2000 ಪಾಯಿಂಟ್ಸ್ ಪಡೆಯುವುದಕ್ಕೆ ಏನೆಲ್ಲಾ ಮಾಡಬೇಕು ನೋಡಿ? ಒಬ್ಬೊಬ್ಬರ ಪಚೀತಿ ಕೇಳೋಕೇ ಆಗೋಲ್ಲ.... 

ಎರಡನೇ ಇನಿಂಗ್ಸ್, ಎರಡನೇ ವಾರದ ಎಲಿಮಿನೇಷನ್‌ ನಂತರ ಮನೆ ವಾತಾವರಣ ಬದಲಾಗಿದೆ. ಮುಂದಿನ ವಾರ ಕ್ಯಾಪ್ಟನ್ ಆಗಲು ಬಿಗ್‌ಬಾಸ್ ಸೀಕ್ರೆಟ್ ಟಾಸ್ಕ್ ನೀಡಿದ್ದಾರೆ. ಇಬ್ಬರಿಗೆ ಮತ್ತೊಬ್ಬರ ಟಾಸ್ಕ್ ಏನೆಂದು ಗೊತ್ತಿಲ್ಲ. ಆದರೂ ಸಾಧಿಸಿ ಪ್ರತಿಯೊಬ್ಬರೂ 2000 ಪಾಯಿಂಟ್ಸ್ ಗಳಿಸಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಯಾರಿಗೆ ಯಾವ ಸೀಕ್ರೆಟ್ ಟಾಸ್ಕ್ ಇತ್ತು?
ದಿವ್ಯಾ ಸುರೇಶ್: ಯಾವುದೇ ಬಬ್ಬ ಸದಸ್ಯನ ಬಟ್ಟೆಯನ್ನು ಪಡೆದುಕೊಂಡು, ನೀವು ಅದನ್ನು ಧರಿಸಬೇಕು. (ಅವರು ಧರಿಸಿರುವ ಬಟ್ಟೆಯನ್ನು ಹೊರತುಪಡಿಸಿ).

ಚಕ್ರವರ್ತಿ:  ಯಾವುದೇ ಒಬ್ಬ ಸದಸ್ಯ ಕುಳಿತಿರುವ ಸ್ಥಳದಿಂದ ಅವರ ಮನ ಒಲಿಸಿ, ಎಬ್ಬಿಸಿ, ಆ ಸ್ಥಳದಲ್ಲಿ ಕೂರಬೇಕು. ಮತ್ತು ಅವರನ್ನು ನಿಮ್ಮ ಪಕ್ಕದಲ್ಲಿ ಕೂರಿಸಿಕೊಳ್ಳಬೇಕು.

ಪ್ರಿಯಾಂಕಾ: ಯಾವುದೇ ಸದಸ್ಯರು ಧರಿಸಿರುವ ಎರಡೂ ಚಪ್ಪಲಿ ಅಥವಾ ಶೂ ಅನ್ನು ಕೇಳಿ ನೀವು ಒಮ್ಮೆ ಧರಿಸಬೇಕು.

ಇಬ್ಬರ ಬಿಟ್ಟು ಎಲ್ಲರೂ ನಾಮಿನೇಟ್, 'ಅವನ' ಜೀವನ ಚೆನ್ನಾಗಿರ್ಬೇಕು ಎಂದ ವೈಷ್ಣವಿ 

ಮಂಜು ಪಾವಗಡ: 4 ಜನ ಇತರೆ ಸದಸ್ಯರ ನೀರಿನ ಬಾಟಲಿಯಿಂದ ನೀರು ಕುಡಿಯಬೇಕು. ಇದು ಆ ಸದಸ್ಯನ ಮುಂದೆಯೇ ನಡೆಯಬೇಕು.

ಪ್ರಶಾಂತ್: ಯಾವುದೇ ಒಬ್ಬ ಸದಸ್ಯನನ್ನು ನಿಮ್ಮ ತೊಡೆ ಮೇಲೆ ಒಮ್ಮೆ ಮಲಗಿಸಿಕೊಳ್ಳಬೇಕು.

ರಘು ಗೌಡ: ಯಾವುದೇ ಒಬ್ಬ ಸದಸ್ಯ ಧರಿಸಿರುವ ಅಂಗಿ/ಟಾಪ್/ಪ್ಯಾಂಟ್ ಹೀಗೆ ಯಾವುದೇ ಒಂದು ಒಟ್ಟೆಯನ್ನು ಬದಲಾಯಿಸುವಂತೆ ಮಾಡಬೇಕು.

ಶಮಂತ್: ಯಾವುದೇ ಸದಸ್ಯನನ್ನು ಕೈ ತೊಳೆಯುವಂತೆ ಮಾಡಬೇಕು. ನೆನಪಿರಲಿ ಇದು ಊಟ/ತಿಂಡಿ ಆದ ಬಳಿಕ ಸಹಜವಾಗಿ ತೊಳೆಯುವುದು ಆಗಿರಬಾರದು.

ಚಕ್ರವರ್ತಿ ವಿರುದ್ಧ ತಿರುಗಿಬಿದ್ದ ಪ್ರಿಯಾಂಕಾ ಕೋಪಕ್ಕೆ ಬೆಚ್ಚಿಬಿದ್ದ ಸದಸ್ಯರು! 

ಅರವಿಂದ್: ಯಾವುದೇ ಒಬ್ಬ ಸದಸ್ಯನಿಗೆ ನಿಮ್ಮ ಕೈಲಿರುವ ಕಪ್‌ನಿಂದ ನೀರು/ ಕಾಫಿ/ ಟೀಯನ್ನು 2 ಸಿಪ್ ಕುಡಿಸಬೇಕು.

ಶುಭಾ ಪೂಂಜಾ: ಯಾವುದೇ ಸದಸ್ಯ ನಿಮ್ಮ ಪರವಾಗಿ ಬಿಗ್ ಬಾಸ್‌ಗೆ ಕ್ಯಾಮೆರಾ ಮುಂದೆ ನಿಂತು ಮನವಿಯೊಂದನ್ನು ಮಾಡುವಂತೆ ಮಾಡಬೇಕು.

ವೈಷ್ಣವಿ: ನಿಮ್ಮ ತಟ್ಟೆಯಿಂದ ಯಾವುದೇ ಇನ್ನೊಬ್ಬ ಸದಸ್ಯನ ತಟ್ಟೆಗೆ 3 ತುತ್ತು ಹಾಕಬೇಕು. (3 ಬಾರಿ ಯಾವುದೇ ಪದಾರ್ಥವನ್ನು ಬೇಕಾದರೂ ವರ್ಗಾಯಿಸಬಹುದು)

View post on Instagram