ವಿಲನ್‌ಗಳನ್ನು ರೋಡ್‌ನಲ್ಲಿ ಅಟ್ಟಿಸಿಕೊಂಡು ಹೋದ ಚಾರು; ರಾಮಾಚಾರಿ ಆತಂಕ ಡಬಲ್!
ರಸ್ತೆಗೆ ಬಂದ ಚಾರು-ರಾಮಾಚಾರಿ ಜೋಡಿಗೆ ಅಲ್ಲಿ ವ್ಹೀಲಿಂಗ್ ಮಾಡುತ್ತಿರುವ ಪುಂಡುಪೋಕರಿಗಳು ಕಾಣಿಸುತ್ತಾರೆ. ಚಾರುಗೆ ಚೋಕ್ ಕೊಡುವಂತೆ ಆಡುವ ಅವರಿಗೆ ಬುದ್ಧಿ ಕಲಿಸಲು ಚಾರು ನಿರ್ಧಾರ ಮಾಡಿ ರಾಮಾಚಾರಿ ಸಪೋರ್ಟ್ ಕೇಳುತ್ತಾಳೆ.
ಕಲರ್ಸ್ ಕನ್ನಡದ ರಾಮಾಚಾರಿ ಸೀರಿಯಲ್ ಸಾಕಷ್ಟು ಜನಪ್ರಿಯತೆ ಗಳಿಸಿದ್ದು ಗೊತ್ತೇ ಇದೆ. ಇದೀಗ, ಚಾರು ಮತ್ತು ರಾಮಾಚಾರಿ ಲೈಫಲ್ಲಿ ಹೊಸ ತಂಗಾಳಿ ಬೀಸತೊಡಗಿದೆ. ಚಾರು ಜೊತೆಜೊತೆಯಲ್ಲಿಯೇ ರಾಮಾಚಾರಿ ಇರತೊಡಗಿದ್ದಾನೆ. ಓಡಾಡತೊಡಗಿದ್ದಾನೆ. ಚಾರು ತನ್ನ ಗಂಡ ರಾಮಾಚಾರಿ ಬಾಳಲ್ಲಿ ಬಹಳಷ್ಟು ಬದಲಾವಣೆ ಕಾರಣವಾಗುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿವೆ. ರಾತ್ರಿ 9.00 ಗಂಟೆಗೆ ಪ್ರಸಾರವಾಗುತ್ತಿರುವ ರಾಮಾಚಾರಿ ಕತೂಹಲದ ಘಟ್ಟ ತಲುಪಿದೆ.
ರಾಮಾಚಾರಿಯನ್ನು ನಗರದ ಪ್ರತಿಷ್ಠಿತ ಜ್ಯವೆಲ್ಲರಿ ಶಾಪ್ ಒಂದಕ್ಕೆ ಕರೆದುಕೊಂಡು ಹೋಗಿರುವ ಚಾರು, ಅಲ್ಲಿ ಕಾಲುಂಗುರ ಖರೀದಿ ಮಾಡುತ್ತಾಳೆ. ಅದನ್ನು ರಾಮಾಚಾರಿಯೇ ತನ್ನ ಕಾಲಿಗೆ ತೊಡಿಸಬೇಕೆಂಬುದು ಚಾರು ಬಯಕೆ. ಅದನ್ನು ಕಣ್ಣಲ್ಲೇ ವ್ಯಕ್ತಪಡಿಸಿ ರಾಮಾಚಾರಿ ಕೈಗೆ ಕಾಲುಂಗುರ ಕೊಡುವ ಚಾರು, ಅದನ್ನು ರಾಮಾಚಾರಿ ತೊಡಿಸಲು ಒಪ್ಪಿ, ಕಾಲನ್ನು ಮುಂದುಮಾಡಲು ಹೇಳಿದಾಗ ತುಂಬಾ ಖುಷಿಯಾಗುತ್ತಾಳೆ. ರಾಮಾಚಾರಿ ತನ್ನ ತೊಡೆಯ ಮೇಲೆ ಅವಳ ನುಣುಪಾದ ಕಾಲನ್ನು ಇಡಿಸಿಕೊಂಡು ಕಾಲುಂಗುರ ತೊಡಿಸುವಾಗ ಚಾರು ಸಖತ್ ಖುಷಿ ಅನುಭವಿಸುತ್ತಾಳೆ.
ಬಿಗ್ಬಾಸ್ ಮನೆಯಲ್ಲೂ ಹಾರದ ಡ್ರೋನ್: ಪ್ರತಾಪನ ಅವಸ್ಥೆ ಕಂಡು ಅಯ್ಯೋ ಅಂತಿದ್ದಾರೆ ಫ್ಯಾನ್ಸ್!
ಅಲ್ಲಿಂದ ರಸ್ತೆಗೆ ಬಂದ ಚಾರು-ರಾಮಾಚಾರಿ ಜೋಡಿಗೆ ಅಲ್ಲಿ ವ್ಹೀಲಿಂಗ್ ಮಾಡುತ್ತಿರುವ ಪುಂಡುಪೋಕರಿಗಳು ಕಾಣಿಸುತ್ತಾರೆ. ಚಾರುಗೆ ಚೋಕ್ ಕೊಡುವಂತೆ ಆಡುವ ಅವರಿಗೆ ಬುದ್ಧಿ ಕಲಿಸಲು ಚಾರು ನಿರ್ಧಾರ ಮಾಡಿ ರಾಮಾಚಾರಿ ಸಪೋರ್ಟ್ ಕೇಳುತ್ತಾಳೆ. ಆದರೆ, ರಾಮಾಚಾರಿ ಅವೆಲ್ಲ ಬೇಡ ಎಂದು ಚಾರುಗೆ ಬುದ್ಧಿ ಹೇಳಲು, ಚಾರು ಅದಕ್ಕೊಪ್ಪದೇ ತಾನೇ ಗಾಡಿ ರೈಡ್ ಮಾಡಿಕೊಂಡು ಅವರನ್ನು ಫಾಲೋ ಮಾಡತೊಡಗುತ್ತಾಳೆ. ಒಂದು ಕಡೆ ಅವರ ಗಾಡಿಗೆ ಅಡ್ಡಹಾಕಿ ನಿಲ್ಲುವ ಚಾರು ಮುಂದೇನು ಮಾಡುತ್ತಾಳೆ. ಇಂದಿನ ಸಂಚಿಕೆಯಲ್ಲಿ ಮುಂದಿನ ಟ್ವಿಸ್ಟ್ ಹಾಗೂ ಕಥೆ ಕಂಟಿನ್ಯೂಟಿಗೆ ಉತ್ತರ ಸಿಗಲಿದೆ.
ಗೌರಿಶಂಕರ ಸೀರಿಯಲ್ ಮೂಲಕ ಮತ್ತೆ ಕಿರುತೆರೆಯಲ್ಲಿ ಮಿಂಚಲಿದ್ದಾರೆ ಕೌಸ್ತುಭ ಮಣಿ