Asianet Suvarna News Asianet Suvarna News

ದರ್ಶನ್‌ ಏನಾದ್ರೂ ಸಿಎಂ ಆದ್ರೆ, ಹೆಣ್ಣುಮಕ್ಕಳ ಪರವಾಗಿ ನಿಲ್ಲುವ ವ್ಯಕ್ತಿ ಆಗ್ತಾರೆ: ಚಿತ್ರಾಲ್‌ ರಂಗಸ್ವಾಮಿ!

ರೇಣುಕಾಸ್ವಾಮಿ ನನಗೂ ಅಶ್ಲೀಲ ಮೆಸೇಜ್‌ ಮಾಡಿದ್ದ ಎಂದು ಹೇಳಿಕೆ ನೀಡುವ ಮೂಲಕ ಸುದ್ದಿಯಾಗಿದ್ದ ಪವರ್‌ ಗರ್ಲ್‌ ಚಿತ್ರಾಲ್‌ ರಂಗಸ್ವಾಮಿ, ದರ್ಶನ್‌ ಕುರಿತಾಗಿ ಮತ್ತೊಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.

Chitral Rangaswamy Talks About Darshan thoogudeepa as Chief Minister san
Author
First Published Jul 1, 2024, 7:18 PM IST

ಬೆಂಗಳೂರು (ಜು.1): ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದು ಮುದ್ದೆ ಮುರಿಯುತ್ತಿರುವ ನಟ ದರ್ಶನ್‌ ಪರವಾಗಿ ಅವರ ಅಭಿಮಾನಿಗಳು ಹಾಗೂ ಕಲಾವಿದರು ಬ್ಯಾಟ್‌  ಬೀಸುತ್ತಿದ್ದಾರೆ. ಸಾಕಷ್ಟು ಕಲಾವಿದರು ದರ್ಶನ್‌ ಅವರನ್ನು ಪರಪ್ಪನ ಅಗ್ರಹಾರದಲ್ಲಿ ಭೇಟಿ ಮಾಡಿ ಬಂದಿದ್ದಾರೆ. ಇಲ್ಲಿಯವರೆಗೂ ಪ್ರಕರಣದಲ್ಲಿ ಯಾವುದೇ ಹೇಳಿಕೆ ನೀಡದೇ ಇದ್ದ ದರ್ಶನ್‌ ಅವರ ತಾಯಿ ಮೀನಾ ತೂಗುದೀಪ, ತಮ್ಮ ದಿನಕರ್‌ ತೂಗುದೀಪ ಕೂಡ ಸೋಮವಾರ ಜೈಲಿನಲ್ಲಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಜುಲೈ 4ರತನಕ ದರ್ಶನ್‌ ಜೈಲಿನಲ್ಲಿಯೇ ಇರಲಿದ್ದು, ಆ ನಂತರವೇ ಅವರ ಜಾಮೀನು ಬಗ್ಗೆ ನಿರ್ಧಾರವಾಗಲಿದೆ. ಇದರ ನಡುವೆ ದರ್ಶನ್‌ರಿಂದ ಕೊಲೆಗೀಡಾದ ಎನ್ನಲಾಗುತ್ತಿರುವ ರೇಣುಕಾಸ್ವಾಮಿ ನನಗೂ ಅಶ್ಲೀಲ ಮೆಸೇಜ್‌ ಮಾಡಿದ್ದ ಎಂದು ಹೇಳಿಕೆ ನೀಡಿದ್ದ ಬಿಗ್‌ಬಾಸ್‌ ಖ್ಯಾತಿಯ ಚಿತ್ರಾಲ್‌ ರಂಗಸ್ವಾಮಿ ಸೋಮವಾರ ಮತ್ತೊಂದು ಹೇಳಿಕೆ ನೀಡಿದ್ದು, ದರ್ಶನ್‌ನಂಥ ವ್ಯಕ್ತಿಗಳು ರಾಜಕೀಯಕ್ಕೆ ಬರಬೇಕು ಎಂದು ಆಗ್ರಹಿಸಿದ್ದಾರೆ.

ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಚಿತ್ರಾಲ್‌ ರಂಗಸ್ವಾಮಿ, 'ನನಗೆ ಇನ್ನೊಂದು ಆಸೆ ಇದೆ. ಅದೇನೆಂದರೆ, ದರ್ಶನ್‌ ಅವರು ಕ್ಲೀನ್‌ ಆಗಿ ಬಂದ ಮೇಲೆ, ರಾಜಕೀಯಕ್ಕೆ ಹೋಗಿ ಸಿಎಂ ಏನಾದರೂ ಆದರೆ, ರೇಪ್‌ ಮಾಡೋರು, ಹೆಣ್ಣು ಮಕ್ಕಳ ಜೊತೆ ಕೆಟ್ಟದಾಗಿ ವರ್ತಿಸುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಅಂದುಕೊಳ್ಳುತ್ತೇನೆ. ನಾನೂ ಕೂಡ ದರ್ಶನ್‌ ಸಿಎಂ ಸ್ಥಾನದಲ್ಲಿ ಇರಬೇಕು ಎಂದು ಬಯಸುತ್ತೇನೆ. ಯಾಕೆಂದರೆ, ದರ್ಶನ್‌ ರೀತಿಯ ವ್ಯಕ್ತಿಗಳು ಅಂಥಾ ಒಂದು ಪ್ಲೇಸ್‌ಅಲ್ಲಿ ಇದ್ರೆ ಒಳ್ಳೆದು..' ಎಂದು ಹೇಳಿದ್ದಾರೆ.

ಮೂಲತಃ ಬಾಡಿ ಬಿಲ್ಡರ್‌ ಆಗಿರುವ ಚಿತ್ರಾಲ್‌ ರಂಗಸ್ವಾಮಿ ಕಳೆದ ಬಿಗ್‌ಬಾಸ್‌ ಕಾರ್ಯಕ್ರಮದ ಮೂಲಕ ಫೇಮಸ್‌ ಆಗಿದ್ದರು. ಬಿಗ್‌ಬಾಸ್‌ಗೆ  ಹೋಗುವ ವೇದಿಕೆಯವರೆಗೂ ಏರಿದ್ದ ಚಿತ್ರಾಲ್‌ ಬಳಿಕ ವೋಟಿಂಗ್‌ನಲ್ಲಿ ಹಿನ್ನಡೆ ಪಡೆದು ವಾಪಾಸ್‌ ಆಗಿದ್ದರು. ಅದಾದ ಬಳಿಕ ಕಲರ್ಸ್ ಕನ್ನಡ ಹಾಗೂ ಕಿಚ್ಚ ಸುದೀಪ್‌ ವಿರುದ್ಧ ತಮ್ಮ ಬೇಸರ ಹೊರಹಾಕಿದ್ದರು. ತಮ್ಮ ನೇರಾ ನೇರ ಮಾತುಗಳಿಗೆ ಅವರು ಹೆಸರುವಾಸಿಯಾಗಿದ್ದಾರೆ.

ಕೆಲ ದಿನಗಳ ಹಿಂದೆ ಸೋಶಿಯಲ್‌ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿದ್ದ ಚಿತ್ರಾಲ್‌, "ಎಲ್ಲರಿಗೂ ನಮಸ್ಕಾರ. ಸದ್ಯ ಯಾವ ವಿಚಾರ ಚರ್ಚೆಯಲ್ಲಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಎಲ್ಲರಿಗೂ ಬೇಸರವಾಗಿದೆ. ನಾನು ಯಾರಿಗೂ ಸಪೋರ್ಟ್ ಮಾಡಲು ಬಂದಿಲ್ಲ. ಆ ದೇವರು ರೇಣುಕಾಸ್ವಾಮಿ ಕುಟುಂಬಕ್ಕೆ ಧೈರ್ಯ ಕೊಡಲಿ. ಆದರೆ ರೇಣುಕಾಸ್ವಾಮಿಯವರು ಇದಕ್ಕೂ ಮುನ್ನ ಇದೇ ರೀತಿ ಕೆಲವರಿಗೆ ಕೆಟ್ಟ ಮೆಸೇಜ್ ಕಳುಹಿಸಿದ್ದರು. ಮಾರ್ಚ್‌ನಲ್ಲಿ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತತ್ತು. ಗೌತಮ್_ಕೆಎಸ್‌_1990 ಎನ್ನುವ ಹೆಸರಿನಲ್ಲಿ ರೇಣುಕಾಸ್ವಾಮಿ ಅವರದ್ದು ಒಂದು ಫೇಕ್ ಅಕೌಂಟ್ ಇತ್ತು ಎಂದು ನಾನು ಒಂದು ನ್ಯೂಸ್‌ನಲ್ಲಿ ನೋಡ್ದೆ. ಈ ಅಕೌಂಟ್ ಇಂದ ಅದೇ ರೀತಿಯ ಕೆಟ್ಟ ಮೆಸೇಜ್‌ಗಳನ್ನು ಇನ್ನು ಸಾಕಷ್ಟು ಜನರಿಗೆ ಕಳುಹಿಸಿದ್ದರಂತೆ. ನನಗೆ ಅಚ್ಚರಿ ಆಯಿತು. ನಾನು ಅದರ ಸ್ಕ್ರೀನ್‌ ಶಾಟ್ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡರೆ ತಪ್ಪಾಗುತ್ತದೆ. ಹಾಗಾಗಿ ಹಾಕಲಿಲ್ಲ" ಎಂದು ಅವರು ಹೇಳಿದ್ದರು.

ಆನ್‌ಲೈನ್ ರೇಪ್, ಎಲ್ಲಿಂದಲೋ ಮಾಡುವ ಮಾನಸಿಕ ಹಿಂಸೆ ಅಂದ್ರೇನೇ ಅಶ್ಲೀಲ ಮೆಸೇಜ್; ನಟಿ ಚಿತ್ರಾಲ್!

"ನನಗೆ ಆ ರೀತಿ ಮರ್ಮಾಂಗದ ಚಿತ್ರ ಆಗಲಿ, ಬೆತ್ತಲೆ ಫೋಟೊ ಆಗಲಿ ಅಥವಾ ಹಸ್ತ ಮೈಥುನ ವೀಡಿಯೋ ಆಗಲಿ ಬಂದರೆ ನಾನು ಕೂಡಲೇ ಆ ಅಕೌಂಟ್ ಬ್ಲಾಕ್ ಮಾಡ್ತೀನಿ. ನನಗೆ ಈ ಅಕೌಂಟ್ ನೋಡಿದಾಗ ಎಲ್ಲೋ ಈ ಅಕೌಂಟ್ ನೋಡಿದ್ದೀನಲ್ಲ ಎನಿಸಿತು. ನನ್ನ ಇನ್‌ಸ್ಟಾಗ್ರಾಮ್ ಬ್ಲಾಕ್ ಲಿಸ್ಟ್ ಅಲ್ಲಿ ನೋಡಿದಾಗ ಈ ಅಕೌಂಟ್ ಇದೆ" ಎಂದು ಚಿತ್ರಾಲ್ ತಮ್ಮ ಇನ್‌ಸ್ಟಾ ಅಕೌಂಟ್ ಬ್ಲಾಕ್ ಲಿಸ್ಟ್ ಸ್ಟ್ರೀನ್ ಶಾಟ್‌ಅನ್ನೂ ಅವರು ಹಂಚಿಕೊಂಡಿದ್ದರು.

ಬೆತ್ತಲೆ ಮತ್ತು ಹಸ್ತಮೈಥುನ ವಿಡಿಯೋ ನೋಡಿ ಶಾಕ್; ರೇಣುಕಾಸ್ವಾಮಿ ಅಕೌಂಟ್ ಬ್ಲಾಕ್ ಮಾಡಿದ್ದ ನಟಿ ಚಿತ್ರಾಲ್

 

Latest Videos
Follow Us:
Download App:
  • android
  • ios