ಈ ರಾಮಚಾರಿಗೆ ದೇವಸ್ಥಾನದಲ್ಲಿ 'ಹಗ್' ಮಾಡಬಾರದು ಅಂತ ಗೊತ್ತಿಲ್ವಾ, ನೆಟ್ಟಿಗರ ಕಾಮೆಂಟ್ ವೈರಲ್!
ರಾಮಾಚಾರಿ ಸೀರಿಯಲ್ ಇತ್ತೀಚೆಗೆ ಸಾಕಷ್ಟು ಹೊಸ ಹೊಸ ತಿರುವುಗಳನ್ನು ತೆಗೆದುಕೊಳ್ಳುತ್ತಿದೆ. ಈ ಮೊದಲು ಹೆಂಡತಿಯನ್ನು ಬಾಸ್‌ನಂತೆ ನೋಡುತ್ತಿದ್ದ ರಾಮಾಚಾರಿ, ಇತ್ತೀಚೆಗೆ ಪ್ರೇಮಿಸತೊಡಗಿದ್ದಾನೆ. ರಾಮಾಚಾರಿ ಮನೆಯಲ್ಲಿ ಕೂಡ ಚಾರು ಮೇಲೆ ಗೌರವ ಹೆಚ್ಚಾಗುತ್ತಿದೆ.
ಮಂಡಿಗಾಲಲ್ಲಿ ಮೆಟ್ಲು ಹತ್ತಿದ್ದು ಆಯ್ತು, ಕಷ್ಟಪಟ್ಟು ಉರುಳು ಸೇವೆ ಮಾಡಿದ್ದೂ ಆಯ್ತು, ನಿನ್ನ ಸೊಸೆ ಮಾವಂಗೆ ಅಂತ ಹೇಳಿಕೊಂಡಿದ್ದ ಹರಕೆ ತೀರಿಸಿದ್ದೂ ಆಯ್ತು ಎಂದು ರಾಮಾಚಾರಿ ತನ್ನ ತಾಯಿಗೆ ಹೇಳುತ್ತಾನೆ. ಅದನ್ನು ಕೇಳಿಸಿಕೊಂಡ ತಾಯಿ 'ಚಾರು ಹರಕೆ ಫಲಿಸಿಬಿಡ್ತು.. ಅವ್ಳ ಮಾವ ಹುಶಾರ್ ಆಗ್ತಾ ಇದಾರೆ' ಎಂದು ಆನಂದಭಾಷ್ಪ ಸುರಿಸುತ್ತ ಪೋನಿನಲ್ಲಿ ಹೇಳುತ್ತಾಳೆ. ತಾಯಿ ಮಾತನ್ನು ಕೇಳಿ ಖುಷಿಗೊಂಡ ರಾಮಾಚಾರಿ ಹಾಗೇ ವಿಷಯವನ್ನು ಚಾರುಗೆ ಹೇಳಲು ಆಕೆ ಕೂಡ ಸಂತೋಷಪಟ್ಟು ಮುಖದಲ್ಲಿ ಸಂತೋಷದ ನಗೆ ಬೀರುತ್ತಾಳೆ. ರಾಮಾಚಾರಿ ದೇವಸ್ಥಾನದ ಹೊರ ಆವರಣದಲ್ಲೇ ಚಾರುಗೆ ಹಗ್ ಮಾಡುತ್ತಾನೆ.
ಚಾರು ಹರಕೆಯನ್ನು ಕೆಡಿಸಲು ದೇವಸ್ಥಾನಕ್ಕೆ ಬಂದಿದ್ದ ರಾಮಾಚಾರಿ ಲವರ್, ಅತ್ತೆಯ ಮಗಳು ಇದನ್ನು ಕೇಳಿ ಶಾಕ್ ಆಗುತ್ತಾಳೆ. ಚಾರು ಹರಕೆ ಸಲ್ಲಿಸಿ, ಮಾವ ಏನಾದ್ರೂ ಹುಶಾರಾಗಿಬಿಟ್ಟರೆ ಮನೆಯಲ್ಲಿ ಚಾರೂ ಗೌರವ ಹೆಚ್ಚಾಗುತ್ತದೆ. ಆಗ ತನ್ನ ಬೇಳೆ ಅಲ್ಲಿ ಬೇಯುವುದಿಲ್ಲ ಎಂಬ ಆತಂಕದಲ್ಲಿದ್ದ ಆಕೆ, ಚಾರು ಮಂಡಿಗಾಲು ಸೇವೆ ಮತ್ತು ಉರುಳು ಸೇವೆಯನ್ನು ನಿಲ್ಲಿಸಲು ತೀವ್ರ ಪ್ರಯತ್ನ ಮಾಡಿದ್ದಾಳೆ. ಆದರೆ, ಒಳ್ಳೆಯವರಿಗೆ ಒಳ್ಳೆಯದೇ ಆಗುತ್ತದೆ ಎಂಬಂತೆ ಅದರಿಂದ ಚಾರುಗೆ ಯಾವುದೇ ಸಮಸ್ಯೆ ಆಗಲಿಲ್ಲ. ಆಕೆ ತನ್ನ ಹರಕೆ ತೀರಿಸಿದ್ದಾಳೆ, ಆಕೆ ಮಾವನ ಆರೋಗ್ಯ ಸುಧಾರಿಸತೊಡಗಿದೆ.
ರಾಮಾಚಾರಿ ಸೀರಿಯಲ್ ಇತ್ತೀಚೆಗೆ ಸಾಕಷ್ಟು ಹೊಸ ಹೊಸ ತಿರುವುಗಳನ್ನು ತೆಗೆದುಕೊಳ್ಳುತ್ತಿದೆ. ಈ ಮೊದಲು ಹೆಂಡತಿಯನ್ನು ಬಾಸ್‌ನಂತೆ ನೋಡುತ್ತಿದ್ದ ರಾಮಾಚಾರಿ, ಇತ್ತೀಚೆಗೆ ಪ್ರೇಮಿಸತೊಡಗಿದ್ದಾನೆ. ರಾಮಾಚಾರಿ ಮನೆಯಲ್ಲಿ ಕೂಡ ಚಾರು ಮೇಲೆ ಗೌರವ ಹೆಚ್ಚಾಗುತ್ತಿದೆ. ಜತೆಗೆ, ಚಾರು ಕೂಡ ಅಷ್ಟೇ, ತನ್ನ ಗಂಡ, ತನ್ನ ಮನೆ, ಅತ್ತೆ-ಮಾವ ಎಲ್ಲರ ಬಗ್ಗೆ ಮನಃಪೂರ್ವಕವಾಗಿ ಹೆಚ್ಚಿನ ಕಾಳಜಿ ತೋರಿಸುತ್ತಿದ್ದಾಳೆ. ಈ ಎಲ್ಲ ಅಂಶಗಳೂ ರಾಮಾಚಾರಿಯ ಮೇಲೆ ಕಣ್ಣಿಟ್ಟು ಕುಳಿತಿರುವ ಅತ್ತೆಯ ಮಗಳಿಗೆ ತೊಂದರೆಯಾಗಿ ಪರಿಣಮಿಸುತ್ತಿದೆ. ಪ್ರೋಮೋ ಮೂಲಕ ತೀವ್ರ ಕುತೂಹಲವನ್ನಂತೂ ಕೆರಳಿಸುತ್ತಿದೆ ರಾಮಾಚಾರಿ ಸೀರಿಯಲ್.
ಅವ್ಳನ್ನ ಮನಸ್ಸಲ್ಲಿ ಇಟ್ಕೊಂಡು ನಿನ್ನನ್ನ ಮದ್ವೆಯಾಗೋ ಒತ್ತಡವಿತ್ತು; ವೈಷ್ಣವ್ ಮಾತಿಗೆ ಮೌನವಾದಳೇ ಮಹಾಲಕ್ಷ್ಮೀ!
ಸೋಮವಾರದಿಂದ ಶುಕ್ರವಾರ ರಾತ್ರಿ 9.00ಕ್ಕೆ ಪ್ರಸಾರವಾಗುತ್ತಿರುವ ರಾಮಾಚಾರಿ ಸೀರಿಯಲ್‌ನ ರಾಮಾಚಾರಿ-ಚಾರು ಜೋಡಿ ಹಲವರ ಫೇವರೆಟ್ ಜೋಡಿ. ಅವರಿಗಾಗಿಯೇ ಧಾರಾವಾಹಿಗೆ ಕಾದು ಕುಳಿತುಕೊಳ್ಳುವ ಅಭಿಮಾನಿ ವರ್ಗವೂ ಅವರಿಗಿದೆ ಎಂಬುದು ಸೀಕ್ರೆಟ್ ಆಗಿ ಉಳಿದಿಲ್ಲ. ರಾಮಾಚಾರಿ ಸೀರಿಯಲ್‌ನಲ್ಲಿ ಏನಾಗುತ್ತಿದೆ ಎಂದು ತಿಳಿಯಲು ಸಂಚಿಕೆ ನೋಡಬೇಕು ಅಷ್ಟೇ.
ಸಂಗೀತಾ ಶೃಂಗೇರಿ ನಟಿಯಾಗುವ ಮೊದಲಿನ ರಹಸ್ಯ ರಿವೀಲ್; ಈಕೆ ಶಾರದಾಂಬೆ ಸನ್ನಿಧಿಯ ಕುವರಿ!