ಬಿಗ್ ಬಾಸ್ ಪ್ರತಿ ಸೀಸನ್‌ನಲ್ಲೂ ಊಟದ ವಿಚಾರಕ್ಕೆ ಜಗಳ ಆಗುವುದು ಸಾಮಾನ್ಯ. ಆದರೆ ಎಲ್ಲರೂ ಸೇರಿ ಒಬ್ಬರನ್ನೇ ಟಾರ್ಗೇಟ್ ಮಾಡುವುದು ಒಳ್ಳೆಯ ಲಕ್ಷಣವಲ್ಲ.

 

ತುಂಬಾ ಹಸಿವಾದ ಕಾರಣ ಚೈತ್ರಾ ಕೊಟ್ಟೂರ್ ಅಡುಗೆ ಮನೆಗೆ ಹೋಗಿ ಆ್ಯಪಲ್‌ ತೆಗೆದುಕೊಂಡು ತಿನ್ನುತ್ತಾರೆ. ಅದನ್ನು ಮನೆಯ ಇತರ ಸ್ಪರ್ಧಿಗಳಾದ ಚಂದನ್ ಆಚಾರ್ ಹಾಗೂ ರಾಜು ತಾಳಿಕೋಟೆಯೊಂದಿಗೆ ಹಂಚಿಕೊಂಡು ತಿನ್ನುತ್ತಾರೆ. ಮನೆಯಲ್ಲಿ ಟೈಂ ಟು ಟೈಂ ಕೊಡುವ ಊಟವನ್ನು ಹೊರತು ಪಡಿಸಿ ಏನೂ ತಿನ್ನಬಾರದೆಂದು ಮನೆಯಲ್ಲಿರುವ ಸ್ಪರ್ಧಿಗಳೇ ತೀರ್ಮಾನ ಮಾಡಿಕೊಂಡಿದ್ದಾರೆ. ಆದ್ದರಿಂದ ಚೈತ್ರಾ ಮಾಡಿದ್ದು ತಪ್ಪೆಂದು ಎಲ್ಲರೂ ಆಕೆಯನ್ನು ದೂರುತ್ತಾರೆ. ಈ ವೇಳೆ ಸುಜಾತ ಅಲಿಯಾಸ್ ಸಿತಾರ ದೇವಿ ರಿಯಲ್ ಲೈಫ್‌ನಲ್ಲೂ ವಿಲನ್ ರೀತಿಯಲ್ಲಿ ವರ್ತಿಸಿದ್ದಾರೆ. 'ಮಾಡಿ ಹಾಕಿದ್ದನ್ನು ತಿನ್ನಬೇಕೆಂದು'ಹೇಳಿದ ಮಾತು ಆಕ್ರೋಶಕ್ಕೆ ಕಾರಣವಾಗಿದೆ.

ಸಿಪ್ಪೆ ತಿಂದವ ಸಿಕ್ಕಾಕಂಡ, ಹಣ್ಣು ತಿಂದವ...ಬಿಗ್ ಬಾಸ್ ಮನೆಯುಲ್ಲಿ ಒಂದು ಸೇಬಿನ ಕಿತ್ತಾಟ!

 

ಚೈತ್ರಾ ಸ್ಪಷ್ಟೀಕರಣ ಕೊಡುವಾಗ ಹಣ್ಣನ್ನು ನಾನೊಬ್ಬಳೇ ತಿಂದಿಲ್ಲ. ಚಂದನ್ ಜೊತೆ ಶೇರ್ ಮಾಡಿಕೊಂಡೆ ಎಂದು ಹೇಳುತ್ತಾರೆ. ಇಷ್ಟು ಹೇಳಿದ್ದೇ ತಡ ಚಂದನ್ ಪದೇ ಪದೇ ಹೇಳಿದ್ದನ್ನೇ ಹೇಳುತ್ತಾ ಚೈತ್ರಾಳನ್ನು ಟಾರ್ಗೇಟ್ ಮಾಡುತ್ತಾರೆ. ಇದು ಇಡೀ ಎಪಿಸೋಡ್ ನಲ್ಲಿ ಗೊತ್ತಾಗುತ್ತದೆ. ಕಿರಿಕಿರಿ ಎನಿಸುತ್ತದೆ.

 

ಎಷ್ಟೇ ದೊಡ್ಡ ಆರ್ಟಿಸ್ಟ್‌ ಆದರೂ ಡಿಸಿಪ್ಲಿನ್ ಇರ್ಬೇಕು. ಆರ್ಟಿಸ್ಟ್ ಗೆ ಕಾಮನ್‌ ಸೆನ್ಸ್‌ ಇರಬೇಕು' ಎಂದು ಪದೇ ಪದೇ ಹೇಳಿ ಚೈತ್ರಾರನ್ನು ಕೆಣಕುತ್ತಾರೆ. ಒಂದು ಆfಯಪಲ್ ಗೆ ಮನೆಮಂದಿಯೆಲ್ಲಾ ನಡೆದುಕೊಂಡ ರೀತಿ ತೀರಾ ಬಾಲಿಶ ಎನಿಸುತ್ತದೆ.

BB7: 'ಫೋನ್ ಮಾಡ್ಲಿಲ್ಲ, ಆ್ಯಕ್ಸಿಡೆಂಟ್ ಆಯ್ತು' ಪ್ರೇಯಸಿಗೆ ಕ್ಷಮೆ ಕೇಳಿದ ಶೈನ್ ಶೆಟ್ಟಿ!

 

ವಾರಕ್ಕಿಷ್ಟು ಎಂದು ಮನೆಗೆ ರೇಶನ್ ನೀಡಲಾಗುತ್ತದೆ. ವಾರವಿಡೀ ಬರುವಂತೆ ಸಂಬಾಳಿಸಿಕೊಂಡು ಹೋಗುವುದು ಅಗತ್ಯ. ಆದರೆ ತುಂಬಾ ಹಸಿವಾದಾಗ ಒಂದು ಆ್ಯಪಲ್‌ ತಿಂದಿದ್ದಕ್ಕೆ ಜೀವನದಲ್ಲಿ ಮಾಡಬಾರದ ತಪ್ಪನ್ನು ಮಾಡಿದ್ದಾರೆ ಅನ್ನುವ ರೀತಿಯಲ್ಲಿ ಎಲ್ಲರೂ ಮಾತನಾಡುವುದು ತಪ್ಪೆಂದು ಟ್ರೋಲ್ ಪೇಜ್‌ಗಳಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ.

ಮೊದಲ ಹೆಂಡತಿ ಮಗಳ ನೆನೆದು ಕಣ್ಣೀರಿಟ್ಟ ಜೈಜಗದೀಶ್, 'ವಿಷ್ಣು ಮನೆಯಲ್ಲೇ ಇದ್ದೆ

 

ಸುಜಾತಾ ಅಲಿಯಾಸ್ ಸಿತಾರದೇವಿ ತುಸು ಜಾಸ್ತಿಯೇ ಎನ್ನುವಷ್ಟು ಅಹಂಕಾರ ತೋರಿಸುವುದು ಕಾಣಬಹುದು. ಜೈ ಜಗದೀಶ್, ರಾಜು ತಾಳಿಕೋಟೆ, ನಾಗಿಣಿ ಅಲಿಯಾಸ್ ದೀಪಿಕಾ ದಾಸ್ ಸಕ್ಕರೆ ತಿಂದಾಗ ಏನು ಮಾತನಾಡುವುದಿಲ್ಲ. ಅದೇ ಚೈತ್ರಾ ಕೊಟ್ಟೂರು ಸೇಬು ಹಣ್ಣು ತಿಂದಿದ್ದಕ್ಕೆ ಮಾಡಿ ಹಾಕಿದ್ದನ್ನು ತಿನ್ನಬೇಕು ಎಂದು ಹೇಳುವಾಗ Arrogancy ಎನಿಸುತ್ತದೆ. ಮನೆಯ ಹಿರಿಯ ಸದಸ್ಯೆಯಾಗಿ ಎಲ್ಲರನ್ನು ಸಮನಾಗಿ ನೋಡುವುದನ್ನು ಬಿಟ್ಟು ಈ ರೀತಿ ವರ್ತಿಸುವುದು ಶೋಭೆ ತರುವುದಿಲ್ಲ.

ಬಿಗ್ ಬಾಸ್‌ ಮನೆಯ ಮೇಕಪ್‌ ರೂಂ ಸೀಕ್ರೆಟ್ ರಿವೀಲ್; ಹೇಗಿದೆ ನೋಡಿ!

ಈ ಪ್ರಹಸನಗಳನ್ನೆಲ್ಲಾ ನೋಡಿದ ಕಿಚ್ಚ ಸುದೀಪ್ ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ಏನು ಹೇಳುತ್ತಾರೆ? ಮನೆಮಂದಿಯ ವರ್ತನೆ ಬಗ್ಗೆ ಏನು ಹೇಳಬಹುದೆಂಬ ಕುತೂಹಲ ಮೂಡಿದೆ. ಮಾನವೀಯತೆ ಕಾಪಾಡುವಂತೆ ತಿಳಿ ಹೇಳಬೇಕು ಎಂದು ಬಿಗ್ ಬಾಸ್ ವೀಕ್ಷಕರು ವಿನಂತಿ ಮಾಡಿಕೊಂಡಿದ್ದಾರೆ.