ನಟ ಕಮಲ್ ಹಾಸನ್ ಜೊತೆ ಫೋಟೋ ಹಂಚಿಕೊಂಡ 'ರಾಜಾ ರಾಣಿ' ಖ್ಯಾತಿಯ ಮುರುಗಾನಂದ. ಮುರುಗಾಗೆ ಒಬ್ರಾ, ಇಬ್ರಾ ಫ್ಯಾನ್ಸ್?

ಕಿರುತೆರೆ ಹಾಗೂ ಸಿನಿಮಾ ಕ್ಷೇತ್ರದಲ್ಲಿ ಬೆಸ್ಟ್ ಕೊರಿಯೋಗ್ರಾಫರ್ ಆಗಿ ಗುರುತಿಸಿಕೊಂಡಿರುವ ಮುರುಗಾನಂದ ನಟಿ ಇಷಿತಾ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರ, ಇದೇ ಮೊದಲ ಬಾರಿಗೆ ಕಿರುತೆರೆ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅನ್‌ಸ್ಕ್ರೀನ್ ಕಾಣಿಸಿಕೊಳ್ಳುತ್ತಿದ್ದಂತೆ ಮುರುಗಾ ಅವರಿಗೆ ಜನಪ್ರಿಯತೆ ಹೆಚ್ಚುತ್ತಿದೆ. 

ಇದೀಗ ಬಹುಭಾಷಾ ನಟ ಕಮಲ್ ಹಾಸನ್ ಜೊತೆ ಕೆಲಸ ಮಾಡುವುದಕ್ಕೆ ಅವರಿಗೆ ಅವಕಾಶ ಸಿಕ್ಕಿದೆ, ಎಂದು ಸ್ವತಃ ಮುರುಗಾ ಅವರು ಬರೆದು ಕೊಂಡಿದ್ದಾರೆ. ಕಮಲ್ ಪಕ್ಕದಲ್ಲಿ ನಿಂತಿರುವ ಫೋಟೋ ಹಂಚಿಕೊಂಡು 'ವಿಕ್ರಂ ಸಿನಿಮಾಗೋಸ್ಕರ ಕಮಲ್ ಹಾಸನ್ ಅವರ ಜೊತೆ ಕೆಲಸ ಮಾಡುತ್ತಿದ್ದೀನಿ. ತುಂಬಾ ಖುಷಿ, ಉತ್ಸುಕತೆ ಇದೆ,' ಎಂದು ಬರೆದುಕೊಂಡಿದ್ದಾರೆ. ಕಿರುತೆರೆ ನಟಿಯರು ಹಾಗೂ ಅಭಿಮಾನಿಗಳು ಕಾಮೆಂಟ್‌ನಲ್ಲಿ ಶುಭ ಹಾರೈಸಿದ್ದಾರೆ.

ಮಕ್ಕಳಿಗೆ ಲಾಲಿ ಹಾಡು ಹಾಡಿದ ನಿವೇದಿತಾ-ಚಂದನ್; ಇಶಿತಾ ಯಾಕಮ್ಮ ಈ ಹಾಡು?

'ರಾಜಾ ರಾಣಿ' ಶೋ ಮೂಲಕ ವೀಕ್ಷಕರಿಗೆ ಹತ್ತಿರವಾಗುತ್ತಿರುವ ಮುರುಗಾನಂದ ಹಾಗೂ ಇಷಿತಾ ಅತಿ ಹೆಚ್ಚು ಮನೋರಂಜನೆ ನೀಡುತ್ತಿರುವ ಜೋಡಿಗಳಾಗಿದ್ದು, ಒಂದು ವಾರ ಬೆಸ್ಟ್ ರಾಜಾ ರಾಣಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಇವರಿಬ್ಬರು ಎಂಗೇಜ್‌ಮೆಂಟ್ ಮಾಡಿಕೊಂಡು ಎರಡು ವರ್ಷಗಳ ಆ್ಯನಿವರ್ಸರಿಯನ್ನೂ ಆಚರಿಸಿಕೊಂಡಿದ್ದಾರೆ. ರೊಮ್ಯಾಂಟಿಕ್ ಆಗಿರುವ ಫೋಟೋವೊಂದನ್ನು ಹಂಚಿ ಕೊಂಡಿದ್ದಾರೆ. ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರ ಇಷಿತಾ ಬಣ್ಣದ ಲೋಕದಿಂದ ಕೊಂಚ ಬ್ರೇಕ್ ತೆಗೆದುಕೊಂಡಿದ್ದರು. ರಿಯಾಲಿಟಿ ಶೋ ಮೂಲಕ ಕಮ್ ಬ್ಯಾಕ್ ಮಾಡಿದ್ದಾರೆ.

View post on Instagram