ಕಲರ್ಸ್‌ ಕನ್ನಡದ ಖ್ಯಾತ ರಿಯಾಲಿಟಿ ಶೋ 'ಬಿಗ್ ಬಾಸ್‌ ಸೀಸನ್‌-7'ರ ರನ್ನರ್ ಅಪ್ ಕುರಿ ಪ್ರತಾಪ್‌ ಮಾಧ್ಯಮಗಳಿಂದ ಹಾಗೂ ಅಭಿಮಾನಿಗಳಿಂದ ದೂರ ಉಳಿದಿರುವುದು ಅನುಮಾನಗಳಿಗೆ ಕಾರಣವಾಗಿದೆ. 

BB7: ಕುರಿ ಪ್ರತಾಪ್ ಫೇಕ್‌ ಅನ್ನೊರಿಗೆ ಶ್ವೇತಾ ಚೆಂಗಪ್ಪಾ ಕೊಟ್ರು ಟಾಂಗ್!

ಬಿಗ್ ಬಾಸ್‌ ವಿನ್ನರ್ ಆಗದ ಕಾರಣ ಕುರಿ ಪ್ರತಾಪ್‌ ದೂರ ಉಳಿದ್ರಾ? ಅಥವಾ ವೈಯಕ್ತಿಕ ಜೀವನಕ್ಕೆ ಸಮಯ ನೀಡುತ್ತಿದ್ದಾರಾ? ಅವರ ಫೋನ್‌ ಯಾಕೆ ಆಫ್‌ ಆಗಿದೆ ಎಲ್ಲಾ ಪ್ರಶ್ನೆಗಳಿಗೆ ಕುರಿ ಪ್ರತಾಪ್ ವೆಬ್‌ಸೈಟ್‌ವೊಂದಕ್ಕೆ ಸ್ಪಷ್ಟನೆ ನೀಡಿದ್ದಾರೆ.

ಬಿಗ್ ಅಪಸ್ವರ, ಕೊನೆ ಕ್ಷಣದಲ್ಲಿ ಕುರಿ ಪ್ರತಾಪ್‌ಗೆ ಅನ್ಯಾಯವಾಯ್ತಾ?

'4 ತಿಂಗಳುಗಳಿಂದ ಮೊಬೈಲ್‌ ಆಫ್‌ ಆಗಿದ್ದ ಕಾರಣ ಸಂಪರ್ಕಿಸಲು ತಾಂತ್ರಿಕ ತೊಂದರೆ ಇದೆ.  ವೈಯಕ್ತಿಕ ಜೀವನದ ಕೆಲಸಗಳಲ್ಲಿ ಬ್ಯುಸಿಯಾಗಿದ್ದೇನೆ.  ಮನೆಯ ಕಡೆ ಕೂಡ ಒಂದಿಷ್ಟು ಕೆಲಸ ಇದೆ. ನನ್ನ ಮನೆ ಇರುವುದು ಮೈಸೂರಿನಲ್ಲಿ. ನಾನು ಶೂಟಿಂಗ್‌ಗಾಗಿ ಬೆಂಗಳೂರಿಗೆ ಬರುತ್ತಿದ್ದೆ.  ಕೈಯಲ್ಲಿರುವ ಸಿನಿಮಾಗಳನ್ನು ಮುಗಿಸಬೇಕು. ನಿರ್ದೇಶಕರಿಗೆ ಡೇಟ್‌ ಕೊಟ್ಟಿದ್ದೇನೆ' ಎಂದು ಮಾತನಾಡಿದ್ದಾರೆ.