ಬಿಗ್‌ ಬಾಸ್‌ ಸೀಸನ್‌-7 ರಲ್ಲಿ ನ್ಯೂಟ್ರಲ್ ಆಟವಾಡುತ್ತಾ 98 ದಿನಗಳನ್ನು ಪೂರೈಸಿದ ಅಗ್ನಿಸಾಕ್ಷಿ ಚಂದ್ರಿಕಾ ಅಲಿಯಾಸ್  ಪ್ರಿಯಾಂಕಾ ಕೊನೆಗೂ ತಾಯಿಯ  ಮಾತುಗಳನ್ನು ಪಾಲಿಸಿದ್ದಾರೆ.

ರವಿ ಬೆಳಗೆರೆಯಿಂದ ಚೈತ್ರಾ ಕೋಟೂರ್‌ ಸಿಕ್ತು ಬಂಪರ್ ಆಫರ್!

ಹೌದು! ಬಿಗ್ ಬಾಸ್‌ ಮನೆಯೊಳಗೆ ಪ್ರಿಯಾಂಕಾ ಅವರ ತಾಯಿ ಬಂದಾಗ ಆಕೆಗೆ ಒಂದು ಕಿವಿ ಮಾತು ಹೇಳಿದ್ದರು 'ನೀನು ಬಿಗ್ ಬಾಸ್ ಗೆಲ್ಲದಿದ್ದರೂ ಪರವಾಗಿಲ್ಲ ಆದರೆ ಕಿಚ್ಚ ಸುದೀಪ್ ಸರ್ ಚಪ್ಪಾಳೆ ತೆಗೆದುಕೊಳ್ಳಬೇಕು' ಎಂದು. ಅಷ್ಟೇ ಅಲ್ಲದೆ ವಾರದ ಚರ್ಚೆಯಲ್ಲಿ ಸುದೀಪ್ ಧರಿಸಿದ್ದ ಜೀನ್ಸ್‌ ಜಾಕೆಟ್‌ ನೋಡಲು ಸೂಪರ್‌ ಆಗಿತ್ತು ಎಂದು ಪ್ರಿಯಾಂಕಾ ಕಾಂಪ್ಲಿಮೆಂಟ್ ನೀಡಿದ್ದರು. ಆಗ ಸುದೀಪ್‌ ಪ್ರಿಯಾಂಕಾಗೆ ಉತ್ತಮ ಆಟವಾಡಿ ಚಪ್ಪಾಳೆ ಗಿಟ್ಟಿಸಿಕೊಳ್ಳಿ ಆಗ ಇದನ್ನು ನಿಮಗೆ ಕೊಡುತ್ತೇನೆ ಎಂದಿದ್ದರು. ಅದರಂತೆ ಪ್ರಿಯಾಂಕಾ ಸೂಪರ್‌ ಗೇಮ್‌ ಆಡಿ ಕಿಚ್ಚನ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ. ಸುದೀಪ್‌ ಜಾಕೆಟ್‌ ನೀಡಿದ್ದಾರೆ.

ಬಿಗ್‌ ಬಾಸ್‌‌ನಿಂದ ಹೊರ ಬಂದ ಚಂದನಾ ತೆಗೆದುಕೊಂಡ ದೊಡ್ಡ ನಿರ್ಧಾರವಿದು!

ಇನ್ನು ಈ ವಾರ ಕ್ಯಾಪ್ಟನ್ ಶೈನ್ ಹೊರತು ಪಡಿಸಿ ಇನ್ನಿತ್ತರ ಸ್ಪರ್ಧಿಗಳು ನೇರವಾಗಿ ನಾಮಿನೇಟ್ ಆಗಿದ್ದಾರೆ. ಈ ವಾರ ಅತಿ ಹೆಚ್ಚು ವೋಟ್‌ ಪಡೆದು ಸೇಫ್ ಆದ ಮೊದಲ ಸ್ಪರ್ಧಿ ಪ್ರಿಯಾಂಕಾ. ಮನೆಯಿಂದ ಹೊರ ಬಂದ ಸ್ಪರ್ಧಿ ಕಿಶನ್‌. ತಾಯಿ ಮಾತು ಪಾಲಿಸಿದ ಪ್ರಿಯಾಂಕಾಗೆ ಈ ವಾರ ಡಬಲ್ ಧಮಾಕ ಸಿಕ್ಕಿದೆ.