ಹೆಚ್ಚಾಗುತ್ತಿರುವ ಡಿವೋರ್ಸ್ ಕೇಸ್‌ಗಳು ಮತ್ತು ರೇಣುಕಾಸ್ವಾಮಿ ಕೊಲೆ ಪ್ರಕರಣದ ಬಗ್ಗೆ ರಿಯಾಕ್ಟ್‌ ಮಾಡಿದ ನಿರ್ದೇಶಕ ರಾಜ್‌ ಬಿ ಶೆಟ್ಟಿ....

ಕನ್ನಡ ಚಿತ್ರರಂಗದ ಡಿಫರೆಂಟ್ ಡೈರೆಕ್ಟ್‌ ಹಾಗೂ ನಟ ರಾಜ್‌ ಬಿ ಶೆಟ್ಟಿ ತಮ್ಮ ಮುಂದಿನ ಸಿನಿಮಾ ರೂಪಾಂತರ ಬಿಡುಗಡೆಗೆ ಸಜ್ಜಾಗಿದೆ. ಈ ನಡುವೆ ಇಂಡಸ್ಟ್ರಿಯಲ್ಲಿ ಇರುವ ಹ್ಯಾಪೆನಿಂಗ್ ವಿಚಾರಗಳು ಅಂದ್ರೆ....ಡಿವೋರ್ಸ್‌ ಕೇಸ್‌ಗಳ ಹೆಚ್ಚಳ ಹಾಗೂ ರೇಣುಕಾಸ್ವಾಮಿ ಕೊಲೆ ಪ್ರಕರಣದ ಬಗ್ಗೆ ರಾಜ್‌ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. 

'ಡಿವೋರ್ಸ್‌ ಕೇಸ್‌ ಹೆಚ್ಚಾಗುತ್ತಿದೆ ಆದರೆ ಅದನ್ನು ನೋಡಿದರೆ ಏನೂ ಅನಿಸುವುದಿಲ್ಲ ಏಕೆಂದರೆ ಅದು ತುಂಬಾ ನಾರ್ಮಲ್ ಅನಿಸುತ್ತದೆ. ಗಂಡ ಹೆಂಡತಿ ನಡುವೆ ಏನೋ ಸರಿ ಇಲ್ಲ ಅನಿಸುತ್ತಿದ್ದು ದೂರ ಆಗಲು ನಿರ್ಧಾರ ಮಾಡಿದಾಗ ನಾವು ಯಾಕೆ ತಲೆ ಕೆಡಿಸಿಕೊಳ್ಳಬೇಕು? ಸೊಸೈಟಿಯಲ್ಲಿ ಡಿವೋರ್ಸ್ ಕೇಸ್ ಹೆಚ್ಚಾಗುತ್ತಿದೆ ಆದರೆ ಸಿನಿಮಾ ಸೆಲೆಬ್ರಿಟಿಗಳ ಜೀವನದಲ್ಲಿ ನಡೆದಾಗ ದೊಡ್ಡದಾಗುತ್ತಿದೆ. ಒಟ್ಟಿಗೆ ಬದುಕಲು ಆಗುತ್ತಿಲ್ಲ ಅನಿಸುತ್ತಿದ್ದರೆ ದೂರ ಆಗುವುದರಲ್ಲಿ ತಪ್ಪಿಲ್ಲ ಹಾಗೆ ಅದು ಸೆನ್ಸೇಷನ್‌ ಆಗುವಂತಹ ನ್ಯೂಸ್ ಕೂಡ ಅಲ್ಲ' ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ರಾಜ್‌ ಬಿ ಶೆಟ್ಟಿ ಮಾತನಾಡಿದ್ದಾರೆ.

ಕದ್ದು ಮುಚ್ಚಿ ಸಿಗರೇಟ್‌ ಸೇದಲು ಹೋಗಿ ಜನರಿಗೆ ಸಿಕ್ಕಾಕೊಂಡ 'ಆದಿಪುರುಷ್‌' ನಟಿ ಕೃತಿ; ಪೋಸ್ಟ್ ವೈರಲ್!

ರೇಣುಕಾಸ್ವಾಮಿ ಪ್ರಕರಣ:

'ಆ ಘಟನೆ ಆಗಬಾರದಿತ್ತು ಆದರೆ ಆಗೋಗಿದೆ ಹೀಗಾಗಿ ಅದರ ಬಗ್ಗೆ ಮಾತನಾಡಿ ಏನೂ ಪ್ರಯೋಜನವಿಲ್ಲ. ಎಲ್ಲ ನಟರಲು ಮುಂದೆ ಒಂದು ಮುನ್ನೆಚ್ಚರಿಗೆ ಬೇಕು. ಸಾಮಾನ್ಯರಾಗಿ ನಾವು ಯಾವುದೇ ರೀತಿಯಲ್ಲಿ ಖಾನೂನನ್ನು ನಮ್ಮ ಕೈಗೆ ತೆಗೆದುಕೊಳ್ಳಲು ಆಗುವುದಿಲ್ಲ. ಆ ಕೇಸನ್ನು ಹ್ಯಾಂಡಲ್‌ ಮಾಡಿರುವ ರೀತಿ ತುಂಬಾ ಖುಷಿ ಆಯ್ತು. ಕೆಲವೊಮ್ಮೆ ತುಂಬಾ ಪವರ್‌ಫುಲ್ ವ್ಯಕ್ತಿಗಳಿಗೆ ಶಿಕ್ಷೆ ಆಗೋಲ್ಲ ಅನ್ನೋದು ಕಾನೂನಿಗೆ ಬಗ್ಗೆ ತಪ್ಪು ಕಲ್ಪನೆ ಜನರಿಗೆ ಇದೆ. ಸದ್ಯ ಆರೋಪಿಗಳ ಸ್ಥಾನದಲ್ಲಿ ಇದ್ದಾರೆ ಅಪರಾಧಿ ಅಂತ ಪರಿಗಣಿಸುತ್ತಾರಾ ಎಂದು ಮುಂದೆ ನೋಡೋಣ' ಎಂದು ರಾಜ್‌ ಬಿ ಶೆಟ್ಟಿ ಹೇಳಿದ್ದಾರೆ.

ಗಂಡು ಮಕ್ಕಳಾಗಿ ನಾವು ಛತ್ರಿ ಹಿಡಿಯಬೇಕು; ವಿಷ್ಣುವರ್ಧನ್ ಗೌರವ ಕೊಟ್ಟ ಘಟನೆ ಹಂಚಿಕೊಂಡ ಆಂಕರ್ ಅನುಶ್ರೀ, ನಟ ಅಭಿಜಿತ್!

ಒಂದು ಟ್ರೈಲರ್‌ ರಿಲೀಸ್‌ ಕಾರ್ಯಕ್ರಮದ ವೇದಿಕೆಯಲ್ಲಿ ದರ್ಶನ್‌ ಅವರು ನನಗೆ ಸಿಕ್ಕಿದ್ದು. ಆಗ ಒಂದು ಮೊಟ್ಟೆಯ ಕಥೆ ಅಷ್ಟೇ ಮಾಡಿದ್ದು ಆದರೆ ಅವರೇ ಕರೆದು ನೀವು ಆ ಸಿನಿಮಾ ಮಾಡಿದ್ದೀರಾ ಅಲ್ವಾ ನಾನು ಸಿನಿಮಾ ಬಗ್ಗೆ ಹೆಚ್ಚಾಗಿ ಕೇಳಿದ್ದೀನಿ ಅಂತ ಹೊಗಳಿದರು. ಹೊಗಳುವುದರಿಂದ ಅವರು ಏನೂ ಪಡೆದುಕೊಳ್ಳುವುದಿಲ್ಲ ಆದರೆ ಅವರಲ್ಲಿ ಸರಳತೆ ತೋರಿಸಿತ್ತು. ಜೈಲಿಗೆ ಹೋಗಿ ಭೇಟಿ ಮಾಡುವಷ್ಟು ಪರಿಚಯ ಇಲ್ಲ ಏಕೆಂದರೆ ನಾನು ಒಂದೇ ಸಲ ಭೇಟಿ ಮಾಡಿರುವುದು. ಒಂದು ಸಲ ಭೇಟಿ ಮಾಡಿದವರು ಜೈಲಿನಲ್ಲಿ ಇದ್ದಾಗ ನಾನು ಹೋಗಲ್ಲ ಅಲ್ವಾ? ನಾನು ಯಾಕೆ ಹೋಗಬೇಕು ಎಂದು ಗೊತ್ತಿಲ್ಲ' ಎಂದಿದ್ದಾರೆ ರಾಜ್.