ಈ ವಾರ 'ವಾರದ ಜೊತೆ ಕಿಚ್ಚನ ಜೊತೆ' ಬಹಳ ಇಂಟರೆಸ್ಟಿಂಗ್ ಆಗಿತ್ತು. ಕಿಚ್ಚ ಸುದೀಪ್ ಎಲ್ಲರಿಗೂ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ. 

Yes or No ಸುತ್ತಿನಲ್ಲಿ ಪ್ರಶ್ನೆಗಳನ್ನು ಕೇಳುವಾಗ, ಜೈ ಜಗದೀಶ್ ಇಟ್ಟುಕೊಂಡು ಒಂದು ಪ್ರಶ್ನೆ ಕೇಳುತ್ತಾರೆ. ಜೈ ಜಗದೀಶ್ ಕೆಲವೊಮ್ಮೆ ಅಪ್ಪ ಆಗುವ ಬದಲು ಅತ್ತೆ ಆಗುತ್ತಾರೆ ಎಂದು ಕೇಳುತ್ತಾರೆ. ಬಹುತೇಕ ಮಂದಿ Yes ಬೋರ್ಡನ್ನು ಎತ್ತುತ್ತಾರೆ. 

ಚೈತ್ರಾ ವಾಸುದೇವನ್ ಔಟ್, ಹೊರಬರುತ್ತಲೇ ಸುದೀಪ್ ಗೆ ಶಾಕ್ ಕೊಟ್ಟ ಸುಂದರಿ

ಕುರಿ ಪ್ರತಾಪ್ Yes ಬೋರ್ಡ್ ಎತ್ತುತ್ತಾರೆ. ಪ್ರತಾಪ್ ರನ್ನು ಸುದೀಪ್ ಯಾಕೆ ಎಂದು ಪ್ರಶ್ನಿಸುತ್ತಾರೆ. ಮನೆಯಲ್ಲಿ ಎಲ್ಲದಕ್ಕೂ ಕಿರಿಕ್ ಮಾಡುತ್ತಾರೆ. ಬಾಸಿಸಂ ತೋರಿಸುತ್ತಾರೆ ಎನ್ನುತ್ತಾರೆ. ನಂತರ ರಾಜು ತಾಳಿಕೋಟೆಯವರನ್ನು ಪ್ರಶ್ನಿಸಿದಾಗ ಅಸಮಾಧಾನ ವ್ಯಕ್ತಪಡಿಸುತ್ತಾರೆ.  ಅಡುಗೆ ಮನೆಗೆ ಹೋದಾಗ ಬೈತಾರೆ ಅಂತ ಹೇಳುತ್ತಾರೆ. ಆಗ ಜೈ ಜಗದೀಶ್ ಮಧ್ಯ ಪ್ರವೇಶಿಸಿ ಚಪಾತಿಯನ್ನು ಯಾರಾದ್ರೂ ಚಾಕುವಿನಲ್ಲಿ ತೆಗೆಯುತ್ತಾರಾ? ಕಾಮನ್ ಸೆನ್ಸ್ ಇರುವವರ್ಯಾರೂ ಈ ರೀತಿ ಮಾಡುವುದಿಲ್ಲ ಎನ್ನುತ್ತಾರೆ. ಆಗ ತಾಳಿಕೋಟೆ ನಮ್ಮ ಕಡೆ ನಾವು ಹೀಗೆ ಮಾಡುವುದು ಎನ್ನುತ್ತಾರೆ. ತಾಳಿಕೋಟೆ, ಜೈ ಜಗದೀಶ್ ನಡುವೆ ಸಣ್ಣ ಮಾತುಕತೆ ನಡೆಯುತ್ತದೆ. 

ಕಿಚ್ಚನ ಮೆಚ್ಚುಗೆ ಗಿಟ್ಟಿಸಿಕೊಂಡ ರಾಯಲ್ ಶೆಟ್ಟಿ!

ಜೈ ಜಗದೀಶ್ ಅವರ Attitude ನ್ನು ಮನೆಯಲ್ಲಿ ನೋಡಬಹುದು. ಅಡುಗೆ ಮನೆ ವಿಚಾರದಲ್ಲಿ ಕಿರಿಕಿರಿ ಮಾಡುತ್ತಾರೆ.