ಪಕ್ಕದಲ್ಲೇ ಹೆಂಡತಿ ಇದ್ರೂ ಮಾಜಿ ಗರ್ಲ್‌ಫ್ರೆಂಡ್‌ನ ಪ್ರಗ್ನೆಂಟ್ ಮಾಡಿದ ಸುಶಾಂತ್; ಆರಾಧನಾ ಸಂಕಷ್ಟದಲ್ಲಿ!

ಮನೆ ಬಾಗಿಲಿಗೆ ಬಂದು ನಿಂತ ರೇಶ್ಮಾ. ಪ್ರೆಗ್ನೆಂಟ್ ಅನ್ನೋ ಸತ್ಯವನ್ನು ನಂಬುತ್ತಾಳಾ ಆರಾಧನಾ?
 

Colors Kannada Antarapata Aradhana is confused to believe Sushant made girlfriend pregnant vcs

ಸಾಮಾನ್ಯ ಹುಡುಗನಂತ ವಠಾರದಲ್ಲಿ ಜೀವನ ನಡೆಸಿ ಪಕ್ಕಾ ಮಿಡಲ್ ಕ್ಲಾಸ್ ಹುಡುಗಿಯನ್ನು ಇಷ್ಟ ಪಟ್ಟು ಮದುವೆ ಮಾಡಿಕೊಂಡ ಸಿರಿವಂತ ಹುಡುಗ ಸುಶಾಂತ್. ತಂದೆ ಹಾಕಿದ ಚಾಲೆಂಜ್‌ನಲ್ಲಿ ಗೆದ್ದು ಮನೆಗೆ ಬಂದ ಸುಶಾಂತ್ ಪ್ರೀತಿಸಿದ ಹುಡುಗಿಯನ್ನು ಕರೆದುಕೊಂಡು ಬರುತ್ತಾರೆ. ಮದುವೆಯಾಗಿ ಬಂದಿರುವ ಆರಾಧನಾನೇ ನಮ್ಮ ಸೊಸೆ ಅಂತ ಒಪ್ಪಿಕೊಂಡ ಮೇಲೆ ಸುಶಾಂತ್ ಮಾಜಿ ಗರ್ಲ್‌ಫ್ರೆಂಡ್ ಎಂಟ್ರಿ ಕೊಡುತ್ತಾರೆ. ಇದೇ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಂತರಪಟ ಧಾರಾವಾಹಿ ಪಡೆದಿತುವ ಬಿಗ್ ಟ್ವಿಸ್ಟ್‌. 

ಸುಶಾಂತ್ ಕಂಪನಿಯಲ್ಲಿ ಕೆಲಸ ಮಾಡಿಕೊಂಡು, ಸುಶಾಂತ್ ಅಕ್ಕ ಅಮಲಾ ಜೊತೆ ಕೈ ಜೋಡಿಸಿ ಸುಶಾಂತ್ ಸಂಸಾರ ಹೊಡೆಯಲು ಪ್ರಯತ್ನಿಸುವ ಮಾಜಿ ಗರ್ಲ್‌ಫ್ರೆಂಡ್ ರೇಶ್ಮಾ ಈಗ ಬಿಗ್ ಟ್ವಿಸ್ಟ್ ಕೊಟ್ಟಿದ್ದಾಳೆ. ಬರ್ತಡೇ ದಿನ ಸುಶಾಂತ್‌ಗೆ ಚೆನ್ನಾಗಿ ಕುಡಿಸಿ ಪರ್ಸನಲ್‌ ರೀತಿಯ ಫೋಟೋ ಕ್ಲಿಕ್ ಮಾಡಿಕೊಂಡು ಹಣ ಕೊಡುವಂತೆ ಬ್ಲಾಕ್ ಮೇಲ್ ಮಾಡುತ್ತಾಳೆ. ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಕೂಡ ಹಾಕುತ್ತಾಳೆ, ಇದಕ್ಕೆ ಹೆದರಿ ಸುಶಾಂತ್ ಸಹಾಯ ಮಾಡಲು ಮುಂದಾಗುತ್ತಾನೆ. ಆಗ 50 ಲಕ್ಷ ರೂಪಾಯಿಗಳ ಬೇಡಿಕೆ ಇಡುತ್ತಾಳೆ. ಇದಕ್ಕೆ ಹೆದರಿಕೊಂಡು ಮನೆಯಲ್ಲಿದ್ದ ಹಣವನ್ನು ಸುಶಾಂತ್ ತಮ್ಮ ಮಾಜಿ ಗರ್ಲ್‌ಫ್ರೆಂಡ್ ರೇಶ್ಮಾಗೆ ಕೊಡುತ್ತಾನೆ. 

ಪರಿಸ್ಥಿತಿ ಎಷ್ಟೇ ಕೆಟ್ಟದಾಗಿರಲಿ ಗಟ್ಟಿಯಾಗಿರು ಎಂದಿದ್ದಾಳೆ ಅಮ್ಮ; ಪವಿತ್ರ ಗೌಡ ಪುತ್ರಿ ಭಾವುಕ ಪೋಸ್ಟ್‌

ಇದೀಗ ರೇಶ್ಮಾ ಹಣದ ಬ್ಯಾಗ್‌ ಹಿಡಿದುಕೊಂಡು ಸುಶಾಂತ್ ಮನೆಗೆ ಬಂದು ನಾನು ಪ್ರೆಗ್ನೆಂಟ್ ಆಗಿದ್ದೀನಿ ನನ್ನ ಹೊಟ್ಟೆಯಲ್ಲಿ ಈ ವಂಶದ ಕುಡಿ ಇದೆ ಎಂದು ಹೇಳುತ್ತಾಳೆ. ಇದನ್ನು ಕೇಳಿ ಪತ್ನಿ ಆರಾಧನಾ ಗಾಬರಿ ಆಗುತ್ತಾಳೆ. ಸುಶಾಂತ್ ಈ ರೀತಿ ನಡೆದುಕೊಂಡಿರುವುದು ನಿಜವೇ? ರೇಶ್ಮಾ ಹೇಳಿರುವುದರಲ್ಲಿ ಯಾವುದು ಸತ್ಯ ಯಾವುದು ಸುಳ್ಳು? ಏನೂ ತಿಳಿಯದೆ ಸುಮ್ಮನೆ ನಿಂತುಬಿಡುತ್ತಾಳೆ. ಇದನ್ನು ಎಲ್ಲರೂ ನಂಬಿ ನನಗೆ ಮನೆಯಲ್ಲಿ ಜಾಗ ಕೊಡಬೇಕು ಇಲ್ಲವಾದರೆ ನಾನು ಕೋರ್ಟ್‌ ಅಂತ ಹೋಗಿ ಈ ಮನೆ ಮಾನ ವರ್ಯಾದೆ ತೆಗೆಯಬೇಕಾಗುತ್ತದೆ ಎಂದು ರೇಶ್ಮಾ ಬೆದರಿಕೆ ಹಾಕುತ್ತಾರೆ. 

ಸರಳತೆಯ ಸುಂದರಿ, ಅಪ್ಪು ಮನಗೆದ್ದ ಅರಗಿಣಿ; ಅಶ್ವಿನಿ ಪುನೀತ್ ರಾಜ್‌ಕುಮಾರ್ ಫೋಟೋ ವೈರಲ್!

ಈ ಘಟನೆ ನಡೆಯುತ್ತಿರುವಾಗ ಆರಾಧನಾ ತಾಯಿ ಮತ್ತು ಎರಡನೇ ತಂದೆ ಆಗಮಿಸುತ್ತಾರೆ. ಮಗಳಿಗೆ ಆಗುತ್ತಿರುವ ಅನ್ಯಾಯ ನೋಡಿ ಈ ಕೂಡಲೇ ಮನೆಯಿಂದ ಹೊರ ನಡೆಯುವಂತೆ ಪೋಷಕರು ಒತ್ತಾಯಿಸುತ್ತಾರೆ. ಇಲ್ಲಿ ರೇಶ್ಮಾ ಹೇಳುತ್ತಿರುವುದು ಎಷ್ಟು ಸತ್ಯ? ಮನೆಯವರಿಗೆ ಸುಶಾಂತ್ ಮೇಲೆ ಇರುವ ನಂಬಿಕೆ ಹೋಗುತ್ತಾ? ಪ್ರತಿಯೊಂದನ್ನು ಮುಂದಿನ ದಿನಗಳಲ್ಲಿ ನೋಡಬೇಕಿದೆ...

 

Latest Videos
Follow Us:
Download App:
  • android
  • ios