ತಾಂಡವ್ ಜೊತೆ ಪೂಜೆಗೆ ಕುಳಿತುಕೊಳ್ತಾಳ ಭಾಗ್ಯ? ಪ್ರಸಾದ ಅಂತ ಶ್ರೇಷ್ಠಾ ಮಾಡಿದ್ದು ಉಪ್ಪಿಟ್ಟು!

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗ್ತಿರುವ ಭಾಗ್ಯಲಕ್ಷ್ಮಿ ಸೀರಿಯಲ್ ನಲ್ಲಿ ಶ್ರೇಷ್ಠಾ ಕಥೆ ಮಜವಾಗಿದೆ. ಒಂದ್ಕಡೆ ಮನೆ ಕೆಲಸ ಇನ್ನೊಂದು ಕಡೆ ಪೂಜೆ ಬಗ್ಗೆ ಆಕೆಗಿರುವ ಅಜ್ಞಾನ ಹೊರಗೆ ಬರ್ತಿದೆ. 
 

Colors Kannada Bhagyalakshmi Serial Confusion over Satyanarayana Puja at Bhagya house roo

ಭಾಗ್ಯ ಮನೆಯಲ್ಲಿ ಸತ್ಯನಾರಾಯಣ ಪೂಜೆ (Satyanarayan Puja) ನಡೆಯುತ್ತಿದೆ. ಪೂಜೆಯ ಎಲ್ಲ ಜವಾಬ್ದಾರಿಯನ್ನು ತಾಂಡವ್ ತನ್ನ ಭಾವಿ ಪತ್ನಿ ಹಾಗೂ ಪ್ರೇಮಿ ಶ್ರೇಷ್ಠಾ ಕೈಗಿಟ್ಟಿದ್ದಾನೆ. ವಿದ್ಯೆ ಇದ್ರೆ ಎಲ್ಲವನ್ನೂ ಮಾಡ್ಬಹುದು ಎಂಬ ಅಹಂಕಾರದಲ್ಲಿ ಮರೆಯುತ್ತಿರುವ ಶ್ರೇಷ್ಠಾ, ಪೂಜೆಯಲ್ಲಿ ಒಂದಾದ್ಮೇಲೆ ಒಂದು ಯಡವಟ್ಟು ಮಾಡ್ತಾನೆ ಇದ್ದಾಳೆ. ಇಡೀ ಮನೆ ಸತ್ಯನಾರಾಯಣ ಪೂಜೆಗೆ ಸಿದ್ಧವಾಗಿದೆ. ಗೆಸ್ಟ್ ಎಲ್ಲ ಬಂದಾಗಿದೆ. ಪೂಜಾರಿಗಳು ಪೂಜೆ ಕಾರ್ಯ ಶುರು ಮಾಡ್ತಿದ್ದಾರೆ. ಯಾರು ಪೂಜೆಗೆ ಕುಳಿತುಕೊಳ್ತೀರಿ ಎಂಬ ಪ್ರಶ್ನೆ ಕೇಳ್ತಾರೆ. ಇದಕ್ಕೆ ಮಧ್ಯೆ ಬಾಯಿ ಹಾಕುವ ಶ್ರೇಷ್ಠಾ, ತಾಂಡವ್ ನಾವಿಬ್ಬರು ಕುಳಿತುಕೊಳ್ಳೋಣ ಎನ್ನುತ್ತಾಳೆ. ಇದು ಅಸಾಧ್ಯ ಎಂಬ ಮಾತು ಕೇಳಿ ಬರ್ತಿದ್ದಂತೆ ಭಾಗ್ಯಾಗೆ ಮಾತಿನ ಏಟು ನೀಡ್ತಾಳೆ ಶ್ರೇಷ್ಠ. 

ಕಲರ್ಸ್ ಕನ್ನಡ (Colors Kannada)ದಲ್ಲಿ ಪ್ರಸಾರವಾಗ್ತಿರುವ ಭಾಗ್ಯಲಕ್ಷ್ಮಿ ಸೀರಿಯಲ್ (Bhagyalakshmi Serial) ನಲ್ಲಿ ಈಗ ಶ್ರೇಷ್ಠಾ ಹಾಗೂ ಭಾಗ್ಯಾ ಮಧ್ಯೆ ಜಿದ್ದಾಜಿದ್ದಿನ ಯುದ್ಧ ನಡೆಯುತ್ತಿದೆ. ಆತ್ಮಹತ್ಯೆ ಬೆದರಿಕೆ ಹಾಕಿ, ಭಾಗ್ಯಾ ಮನೆ ಸೇರಿರುವ ಶ್ರೇಷ್ಠಾ ಆರಂಭದಲ್ಲಿ ಅಡುಗೆ, ಮನೆ ಕೆಲಸ ಮಾಡಲಾಗದೆ ಕಷ್ಟಪಟ್ಟಿದ್ದಳು. ಆದ್ರೆ ಮತ್ತೆ ಚಿಗುರಿಕೊಂಡಿದ್ದಾಳೆ. ಅಡುಗೆ ಮನೆಗೆ ಕಾಲಿಡಬೇಡಿ ಎಂದು ಗೆರೆ ಎಳೆದಿರುವ ಶ್ರೇಷ್ಠಾಗೆ ತಾಂಡವ್ ಕುಮ್ಮಕ್ ಬೇರೆ ಇದೆ. ತಾಂಡವ್, ಪೂಜೆ ಜವಾಬ್ದಾರಿಯನ್ನು ಶ್ರೇಷ್ಠಾಗೆ ವಹಿಸ್ತಿದ್ದಂತೆ ಸೀರೆಯುಟ್ಟು, ಅಲಂಕಾರ ಮಾಡಿಕೊಂಡ ಶ್ರೇಷ್ಠಾ ಭಾಗ್ಯಾಗೆ ಸೆಡ್ಡು ಹೊಡೆಯಲು ಪ್ರಸಾದ ಸಿದ್ಧಪಡಿಸಿದ್ದಾಳೆ. 

ಬಿಗ್ ಬಾಸ್‌ನಿಂದ ಮಹಿಳಾ ಸ್ಪರ್ಧಿ ಔಟ್‌, ಚರ್ಚೆಗೆ ಗ್ರಾಸವಾದ ಮಿಡ್ ವೀಕ್‌ ಎಲಿಮಿನೇಷನ್‌!

ಪೂಜೆಯಲ್ಲಿ ಏನೆಲ್ಲ ಯಡವಟ್ಟು ಆಗುತ್ತೋ ಎನ್ನುವ ಭಯದಲ್ಲಿದ್ದ ಭಾಗ್ಯಾ ನಿರೀಕ್ಷೆ ಒಂದೊಂದೇ ನಿಜವಾಗ್ತಿದೆ. ಪೂಜೆಗೆ ನಾವೇ ಕುಳಿತುಕೊಳ್ತೇವೆ ಎಂದು ಒಂದ್ಕಡೆ ಶ್ರೇಷ್ಠಾ ಹಠ ಮಾಡ್ತಿದ್ದಾಳೆ. ಭಾಗ್ಯಾ ಹಾಗೂ ತಾಂಡವ್ ಡಿವೋರ್ಸ್ ಪೇಪರ್ ಗೆ ಸಹಿ ಹಾಕಿದ್ದಾರೆ. ಹಾಗಾಗಿ ತಾಂಡವ್ ಜೊತೆ ಭಾಗ್ಯಾ ಕುಳಿತುಕೊಳ್ಳಲು ಸಾಧ್ಯವಿಲ್ಲ. ಆ ಜಾಗದಲ್ಲಿ ನಾನು ಬರಬಹುದು ಎಂಬ ವಾದ ಶ್ರೇಷ್ಠಂದು. ಅದಕ್ಕೆ ಕುಸುಮಾ ಹಾಗೂ ಭಾಗ್ಯಾ ಏನು ಉತ್ತರ ನೀಡ್ತಾರೆ, ಯಾರು ಅಂತಿಮವಾಗಿ ಪೂಜೆಗೆ ಕುಳಿತುಕೊಳ್ತಾರೆ ಎಂಬುದನ್ನು ಸದ್ಯ ಕಾದು ನೋಡ್ಬೇಕು.

ಬಿಗ್ ಬಾಸ್ ಗೌತಮಿ ಬಾಯಲ್ಲಿ ಪದೇ ಪದೇ ಕೇಳಿ ಬರುವ ವನದುರ್ಗ ದೇವಿ ಎಲ್ಲಿದೆ? ಅದ್ಭುತ

ಈ ಮಧ್ಯೆ ಕಲರ್ಸ್ ಕನ್ನಡ ಚಾನೆಲ್ ತನ್ನ ಇನ್ಸ್ಟಾ ಖಾತೆಯಲ್ಲಿ ಇನ್ನೊಂದು ಪ್ರೋಮೋ ಹಂಚಿಕೊಂಡಿದೆ. ಅದ್ರಲ್ಲಿ ಶ್ರೇಷ್ಠಾಳ ಪ್ರಸಾದ ಪುರಾಣ ತೆರೆದುಕೊಳ್ತಿದೆ. ಸತ್ಯನಾರಾಯಣ ಪೂಜೆಗೆ ಪ್ರಸಾದ ಮಾಡು ಅಂದ್ರೆ ಶ್ರೇಷ್ಠಾ ಉಪ್ಪಿಟ್ಟು ಮಾಡಿಟ್ಟಿದ್ದಾಳೆ. ಇದನ್ನು ನೋಡಿದ ಪೂಜಾರಿಗಳು ಕೋಪಗೊಂಡಿದ್ದಾರೆ. ನನ್ನ ಜೀವನದಲ್ಲಿ ಇದೇ ಮೊದಲ ಬಾರಿ, ಪ್ರಸಾದದ ರೂಪದಲ್ಲಿ ಉಪ್ಪಿಟ್ಟನ್ನು ನೋಡಿದ್ದು ಎಂದು ಕೂಗಾಡ್ತಿದ್ರೆ ಕೂಲ್ ಆಗಿದ್ದ ಶ್ರೇಷ್ಠಾ, ಯಾಕೆ ಪ್ರಸಾದ ಚೆನ್ನಾಗಿಲ್ವಾ ಎನ್ನುತ್ತ ಅದನ್ನು ತಿಂದು ರುಚಿ ನೋಡ್ತಾಳೆ. ಅಷ್ಟೇ ಮನೆ ಫುಲ್ ಶಾಕ್ ಗೆ ಒಳಗಾಗುತ್ತದೆ. ಪುಜಾರಿಗಳು ಕೇವಲ ಐದು ನಿಮಷ ಅವಕಾಶ ಮಾತ್ರ ನೀಡಿದ್ದಾರೆ. ಇಂದು ಪೂಜೆ ನಡೆಯಬೇಕು ಎಂದು ಪಣತೊಟ್ಟಿರುವ ಭಾಗ್ಯಾ, ಐದು ನಿಮಿಷದಲ್ಲಿ ಪ್ರಸಾದ ಮಾಡಿಕೊಡುವುದಾಗಿ ಭರವಸೆ ನೀಡಿದ್ದಾಳೆ.  ಭಾಗ್ಯಾ ಮಾತಿನಂತೆ ನಡೆದುಕೊಳ್ತಾಳಾ, ಭಾಗ್ಯಾ ಮನೆಯಲ್ಲಿ ಸತ್ಯನಾರಾಯಣ ಪೂಜೆ ನಡೆಯುತ್ತಾ ಎಂಬುದು ಸದ್ಯ ವೀಕ್ಷಕರಲ್ಲಿರುವ ಕುತೂಹಲವಾಗಿದೆ. ಪ್ರೋಮೋಕ್ಕೆ ಕಮೆಂಟ್ ಮಾಡಿರುವ ವೀಕ್ಷಕರು, ಶ್ರೇಷ್ಠಾ ಹಾಗೂ ತಾಂಡವ್ ಮೇಕೆ ಕೋಪ ವ್ಯಕ್ತಪಡಿಸಿದ್ದಾರೆ. ಮುಂದೇನಾಗುತ್ತೆ ಎಂಬುದನ್ನು ವೀಕ್ಷಕರೇ ಹೇಳಿದ್ದಾರೆ. ಅಷ್ಟೇ ಅಲ್ಲ, ಕೆಲವರಿಗೆ ಸೀರಿಯಲ್ ಹೋಗ್ತಿರುವ ರೂಟ್ ಇಷ್ಟವಾಗಿಲ್ಲ. ಒಂದೇ ಮನೆಯಲ್ಲಿ ಶ್ರೇಷ್ಠಾ, ಭಾಗ್ಯಾ ಹಾಗೂ ತಾಂಡವ್ ಇರಲು ಸಾಧ್ಯವೇ ಇಲ್ಲ. ಜೊತೆಗೆ ಪೂಜೆ ಬೇರೆ. ಇದು ಜನರಿಗೆ ತಪ್ಪು ಸಂದೇಶ ರವಾನೆ ಮಾಡ್ತಿದೆ ಎನ್ನುತ್ತಿದ್ದಾರೆ. 

Latest Videos
Follow Us:
Download App:
  • android
  • ios