Asianet Suvarna News Asianet Suvarna News

ಹೋದಲ್ಲಿ ಬಂದಲ್ಲಿ ಹೀಯಾಳಿಸುತ್ತಿದ್ದೋರೆ ಈಗ ನನ್ನನ್ನು ಮಾತನಾಡಿಸಲು 2-3 ಗಂಟೆ ಕಾಯ್ತಾರೆ: ಆ ದಿನಗಳ ನೆನೆದು ವರ್ತೂರು ಭಾವುಕ

ಬಿಗ್​ಬಾಸ್​ನಿಂದ ಬಂದ ಮೇಲೆ ವರ್ತೂರು ಸಂತೋಷ್​ ಜೀವನದಲ್ಲಿ ಆಗಿರುವ ಬದಲಾವಣೆ ಏನು? ಅವರ ಜೀವನದಲ್ಲಿ ಅಮ್ಮ ಎಷ್ಟು ಮುಖ್ಯ? ಅವರೇ ಹೇಳಿದ್ದಾರೆ ಕೇಳಿ..
 

changed in Santhoshs life after coming from Bigg Boss  Varthur opens up about this suc
Author
First Published Feb 25, 2024, 6:06 PM IST

ಬಿಗ್​ಬಾಸ್​ ಮನೆಯಲ್ಲಿ ತುಂಬಾ ಹೆಸರು ಮಾಡಿದ್ದ ಸ್ಪರ್ಧಿಗಳ ಪೈಕಿ ವರ್ತೂರು ಸಂತೋಷ್​ ಕೂಡ ಒಬ್ಬರು. ಹಲವು ವರ್ಷಗಳ ಹಿಂದೆ ಅಪ್ಪನನ್ನು ಕಳೆದುಕೊಂಡಿರುವ ಸಂತೋಷ್​ ಅವರಿಗೆ ಅಮ್ಮನೇ ಎಲ್ಲಾ. ಕಲರ್ಸ್​ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ನನ್ನಮ್ಮ ಸೂಪರ್​ಸ್ಟಾರ್​ನಲ್ಲಿ ತಮ್ಮ ಜೀವನದ ಕೆಲವೊಂದು ಘಟನೆಗಳನ್ನು ಮೆಲುಕು ಹಾಕಿರುವ ಸಂತೋಷ್​, ಅಮ್ಮನ ತ್ಯಾಗ ನೆನೆದು ಕಣ್ಣೀರಾದರು.  ಬಾಲ್ಯದಲ್ಲಿಯೇ ತಂದೆ ಸಂಪತ್ ಕುಮಾರ್ ಅವರನ್ನು ಕಳೆದುಕೊಂಡಾಗಿನಿಂದಲೂ  ತಾಯಿಯೇ ಸಂತೋಷ್ ಅವರನ್ನು ನೋಡಿಕೊಂಡವರು.   ಚಿಕ್ಕ ವಯಸ್ಸಿನಲ್ಲಿಯೇ ತಂದೆ ಕಳೆದುಕೊಂಡೆ. ಆಗಿಂದ ನನ್ನ ತಾಯಿಯೇ ನನ್ನನ್ನು ನೋಡಿಕೊಂಡಿದ್ದಾರೆ, ನಾನು ನನ್ನ ತಾಯಿ ಮನಸ್ಸಿಗೆ ನೋವು ಮಾಡಿದ್ದೇನೆ, ನನ್ನನ್ನು ಕ್ಷಮಿಸು ಎಂದು ವೇದಿಕೆ ಮೇಲೆ ಹೇಳಿದ್ದಾರೆ.
 
ಇದೇ ವೇಳೆ, ನಿಮ್ಮ ಲೈಫ್​ನಲ್ಲಿ ನಿಮ್ಮ ತಾಯಿ ಎಷ್ಟು ಮಹತ್ವ ಎಂದು ಹೇಳಿ ಎಂದಾಗ ವರ್ತೂರು ಸಂತೋಷ್​ ಅವರು ಭಾವುಕರಾದರು. ತಾಯಿ ಇಲ್ಲ ಎಂದ್ರೆ ವರ್ತೂರು ಸಂತೋಷ್​ ಇಲ್ಲ ಎಂದರು. ಎಲ್ಲಿ ದನ ಮೇಯಿಸುವವನು ಎಂದು ಎಲ್ಲಿಗೆ ಹೋದರೂ ವ್ಯಂಗ್ಯವಾಗಿ ಕೇಳುತ್ತಿದ್ದರು. ಆದರೆ ಇಂದು ಅವರೇ 2-3 ಗಂಟೆ ಹಸು ಮೇಯಿಸುವವನನ್ನು ಮಾತನಾಡಿಸಲು ಕಾಯುತ್ತಾರೆ. ನಾವು ಮಾಡುವ ಕೆಲಸದಲ್ಲಿ ಶ್ರದ್ಧೆ ಇರಬೇಕು. ಬಸವಣ್ಣನ ಸೇವೆ ಮಾಡುವ ಅವಕಾಶ ಯಾರಿಗೂ ಸಿಗುವುದಿಲ್ಲ. 100 ಕೋಟಿ ಆಸ್ತಿ ಇರಬಹುದು. 100 ದನ ಅಲ್ಲ ಒಂದೂ ದನ ಸಾಕಲು ಸಾಧ್ಯವಾಗುವುದಿಲ್ಲ. ಬಸವಣ್ಣನನ್ನು ಸಾಕುವುದು ಮಾತ್ರವಲ್ಲದೇ ಜೀವನದ ಪ್ರತಿಯೊಂದರಲ್ಲಿಯೂ ತಾಯಿಯೇ ನನ್ನ ಬೆನ್ನೆಲುಬಾಗಿ ನಿಂತಿದ್ದಾರೆ. 

ಏನ್ ಸಮಾಚಾರ? ಬೆಂಕಿ ಕೈಕೈ ಹಿಡ್ಕೊಂಡು ಓಡಾಡ್ತಿದ್ದೆ ಎಂದ ತಾರಾ ಪ್ರಶ್ನೆಗೆ ವರ್ತೂರು ಏನಂದ್ರು​ ನೋಡಿ...

ಜೀವನದಲ್ಲಿ ಎಲ್ಲಾ ಸಂಬಂಧಗಳನ್ನೂ ಮತ್ತೆ ಪಡೆಯಬಹುದು. ಆದರೆ ತಂದೆ-ತಾಯಿ ಎನ್ನುವ ಎರಡು ದೇವರನ್ನು ಮತ್ತೆ ಸೃಷ್ಟಿ ಮಾಡಲು ಆಗುವುದಿಲ್ಲ ಎನ್ನುತ್ತಲೇ ವರ್ತೂರು ಸಂತೋಷ್​ ಅವರು ತಾಯಿಯ ಪಾದವನ್ನು ತೊಳೆದರು. ಬೆಳಿಗ್ಗೆ ಎದ್ದಾಗ ಮಕ್ಕಳು ತಾಯಿಯ ಆಶೀರ್ವಾದ ಪಡೆಯುವುದು ಯಾವತ್ತಿಗೂ ಶ್ರೇಯಸ್ಸೇ ಎಂದರು. ಮದುವೆಯಾಗಿ ಹೋದಾಗಲೂ ಅತ್ತೆಯನ್ನು ನಿಮ್ಮ ತಂದೆ-ತಾಯಿ ಥರನೇ ನೋಡಿಕೊಳ್ಳಿ ಎಂಬ ಕಿವಿ ಮಾತನ್ನೂ ಈ ಸಂದರ್ಭದಲ್ಲಿ ವರ್ತೂರು ಸಂತೋಷ್​ ಹೇಳಿದರು. 

ಇನ್ನು ಬಿಗ್​ಬಾಸ್​ ವಿಷಯಕ್ಕೆ ಬರುವುದಾದರೆ, ವರ್ತೂರು ಮತ್ತು ತನಿಷಾ ಕುರಿತು ಸಾಕಷ್ಟು ಗುಲ್ಲು ಎಬ್ಬಿದೆ.  ಇವರಿಬ್ಬರ ಹೆಸರನ್ನು ಹೇಳಿ ಇಂದಿಗೂ ತಮಾಷೆ ಮಾಡುವವರು ಇದ್ದಾರೆ. ಅದೇ ರೀತಿ  ನನ್ನಮ್ಮ ಸೂಪರ್​ಸ್ಟಾರ್​ ವೇದಿಕೆಯಲ್ಲಿಯೇ ನಟಿ ತಾರಾ ಕೂಡ ವರ್ತೂರು ಅವರನ್ನು ರೇಗಿಸಿದ್ದರು. ಅಷ್ಟಕ್ಕೂ ತಮ್ಮ ಅಕ್ಕನ ಮಗನ ನಾಮಕರಣಕ್ಕೆ ಬಂದ ಬಿಗ್​ಬಾಸ್​ ಸ್ಪರ್ಧಿಗಳ ಪೈಕಿ ತನಿಷಾ ಅವರಿಗೆ ವರ್ತೂರು ಸಂತೋಷ್​ ದುಬಾರಿ ಗಿಫ್ಟ್​  ಕೊಟ್ಟಿದ್ದರು.  ತನಿಷಾಗೆ ಅವರಿಗೆ ಮೇಕಪ್ ಸೆಟ್ ಅಂದರೆ ತುಂಬಾ ಇಷ್ಟ. ಅದಕ್ಕಾಗಿ ಬಿಗ್‌ಬಾಸ್‌ ಮನೆಯಲ್ಲಿ ಕಣ್ಣೀರು ಹಾಕಿದ್ದರು. ಹೀಗಾಗಿ ತಮ್ಮ ಮನೆಯ ಸಮಾರಂಭಕ್ಕೆ ಬಂದ ತನಿಷಾಗೆ ವರ್ತೂರು ಸಂತೋಷ್ ದುಬಾರಿ ಬೆಲೆಯ ಮೇಕಪ್ ಕಿಟ್ ಗಿಫ್ಟ್ ನೀಡಿದ್ದರು. ಇಬ್ಬರೂ ಜೊತೆಯಾಗಿ ಕೈಕೈ ಹಿಡಿದುಕೊಂಡು ಓಡಾಡಿದ್ದರು. ಇದರ ಬಗ್ಗೆ ತಾರಾ ಅದೇನೋ ಫಂಕ್ಷನ್​ನಲ್ಲಿ ಬೆಂಕಿ ಜೊತೆ ಕೈಕೈ ಹಿಡ್ಕೊಂಡು ಓಡಾಡಿದ್ಯಲ್ಲ, ಏನ್​ ಸಮಾಚಾರ ಎಂದು ಕೇಳಿದಾಗ ಸಂತೋಷ್​ ನಾಚಿ ನೀರಾಗಿದ್ದರು. 

ಹುಟ್ಟುಹಬ್ಬದ ದಿನ ವಿಶೇಷ ಘೋಷಣೆ: ನೇರಪ್ರಸಾರದಲ್ಲಿ ಬಿಗ್​ಬಾಸ್​ ವಿನಯ್​ ಗೌಡ ಹೇಳಿದ್ದೇನು?
 

Follow Us:
Download App:
  • android
  • ios