ಬಿಬಿ ಮನೆಯಿಂದ ಹೊರ ಬಂದ ನೇಹಾ ಗೌಡ ಸುದೀಪ್‌ ಜೊತೆ ವೇದಿಕೆ ಹಂಚಿಕೊಂಡಿದ್ದಾರೆ. ಅರುಣ್ ಸಾಗರ್‌ ಜೊತೆಗಿರುವ ಜಗಳಕ್ಕೆ ಇಲ್ಲಿದೆ ಕ್ಲಾರಿಟಿ....

ಬಿಗ್ ಬಾಸ್ ಮನೆಯಿಂದ ಹೊರ ಬಂದಿರುವ 5ನೇ ಸ್ಪರ್ಧಿ ನೇಹಾ ಗೌಡ ವೀಕೆಂಡ್ ವಿತ್ ಸುದೀಪ್‌ ಶೋನಲ್ಲಿ ತಂದೆ ಮೇಕಪ್ ರಾಮಕೃಷ್ಣ, ಸಹೋದರಿ ಸೋನು ಗೌಡ ಇನ್ನಿತ್ತರ ಸ್ಪರ್ಧಿಗಳು ಮತ್ತು ಗೇಮ್‌ ಬಗ್ಗೆ ಚರ್ಚೆ ಮಾಡಿದ್ದಾರೆ.

'ಬಿಗ್ ಬಾಸ್ ಜರ್ನಿ ಚಿಕ್ಕ ಜರ್ನಿ ಆದರೂ ತುಂಬಾ ತುಂಬಾ ಕಲಿತಿರುವೆ ಹೊರಗಡೆ ಕೂಡ ನಾನು ಇದೇ ತರ ಹೊರಗಡೆ ಯಾರಾದರೂ ನನ್ನನ್ನು ಹರ್ಟ್‌ ಮಾಡಿದ್ದರೆ ಹೊರಗಡೆ ಹೇಳಿಕೊಳ್ಳುವುದಿಲ್ಲ . ಚಿಕ್ಕವರಾಗಿರಬಹುದು ದೊಡ್ಡವರಾಗಿರಬಹುದು ಹೌದು ಸರಿ ನೋವು ಮಾಡ್ಬಾರ್ದು ಅಂದುಕೊಳ್ಳುತ್ತಿದ್ದೆ ಅದು ತಪ್ಪು ಅಂತ ಬಿಗ್ ಬಾಸ್ ಮನೆ ಹೇಳಿಕೊಟ್ಟಿದೆ. ಒಳ್ಳೆಯವರಾಗಿ ಇರಬೇಕು ಆದರೆ ತುಂಬಾ ಒಳ್ಳೆಯವರಾಗಿ ಇರಬಾರದು. ಚುಚ್ಚು ಬಿಡ್ತಾರೆ ಜನ' ಎಂದು ನೇಹಾ ಗೌಡ ಸುದೀಪ್ ಎದುರು ಕಣ್ಣೀರಿಡುತ್ತಾ ಮಾತನಾಡಿದ್ದಾರೆ.

'ನಾವು ಚಿಕ್ಕವರಿದ್ದಾಗಿನಿಂದಲ್ಲೂ ನಮ್ಮ ತಂದೆ ನಾವು ಹೊರಗಡೆ ಅಂದ್ರೆ ಸ್ಕೂಲ್‌ಗೆ ಹೋಗಲಿ ವಿನಯದಿಂದ ನಡೆದುಕೊಳ್ಳಬೇಕು ಹರ್ಟ್‌ ಮಾಡಬಾರದು ದೊಡ್ಡವರಿಗೆ ಗೌರವ ಕೊಡಬೇಕು ಅಪರಿಚಿತರ ಜೊತೆ ಮಾತನಾಡಬಾರದು ಹೀಗೆ ಹೇಳ್ಕೊಂಡು ಬಂದು ಬಂದು ನಾವು ಅದನ್ನು ಫಾಲೋ ಮಾಡುತ್ತಲೇ ಬಂದಿದ್ದೀವಿ. ನಮ್ಮ ತಂದೆ ಈ ರೀತಿ ಮಾತುಗಳನ್ನು ಹೇಳಿಕೊಟ್ಟಿದ್ದಾರೆ ಅದಿಕ್ಕೆ ಹೇಳುತ್ತಿದ್ದೆ ಒಬ್ಬರು ತಪ್ಪು ಮಾಡಿದ್ದರೆ ಇಲ್ಲ ಇದು ಸರಿ ಇಲ್ಲ ಅಂತ ನಾವು ತಿದ್ದಿ ಹೇಳಬೇಕು ಅದನ್ನು ಪ್ರಶ್ನೆ ಮಾಡಬೇಕು ಅಂದಿದಕ್ಕೆ ಇಲ್ಲ ಅವರು ಏನ್ ಬೇಕಿದ್ದರೂ ಹೇಳಲಿ ನಾವು ನೋವು ಕೊಡಬಾರದು' ಎಂದು ನೇಹಾ ಸಹೋದರಿ ನಟಿ ಸೋನು ಗೌಡ ಹೇಳಿದ್ದಾರೆ.

BBK9;ತಾರಕಕ್ಕೇರಿದ ಜಗಳ, ಮನೆ ಬಿಟ್ಟು ಹೊರಟ ರೂಪೇಶ್ ರಾಜಣ್ಣ

'ನಮ್ಮ ತಂದೆಗೆ ನಾವು ಅದೆಷ್ಟೋ ಸಲ ರೇಗಿಸಿದ್ದೀವಿ ನಿನ್ನ ಮಾತುಗಳನ್ನು ರೆಕಾರ್ಡ್‌ ಮಾಡಿ ಇಡು ಪಪ್ಪ ಬೇಕಿದ್ದರೆ ಕೇಳಿಸಿಕೊಳ್ಳುತ್ತೀವಿ ಅದನ್ನು ಮತ್ತೆ ಮತ್ತೆ ಹೇಳಬೇಡ. ಆದರೆ ತಂದೆ ಹೇಳಿಕೊಟ್ಟಿರುವ ಗುಣದಿಂದ ನನಗೆ ಯಾವ ತೊಂದರೆನೂ ಆಗಿಲ್ಲ. ಒಂದು ಪ್ರಾಜೆಕ್ಟ್‌ ತೆಗೆದುಕೊಂಡು ತುಂಬಾ ವರ್ಷಗಳ ಕಾಲ ಕೆಲಸ ಮಾಡುತ್ತೀನಿ ಅಲ್ಲೂ ಜಗಳಗಳು ಅಗುತ್ತಿತ್ತು ಅಲ್ಲಿಂದ ಅಲ್ಲೇ ಸರಿ ಮಾಡಿಕೊಳ್ಳುತ್ತಿದ್ದೆ ಆದರೆ ಬಿಗ್ ಬಾಸ್ ಮನೆಯಲ್ಲಿ ಬೇಕು ಬೇಕು ಅಂತ ಜಗಳ ಮಾಡುತ್ತಿದ್ದಾಗ ನಿರ್ಲಕ್ಷ್ಯ ಮಾಡುತ್ತಿದ್ದೆ. ನನ್ನ ಧ್ವನಿ ಬೇಕಿದೆ ನನ್ನ ಅಭಿಪ್ರಾಯ ತಿಳಿಸಬೇಕು ಅನ್ನೋ ಸಮಯ ಬಂದಾಗ ನಾನು ಹೇಳಿರುವೆ ಆದರೆ ಅದೇ ಬಾಣದ ರೀತಿ ನನಗೆ ವಾಪಸ್ ಬಂದಾಗ ನಾನು ಏನಾದರೂ ತಪ್ಪು ಮಾಡಿದ್ನಾ ಅನ್ನೋ ಯೋಚನೆ ಬಂತು. ಶನಿವಾರ ನೀವು ಬಂದು ವಿಚಾರ ಹೇಳಿದ್ರಿ ಪ್ರ್ಯಾಂಕ್ ಮಾಡುವ ವಿವಾರದಲ್ಲಿ ಆಗ ನನಗೆ ಬೇಜಾರ್ ಅಗಲಿಲ್ಲ ನಾನು ಯೋಚನೆ ಮಾಡಿದ ರೀತಿ ಸರಿಯಾಗಿತ್ತು ಎಂದು ಸುಮ್ಮನಾದೆ. 14 ಜನರ ದೃಷ್ಠಿಕೋಣ 14 ರೀತಿ ಇದೆ ಅದರಲ್ಲಿ ನಾನು ತುಂಬಾ ಸಾಫ್ಟ್‌ ಆಗಿದ್ದೆ ಅಲ್ಲಿ ಎಲ್ಲರೂ ಹುಲಿಗಳ ರೀತಿ ಇದ್ದಾರೆ.' ಎಂದು ನೇಹಾ ಹೇಳಿದ್ದಾರೆ.. 

ನೇಹಾ ಮಾತುಗಳನ್ನು ಕೇಳಿ ಸುದೀಪ್ ಬಿಬಿ ಮನೆಯಲ್ಲಿರುವ ಸ್ಪರ್ಧಿಗಳ ಬಗ್ಗೆ ಪ್ರಶ್ನೆ ಮಾಡುತ್ತಾರೆ. 

ಸುದೀಪ್: ತುಂಬಾ ಸ್ಮಾರ್ಟ್‌ ಆಗಿ ಆಟ ಆಡುತ್ತಿರುವ 3 ಸ್ಪರ್ಧಿಗಳು ಯಾರು?
ನೇಹಾ: ಮೊದಲು ರಾಕೇಶ್, ಎರಡು ಪ್ರಶಾಂತ್ ಸಂಬರಗಿ ಮೂರು ಅರುಣ್ ಸಾಗರ್. 
ಸುದೀಪ್: ಪ್ರಾಮಾಣಿಕವಾಗಿ ಯಾರು ಆಟ ಆಡುತ್ತಿದ್ದಾರೆ?
ನೇಹಾ: ಅಮೂಲ್ಯ ಗೌಡ
ಸುದೀಪ್: ಮುಂದಿನ ವಾರ ನಿಮ್ಮ ಜಾಗದಲ್ಲಿ ಯಾರಿರುತ್ತಾರೆ?
ನೇಹಾ: ರೂಪೇಶ್ ರಾಜಣ್ಣ ನನ್ನ ಸ್ಥಾನದಲ್ಲಿ ಮುಂದಿನ ವಾರ ಇರಬಹುದು. ಇರ್ಬೇಕು ಅಂತ ಯೋಚನೆ ಮಾಡಿದ್ದರೆ ರೂಪೇಶ್ ಶೆಟ್ಟಿ 
ಸುದೀಪ್: ಕಾರಣ?
ನೇಹಾ: ಟ್ಯಾಲೆಂಟ್ ಅಂತ ತೆಗೆದುಕೊಂಡರೆ ರೂಪೇಶ್ ಶೆಟ್ಟಿ ಅದ್ಭುತ. ತಕ್ಷಣಕ್ಕೆ ಹಾಡುಗಳನ್ನು ಮಾಡುತ್ತಾರೆ ಟ್ಯೂನ್ ಒಂದೇ ಇರಬಹುದು ಆದರೆ ಅಕ್ಷರಗಳು ಪರಿಣಾಮ ಬೀರುತ್ತದೆ. 
ಸುದೀಪ್: ನೀವು ರೂಪೇಶ್‌ನ ಹೊಗಳಿದ್ದಾ ಅಥವಾ ರೇಶ್ಮೆ ಸೀರೆಯಲ್ಲಿ ಸುತ್ತಿ ಹೊಡೆದಿದ್ದಾ? ಒಂದು ಸತ್ಯಾ ಹೇಳಿದ್ರಾ?
ನೇಹಾ: ಇಲ್ಲ ರೂಪೇಶ್ ಬರೆಯುವ ಸಾಲುಗಳು ಮನಸ್ಸು ಮುಟ್ಟುವಂತೆ ಇರುತ್ತೆ ಆದರೆ ಟಾಸ್ಕ್‌ ಅಂತ ಬಂದ್ರೆ ಬೇರೆ ಸ್ಪರ್ಧಿಗಳ ಜೊತೆ ಬರೆಯುವ ರೀತಿ ಸರಿ ಇಲ್ಲ. ಅವ್ರು ಸಾನ್ಯಾ ಇರ್ತಾರೆ, ಅವರ ಟಾಯ್ಲೆಟ್ ಕೆಲಸ ಆಯ್ತು ಅವರಾಗಿ ಇರುತ್ತಾರೆ..ಹೀಗಾಗಿ ಸ್ವಲ್ಪ ವೀಕ್ ಅನಿಸುತ್ತಾರೆ. 
ಸುದೀಪ್: ಯಾರು ಗೆಲ್ಲುತ್ತಾರೆ ಯಾರು ಗೆಲ್ಲಬೇಕು?
ನೇಹಾ: ಟಾಸ್ಕ್‌ ಎಲ್ಲಾ ಗಮನದಲ್ಲಿ ಇಟ್ಕೊಂಡು ನೋಡಿದ್ದರೆ ಅನುಪಮಾ ಟಾಪ್ ಸ್ಥಾನಕ್ಕೆ ಬರುತ್ತಾಳೆ...ಗೋಬ್ರಗಾಲ ಕೂಡ ಸ್ಪರ್ಧಿಯಲ್ಲಿದ್ದಾರೆ..ಹೀಗಾಗಿ ಅವರಿಬ್ಬರೂ ಟಾಪ್‌ನಲ್ಲಿ ಇರುತ್ತಾರೆ.

BBK9 ಕಂಟೆಂಟ್‌ಗೂ ಕೇರ್‌ ಮಾಡದೆ TRPಗೂ ತಲೆ ಕೆಡಿಸಿಕೊಳ್ಳದೆ ಇರೋದು ನೇಹಾ ಗೌಡ ಒಬ್ಬಳೇ'

ಅರುಣ್ ಸಾಗರ್ ಜೊತೆ ಜಗಳ:

ಸುದೀಪ್: ನಿಮ್ಮ ಗ್ರಹ ಮತ್ತು ಅರುಣ್ ಸಾಗರ್ ಗ್ರಹ ಯಾಕೋ ಹೊಂದುಕೊಂಡಿಲ್ಲ 35 ದಿನ ಅದ್ರೂ ಟೆನ್ಶನ್‌ನಲ್ಲಿ ಮೂವ್ ಅದ್ರಿ ಯಾಕೆ?
ನೇಹಾ: ಅರುಣ್ ಸಾಗರ್ ಅವರು ತುಂಬಾ ತುಂಬಾ ತುಂಬಾ ಟ್ಯಾಲೆಂಟ್ ಇರುವ ವ್ಯಕ್ತಿ ..ಡ್ಯಾನ್ಸ್ ಹಾಡು ಜೋಕ್ಸ್‌ ಎಲ್ಲರ ಜೊತೆ ಬೆರೆಯುವುದು ಎಲ್ಲಾ ಟಾಪ್‌ ಟಾಸ್ಕ್‌ ಅಂತ ಬಂದಾಗ ಅವ್ರು ಸೋಲುತ್ತಿದ್ದರು ಆದರೆ ಅವರು ಬಳಸುತ್ತಿದ್ದ ಪದಗಳು ಸರಿ ಇರಲಿಲ್ಲ. ಚೆನ್ನಾಗಿ ಆಟವಾಡುತ್ತಿದ್ದರೂ ಯಾರು ಚೆನ್ನಾಗಿ ಆಟವಾಡುತ್ತಿರಲಿಲ್ಲ ಅವರಿಗೆ ಸಪೋರ್ಟ್ ಮಾಡಿಕೊಂಡು ಮಾತನಾಡುವುದು ನನಗೆ ಬಂದು ನೀನು ಏನು ಮಾಡಿದೆ ಅಂತ ಹೇಳುವುದು ಅಥವಾ ನನ್ನ ಬಳಿ ಬಂತು ನೀನು ಹೆಚ್ಚಿಗೆ ಮಾತನಾಡಬೇಕು ಅಂತ ಹೇಳುತ್ತಿದ್ದರು. ಅಲ್ಲಿ ಒಬ್ಬರನ್ನು ಮತ್ತೊಬ್ಬರ ಜೊತೆ ಕಂಪೇರ್ ಮಾಡುವುದು ಇಷ್ಟ ಆಗುತ್ತಿರಲಿಲ್ಲ. ಅರುಣ್ ಸಾಗರ್‌ಗೆ ಕಾವ್ಯಾ ಸ್ವಭಾವ ಇಷ್ಟವಾಗಿದೆ ಮನೋರಂಜನೆ ರೀತಿಯಲ್ಲಿ ಮಾತನಾಡುತ್ತಿದ್ದಳು ಅನೋ ಕಾರಣಕ್ಕೂ ಅಥವಾ ಅವಳು ಪರ್ಸನಲ್ ಕಥೆ ಹೇಳಿಕೊಂಡಿರುವ ರೀತಿಗೋ ಗೊತ್ತಿಲ್ಲ ತುಂಬಾ ಸ್ಟ್ರಾಂಗ್ ಆಗಿ ಸಪೋರ್ಟ್ ಮಾಡುತ್ತಿದ್ದರು ಟಾಸ್ಕ್‌ನ ಕಾವ್ಯಾ ಚೆನ್ನಾಗಿ ಮಾಡುತ್ತಿರಲಿಲ್ಲ ಆದರೂ ಅರುಣ್ ಚೆನ್ನಾಗಿ ಆಡುತ್ತಿದ್ದೀರಿ ಅಂತ ಹೇಳುತ್ತಿದ್ದರು. ಅರುಣ್ ವಯಸ್ಸಿನಲ್ಲಿ ದೊಡ್ಡವರು ಎಲ್ಲರನ್ನು ಒಂದೇ ರೀತಿಯಲ್ಲಿ ಯಾಕೆ ನೋಡುತ್ತಿಲ್ಲ ಅನಿಸುತ್ತಿತ್ತು. ಅರುಣ್ ನನಗೆ ಕೋಲ್ಡ್‌ ವೈಬ್ಸ್‌ ಪಾಸ್ ಮಾಡುತ್ತಿದ್ದ ಕಾರಣ ನನಗೆ ಕಂಫರ್ಟ್‌ ಝೋನ್ ಸಿಗುತ್ತಿರಲಿಲ್ಲ .