ಎಪ್ಪಾ! ಇಂಥ ವಿಲನ್‌ ಯಾರ ಲೈಫ್‌ನಲ್ಲೂ ಬರೋದೂ ಬೇಡ. ಸೀರಿಯಲ್‌ ಮುಗಿಯುವ ಹಂತಕ್ಕೆ ಬಂದರೂ, ಹೀರೋ ವಿದೇಶಕ್ಕೆ ಹೋದರೂ ಈ ಚಂದ್ರಿಕಾ ಕಾಟದಿಂದ ಮಾತ್ರ ಯಾರಿಗೂ ತಪ್ಪಿಸಿಕೊಳ್ಳಲು ಆಗಲಿಲ್ಲ. ಚಂದ್ರಿಕಾ ಕಾಟದಿಂದ ತಪ್ಪಿಸಿಕೊಳ್ಳಲು 'ಅಗ್ನಸಾಕ್ಷಿ' ಎಂಬ ಸಾವಿರಾರು ಎಪಿಸೋಡ್ ಮುಗಿಸಿದ ಧಾರಾವಾಹಿಯನ್ನೇ ಮುಗಿಸಬೇಕಾಯಿತು! ಹೌದು, ಬಿಗ್ ಬಾಸ್ ಮನೆಯಲ್ಲಿದ್ದ ಚಂದ್ರಿಕಾ ಅಲಿಯಾಸ್‌ ಪ್ರಿಯಾಂಕಾ ಅವರ ನಟನಾ ಸಾಮಾರ್ಥ್ಯದಿಂದಲೇ ಅಗ್ನಿಸಾಕ್ಷಿಯನ್ನು ವೀಕ್ಷಕರು ಅಷ್ಟು ದಿನ ವೀಕ್ಷಿಸಿದ್ದು.

BiggBoss7: ಪ್ರಿಯಾಂಕಾಗೆ ಬೈ ಹೇಳಲು ಬಂದಿದ್ದ ಹ್ಯಾಂಡ್ಸಮ್ ಹೀರೋ ಯಾರು ನೋಡಿ!

ಬಿಗ್ ಬಾಸ್‌ ಸೀಸನ್‌-7ರಲ್ಲಿ 105ನೇ ದಿನ ಪೂರೈಸಿ ಎಲಿಮಿನೇಟ್‌ ಆಗಿದ್ದಾರೆ. ಫಿನಾಲೆ ವಾರಕ್ಕೆ ವಾಸುಕಿ ವೈಭವ್‌, ಕುರಿ ಪ್ರತಾಪ್‌ ಹಾಗೂ ಶೈನ್‌ ಶೆಟ್ಟಿ ತಲುಪಿದ್ದಾರೆ. ಇನ್ನುಳಿದ ಸ್ಪರ್ಧಿಗಳು ಮಿಡ್‌ ವೀಕ್‌ ಎಲಿಮಿನೇಷನ್‌ಗೆ ಗುರಿಯಾಗಿದ್ದಾರೆ. ಫಿನಾಲೆ ತಲುಪುವ ನಿರೀಕ್ಷೆಯಲ್ಲಿದ್ದ ಪ್ರಿಯಾಂಕಾಗೆ 'ಕಿಚ್ಚನ ಚಪ್ಪಾಳೆ'ಯೇ ಗೆದ್ದಷ್ಟು ಸಮಾನವೆಂದು ಭಾವಿಸಿ ಮನೆಯಿಂದ ಹೊರ ಬಂದಿದ್ದಾರೆ. 

ಪ್ರಿಯಾಂಕಾ ತಾಯಿ ಮನೆಯೊಳಗೆ ಹೋಗುವಾಗಲೇ 'ಒಳ್ಳೆ ಆಟವಾಡು. ಬಿಗ್ ಬಾಸ್ ವಿನ್ನರ್‌ ಆಗದಿದ್ದರೂ ಪರವಾಗಿಲ್ಲ, ಕಿಚ್ಚ ಸರ್ ಚಪ್ಪಾಳೆ ಪಡೆಯಬೇಕು' ಎಂದು ಹೇಳಿದ್ದರು. ಅದರಂತೇ ಪ್ರಿಯಾಂಕ ಚಪ್ಪಾಳೆ ಪಡೆದು ಕಿಚ್ಚನಿಂದ ಡಿಸೈನರ್‌ ವೇರ್‌ ಚಾಕೆಟ್‌ ಪಡೆದು ಕೊಂಡಿದ್ದಾರೆ. 

BB7: ಚಪ್ಪಾಳೆ ಗಿಟ್ಟಿಸಿಕೊಂಡ ಪ್ರಿಯಾಂಕಾಗೆ ಸಿಕ್ತು ಕಿಚ್ಚನ ಸರ್ಪ್ರೈಸ್‌ ಗಿಫ್ಟ್‌!
 
ಬಿಗ್ ಬಾಸ್‌ ಮನೆಯಲ್ಲಿ ಎಲ್ಲರೊಂದಿಗೆ ಒಳ್ಳೇ ಸ್ನೇಹ ಸಂಪಾದಿಸಿದ್ದ ಪ್ರಿಯಾಂಕಾ, ಹೆಚ್ಚಾಗಿ ಕುರಿ ಪ್ರತಾಪ್‌ಗೆ ಕ್ಲೂಸ್‌ ಆಗಿದ್ದರು. ದುಖಃದಲ್ಲಿ ಮನೆಯಿಂದ ಹೊರ ಬಂದಾ ಪ್ರಿಯಾಂಕಾ ವೇದಿಕೆ ಮೇಲೆ ಕಿಚ್ಚನ ಜೊತೆ ಡ್ಯಾನ್ಸ್‌ ಮಾಡಿ ಸಂಭ್ರಮಿಸಿ, ಸ್ಪರ್ಧೆಯಿಂದ ಹೊರ ಬಿದ್ದ ನೋವನ್ನು ಮರೆತಿದ್ದಾರೆ.