ನಟಿ ಛಾಯಾ ಸಿಂಗ್ ಕನ್ನಡ ಮಾತ್ರವಲ್ಲ ತಮಿಳು ಕಿರುತೆರೆಯಲ್ಲೂ ಕೂಡ ಜನಪ್ರಿಯತೆ ಪಡೆದ ನಟಿ. ಇದೀಗ ಬೇರೆ ಬೇರೆ ಕಥೆಗಳನ್ನು ಹೊಂದಿರುವ ಕನ್ನಡದ ಸೀರಿಯಲ್ ಹಾಗೂ ತಮಿಳು ಸೀರಿಯಲ್ ಎರಡರಲ್ಲೂ ಸಹ ಛಾಯಾ ಸಿಂಗ್ ಒಂದೇ ರೀತಿಯ ದೃಶ್ಯದಲ್ಲಿ ನಟಿಸಿರುವುದು ವೈರಲ್ ಆಗಿದೆ.. 

ಧಾರಾವಾಹಿ, ಕಥೆ, ಭಾಷೆ ಎಲ್ಲವೂ ಬೇರೆ ಬೇರೆ ನಟಿ-ದೃಶ್ಯ ಒಂದೇ

ಕನ್ನಡ ಹಿರಿತೆರೆಯಲ್ಲಿ ಜಬರ್ ದಸ್ತ್ ಸಿನಿಮಾಗಳನ್ನ ನೀಡಿರುವ ನಟಿ ಛಾಯಾ ಸಿಂಗ್. ಹಿರಿತೆರೆಯಲ್ಲಿ ಮಿಂಚಿದ ಬಳಿಕ ಇದೀಗ ಕನ್ನಡ ಕಿರುತೆರೆಯಲ್ಲೂ ನಟಿ ತಮ್ಮ ಅಭಿನಯದ ಮೂಲಕ ಮೋಡಿ ಮಾಡುತ್ತಿದ್ದಾರೆ. ಕನ್ನಡ ಕಿರುತೆರೆ ಮಾತ್ರವಲ್ಲ ತಮಿಳು ಕಿರುತೆರೆಯಲ್ಲೂ ಕೂಡ ಛಾಯಾಸಿಂಗ್ ಜನಪ್ರಿಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ವೈರಲ್ ಆಗಿದೆ. ಎರಡು ಬೇರೆ ಬೇರೆ ಧಾರಾವಾಹಿ, ಕಥೆ ಕೂಡ ಬೇರೆ ಬೇರೆ. ಅಷ್ಟೇ ಅಲ್ಲ ಧಾರಾವಾಹಿ ಪ್ರಸಾರವಾಗುತ್ತಿರುವ ವಾಹಿನಿ ಕೂಡ ಬೇರೆ ಬೇರೆ. ಒಂದು ಕನ್ನಡ ಧಾರವಾಹಿ ಆದರೆ, ಮತ್ತೊಂದು ತಮಿಳು ಧಾರಾವಾಹಿ. ಆದರೆ ಕಾಕತಾಳಿಯ ಏನು ಎಂದರೆ ಎರಡು ಧಾರಾವಾಹಿಯಲ್ಲೂ ಛಾಯಾಸಿಂಗ್ ನಾಯಕಿಯಾಗಿ ನಟಿಸಿದ್ದಾರೆ. ಎರಡು ಧಾರಾವಾಹಿಯಲ್ಲೂ ಒಂದೇ ರೀತಿಯ ದೃಶ್ಯವು ಪುನರಾವರ್ತನೆಯಾಗಿದೆ. ಇದನ್ನು ನೋಡಿ ಜನ ಸೇಮ್ ಸೇಮ್ ಬಟ್ ಡಿಫರೆಂಟ್ ಎಂದು ಹೇಳುತ್ತಿದ್ದಾರೆ. ಆದರೆ ಎರಡು ಧಾರಾವಾಹಿಯನ್ನು ಸಹ ಕನ್ನಡ ಹಾಗೂ ತಮಿಳು ಕಿರುತರೆ ವೀಕ್ಷಕರು ತುಂಬಾನೇ ಇಷ್ಟಪಟ್ಟಿದ್ದಾರೆ.. ಈ ಎರಡು ದೃಶ್ಯಗಳು ಕನ್ನಡದ ಅಮೃತಧಾರೆ ಧಾರಾವಾಹಿ ಹಾಗೂ ತಮಿಳಿನ ಗಟ್ಟಿಮೇಳ ಧಾರವಾಹಿಯ ದೃಶ್ಯಗಳಾಗಿವೆ.

Add Asianetnews Kannada as a Preferred SourcegooglePreferred

ಅಮೃತಧಾರೆ ದಾರಾವಾಹಿ

ಅಮೃತಧಾರೆ ಧಾರವಾಹಿಯಲ್ಲಿ ಅತ್ತೆ ಶಾಕುಂತಲ ಮಾತನ್ನ ಕೇಳಿ ನನಗೆ ಮಗು ಆಗುವುದಿಲ್ಲ ಎನ್ನುವ ಕಾರಣಕ್ಕಾಗಿ ಭೂಮಿಕಾ ಗೌತಮ್ಗೆ ಇನ್ನೊಂದು ಮದುವೆ ಮಾಡಿಸಲು ಒಪ್ಪಿಕೊಂಡಿದ್ದಳು. ಅದಕ್ಕಾಗಿ ತಾನೇ ಖುದ್ದಾಗಿ ಹುಡುಗಿಯನ್ನು ಭೇಟಿಯಾಗಿ ಮಾತನಾಡಿ, ಗೌತಮ್ ಮದುವೆಗೆ ಒಪ್ಪುವಂತೆ ಮಾಡಿದ್ದಳು. ಮದುವೆ ದಿನ ಇನ್ನೇನು ಗೌತಮ್ ಇನ್ನೊಬ್ಬ ಮಹಿಳೆಗೆ ತಾಳಿ ಕಟ್ಟಬೇಕು ಎನ್ನುವಾಗ, ಭೂಮಿಕಾ ಕೂಡ ಗೌತಮ್ನನ್ನು ಕಳೆದುಕೊಳ್ಳುವ ದುಃಖದಲ್ಲಿ ಇದ್ದಾಗ, ಗೌತಮ್ ನೇರವಾಗಿ ಬಂದು ಭೂಮಿಕಾ ಕೊರಳಿಗೆ ತಾಳಿ ಕಟ್ಟುವ ಮೂಲಕ, ತಾನು ಯಾವತ್ತೂ ಭೂಮಿಕಾಳಿಂದ ದೂರ ಹೋಗಿ, ಬೇರೆ ಮದುವೆಯಾಗುವುದಿಲ್ಲ ಎನ್ನುವುದನ್ನು ತಿಳಿಸುತ್ತಾನೆ. ಈಗ ಅದೇ ರೀತಿ ದೃಶ್ಯ ತಮಿಳು ಧಾರಾವಾಹಿಯಲ್ಲೂ ಕೂಡ ಪ್ರಸಾರವಾಗಿದೆ ಆ ದಾರವಾಹಿಯನ್ನು ಕೂಡ ಭೂಮಿಕ ಅಂದರೆ ಛಾಯಾಸಿಂಗ್ ನಾಯಕಿಯಾಗಿ ನಟಿಸುತ್ತಿದ್ದಾರೆ.

ಗಟ್ಟಿಮೇಳ ಧಾರವಾಹಿ

ತಮಿಳಿನ ಜನಪ್ರಿಯ ಧಾರಾವಾಹಿ ಗಟ್ಟಿಮೇಳಂ ಇದು ಕನ್ನಡದ ಲಕ್ಷ್ಮಿ ನಿವಾಸ ಧಾರವಾಹಿಯ ರಿಮೇಕ್ ಆಗಿದೆ. ಈ ಧಾರಾವಾಹಿಯಲ್ಲಿ ಭಾವನಾ ಪಾತ್ರವನ್ನು ಛಾಯಾ ಸಿಂಗ್ ನಟಿಸುತ್ತಿದ್ದಾರೆ. ಸದ್ಯ ಅದರಲ್ಲಿನ ಕಥೆಯ ಪ್ರಕಾರ ಛಾಯಾ ಸಿಂಗ್ ಪತಿಗೆ ಬೇರೊಂದು ಮದುವೆಯನ್ನು ಮಾಡಲು ಮನೆ ಮಂದಿ ಸಿದ್ದತೆ ನಡೆಸುತ್ತಿರುತ್ತಾರೆ . ಮಂಟಪದಲ್ಲಿ ವಧು-ವರರು ಕೂಡ ಕುಳಿತಿರುತ್ತಾರೆ. ಗಟ್ಟಿಮೇಳ ಹಿನ್ನೆಲೆಯಲ್ಲಿ ಮೊಳಗುತ್ತಿರಲು ಇನ್ನೇನು ಮಾಂಗಲ್ಯ ಧಾರಣೆ ಆಗುತ್ತದೆ ಎನ್ನುವಾಗ ಛಾಯಾ ಸಿಂಗ್ ಗಂಡನ ಪಾತ್ರದಲ್ಲಿ ನಿರ್ವಹಿಸುತ್ತಿರುವ ವ್ಯಕ್ತಿ ತನ್ನ ಪಕ್ಕದಲ್ಲಿ ಕುಳಿತಿರುವ ವಧುವನ್ನು ಬಿಟ್ಟು, ಹಿಂಬದಿಯಲ್ಲಿರುವ ಛಾಯಾ ಸಿಂಗ್ ಗೆ ತಾಳಿಯನ್ನ ಕಟ್ಟುತ್ತಾನೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಈ ಎರಡು ದೃಶ್ಯಗಳನ್ನು ಒಟ್ಟಿಗೆ ಮಾಡಿ ಶೇರ್ ಮಾಡಲಾಗುತ್ತಿದೆ. ಈ ವಿಡಿಯೋ ಸದ್ಯ ವೈರಲ್ ಆಗಿದೆ. ಎರಡು ಧಾರವಾಹಿಯ ಕಥೆಗಳು, ಹಾಗೂ ಚಾನೆಲ್ ಗಳು ಸಹ ಬೇರೆ ಬೇರೆಯಾಗಿದ್ದರು. ಅದರಲ್ಲಿರುವ ದೃಶ್ಯ ಒಂದೇ ಆಗಿತ್ತು. ಛಾಯಾಸಿಂಗ್ ಎರಡರಲ್ಲೂ ಅದ್ಭುತವಾಗಿ ನಟಿಸಿದ್ದಾರೆ. ಸದ್ಯಕ್ಕಂತೂ ಕಿರುತೆರೆಯಲ್ಲಿ ಬ್ಯುಸಿಯಾಗಿರುವ ಛಾಯಾ ಸಿಂಗ್ ಎರಡು ಧಾರವಾಹಿಯಲ್ಲಿ ಕೂಡ ಅವರು ತಮ್ಮ ನಟನೆಯಿಂದ ಸೀರಿಯಲ್ ವೀಕ್ಷಕರೇ ಮನ ಗೆಲ್ಲುತ್ತಿದ್ದಾರೆ.

View post on Instagram