿಷ ಹಾಕಬೇಕಿತ್ತು; ಮಾನಸಿಕ ಅಸ್ವಸ್ಥ ಅಂತಾರೆಂದು ಕಣ್ಣೀರಿಟ್ಟ ಡ್ರೋನ್ ಪ್ರತಾಪ್

ಒಬ್ಬ ವ್ಯಕ್ತಿ ಒಂದು ಲಾಗಿನ್‌ ಮೂಲಕ 99 ಸಲ ವೋಟ್ ಮಾಡಬಹುದು. ಹೀಗಾಗಿ 74,900*99 ವೋಟ್‌ ಅಂದ್ರೆ 74,15,397 ವೋಟ್‌ ಪ್ರತಾಪ್ ಪಡೆಯುತ್ತಾರೆ. ಈ ಹಿಂದೆ ಸುದೀಪ್ ಒಮ್ಮೆ ಹೇಳಿದ್ದರು..ನಿಮ್ಮಲ್ಲಿ ಒಬ್ಬರು 72 ಲಕ್ಷ ವೋಟ್ ಪಡೆದಿದ್ದಾರೆ ಎಂದು. ಆ ವ್ಯಕ್ತಿ ಪ್ರತಾಪ್‌ ಎಂದು ಕನ್‌ಫರ್ಮ್‌ ಆಯ್ತು ಅಂತಾರೆ ವೀಕ್ಷಕರು. 

Latest Videos
Follow Us:
Download App:
  • android
  • ios