ಏನ್ ಸಮಾಚಾರ? ಬೆಂಕಿ ಕೈಕೈ ಹಿಡ್ಕೊಂಡು ಓಡಾಡ್ತಿದ್ದೆ ಎಂದ ತಾರಾ ಪ್ರಶ್ನೆಗೆ ವರ್ತೂರು ಏನಂದ್ರು ನೋಡಿ...
ಬಿಗ್‌ಬಾಸ್ ತನಿಷಾ ಕುಪ್ಪಂಡ ಕುರಿತ ತಾರಾ ಪ್ರಶ್ನೆಗೆ ವರ್ತೂರು ರಿಯಾಕ್ಷನ್ ಹೇಗಿತ್ತು ಗೊತ್ತಾ? ನಮ್ರತಾ ಕಣ್ಣು ನೋಡಿದ್ರೆ ಏನಾಗ್ತಿತ್ತು ಎಂದೂ ವರ್ತೂರು ಹೇಳಿದ್ದಾರೆ.
ಬಿಗ್‌ಬಾಸ್ ಸೀಸನ್ 10 ಕಳೆದ ತಿಂಗಳು ಕಳೆದರೂ ಅದರ ಗುಂಗಿನಿಂದ ಹಲವರು ಇಂದಿಗೂ ಹೊರಕ್ಕೆ ಬಂದಿಲ್ಲ. ಬಿಗ್‌ಬಾಸ್ ಎಂದ ಮೇಲೆ ಗಲಾಟೆ, ಕಿರುಚಾಟ, ಕಿತ್ತಾಟ, ಕಾದಾಟದ ಜೊತೆಗೆ ಪ್ರೇಮ ಕಾವ್ಯವೂ ಮಾಮೂಲು ಎನಿಸಿಬಿಟ್ಟಿದೆ. ಕೆಲವೊಮ್ಮೆ ಇದು ಮಿತಿಮೀರುತ್ತಿದೆ ಎಂದೂ ಅನ್ನಿಸುವುದು ಉಂಟು. ಆದರೆ ಇಲ್ಲಿ ಎಲ್ಲವೂ ಮೊದಲೇ ಪೂರ್ವನಿಯೋಜಿತದಂತೆ ನಡೆಯುವ ಕಾರಣ, ಪ್ರೇಕ್ಷಕರು ಅದನ್ನು ನಿಜ ಎಂದುಕೊಂಡು ಎಂಜಾಯ್ ಮಾಡುತ್ತಾರೆ, ಇದೇ ಕಾರಣಕ್ಕೆ ಟಿಆರ್ಪಿ ರೇಟ್ ಕೂಡ ಜಾಸ್ತಿಯಾಗುತ್ತದೆ. ಈ ಬಾರಿಯ ಬಿಗ್ಬಾಸ್ನಲ್ಲಿ ಸದ್ದು ಮಾಡಿದ ಜೋಡಿಗಳಲ್ಲಿ ಒಂದು ವರ್ತೂರು ಸಂತೋಷ್ ಮತ್ತು ತನಿಷಾ ಕುಪ್ಪಂಡ ಅವರದ್ದು. ಬಿಗ್ಬಾಸ್ನಲ್ಲಿ ಬೆಂಕಿ ಎಂದೇ ತನಿಷಾ ಅವರನ್ನು ಕರೆದಿದ್ದುಂಟು. ಇವರ ಬಗ್ಗೆ ಭಾರಿ ಗುಸುಗುಸು ಕೂಡ ಚರ್ಚೆಯಾಗಿತ್ತು. ಖುದ್ದು ಸುದೀಪ್ ಅವರೂ ಇಬ್ಬರನ್ನೂ ರೇಗಿಸುತ್ತಿದ್ದದ್ದೂ ಉಂಟು. ಇದಕ್ಕೆ ಕಾರಣ, ಅವರು ಬಿಗ್‌ಬಾಸ್ ಮನೆಯಲ್ಲಿ ನಡೆದುಕೊಂಡಿದ್ದ ರೀತಿಯಿಂದ.
ಈ ಬಗ್ಗೆ ಬಿಗ್‌ಬಾಸ್ ಮನೆಯಿಂದ ಹೊರಕ್ಕೆ ಬಂದ ಮೇಲೆ ತನಿಷಾ ನಾನು ಸ್ವಲ್ಪ ಅವರ ಜೊತೆ ಕ್ಲೋಸ್ ಆಗಿದ್ದೆ ಅಷ್ಟೇ, ಬೇರೇನೂ ಇಲ್ಲ ಎಂದಿದ್ದರು. ಎಲ್ಲರೂ ಮನೆಯೊಳಗೆ ರೇಗಿಸುತ್ತಿದ್ದರು. ನಮ್ರತಾ, ಕಿಚ್ಚ ಸುದೀಪ್ ಅವರೂ ರೇಗಿಸುತ್ತಿದ್ದರು. ವರ್ತೂರು ಸಂತೋಷ್ ಅವರು ಹುಡುಗಿಯರ ಜೊತೆ ಅಷ್ಟಾಗಿ ಮಾತನಾಡಲ್ಲ. ನನ್ನ ಜೊತೆ ಸ್ವಲ್ಪ ಮಾತನಾಡುತ್ತಿದ್ದರು ಅಷ್ಟೆ ಎಂದಿದ್ದಾರೆ. ಆಚೆ ಬಂದರೆ ಮದುವೆಯಾಗುತ್ತಾರೆ, ಕ್ರಶ್ ಆಗಿದೆ, ಲವ್ನಲ್ಲಿ ಬಿದ್ದಿದ್ದಾರಂತೆ ಎಂದು ಬಹಳಷ್ಟು ಕೇಳಿ ಬಂತು. ಫಸ್ಟ್ ಆಫ್ ಆಲ್ ಅವರು ನನ್ನ ಟೈಪ್ ಅಲ್ಲ. ಅವರು ಬೇರೆಯವರನ್ನು ಮದುವೆಯಾದರೂ, ನಾನು ಬೇರೆಯವರನ್ನು ಮದುವೆಯಾದರೂ ನಮ್ಮ ಫ್ರೆಂಡ್ಶಿಪ್ ಕಂಟಿನ್ಯೂ ಆಗಬಹುದು. ಆದರೆ ಬೇರೆ ಯೋಚನೆ ಇಬ್ಬರಲ್ಲೂ ಇಲ್ಲ ಎಂದಿದ್ದರು.
ಇದರ ಹೊರತಾಗಿಯೂ ಇವರಿಬ್ಬರ ಹೆಸರನ್ನು ಹೇಳಿ ಇಂದಿಗೂ ತಮಾಷೆ ಮಾಡುವವರು ಇದ್ದಾರೆ. ಅದೇ ರೀತಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ನನ್ನಮ್ಮ ಸೂಪರ್ಸ್ಟಾರ್ ವೇದಿಕೆಯಲ್ಲಿ ನಟಿ ತಾರಾ ಕೂಡ ವರ್ತೂರು ಅವರನ್ನು ರೇಗಿಸಿದ್ದಾರೆ. ಅಷ್ಟಕ್ಕೂ ತಮ್ಮ ಅಕ್ಕನ ಮಗನ ನಾಮಕರಣಕ್ಕೆ ಬಂದ ಬಿಗ್‌ಬಾಸ್ ಸ್ಪರ್ಧಿಗಳ ಪೈಕಿ ತನಿಷಾ ಅವರಿಗೆ ವರ್ತೂರು ಸಂತೋಷ್ ದುಬಾರಿ ಗಿಫ್ಟ್ ಕೊಟ್ಟಿದ್ದರು. ತನಿಷಾಗೆ ಅವರಿಗೆ ಮೇಕಪ್ ಸೆಟ್ ಅಂದರೆ ತುಂಬಾ ಇಷ್ಟ. ಅದಕ್ಕಾಗಿ ಬಿಗ್‌ಬಾಸ್ ಮನೆಯಲ್ಲಿ ಕಣ್ಣೀರು ಹಾಕಿದ್ದರು. ಹೀಗಾಗಿ ತಮ್ಮ ಮನೆಯ ಸಮಾರಂಭಕ್ಕೆ ಬಂದ ತನಿಷಾಗೆ ವರ್ತೂರು ಸಂತೋಷ್ ದುಬಾರಿ ಬೆಲೆಯ ಮೇಕಪ್ ಕಿಟ್ ಗಿಫ್ಟ್ ನೀಡಿದ್ದರು. ಇಬ್ಬರೂ ಜೊತೆಯಾಗಿ ಕೈಕೈ ಹಿಡಿದುಕೊಂಡು ಓಡಾಡಿದ್ದರು. ಇದರ ಬಗ್ಗೆ ತಾರಾ ಅದೇನೋ ಫಂಕ್ಷನ್ನಲ್ಲಿ ಬೆಂಕಿ ಜೊತೆ ಕೈಕೈ ಹಿಡ್ಕೊಂಡು ಓಡಾಡಿದ್ಯಲ್ಲ, ಏನ್ ಸಮಾಚಾರ ಎಂದು ಕೇಳಿದಾಗ ಸಂತೋಷ್ ನಾಚಿ ನೀರಾಗಿದ್ದಾರೆ. ಇದರ ಪ್ರೊಮೋ ಬಿಡುಗಡೆಯಾಗಿದೆ.
ಇದೇ ಸಂದರ್ಭದಲ್ಲಿ ಬಿಗ್‌ಬಾಸ್ ಮನೆಯಲ್ಲಿ ನಮ್ರತಾ ಕಣ್ಣು ನೋಡಿದ್ ತಕ್ಷಣ ಹೆದ್ರೊಂಡ್ ಬಿಡ್ತಿದ್ಯಲ್ಲಾ ನೀನು ಎಂದು ತಾರಾ ಕೇಳಿದಾಗ, ವರ್ತೂರು, ಅಕ್ಕಾ ಅವ್ಳು ಕಣ್ ಬಿಡೋದು ನೋಡಿದ್ರಾ? ಇಷ್ಟು ಇಷ್ಟು ದಪ್ಪ ಬಿಡ್ತಾಳೆ. ಹೆದ್ರಿಕೆ ಆಗದೇ ಇರ್ತದಾ ಎಂದು ಪ್ರಶ್ನಿಸಿದ್ದಾರೆ. ಇದೇ ವೇಳೆ ತಮಾಷೆಯ ಕೆಲವೊಂದು ಮಾತುಕತೆ ನಡೆದಿದೆ. ಸಂತೋಷ್ಗೇ ಬಿಗ್‌ಬಾಸ್ ಕಪ್ ಸಿಗಬೇಕಿತ್ತು. ಅವನಿಗೆ ಬೇಡವಾಗಿತ್ತು ಎಂದೆಲ್ಲಾ ತಾರಾ ತಮಾಷೆ ಮಾಡಿದ್ದಾರೆ. ಇದೇ ವೇಳೆ, ಬಿಗ್ಬಾಸ್ನಲ್ಲಿ ಬಹಳ ಫೇಮಸ್ ಆಗಿದ್ದ ಬೀನ್ ಬ್ಯಾಗ್ ಬಗ್ಗೆಯೂ ಮಾತುಕತೆ ನಡೆದಿದೆ. ತಾವು ಯಾರದ್ದಾದರೂ ಕೈಹಿಡಿದರೆ ಸಾಯುವವರೆಗೂ ಕೈಹಿಡಿದಿರುತ್ತೇನೆ ಎಂಬ ಡೈಲಾಗ್ ಕೂಡ ಸಂತೋಷ್ ಬಾಯಲ್ಲಿ ಬಂದಿದೆ.
ಸುಂಟರಗಾಳಿ ಪ್ರತಾಪ್! ಒಂದ್ಸಲ ಆಗ್ಲಿಲ್ಲ... ಎರಡು ಸಲ ಆಗ್ಲಿಲ್ಲ ಎನ್ನುತ್ತಲೇ ಡ್ರೋನ್ ಮಾಡಿದ್ರೊಂದು ಹೊಸ ಟ್ರಿಕ್ಸ್!