ಕಿಚ್ಚ ಸುದೀಪ್ ನಿರೂಪಣೆ ಇಲ್ಲದೇ 8ನೇ ವಾರದ ಎಲಿಮಿನೇಷನ್ ನಡೆಯಬೇಕಿದೆ. ವಿವಿಧ ಬಗೆಯ ಟಾಸ್ಕ್ ಮೂಲಕ ಕ್ಯಾಪ್ಟನ್‌ ಟಾಸ್ಕ್ ನಡೆದಿದೆ. ಇಂದು ಭಾನುವಾರ ಆಗಿರುವ ಕಾರಣ ಮನೆಯಿಂದ ಒಬ್ಬ ಸದಸ್ಯ ಹೊರ ಬರಲಿದ್ದಾರೆ. ಕಳೆದ ವಾರ ಮನೆಯಿಂದ ವಿಶ್ವನಾಥ್ ಹೊರ ಬಂದಿದ್ದರು, ಈ ವಾರ ಯಾರು ಬರಲಿದ್ದಾರೆ?

ಬಿಬಿ ಮನೆಯಲ್ಲಿ ಊಟ ಕೊಟ್ಟಿಲ್ಲ ಅಂದ್ರೆ ಸೊಳ್ಳೆ, ಜಿರಳೆ ತಿನ್ನಬೇಕು: ರಘು ಗೌಡ 

ಮನೆಯಲ್ಲಿರುವ ಸೌಲಭ್ಯಗಳ ಮಹತ್ವ ತಿಳಿಸಿಕೊಡಲು ಬಿಬಿ ವಾರವಿಡೀ ಗೆದ್ದು-ಗಳಿಸು ಆಟವನ್ನು ಆಡಿಸಿದರು. ಯಾವುದೇ ಸೌಲಭ್ಯ ಬೇಕಿದ್ದರೂ, ಟಾಸ್ಕ್ ಆಡಿಯೇ ಪಡೆದುಕೊಳ್ಳಬೇಕಿತ್ತು. ದಿನಸಿ, ಗ್ಯಾಸ್, ಹೊದಿಕೆ ಹಾಗೂ ಬಾತ್‌ ರೂಮ್ ಪಡೆದುಕೊಂಡ ಸದಸ್ಯರಿಗೆ ಸಿಗರೇಟ್ ಚಿಂತೆ ಕಾಡಿತ್ತು. ಮನೆಯಲ್ಲಿರುವ ಕೆಲವು ಸದಸ್ಯರು ಧೂಮಪಾನ ಮಾಡುವುದರಿಂದ ಅವರಿಗದು ಅತ್ಯಗತ್ಯವಾಗಿತ್ತು. ಟಾಸ್ಕ್‌ ಗೆದ್ದು, ಸಿಗರೇಟ್ ಪಡೆದುಕೊಳ್ಳುತ್ತಾರೆ. 

ಬಿಗ್‌ಬಾಸ್‌ ಸ್ಟೋರ್‌ ರೂಮ್‌ ಮೂಲಕ ಸಿಗರೇಟ್ ಹಾಗೂ ಮೈಕ್ ಬ್ಯಾಟರಿ ಕಳುಹಿಸಿಕೊಡುತ್ತಾರೆ. ಸ್ಟೋರ್‌ ರೂಮ್‌ಗೆ ಮೊದಲು ಪ್ರವೇಶಿಸಿದ ಶುಭಾ ಪೂಂಜಾ, ಮಂಜು ಹಾಗೂ ರಘು ಗೌಡ ಸೇದುವ ಸಿಗರೇಟನ್ನು ಬಚ್ಚಿಡುತ್ತಾರೆ. ಎಷ್ಟೇ ಹುಡುಕಾಡಿದರೂ ಅರವಿಂದ್ ಸಿಗರೇಟ್ ಮಾತ್ರವಿತ್ತು. ಯಾರಿಗೂ ತಿಳಿಯದಂತೆ ಶುಭಾ ಪೂಂಜಾ ಸಿಗರೇಟನ್ನು ಸ್ಮೋಕಿಂಗ್ ರೂಮಿಗೆ ತಂದು ಇಟ್ಟಿದ್ದಾರೆ. ಅದನ್ನು ಕಂಡ ಅರವಿಂದ್ ಸಿಗರೇಟ್‌ ಇದೆ ಬನ್ನಿ ಎಂದು ಇನ್ನಿತರರನ್ನು ಕೆರಯುತ್ತಾರೆ. 

ರಘು ಗೌಡ ಬಿಬಿ ಮನೆಯಲ್ಲಿ ಇರ್ಬೇಕು ವೂಟ್‌ ಮಾಡಿ ಅಂತಿದ್ದಾರೆ ಡ್ರಾವಿಡ್, ಶಿವಣ್ಣ, ಪುನೀತ್? 

ಸ್ಮೋಕಿಂಗ್ ರೂಮ್‌ ಒಳಗೆ ಸಿಗರೇಟ್ ಹೇಗೆ ಬಂತು? ಯಾರೂ ಇಲ್ಲಿಗೆ ತಂದು ಇಡಲು ಸಾಧ್ಯವಿಲ್ಲ, ಇದರ ಹಿಂದೆ ಯಾರದ್ದೂ ಕೈವಾಡ ಇದೆ ಎಂದು ಚರ್ಚಿಸುತ್ತಿದ್ದ ರಘು ಗೌಡ ಅವರಿಗೆ  ಶುಭಾ ಎಲ್ಲ ರೀತಿಯ ಸಾಧ್ಯತೆಗಳ ಬಗ್ಗೆ ಚಿಂತಿಸು ಎಂದು ಹೇಳಿದ್ದರು. ಸಿಗರೇಟ್‌ ಪ್ರಾಣ ಉಳಿಸುತ್ತೆ. ಆದರೆ ಅದಕ್ಕೆ ಪ್ರಾಣ ಇಲ್ಲ, ಹೇಗೆ ನಡೆದುಕೊಂಡು ಅಲ್ಲಿಗೆ ಹೋಗುತ್ತದೆ ಎಂದು ಸಿಟ್ಟಿನಲ್ಲಿ ಹಾಸ್ಯ ಮಾಡುತ್ತಾರೆ. ರಘು ಪಚೀತಿ ನೋಡಲಾಗದೇ ಶುಭಾ ಪೂಂಜಾ ತಾನು ಮಾಡಿದ ಪ್ಲಾನ್ ಬಗ್ಗೆ ವಿವರಿಸುತ್ತಾರೆ.