ಅಡುಗೆ ಮನೆಯಲ್ಲಿ ಫೇಸ್‌ಪ್ಯಾಕ್‌ಗಳ ಬಗ್ಗೆ ನಡೆಯಿತ್ತು ದೊಡ್ಡ ಚರ್ಚೆ. ಹಣ್ಣಿನ ಫೇಸ್‌ಬ್ಯಾಕ್‌ ಎಷ್ಟು ಸೇಫ್?

ಬಿಗ್ ಬಾಸ್ ಸೀಸನ್ 9 ಮೂರನೇ ವಾರ ಆರಂಭವಾಗಿದೆ. ಆರ್ಯವರ್ಧನ್ ಗುರೂಜೀ ಕ್ಯಾಪ್ಟನ್ ಆಗಿ ಇಡೀ ಮನೆಯನ್ನು ಲೈವ್ಲಿಯಾಗಿಟ್ಟಿದ್ದಾರೆ. ಈ ವಾರ ಕ್ಯಾಪ್ಟನ್ ಆಗಿರುವುದಕ್ಕೆ ನೇರವಾಗಿ ಅನುಪಮಾ ಗೌಡರನ್ನು ಎಲಿಮಿನೇಷನ್‌ಗೆ ನಾಮಿನೇಟ್ ಮಾಡಿದ್ದಾರೆ. ಅಲ್ಲದೆ ಕನ್ನಡ ಸರಿಯಾಗಿ ಓದಲು ಬರುವುದಿಲ್ಲ ಟಾಸ್ಕ್‌ನ ಅರ್ಥ ಮಾಡಿಸುವುದಕ್ಕೆ ಕಷ್ಟ ಆಗುತ್ತದೆ ಎಂದು ದಿನಕ್ಕೊಬ್ಬರನ್ನು ಅಸಿಸ್ಟೆಂಟ್ ಆಗಿಟ್ಟುಕೊಂಡಿದ್ದಾರೆ. 

ಏನಿದು ಫೇಸ್‌ ಪ್ಯಾಕ್ ಕಥೆ:

ಅಡುಗೆ ಮನೆಯಲ್ಲಿ ಅನುಪಮಾ ಗೌಡ ಮತ್ತು ಅಮೂಲ್ಯಾ ಗೌಡ ಅಡುಗೆ ಮಾಡುವಾಗ ನೇಹಾ ಗೌಡ ಮತ್ತು ರಾಕೇಶ್ ಸಹಾಯ ಮಾಡಲು ಮುಂದಾಗುತ್ತಾರೆ. ರಾಕೇಶ್ ತರಕಾರಿ ಕಟ್ ಮಾಡುತ್ತಿದ್ದರೆ ನೇಹಾ ಪಪ್ಪಾಯ ಕಟ್ ಮಾಡುತ್ತಾರೆ. ಕಟ್ ಮಾಡುತ್ತಲೇ ಅಲ್ಲಿದ್ದ ಪಪ್ಪಾಯವನ್ನು ಮುಖಕ್ಕೆ ತಿಕ್ಕಿಕೊಂಡಿದ್ದಾರೆ ಇದನ್ನು ನೋಡಿ ರೂಪೇಶ್ ಶೆಟ್ಟಿ ಹೀಗೆ ಮಾಡಬೇಡಿ ಹಾಗೆ ಮಾಡಬೇಡಿ ಎಂದು ಚರ್ಚೆ ಶುರು ಮಾಡುತ್ತಾರೆ.

BBK9; ಕಾಲ್ಬುಡಕ್ಕೆ ಕೊಚ್ಚೆ ಬಂತೆಂದು ಹೀಗೆ ಮಾತಾಡಬಾರದು, ಅರುಣ್ ಸಾಗರ್ ಆಕ್ರೋಶ

ರೂಪೇಶ್ ಶೆಟ್ಟಿ: ಯಾವತ್ತು ಮುಖಕ್ಕೆ ಪಪ್ಪಾಯ ಈ ರೀತಿ ಹಾಕಬೇಡಿ. ನಾನು ಹೇಳಿದ್ದರೆ ನೀವು ಬೇಜಾರ್ ಮಾಡಿಕೊಳ್ಳುತ್ತೀರಿ. WTO ಹೆಚ್ಚಿಗೆ ಕ್ರಿಯೇಟ್ ಆಗುತ್ತದೆ. 5 ನಿಮಿಷ ಮೇಲೆ ಅಪ್ಲೈ ಮಾಡಬೇಡಿ.
ಪ್ರಶಾಂತ್: ಏನಿದು WTO? ವೈಟ್ ಟೋನ್‌ ಗ್ಲೋ?
ರೂಪೇಶ್: ಪರ್ವಾಗಿಲ್ಲ 5 ನಿಮಿಷ ಮೇಲೆ ಹಾಕಬೇಡಿ
ನೇಹಾ: ಯಾಕೆ ಈ ರೀತಿ ಹೇಳುತ್ತಿದ್ದೀರಿ?
ರೂಪೇಶ್: ಪಪ್ಪಾಯದಲ್ಲಿ ಪ್ಯೂರಿಕ್ ಆಸಿಡ್ ಇರುತ್ತದೆ.
ಅನುಪಮಾ: ನೀವು ಏನು ಓದಿರುವುದು? ನಾನು ಸೀರಿಯಸ್ ಆಗಿ ಕೇಳುತ್ತಿರುವೆ. ಇದೆಲ್ಲಾ ನಿಮಗೆ ಹೇಗೆ ಗೊತ್ತು?
ರೂಪೇಶ್: ನಾನು ಓದಿರುವುದು ಬಿಎಸ್‌ಸಿ
ಅನುಪಮಾ: ಹೌದಾ?
ರೂಪೇಶ್: ಇಲ್ಲ ಇಲ್ಲ ನಾನು ಬ್ಯುಸಿನೆಸ್ ಮ್ಯಾನೇಜ್‌ಮೆಂಟ್ ಓದಿರುವುದು
ಅನುಪಮಾ: ನಿಮಿಷಕ್ಕೊಂದು ಹೇಳಿದರೆ ಅಭಿಪ್ರಾಯ ಕ್ರಿಯೇಟ್ ಆಗುತ್ತದೆ
ಅಮೂಲ್ಯ: ಕೆಲವರ ತರ ಅಲ್ವಾ ಅನು? ನಂಬಿಕೆ ಉಳಿಸಿಕೊಳ್ಳುವುದರಲ್ಲಿ
ರೂಪೇಶ್: ನಾವು ಒಂದು ಸಲ ನಂಬಿಕೆ ಇಟ್ರೆ ..ಆ ನಂಬಿಕೆನ ಉಳಿಸಿಕೊಳ್ಳುತ್ತೀವಿ ಹಾಗೆ ಬೆಳಸಿಕೊಳ್ಳುತ್ತೀವಿ

I Am Villain ಎಂದು ಹಾಡುತ್ತಾ ಮನೆ ಮಂದಿಯ ಬಂಗಾರ ಎಗರಿಸಿದ ಅರುಣ್

ಒಣ ಪಪ್ಪಾಯ ತಿಂದ್ರೆ ಆಗೋ ಲಾಭ ಒಂದೆರಡಲ್ಲ:

ಒಣಗಿಸಿದ ಪಪ್ಪಾಯ ಸೇವನೆಯು ಆರೋಗ್ಯಕ್ಕೆ ಬಹಳ ಒಳ್ಳೆಯದು. ಏಕೆಂದರೆ ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನ್ಯೂಟ್ರೀಷನ್ ಇದೆ. ಏಕೆಂದರೆ ಪಪ್ಪಾಯಿ ಒಣಗಿಸಿದಾಗ ಇದರಲ್ಲಿನ ನೀರು ಡ್ರೆöÊ ಆಗುವುದರಿಂದ ಕೆಲ ನ್ಯೂಟ್ರೀಷನ್ ಪ್ರಮಾಣ ಹೆಚ್ಚಿರುತ್ತದೆ ಹಾಗೂ ತಿನ್ನಲೂ ರುಚಿಯಾಗಿರುತ್ತದೆ. ಸಾಮಾನ್ಯವಾಗಿ ಪಪ್ಪಾಯಿ ಹಣ್ಣು ಕಟ್ ಮಾಡಿದರೆ ಬೇಗ ಹಾಳಾಗುತ್ತದೆ. ದೀರ್ಘಕಾಲದಲ್ಲಿ ಇಡಲಾಗುವುದಿಲ್ಲ. ಆದರೆ ಇದನ್ನು ಒಣಗಿಸುವುದರಿಂದ ವರ್ಷಗಟ್ಟಲೆ ಶೇಖರಿಸಿಯೋ ಇಡಬಹುದು.

ಪಪ್ಪಾಯ ತೆಗೆದುಕೊಂಡು ಒಣಗಿಸುತ್ತಿದ್ದೀರಿ ಎಂದರೆ ಅದಕ್ಕೆ ಸಕ್ಕರೆ ಹಾಕದಿರುವುದು ಒಳ್ಳೆಯದು. ಏಕೆಂದರೆ ಇದರಲ್ಲೇ ಸಕ್ಕರೆ ಪ್ರಮಾಣ ಹೇರಳವಾಗಿದೆ. ಒಣಗಿದ ಒಂದು ಪೀಸ್ ಪಪ್ಪಾಯದಲ್ಲಿ 20 ಕ್ಯಾಲೋರಿ ಇರುತ್ತದೆ. ಇದರಲ್ಲಿ ಕಡಿಮೆ ಕ್ಯಾಲೋರಿ ಇರುವುದರಿಂದ ಎಷ್ಟು ಬೇಕಾದರೂ ತಿನ್ನಬಹುದು. ಪ್ರತೀ ದಿನ ನಮ್ಮ ದೇಹಕ್ಕೆ ಶೇ.೬ರಷ್ಟು ಕಾರ್ಬೋಹೈಡ್ರೇಟ್ ಒದಗಿಸುತ್ತದೆ. 14ಗ್ರಾಂ ಒಣಗಿದ ಪಪ್ಪಾಯದಲ್ಲಿ ಇದು ಸಿಗುತ್ತದೆ. ಫೈಬರ್, Vitamin C, B, A, E, K, ಕ್ಯಾಲ್ಶಿಯಂ, ಕಬ್ಬಿಣ, ಪೊಟ್ಯಾಶಿಯಂ, ಮೆಗ್ನೀಶಿಯಂ, ಜಿಂಕ್ ಹೇರಳವಾಗಿದೆ.