ಬಿಗ್ ಬಾಸ್ ಮನೆಯಲ್ಲಿ ಸಂತೋಷದಿಂದ ಆಡುವ ಟಾಸ್ಕ್‌ ಇರುತ್ತದೆ ಕೆಲವೊಮ್ಮೆ ದುಃಖವನ್ನು ತೋಡಿಕೊಳ್ಳಬೇಕಾದ ಟಾಸ್ಕ್‌ ಕೂಡಾ ಇರುತ್ತದೆ. ಯಾರಿಗಾದರೂ 'ನೋವು ಮಾಡಿದ್ದಲ್ಲಿ ಕ್ಷಮೆ ಕೇಳಿ' ಎಂಬ ಚಟುವಟಿಕೆಯನ್ನು ಬಿಗ್‌ ಬಾಸ್‌ ನೀಡಿದ್ದಾಗ ಜೈಜಗದೀಶ್ ತಮ್ಮ ಮೊದಲನೆ ಮದುವೆ ಬಗ್ಗೆ ಮಾತನಾಡಿ ಭಾವುಕರಾದರು.

 

ರೂಪ ಎಂಬ ಹುಡುಗಿಯನ್ನು ಪ್ರೀತಿಸಿದ ಜೈಜಗದೀಶ್ ಮನೆಯವರ ವಿರೋಧವಿದ್ದ ಕಾರಣ ಅಭಿಮಾನ್ ಸ್ಟುಡಿಯೋದಲ್ಲಿರುವ ದೇವಸ್ಥಾನದಲ್ಲಿ ಮದುವೆಯಾಗುತ್ತಾರೆ. ಕೆಲ ವರ್ಷಗಳ ನಂತರ ಅವರಿಗೆ ಅರ್ಪಿತಾ ಎಂಬ ಮಗಳು ಹುಟ್ಟುತ್ತಾಳೆ. ಆದರೆ ಕಾರಣಾಂತರಗಳಿಂದ ರೂಪ ಹಾಗೂ ಜಗದೀಶ್ ನಡುವೆ ಮನಸ್ತಾಪ ಬರುತ್ತದೆ. ವಿಚ್ಛೇದನ ಪಡೆದುಕೊಳ್ಳುತ್ತಾರೆ.

ಜೈ ಜಗದೀಶ್ ಬಿಗ್ ಬಾಸ್ ಮನೆಯಲ್ಲಿ ಅತ್ತೆ ರೀತಿ ಆಡ್ತಾರಾ?

 

ಡಿವೋರ್ಸ್ ನಂತರ ಜಗದೀಶ್ 8 ವರ್ಷಗಳ ಕಾಲ ವುಡ್‌ಲ್ಯಾಂಡ್‌ ಹೋಟೆಲ್‌ನಲ್ಲಿ ಉಳಿದುಕೊಂಡಿರುತ್ತಾರೆ. ಸಿನಿಮಾಗಳನ್ನು ಮಾಡುತ್ತಿದ್ದರು. ಆಗ ವಿಜಯ ಲಕ್ಷ್ಮಿ ಸಿಂಗ್‌ ಜೊತೆ ಮೊದಲ ಸಿನಿಮಾ ಮಾಡುತ್ತಾರೆ. ಅಲ್ಲಿಂದ ಅವರಿಬ್ಬರ ನಡುವೆ ಪ್ರೀತಿ ಹುಟ್ಟಿತು. ಆದರೆ ಮೊದಲನೇ ಮದುವೆ ಮುರಿದ್ದು ಬಿದ್ದ ಕಾರಣ ಎರಡನೇ ಮದುವೆಗೆ ಹಿಂದೇಟು ಹಾಕುತ್ತಿದ್ದರು. ಇದನ್ನು ಗಮನಿಸಿದ ವಿಜಯಲಕ್ಷ್ಮಿ ಸಿಂಗ್ ದೃಢ ನಿರ್ಧಾರ ತೆಗೆದುಕೊಂಡು ಮದುವೆಗೆ ಏರ್ಪಾಡು ಮಾಡಿದ್ದರು. ಇದರ ಬಗ್ಗೆ ಸ್ವತಃ ಜಗದೀಶ್ ಬಿಗ್ ಬಾಸ್ ಮನೆಯಲ್ಲಿ ಹೇಳಿದ್ದಾರೆ.

ಮೊದಲ ಹೆಂಡತಿ ಮಗಳ ನೆನೆದು ಕಣ್ಣೀರಿಟ್ಟ ಜೈಜಗದೀಶ್, 'ವಿಷ್ಣು ಮನೆಯಲ್ಲೇ ಇದ್ದೆ'

ಒಂದು ದಿನ ಮೈಸೂರಿಗೆ ಹೊರಟಿದ್ದ ಜೈಜಗದೀಶ್‌ಗೆ ವಿಜಯ್‌ಲಕ್ಷ್ಮಿ ಸಿಂಗ್ ಫೋನ್ ಮಾಡಿ ನಾವು ಸದರ್ನ್ ಹೋಟೆಲ್‌ನಲ್ಲಿ ಇರ್ತೀನಿ ಬನ್ನಿ ಎಂದು ಕರೆಯುತ್ತಾರೆ. 11.30 ರ ಸುಮಾರಿಗೆ ಹೋಟೆಲ್ ಗೆ ಬರುತ್ತಾರೆ ಜಗದೀಶ್. ನೋಡಿದ್ರೆ ಶಾಕ್! ಮದುವೆ ಸೆಟಪ್‌ ಹಾಕಲಾಗಿತ್ತು. ಆಗ ವಿಜಯಲಕ್ಷ್ಮಿ ಸಿಂಗ್ 'ಇವತ್ತು ನಮ್ಮಿಬ್ಬರ ಮದುವೆ. ಸುಮ್ಮನೆ ಕೂತ್ಕೋ' ಎಂದು ಹೇಳಿದ್ದರಂತೆ. ಅದಕ್ಕೆ ಏನು ಮಾತನಾಡದ ಜಗದೀಶ್ ಸೀದಾ ಹಸೆಮಣೆ ಏರಿ ತಾಳಿ ಕಟ್ಟಿದರಂತೆ. ವಿಚಿತ್ರ ಅಂದ್ರೆ ಜಗದೀಶ್‌ಗೆ ಗೊತ್ತಿರಲಿಲ್ಲ ಇವತ್ತು ಅವರ ಮದುವೆ ಅಂತ!

BB7: ಸಿನಿಮಾ ಇಲ್ಲದೇ ಕ್ಯಾಂಟೀನ್ ತೆರೆದ ಶಂಕರ್ ನಾಗ್, ಸತ್ಯಕಥೆ ಬಿಚ್ಚಿಟ್ಟ ಜೈ ಜಗದೀಶ್!

ಅಕ್ಟೋಬರ್ 29ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: