Asianet Suvarna News Asianet Suvarna News

ಬೆತ್ತಲೆ ಮತ್ತು ಹಸ್ತಮೈಥುನ ವಿಡಿಯೋ ನೋಡಿ ಶಾಕ್; ರೇಣುಕಾಸ್ವಾಮಿ ಅಕೌಂಟ್ ಬ್ಲಾಕ್ ಮಾಡಿದ್ದ ನಟಿ ಚಿತ್ರಾಲ್

ರೇಣುಕಾಸ್ವಾಮಿ ಅಕೌಂಟ್‌ನ ಬ್ಲಾಕ್ ಮಾಡಿದ ಚಿತ್ರಾಲ್. ಆ ವ್ಯಕ್ತಿಯಿಂದ ಯಾರಿಗೆಲ್ಲಾ ಮೆಸೇಜ್ ಬಂದಿದೆ ಚೆಕ್ ಮಾಡಿಕೊಳ್ಳಿ ಎಂದ ನಟಿ....

Actress Chitral Rangaswamy talks obscene message from chitradurga Renukaswamy vcs
Author
First Published Jun 24, 2024, 11:09 AM IST

ನಟಿ ಪವಿತ್ರಾ ಗೌಡಗೆ ಪದೇ ಪದೇ ಅಶ್ಲೀಲ ಪೋಟೋ ಮತ್ತು ವಿಡಿಯೋ ಕಳುಹಿಸುತ್ತಿದ್ದ ಆರೋಪದ ಹಿನ್ನಲೆಯಲ್ಲಿ ರೇಣುಕಾಸ್ವಾಮಿಯನ್ನು ಕೊಲೆ ಮಾಡಲಾಗಿದೆ. ಈ ಪ್ರಕರಣದಲ್ಲಿ ಸುಮಾರು 17 ಮಂದಿ ಅರೆಸ್ಟ್‌ ಮಾಡಲಾಗಿದೆ. ಫೇಕ್‌ ಅಕೌಂಟ್‌ಗಳ ಮೂಲಕ ಮೆಸೇಜ್‌ ಕಳುಹಿಸುತ್ತಿದ್ದ ಎಂದು ಮತ್ತೊಬ್ಬ ಕಿರುತೆರೆ ನಟಿ ಚಿತ್ರಾಲ್ ರಂಗಸ್ವಾಮಿ ವಿಡಿಯೋ ಮಾಡಿದ್ದಾರೆ.

'ರೇಣುಕಾಸ್ವಾಮಿ ಕುಟುಂಬಕ್ಕೆ ದೇವರು ಆದಷ್ಟು ಶಕ್ತಿ ಕೊಡಲಿ. ಮಾರ್ಚ್‌ ತಿಂಗಳಿನಲ್ಲಿ ರೇಣುಕಾಸ್ವಾಮಿ ಎಂಬ ವ್ಯಕ್ತಿ ವಿರುದ್ಧ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು ಏಕೆಂದರೆ ಮೂರ್ನಾಲ್ಕು ಹೆಣ್ಣು ಮಕ್ಕಳಿಗೆ ಅದೇ ರೀತಿ ಮೆಸೇಜ್ ಮಾಡುತ್ತಿದ್ದಾನೆ ಎಂದು. ಆತನ ಖಾತೆಯ ಹೆಸರು ಗೌತಮ್ ಎಂದಿತ್ತು. ನನಗೆ ಶಿಶ್ನದ ಫೋಟೋ, ಹಸ್ತಮೈಥುನ ಮಾಡಿಕೊಳ್ಳುವ ಫೋಟೋ ಅಥವಾ ವಿಡಿಯೋ ಬಂದ್ರೆ ತಕ್ಷಣವೇ ಡಿಲೀಟ್ ಮಾಡುತ್ತೀನಿ. ಈ ಅಕೌಂಟ್ ಹೆಸರನ್ನು ನೋಡಿದಾಗ ಎಲ್ಲೋ ನೋಡಿದ್ದೀನಿ ಅಂತ ನೆನಪಾಗಿ ನನ್ನ ಬ್ಲಾಕ್‌ ಲಿಸ್ಟ್‌ ಓಪನ್ ಮಾಡಿ ನೋಡಿದಾಗ ರೇಣುಕಾಸ್ವಾಮಿ ಅಕೌಂಟ್ ಇದೆ' ಎಂದು ಚಿತ್ರಾಲ್ ಮಾತನಾಡಿರುವ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.

ತಪ್ಪು ಮಾಡಿಲ್ಲ ಅಂದ್ರೆ ದಾನಧರ್ಮ ಕಾಪಾಡುತ್ತೆ, ದರ್ಶನ್‌ಗೆ ಆಕೆ ವಿಜಯವೂ ಆಗಿ ಲಕ್ಷ್ಮಿಯೂ ಆಗಿದ್ರು: ಅನುಷಾ ರೈ

'ಇಷ್ಟು ದಿನ ನಾನು ಯಾಕೆ ಶೇರ್ ಮಾಡಿರಲಿಲ್ಲ ಅಂದ್ರೆ ಇದನ್ನು ನೋಡಿ ನನಗೆ ಶಾಕ್ ಆಗಿತ್ತು ಹಾಗೂ ಇದನ್ನು ಸ್ಟೋರಿಯಲ್ಲಿ ಶೇರ್ ಮಾಡಿ ರಿಪೋರ್ಟ್ ಮಾಡಿ ಎನ್ನಲು ಆಗಲ್ಲ ಏಕೆಂದರೆ ಇನ್‌ಸ್ಟಾಗ್ರಾಂ ಅನುಮತಿ ನೀಡುವುದಿಲ್ಲ. ಬೆತ್ತಲೆ ಫೋಟೋ ಕಳುಹಿಸುವುದು ಅಥವಾ ಟಾಪಿಕ್ ಡ್ರಾಗ್ ಮಾಡುವವರನ್ನು ನಾನು ಬ್ಲಾಕ್ ಮಾಡುತ್ತೀನಿ. ನಿಮ್ಮ ಬ್ಲಾಕ್‌ ಲಿಸ್ಟ್‌ನಲ್ಲಿ ಈ ವ್ಯಕ್ತಿ ಇದ್ರೆ ಚೆಕ್ ಮಾಡಿಕೊಳ್ಳಿ. ಮನೆಯಲ್ಲಿ ಅಷ್ಟು ಚೆನ್ನಾಗಿರುವ ಹೆಂಡತಿ ಇದ್ರು ಇವೆಲ್ಲಾ ಯಾಕೆ ಬೇಕ? ಸೋಷಿಯಲ್ ಮೀಡಿಯಾದಲ್ಲಿ ಇವೆಲ್ಲಾ ಕಾಮನ್ ಎಂದು ಅನೇಕರು ಅಂದುಕೊಳ್ಳುತ್ತಾರೆ ಆದರೆ ಆ ರೀತಿ ಮೆಸೇಜ್‌ಗಳನ್ನು ನೋಡಿದಾಗ ಥು ಅನಿಸುತ್ತದೆ. ಇಲ್ಲಿ ನಾನು ಯಾರಿಗೂ ಸಪೋರ್ಟ್ ಮಾಡುತ್ತಿಲ್ಲ  ಆ ವ್ಯಕ್ತಿಯಿಂದ ಸಮಸ್ಯೆ ಆಗಿದೆ ಅಂದ್ಮೇಲೆ ನಾನು ಬ್ಲಾಕ್ ಮಾಡುತ್ತಿರುವೆ. ಬೇರೆ ಬೇರೆ ಖಾತೆಗಳಿಂದ ಸಾಕಷ್ಟು ಮೆಸೇಜ್ ಬರುತ್ತಿದೆ ಅದನ್ನು ಗಮನಿಸುತ್ತಿರುವೆ ಅದು ಕೂಡ ಬ್ಲಾಕ್ ಮಾಡುವೆ. ನಾವು ಏನೇ ಮಾತನಾಡಿದರೂ ನನ್ನನ್ನು ಜಡ್ಜ್‌ ಮಾಡುತ್ತಾರೆ ಆದರೆ ಇದನ್ನು ತಿಳಿಸಲೇ ಬೇಕಿತ್ತು ಹೀಗಾಗಿ ಜನರಿಗೆ ತಿಳಿಸುತ್ತಿರುವೆ' ಎಂದು ಚಿತ್ರಾಲ್ ಹೇಳಿದ್ದಾರೆ.

Latest Videos
Follow Us:
Download App:
  • android
  • ios