Asianet Suvarna News Asianet Suvarna News

ಆನ್‌ಲೈನ್ ರೇಪ್, ಎಲ್ಲಿಂದಲೋ ಮಾಡುವ ಮಾನಸಿಕ ಹಿಂಸೆ ಅಂದ್ರೇನೇ ಅಶ್ಲೀಲ ಮೆಸೇಜ್; ನಟಿ ಚಿತ್ರಾಲ್!

'ಪ್ರತಿದಿನ ಹಲವರಿಗೆ ಈ ರೀತಿಯ ಮೆಸೇಜ್‌ಗಳು ಬರುತ್ತಲೇ ಇರುತ್ತವೆ. ಅವುಗಳನ್ನು ನೋಡಿ ಅಸಹ್ಯವಾಗುತ್ತದೆ. ಐಡಿಯನ್ನು ಬ್ಲಾಕ್ ಮಾಡಿದರೆ ಮತ್ತೊಂದು ಐಡಿಯಿಂದ ಕಳುಹಿಸುತ್ತಾರೆ. ಅಂಥ ಮೆಸೇಜ್‌ಗಳನ್ನು ನೋಡಿದರೆ..

Renukaswamy sent obscene messages even to me says small screen actress Chitral Rangaswamy srb
Author
First Published Jun 24, 2024, 5:43 PM IST

ಸೋಷಿಯಲ್ ಮೀಡಿಯಾದಲ್ಲಿ ಅಶ್ಲೀಲ ಮೆಸೇಜ್ ಕಳುಹಿಸಿದ್ದ ಕಾರಣಕ್ಕೆ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ (Renukaswamy) ಬೆಂಗಳೂರಿನಲ್ಲಿ ಕೊಲೆಯಾಗಿ ಹೋಗಿದ್ದು ಗೊತ್ತೇ ಇದೆ. ನಟಿ ಹಾಗೂ ದರ್ಶನ್ ಗೆಳತಿ ಪವಿತ್ರಾ ಗೌಡಗೆ ಅಶ್ಲೀಲ ಕಾಮೆಂಟ್ ಮಾಡುತ್ತಿದ್ದ ಮತ್ತು ಪ್ರೈವೇಟ್‌ ಪಾರ್ಟ್‌ ಫೋಟೋ ಕಳಿಹಿಸುತ್ತಿದ್ದ ಎಂಬ ಕಾರಣಕ್ಕೇ ಆತನನ್ನು ಆತನನ್ನು ಬೆಂಗಳೂರಿಗೆ ಕರೆಸಿ, ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಈಗ ನಟ ದರ್ಶನ್ ಸೇರಿದಂತೆ 17 ಮಂದಿ ಆರೋಪಿಗಳು ಅರೆಸ್ಟ್ ಆಗಿ, ಜೈಲಿಗೆ ಹೋಗಿದ್ದಾರೆ. ಈ ಘಟನೆ ಇಡೀ ಕರ್ನಾಟಕ ಸೇರಿದಂತೆ ದೇಶಾದ್ಯಂತ ಸುದ್ದಿಯಾಗಿದೆ. 

ಇದೀಗ ಈ ಬಗ್ಗೆ ಕಿರುತೆರೆ ನಟಿ ಚಿತ್ರಾಲ್ (Chitral Rangaswamy) 'ಅದೇ ರೇಣುಕಾ ಸ್ವಾಮಿ ಕ್ರಿಯೆಟ್ ಮಾಡಿದ್ದ ಫೇಕ್ ಅಕೌಂಟ್‌ಗಳಿಂದ ನನಗೂ ಅಶ್ಲೀಲ ಮೆಸೇಜ್ ಬಂದಿತ್ತು' ಎಂದಿದ್ದಾರೆ. ಜೊತೆಗೆ, ಕಿರುತೆರೆ ನಟಿ ಚಿತ್ರಾಲ್ ಜನರನ್ನು ಎಚ್ಚರಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ. 'ಪತ್ರಿಕೆಯೊಂದರ ಸುದ್ದಿಯಲ್ಲಿ ರೇಣುಕಾಸ್ವಾಮಿ ಅಶ್ಲೀಲ ಮೆಸೇಜ್ ಕಳುಹಿಸುತ್ತಿದ್ದ ಸೋಷಿಯಲ್ ಮೀಡಿಯಾ ಅಕೌಂಟ್‌ goutham_ks_1990 ಎಂಬುದು ನನಗೆ ತಿಳಿಯಿತು. ನನಗೂ ಇದೇ ಐಡಿಯಿಂದ ಮೆಸೇಜ್ ಬಂದಿತ್ತು ಎಂದು ನೆನಪಾಯಿತು. 

ಯಾವುದೋ ಒಂದು ಶಕ್ತಿ ನಮ್ಮನ್ನ ಕಾಪಾಡುತ್ತೆ ಅನ್ನೋದು ನನ್ ನಂಬಿಕೆ; ಡಾಲಿ ಧನಂಜಯ್

ತಕ್ಷಣ ನಾನು ನಾನು ನನ್ನ ಬ್ಲಾಕ್‌ ಲಿಸ್ಟ್ ನೋಡಿದಾಗ ಅದರಲ್ಲಿ ಈ ಅಕೌಂಟ್ ಐಡಿ ಕಂಡುಬಂತು. 'ನನಗೆ ಯಾರೇ ಆದರೂ ಅಶ್ಲೀಲವಾದ ಮೆಸೇಜ್‌, ಫೋಟೋಗಳನ್ನು ಕಳುಹಿಸಿದರೆ, ಮಾಸ್ಟರ್‌ಬ್ಯಾಶ್ ಅಥವಾ ಗುಪ್ತಾಂಗದ ವೀಡಿಯೋ ಕಳುಹಿಸಿದರೆ ನಾನು ಅಂಥ ಅಕೌಂಟ್‌ಗಳನ್ನು ಬ್ಲಾಕ್ ಮಾಡುತ್ತೇನೆ. ಅದರಂತೆ ನಾನು goutham_ks_1990 ಈ ಐಡಿಯಿಂದ ನನಗೆ ಅಶ್ಲೀಲ ಮೆಸೇಜ್ ಬಂದಿದ್ದಕ್ಕೇ ಬ್ಲಾಕ್ ಮಾಡಿರುತ್ತೇನೆ. ಅದನ್ನು ನೋಡಿ ನನಗೆ ನಿಜವಾಗಿಯೂ ಭಯ ಆಯ್ತು. ನಿಮ್ಮ ಬ್ಲಾಕ್ ಲಿಸ್ಟ್‌ನಲ್ಲಿ ಈ ಅಕೌಂಟ್ ಇದೆಯಾ ಎಂದು ನೀವು ಒಮ್ಮೆ ಚೆಕ್ ಮಾಡಿಕೊಳ್ಳಿ' ಎಂದಿದ್ದಾರೆ ನಟಿ ಚಿತ್ರಾಲ್ ರಂಗಸ್ವಾಮಿ.

ದರ್ಶನ್ ನಟನೆಯ 'ಇಂದ್ರ' ಚಿತ್ರಕ್ಕೆ ರಾತ್ರೋ ರಾತ್ರಿ ಹೀರೋಯಿನ್ ಬದಲಾಗಿದ್ದು ಯಾಕೆ?

ಸೋಷಿಯಲ್ ಮೀಡಿಯಾಗಳಲ್ಲಿ ಬರುವ ಕಾಮೆಂಟ್‌ಗಳ ಬಗ್ಗೆ ಮಾತನಾಡಿರುವ ನಟಿ ಚಿತ್ರಾಲ್ ಅವರು 'ಪ್ರತಿದಿನ ಹಲವರಿಗೆ ಈ ರೀತಿಯ ಮೆಸೇಜ್‌ಗಳು ಬರುತ್ತಲೇ ಇರುತ್ತವೆ. ಅವುಗಳನ್ನು ನೋಡಿ ಅಸಹ್ಯವಾಗುತ್ತದೆ. ಐಡಿಯನ್ನು ಬ್ಲಾಕ್ ಮಾಡಿದರೆ ಮತ್ತೊಂದು ಐಡಿಯಿಂದ ಕಳುಹಿಸುತ್ತಾರೆ. ಅಂಥ ಮೆಸೇಜ್‌ಗಳನ್ನು ನೋಡಿದರೆ ಮನಸ್ಸಿಗೆ ತುಂಬಾ ಬೇಸರವಾಗುತ್ತದೆ. ಅದು ಆನ್‌ಲೈನ್ ರೇಪ್! ಎಲ್ಲೋ ಕುಳಿತುಕೊಂಡು ಇನ್ನೊಬ್ಬರನ್ನು ಮಾನಸಿಕವಾಗಿ ರೇಪ್ ಮಾಡುವುದು ಅಂತಾನೇ ಹೇಳಬಹುದು. 

ಸಡನ್ನಾಗಿ ಹಾಗೆ ಬರೋಕಾಗಲ್ಲ, ಅಲ್ಲಿ ಬಂದು ನಾನು ಏನ್ ಮಾಡೋದು ಅಂದೆ; ಅಶ್ವಿನಿ ಪುನೀತ್ ರಾಜ್‌ಕುಮಾರ್

ನಿಮ್ಮ ಅಕೌಂಟನ್ನ ಪ್ರೈವೇಟ್ ಇಟ್ಕೊಂಡಿರ್ತೀರಾ, ಝೀರೋ ಪೋಸ್ಟ್‌ಗಳನ್ನು ಮಾಡ್ತೀರಾ, ನಿಮ್ಮನ್ನ ಒಂದು ಕಾಮೆಂಟ್‌ನಲ್ಲೂ ಮೆನ್ಷನ್ ಮಾಡೋಕಾಗಲ್ಲ. ನೀವು ಬಂದು ಅವ್ರ ಪರ್ಸನಲ್ ಲೈಫ್‌ ಬಗ್ಗೆ ಪಬ್ಲಿಕ್‌ನಲ್ಲಿ ಮಾತಾಡ್ತೀರ. ಅದು ನಿಮ್ಗೆ ಮೆಚ್ಯೂರಿಟಿ ಅನ್ಸುತ್ತಾ? ಯಾರದ್ದೋ ಪರ್ಸನಲ್ ವಿಷ್ಯಗಳನ್ನು ತಿಳ್ಕೊಂಡು ಅಥವಾ ಊಹಿಸಿಕೊಂಡು ಯಾರದ್ದೋ ಪೋಸ್ಟ್‌ಗೆ ಹೋಗಿ ಪಬ್ಲಿಕ್‌ಗೆ ಗೊತ್ತಾಗೋ ತರ ಕಾಮೆಂಟ್ ಮಾಡ್ತೀರಾ. ಅದೇ ಕೆಲ್ಸ ನಿಮ್ ವಿಷ್ಯದಲ್ಲಿ ಯಾರಾದ್ರೂ ಮಾಡಿದ್ರೆ ನಿಮ್ಗೆ ಸರಿ ಅನ್ಸುತ್ತಾ' ಎಂದಿದ್ದಾರೆ ನಟಿ ಚಿತ್ರಾಲ್. 

ಅಪ್ಪು ಸಾವಿನ ಹಿಂದಿನ ರಾತ್ರಿ, ರಮೇಶ್ ಅರವಿಂದ್ ಜೊತೆಗಿನ ಚರ್ಚೆಯಲ್ಲಿ ಬುದ್ಧ ಬಂದಿದ್ದು ಯಾಕೆ?

Latest Videos
Follow Us:
Download App:
  • android
  • ios