ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಸೀಸನ್‌-7 ದಿನೇ ದಿನೇ ವೀಕ್ಷಕರಲ್ಲಿ ಕುತೂಹಲ ಹೆಚ್ಚಿಸುತ್ತಿದೆ. ಮನೆಯಲ್ಲಿ 7 ಸ್ಟ್ರಾಂಗ್‌ ಸ್ಪರ್ಧಿಗಳಾದ - ದೀಪಿಕಾ ದಾಸ್, ಭೂಮಿ ಶೆಟ್ಟಿ, ಹರೀಶ್‌ ರಾಜ್‌, ಪ್ರಿಯಾಂಕ, ವಾಸುಕಿ ವೈಭವ್‌, ಕುರಿ ಪ್ರತಾಪ್ ಹಾಗೂ ಶೈನ್‌ ಶೆಟ್ಟಿ ಬಲವಾಗಿ ಆಟವಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ಈ ವಾರ ಎಲ್ಲಾ ಸ್ಪರ್ಧಿಗಳೂ ನಾಮಿನೇಟ್‌ ಆಗಿದ್ದು, ಕಡೇ ಹಂತದಲ್ಲಿರುವ ಸ್ಪರ್ಧೆಯಿಂದ ಯಾರು ಹೊರ ಬರುತ್ತಾರೆಂಬ ಕುತೂಹಲ ಹೆಚ್ಚಿದೆ.

100 ದಿನಗಳನ್ನು ಮುಟ್ಟಿರುವ ಬಿಗ್ ಬಾಸ್ ಸ್ಪರ್ಧಿಗಳಿಗೆ ಶಾಕಿಂಗ್ ನ್ಯೂಸ್‌ ನೀಡಿದೆ. ಸೋಮವಾರ ಎಂದಿನಂತೆ ಎಲಿಮಿನೇಷನ್‌ ಪ್ರಕ್ರಿಯೇ ಶುರುವಾಗಿದ್ದು, ಎಲ್ಲಾ ಸ್ಪರ್ಧಿಗಳು ನೇರವಾಗಿ ನಾಮಿನೇಟ್‌ ಆಗಿದ್ದಾರೆ. ಆದರೆ ಇಲ್ಲೊಂದು ಟ್ವಿಸ್ಟ್‌ ಇದೆ!

BB7: ಚಪ್ಪಾಳೆ ಗಿಟ್ಟಿಸಿಕೊಂಡ ಪ್ರಿಯಾಂಕಾಗೆ ಸಿಕ್ತು ಕಿಚ್ಚನ ಸರ್ಪ್ರೈಸ್‌ ಗಿಫ್ಟ್‌!

ಈ ವಾರ ಬಿಗ್ ಬಾಸ್ ನೀಡುವ ಚಟುವಟಿಕೆಗಳಲ್ಲಿ ಯಾರು ಅತಿ ಹೆಚ್ಚು ಪದಕ ಗೆಲ್ಲುತ್ತಾರೋ ಅವರು ನೇರವಾಗಿ ಫಿನಾಲೆ ತಲುಪುತ್ತಾರೆ. ವಿಫಲರಾದವರು ಮನೆಯಿಂದ ಹೊರ ಹೋಗುತ್ತಾರೆ. ಸೋಮವಾರ ನೀಡಿದ ದೈಹಿಕ ಚಟುವಟಿಕೆಯಲ್ಲಿ ದೀಪಿಕಾ ದಾಸ್‌ ಒಂದು ಪದಕ ಗೆದ್ದುಕೊಂಡಿದ್ದಾರೆ. ಮತ್ತೊಂದು ಪದಕ ವಾಸುಕಿ ಮುಡಿಗೇರಿದೆ. ಸ್ಪರ್ಧೆ ಇನ್ನೈದು ದಿನ ಬಾಕಿ ಇದ್ದು, ಯಾರ್ಯಾರು ಪದಕ ಪಡೆದುಕೊಳ್ಳುತ್ತಾರೋ ಕಾದು ನೋಡಬೇಕಿದೆ.

ಬಿಗ್‌ಬಾಸ್‌ನಿಂದ ಹೊರಬಿದ್ದ ಚಂದನ್; ವಿನ್ನರ್ ಬಗ್ಗೆ ಕೊಟ್ರು ಶಾಕ್..!

98-99 ದಿನ ಬಿಗ್ ಬಾಸ್‌ ಡಬಲ್‌ ಎಲಿಮಿನೇಷನ್ ಮಾಡಿದ್ದಾರೆ. ಈ  ವೇಳೆ ಡ್ಯಾನ್ಸರ್‌ ಕಿಶನ್‌ ಹಾಗೂ ಚಂದನ್ ಆಚಾರ್ ಮನೆಯಿಂದ ಹೊರ ಬಂದಿದ್ದಾರೆ. ಈ ವಾರ ಸಿಕ್ಕಿರೋ ಅವಕಾಶವನ್ನು ಉಪಯೋಗಿಸಿಕೊಳ್ಳದೇ ಯಾರು ಮನೆಗೆ ಮರಳುತ್ತಾರೆಂಬುದನ್ನು ಕಾದು ನೋಡಬೇಕಿದೆ.