Asianet Suvarna News Asianet Suvarna News

ಆ ವ್ಯಕ್ತಿನ ಕುಗ್ಗಿಸಲಾಗಿದೆ, ಆದ್ರೂ ಟ್ರೋಫಿ ಗೆಲ್ತಾರೆ: ಭವಿಷ್ಯ ನುಡಿದ ಆರ್ಯವರ್ಧನ್ ಗುರೂಜಿ

ಏನೇ ಆಗಲಿ ಟ್ರೋಫಿ ಸೇರುವುದು ಇವರಿಗೆನೇ. ಆರ್ಯವರ್ಧನ್ ಗುರೂಜಿ ಹೇಳುವುದು ಸತ್ಯ ಆಗುತ್ತಾ?

Colors Kannada Bigg boss Aryavardhan Guruji supports Varthur Santhosh vcs
Author
First Published Nov 10, 2023, 2:26 PM IST

ಬಿಗ್ ಬಾಸ್ ಸೀಸನ್ 9ರಲ್ಲಿ ಸಖತ್ ಕಾಮಿಡಿ ಮಾಡಿಕೊಂಡು, ಭವಿಷ್ಯ ನುಡಿಯುತ್ತಾ ಟಫ್ ಫೈಟ್‌ ಕೊಟ್ಟಿದ್ದ ಆರ್ಯವರ್ಧನ್ ಗುರೂಜಿ ಈಗ ಸೀಸನ್ 10ರ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಸೀಸನ್ 9ರ ವಿನ್ನರ್ ರೂಪೇಶ್ ಶೆಟ್ಟಿನೇ ಎಂದು ಆಗಾಗ ಹೇಳುತ್ತಿದ್ದ ಆರ್ಯವರ್ಧನ್ ಮಾತು ಸತ್ಯವಾಗಿತ್ತು. ಹೀಗಾಗಿ ಈ ಸಲವೂ ಆರ್ಯವರ್ಧನ್ ಹೇಳುತ್ತಿರುವ ಸ್ಪರ್ಧಿನೇ ವಿನ್ನರ್ ಟ್ರೋಫಿ ಹಿಡಿಯುವುದು ಅನ್ನೋದು ಜನರ ಮಾತು.

'ವರ್ತೂರ್ ಸಂತೋಷ್ ಅವರದ್ದು ಮೀನ ರಾಶಿ ಅವರಿಗೆ ಅನುಕೂಲಕರ ವಾತಾವರಣ ಇದೆ. ಅವರು ಒಳ್ಳೆಯ ವ್ಯಕ್ತಿ. ಹಾಗೂ ರೈತನ ಮಗ. ಬಿಗ್ ಬಾಸ್ ಮನೆಯಲ್ಲಿ ಬಹುತೇಕರು ಸಿನಿಮಾ ಹಾಗೂ ಟಿವಿ ಸೀರಿಯಲ್‌ನವರೇ ಇದ್ದಾರೆ. ಅವರು ಪರಸ್ಪರರ ಬಗ್ಗೆ ತಿಳಿದುಕೊಂಡಿರುವವರು. ಜನರಿಗೂ ಅವರ ಬಗ್ಗೆ ತಿಳಿದಿದೆ ಹೀಗಾಗಿ ವರ್ತೂರ್ ಇಂಟ್ರೆಸ್ಟಿಂಗ್ ಅನಿಸುತ್ತಿದ್ದಾರೆ. ಆದರೆ ವರ್ತೂರ್ ಸಂತೋಷ್‌ಗೆ ಅದೆಲ್ಲ ಗೊತ್ತಾಗುವುದಿಲ್ಲ. ಮನೆಯ ಒಳಗೆ ಅವರನ್ನು ಕುಗ್ಗಿಸಲಾಗಿದೆ. ಹೊರಗೆ ಕಾನೂನು ರೀತಿಯಾಗಿಯೂ ಅವರನ್ನು ಕುಗ್ಗಿಸಲಾಗಿದೆ. ಜನರು ಅವರನ್ನು ಬೆಂಬಲಿಸಬೇಕು' ಎಂದ ಆರ್ಯವರ್ಧನ್ ಗುರೂಜಿ ಹೇಳಿದ್ದಾರೆಂದು ಸುದ್ದಿಯಾಗುತ್ತಿದೆ.

ನಟ ಜಗ್ಗೇಶ್ ದೊಡ್ಡವರು, ನಾವು ಅವರ ಚಪ್ಪಲಿಗೂ ಸಮವಲ್ಲ: ಡ್ರೋನ್ ಪ್ರತಾಪ್ ತಂದೆ ಭಾವುಕ

' ನನ್ನ ಶಿಷ್ಯರೊಬ್ಬರಿಗೆ ವರ್ತೂರು ಸಂತೋಷ್‌ ಬಹಳ ಆತ್ಮೀಯರು. ನಮಗೂ ಬೇಕಾದವರು. ಜನ ವರ್ತೂರ್ ಸಂತೋಷ್‌ಗೆ ಬೆಂಬಲ ನೀಡಬೇಕು. ಎಲ್ಲರೂ ವರ್ತೂರ್ ಸಂತೋಷ್‌ ಅವರ ಚಿತ್ರ ಮತ್ತು ವಿಡಿಯೋಗಳನ್ನು ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಬೇಕು. ನನಗೆ ತಿಳಿದಂತೆ ವರ್ತೂರ್ ಸಂತೋಷ್‌ ಚೆನ್ನಾಗಿ ಮನೋರಂಜನೆ ನೀಡುವ ವ್ಯಕ್ತಿ ಆದೆ ಆಗಿರುವ ಘಟನೆಯಿಂದ ಅವರು ಸ್ವಲ್ಪ ವೀಕ್ ಆಗಿರಬಹುದು. ಈ ಹಂತದಲ್ಲಿ ಜನರ ಬೆಂಬಲ ಅವರಿಗೆ ಬೇಕು ಒನ್ನ ಬ್ಯಾಟ್ಸ್‌ಮ್ಯಾನ್ 100 ಹೊಡೆಯಬೇಕೆಂದರೆ ಆರಂಭದ ಕೆಲವು ಬಾಲ್‌ಗಳನ್ನು ರಕ್ಷಣಾತ್ಮಕವಾಗಿ ಆಡಲೇ ಬೇಕಾಗುತ್ತದೆ' ಎಂದು ಆರ್ಯವರ್ಧನ್ ಹೇಳಿದ್ದಾರೆ.

ಕೆಲವೇ ದಿನಗಳಲ್ಲಿ ವರ್ತೂರ್ ಸಂತೋಷ್ ನಿಶ್ಚಿತಾರ್ಥ; ಹುಡುಗಿ ಯಾರೆಂದು ರಿವೀಲ್ ಮಾಡಿದ ರಕ್ಷಕ್!

Follow Us:
Download App:
  • android
  • ios