ಬೆಂಗಳೂರು[ಫೆ. 03]  ಬಿಗ್ ಬಾಸ್ ಮನೆ ಬಾಗಿಲು ಹಾಕಿದೆ. ಶೈನ್ ಶೆಟ್ಟಿ ಬಿಗ್ ಬಾಸ್ ಕನ್ನಡದ ಹೊಸ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ.  ಪ್ರತಿ ಸಾರಿಯಂತೆ ಈ ಬಾರಿಯೂ ಪರ ವಿರೋಧದ ಮಾತುಗಳು ಕೇಳಿ ಬರುತ್ತಲೇ ಇರುಯತ್ತವೆ. ಈ ಬಾರಿಯೂ ಅದೇ ರಾಗ.. ಅದೇ ಹಾಡು.. 

ಬಿಗ್ ಬಾಸ್ ಟ್ರೋಫಿಯನ್ನು ಶೈನ್ ಶೆಟ್ಟಿ ಗೆದ್ದರೆ 60 ಲಕ್ಷ ಜನರ ಮನಸ್ಸನ್ನು ಕುರಿ ಪ್ರತಾಪ್ ಗೆದ್ದಿದ್ದಾರೆ ಎಂದು ನೆಟ್ಟಿಗರು ಕಮೆಂಟಿಸುತ್ತಿದ್ದಾರೆ.

ಶೈನ್ ಗೆದ್ದಿದ್ದು 50 ಲಕ್ಷ ಮಾತ್ರ ಅಲ್ಲ... ಸಿಕ್ಕ ಬೋನಸ್ ಲೆಕ್ಕ ನೋಡಿ!

ಮೊದಲ ಸೀಸನ್ ನಲ್ಲಿ ವಿಜಯ್ ರಾಘವೇಂದ್ರ ವಿನ್ ಆದಾಗ ಮನರಂಜಿಸಿದ್ದ ಅರುಣ್ ಸಾಗ್ ವಿನ್ ಆಗಬೇಕಿತ್ತು ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ರೈತ ಎಂದು ಹೇಳಿ ಜನರನ್ನು ರಂಜಿಸಿದ್ದ ಶಶಿ ವಿನ್ ಆದಾಗ ಸಂಗೀತ ನಿರ್ದೇಶಕ ನವೀನ್ ಸಜ್ಜು ಗೆಲ್ಲಬೇಕಾಗುತ್ತು ಎಂದು ಅನೇಕರು ಹೇಳಿದ್ದರು.

ಈ ಬಾರಿಯ ಬಿಗ್ ಬಾಸ್ ಮನೆ ಬರೋಬ್ಬರಿ 113 ದಿನ ಓಡಿದೆ. ಕರಾವಳಿಯ ಹುಡುಗ ಶೈನ್ ವಿನ್ ಆದರೂ 42ರ ಹರೆಯದ ಕುರಿ ಪ್ರತಾಪ್ ಸರಿಯಾದ ಪೈಪೋಟಿ ನೀಡಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಟಾಸ್ಕ್ ನಲ್ಲಿ ಶೈನ್ ಒಂದು ಕೈ ಮೇಲಿದ್ದರೆ ಮನರಂಜಿಸಿದ್ದರಲ್ಲಿ ಕುರಿ ಪ್ರತಾಪ್ ಅವರೇ ಮೇಲು. ಒಟ್ಟಿನಲ್ಲಿ ಬಿಗ್ ಬಾಸ್ ಗೆ ತೆರೆಬಿದ್ದಿದೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಜೋರಾಗಿಯೇ ನಡೆದಿದೆ.