ಬಿಗ್ ಬಾಸ್ ಸೀಸನ್‌ 8 ಇದೀಗ 57ನೇ ದಿನಕ್ಕೆ ಕಾಲಿಟ್ಟಿದೆ. ಸ್ಟ್ರಾಂಗ್ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದ ರಾಜೀವ್‌ ಕಡಿಮೆ ವೋಟ್‌ನಿಂದ ಎಲಿಮಿನೇಟ್ ಆಗಿದ್ದಾರೆ. ಸದಸ್ಯರ ಸಹಾಯದಿಂದ ಈ ವಾರದ ಕ್ಯಾಪ್ಟನ್ ಆಗಿರುವ ರಘು ಗೌಡ ಆಯ್ಕೆ ಆಗಿದ್ದಾರೆ. ವಾರದ ಕಳಪೆ ಸ್ಪರ್ಧಿ ಯಾರೆಂದು ತೀರ್ಮಾನ ಮಾಡುವ ವೇಳೆ ಪ್ರಿಯಾಂಕಾ ತಿಮ್ಮೇಶ್ ಹೆಸರು ಕೇಳಿ ಬಂದಿದ್ದು, ರಘು ಗೌಡ ವಿರುದ್ಧ ತಿರುಗಿ ಬಿದ್ದಿದ್ದಾರೆ.

ಸಿಗರೇಟ್‌ ಪ್ರಾಣ ಉಳಿಸುತ್ತೆ, ಆದರೆ ಅದಕ್ಕೆ ಪ್ರಾಣವಿಲ್ಲ; ಶುಭಾ ಪೂಂಜಾ ಎಡವಟ್ಟಿಗೆ ರಘು ಗೌಡ ಟಾಂಗ್! 

ಆಕಾಶದಿಂದ ಉದುರುವ ಹೂವುಗಳನ್ನು ಸಂಗ್ರಹಿಸಿ ಕ್ಯಾಪ್ಟನ್ ಟಾಸ್ಕ್‌ಗೆ ಆಯ್ಕೆ ಆಗಿರುವ ಸ್ಪರ್ಧಿಗಳಿಗೆ ಮನೆಯ ಸದಸ್ಯರು ನೀಡಬೇಕು. ವೈಷ್ಣವಿ, ದಿವ್ಯಾ ಉರುಡುಗ, ಅರವಿಂದ್ ರಘು ಗೌಡಗೆ ಹೂವುಗಳನ್ನು ನೀಡಿದ್ದಾರೆ. ಅದಲ್ಲದೇ ಮಂಜು ಅಥವಾ ರಾಜೀವ್ ಕ್ಯಾಪ್ಟನ್ ಆಗಬಾರದು ಎಂದು ಪ್ರಶಾಂತ್ ಸಂಬರಗಿ ತಮ್ಮ ಬಳಿ ಇದ್ದ ಹೂವುಗಳನ್ನು ರಘುಗೆ ನೀಡಿ ಗೆಲ್ಲಿಸಿದ್ದಾರೆ. 

ಕಳೆದ ವಾರ ಕಳಪೆ ಸ್ಪರ್ಧಿಯಾಗಿ ನಿಧಿ ಸುಬ್ಬಯ್ಯ ಆಯ್ಕೆ ಆಗಿದ್ದರು. ಈ ವಾರ ಪ್ರಶಾಂತ್ ಸಂಬರಗಿ ಕಳಪೆ ಸ್ಪರ್ಧಿಯಾಗಿದ್ದಾರೆ. ಇಬ್ಬರೂ ಒಂದು ರಾತ್ರಿ ಒಟ್ಟಿಗೇ ಜೈಲಿನಲ್ಲಿ ದಿನ ಕಳೆಯಬೇಕಿದೆ. ಈ ನಿರ್ಧಾರ ಕೈಗೊಳ್ಳುವ ಸಮಯದಲ್ಲಿ ಶುಭಾ ಪೂಂಜಾ, ಪ್ರಶಾಂತ್ ಹಾಗೂ ಪ್ರಿಯಾಂಕಾ ತಿಮ್ಮೇಶ್ ಹೆಸರು ಕೇಳಿ ಬಂದಿತ್ತು. ಕ್ಯಾಪ್ಟನ್ ರಘು, ಪ್ರಿಯಾಂಕಾ ಹೆಸರು ಹೇಳಿದ ಕಾರಣ ಪ್ರಿಯಾಂಕಾ ತಪ್ಪನ್ನು ಸ್ವೀಕರಿಸದೆ ಪ್ರತಿಯೊಬ್ಬರ ಬಳಿ ಹೋಗಿ ರಘು ಬಗ್ಗೆ ಮಾತನಾಡಿದ್ದಾರೆ. 

ಬಿಬಿ ಮನೆಯಲ್ಲಿ ಊಟ ಕೊಟ್ಟಿಲ್ಲ ಅಂದ್ರೆ ಸೊಳ್ಳೆ, ಜಿರಳೆ ತಿನ್ನಬೇಕು: ರಘು ಗೌಡ

'ಸ್ವಂತ ಬುದ್ದಿವಂತಿಕೆ ಇಲ್ಲದೆ ರಘು ಕ್ಯಾಪ್ಟನ್ ಆಗಿದ್ದಾನೆ, ದೊಡ್ಡ ಕಳಪೆ ಅವನು. ತಮ್ಮ ಶ್ರಮ ವಹಿಸಿ ಆಟವಾಡಿ ರಘು ಗೆದ್ದಿಲ್ಲ. ಆದರೂ ಅವನು ಅಷ್ಟು ಮಾತನಾಡುತ್ತಾನೆ. ಅವನದು ಮೊದಲು, ಅವನು ನೋಡಿಕೊಳ್ಳಬೇಕು. ಪಾಯಿಂಟ್ ಮಾಡುವ ಮುನ್ನ ಯೋಚನೆ ಮಾಡಬೇಕು ಆಮೇಲೆ ಬಂದು ಸ್ವಲ್ಪ ಮಾತಾನಾಡೋಣ ಅಂತ ಹೇಳೋದು ಅಲ್ಲ. ಶಮಂತ್‌ಗೆ ಬಕ್ರಾ ಅಂತ ಪದ ಬಳಸಿದರು. ಹೊರಗಡೆ ಎಷ್ಟು nonsense ಆಗಿ ಕಾಣಿಸುತ್ತಿರುತ್ತೆ ಅಂತ ಅವರಿಗೆ ಗೊತ್ತಿರುತ್ತೆ. ನಾನು ಎರಡು ವಾರದಿಂದ ಪ್ರಶಾಂತ್ ಹಾಗೂ ಅರವಿಂದ್ ಕ್ಯಾಪ್ಟನ್ ಆಗಿದ್ದಾಗ ಮಾಡಿದ ಕೆಲಸಗಳನ್ನು ನೋಡಿದ್ದೀನಿ. ರಘು ಕ್ಯಾಪ್ಟನ್ ಆಗಿದ್ದಾನೆ ಅಂದ್ರ ಕೊಂಬು ಬರಲ್ಲ,' ಎಂದು ಪ್ರಿಯಾಂಕಾ ಮನಸ್ಸಿನಲ್ಲಿದ ಮಾತು ಹೊರ ಹಾಕಿದ್ದಾರೆ.

ಇದೀಗ ರಾಜ್ಯದಲ್ಲಿ ಜನತಾ ಕರ್ಫ್ಯೂ ವಿಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಚಿತ್ರ ಹಾಗೂ ಧಾರಾವಾಹಿ ಚಿತ್ರೀಕರಣಗಳನ್ನೂ ಸಂಪೂರ್ಣ ನಿಷೇಧಿಸಲಾಗಿದೆ. ಇದರ ಪರಿಣಾಮ ಎಲ್ಲಾ ರಿಯಾಲಿಟಿ ಶೋಗಳನ್ನು ನಿಲ್ಲಿಸಲು ಸೂಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ಬಿಗ್‌ಬಾಸ್ ಮುಂದುವರಿಯುತ್ತೋ, ಇಲ್ಲವೋ ನೋಡಬೇಕು.