BBK9;ತಾರಕಕ್ಕೇರಿದ ಜಗಳ, ಮನೆ ಬಿಟ್ಟು ಹೊರಟ ರೂಪೇಶ್ ರಾಜಣ್ಣ
ಬಿಗ್ ಬಾಸ್ ಮನೆಯಲ್ಲಿ ರೂಪೇಶ್ ರಾಜಣ್ಣ ಮತ್ತು ಅನುಪಮಾ ಗೌಡ ನಡುವಿನ ಜಗಳ ತಾರಕಕ್ಕೇರಿದೆ. ಕೋಪಕೊಂಡ ರೂಪೇಶ್ ಮನೆಯಿಂದ ಹೊರ ನಡೆಯಲು ಸಜ್ಜಾಗಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 9 ಯಶಸ್ವಿಯಾಗಿ 6ನೇ ವಾರಕ್ಕೆ ಕಾಲಿಟ್ಟದೆ. ಈಗಾಗಲೇ ಮನೆಯಿಂದ 5 ಮಂದಿ ಸ್ಪರ್ಧಿಗಳು ಔಟ್ ಆಗಿದ್ದಾರೆ. 5ನೇ ವಾರ ನೇಹಾ ಗೌಡ ಮನೆಯಿಂದ ಹೊರನಡೆದಿದ್ದಾರೆ. 6ನೇ ವಾರ ಬಿಗ್ ಬಾಸ್ ಮೇನೆ ಮತ್ತಷ್ಟು ಕಾವೇರಿದೆ. ಸ್ಪರ್ಧಿಗಳ ನಡುವೆ ಕಿತ್ತಾಟ ಜೋರಾಗಿದೆ. ಗೆಲುವಿಗಾಗಿ ಹೋರಾಟ ಜೋರಾಗಿದೆ. ಗೆಲುವಿನ ಹೋರಾಟದಲ್ಲಿ ಕಿತ್ತಾಟ, ಜಗಳ, ಕೋಪ, ಮುನಿಸು ಎಲ್ಲವೂ ಬಿಗ್ ಮನೆಯಲ್ಲಿ ಹೆಚ್ಚಾಗಿ ಕಾಣಿಸುತ್ತಿದೆ. ಈ ಬಾರಿಯ ಬಿಗ್ ಬಾಸ್ ನಲ್ಲಿ ರೂಪೇಶ್ ರಾಜಣ್ಣ ಮತ್ತು ಪ್ರಶಾಂತ್ ಸಂಬರಗಿ ನಡುವೆ ಕಿತ್ತಾಟವೇ ಜೋರಾಗಿತ್ತು. ಆದರೆ 6ನೇ ವಾರದಲ್ಲಿ ಅನುಪಮಾ ಮತ್ತು ರುಪೇಶ್ ರಾಜಣ್ಣ ನಡುವೆ ಜಗಳ ಜೋರಾಗಿದೆ. ಈ ವಾರ ಕ್ಯಾಪ್ಟನ್ ಆಗಿರುವ ಅನುಪಮಾ ಗೌಡ ವಿರುದ್ಧ ರೂಪೇಶ್ ರಾಜಣ್ಣ ಮುಗಿಬಿದ್ದಿದ್ದಾರೆ.
ಬಿಗ್ ಬಾಸ್ ನೀಡಿರುವ ಟಾಸ್ಕ್ ಶುರುಮಾಡಲು ಮೊದಲು ಬಜರ್ ಮುಟ್ಟಿದವರಿಗೆ ಮಾತ್ರ ಅವಕಾಶ ಇರುತ್ತದೆ. ರೂಪೇಶ್ ರಾಜಣ್ಣ ಮೊದಲು ಬಜರ್ ಮುಟ್ಟಿರುವುದಾಗಿ ಹೇಳುತ್ತಾರೆ. ಆದರೆ ಕ್ಯಾಪ್ಟನ್ ಆಗಿರುವ ಅನುಪಮಾ ಮೊದಲು ಮುಟ್ಟಿದ್ದು ಪ್ರಶಾಂತ್ ಎನ್ನುತ್ತಾರೆ. ಇದರಿಂದ ಕೋಪಗೊಂಡ ರೂಪೇಶ್, ಅನುಪಮಾ ವಿರುದ್ಧ ರೊಚ್ಚಿಗೆದ್ದರು. ಒಬ್ಬರಿ ಒಂದು ಮತ್ತೊಬ್ಬರಿಗೊಂದು ನ್ಯಾಯ ತೋರಿಸುತ್ತೀರಿ ಅಂತ ಕಿರುತಾಡಿದರು. ಅನುಪಮಾ ಕೂಡ ರೂಪೇಶ್ ವಿರುದ್ಧ ಏರು ಧ್ವನಿಯಲ್ಲಿ ಕಿರುಚಾಡಿದರು. ಸರಿಯಾಗಿ ಮಾತನಾಡುವುದಾದರೆ ಮಾತನಾಡಿ, ಇಲ್ಲವಾದರೆ ಮಾತನಾಡಬೇಡಿ ಎಂದು ಹೇಳಿದರು.
ಮೋಸದ ಆಟ ಮಾಡುತ್ತಿದ್ದಾರೆ ಎಂದು ರೂಪೇಶ್ ಕಿರುಚಾಡಿ ಬಿಗ್ ಬಾಸ್ ಮನೆಯಿಂದ ಹೋಗುತ್ತೇನೆ ಬಾಗಿಲು ತೆಗಿಯಿರಿ ಎನ್ನುತ್ತಾ ತನ್ನ ಬ್ಯಾಗ್ ಹಿಡಿದು ಕೋಪದಲ್ಲಿ ಹೊರಟರು. ರೂಪೇಶ್ ಅವರನ್ನು ಸಾನ್ಯಾ ಮತ್ತು ರೂಪೇಶ್ ಶೆಟ್ಟಿ ಇಬ್ಬರೂ ತಡೆಯುವ ಪ್ರಯತ್ನ ಮಾಡಿದರು. ಆದರೂ ಕೋಪದಿಂದ ಹೊರಟರು. ಇಂದು ರಿಲೀಸ್ ಆಗಿರುವ ಪ್ರೋಮೋದಲ್ಲಿ ರೂಪೇಶ್ ಬ್ಯಾಗ್ ಹಿಡಿದು ಹೊರಡುವುದನ್ನು ಮಾತ್ರ ತೋರಿಸಲಾಗಿದೆ. ಬಿಗ್ ಬಾಸ್ ಮನೆಯಿಂದ ರೂಪೇಶ್ ರಾಜಣ್ಣ ನಿಜಕ್ಕೂ ಹೊರ ಹೋಗುತ್ತಾರಾ ಎಂದು ಕಾದು ನೋಡಬೇಕಿದೆ.
BBK9 ಕಂಟೆಂಟ್‌ಗೂ ಕೇರ್ ಮಾಡದೆ TRPಗೂ ತಲೆ ಕೆಡಿಸಿಕೊಳ್ಳದೆ ಇರೋದು ನೇಹಾ ಗೌಡ ಒಬ್ಬಳೇ'
ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಸ್ಪರ್ಧಿಗಳು
ಬಿಗ್‌ಬಾಸ್ 9 ಸೆಪ್ಟೆಂಬರ್ 24ರಿಂದ ಆರಂಭವಾಗಿದೆ. ಈ ಬಾರಿಯ ಬಿಗ್ ಬಾಸ್‌ನಲ್ಲಿ ಅರುಣ್ ಸಾಗರ್, ಅಶ್ವಿನ ನಕ್ಷತ್ರದ ಮೂಲಕ ಮನೆ ಮಾತಾಗಿದ್ದ ನಟಿ ಮಯೂರಿ, ದೀಪಿಕಾ ದಾಸ್, ನವಾಜ್, ದಿವ್ಯಾ ಉರುಡುಗ, ದರ್ಶ್ ಚಂದ್ರಪ್ಪ, ಪ್ರಶಾಂತ್ ಸಂಬರಗಿ, ಅಮೂಲ್ಯ ಗೌಡ, ಸನ್ಯಾ ಅಯ್ಯರ್, ರೂಪೇಶ್ ಶೆಟ್ಟಿ, ವಿನೋದ್ ಗೊಬ್ರಗಾಲ (ಕಾಮಿಡಿ ಕಿಲಾಡಿಗಳು), ಲಕ್ಷ್ಮಿ ಬಾರಮ್ಮ ಸೀರಿಯಲ್ ಖ್ಯಾತಿಯ ನೇಹಾ ಗೌಡ, ನಾನು ಅಂದ್ರೆ ನಂಬರ್, ನಂಬರ್ ಅಂದ್ರೆ ನಾನು ಎನ್ನುವ ಆರ್ಯವರ್ಧನ್ ಗುರೂಜಿ, ರಾಕೇಶ್ ಅಡಿಗ, ಐಶ್ವರ್ಯಾ(ಬೈಕ್ ರೈಡರ್), ರೂಪೇಶ್ ರಾಜಣ್ಣ, ಮಂಗಳ ಗೌರಿಯ ಕಾವ್ಯಶ್ರೀ, ನಿರೂಪಕಿ ಅನುಪಮಾ ಗೌಡ ಸ್ಪರ್ಧಿಗಳಾಗಿ ಭಾಗಿಯಾಗಿದ್ದರು.
BBK9 ಅಮೂಲ್ಯ ಗೌಡ ಕೈಯಲ್ಲಿದೆ 3 ಇರುವೆ ಟ್ಯಾಟೂ; ರೂಪೇಶ್ ಶೆಟ್ಟಿ ಶಾಕಿಂಗ್ ರಿಯಾಕ್ಷನ್
ಮನೆಯಿಂದ ಹೊರಹೋಗಿರುವ ಸ್ಪರ್ಧಿಗಳು
ಬಿಗ್ ಬಾಸ್ ಸೀಸನ್ 9ರ ಮೊದಲ ವಾರ ಐಶ್ವರ್ಯಾ ಪಿಸೆ ಮನೆಯಿಂದ ಹೊರಹೋಗಿದ್ದರು. 2ನೇ ವಾರ ನವಾಜ್ ಎಲಿಮಿನೇಟ್ ಆಗಿದ್ದಾರೆ. 3ನೇ ವಾರ ದರ್ಶ್ ಚಂದ್ರಪ್ಪ ಮನೆಯಿಂದ ಹೊರ ಹೋಗಿದ್ದಾರೆ. 4ನೇ ವಾರ ಮಯೂರಿ ಹಾಗೂ 5ನೇ ವಾರ ನೇಹಾ ಗೌಡ ಬಿಗ್ ಬಾಸ್ ಮನೆಯಿಂದ ಔಟ್ ಆಗಿದ್ದಾರೆ. ಸದ್ಯ ಬಿಗ್ ಬಾಸ್ ಮನೆಯಲ್ಲಿ 13 ಮಂದಿ ಇದ್ದಾರೆ. 6ನೇ ವಾರ ಯಾರು ಹೊರ ಹೋಗುತ್ತಾರೆ ಎಂದು ಕಾದು ನೋಡಬೇಕಿದೆ.