Asianet Suvarna News Asianet Suvarna News

ಹುಟ್ಟುಹಬ್ಬದ ದಿನ ವಿಶೇಷ ಘೋಷಣೆ: ನೇರಪ್ರಸಾರದಲ್ಲಿ ಬಿಗ್​ಬಾಸ್​ ವಿನಯ್​ ಗೌಡ ಹೇಳಿದ್ದೇನು?

ಮಾರ್ಚ್​ 15ರಂದು ಬಿಗ್​ಬಾಸ್​ ವಿನಯ್​ ಗೌಡ ಅವರ ಹುಟ್ಟುಹಬ್ಬವಿದ್ದು, ಅಂದು ವಿಶೇಷ ಘೋಷಣೆ ಮಾಡುವುದಾಗಿ ಹೇಳಿದ್ದಾರೆ. ನೇರಪ್ರಸಾರದಲ್ಲಿ ಇವರು ಹೇಳಿದ್ದೇನು?
 

Bigg Boss Vinay Gowda on live and informed about special announcement on birthday suc
Author
First Published Feb 25, 2024, 4:49 PM IST

ಬಿಗ್​ಬಾಸ್​ ಸೀಸನ್​ 10 ಮುಗಿದು ಹಲವು ದಿನಗಳೇ ಕಳೆದಿದ್ದರೂ ಇದರ ಗುಂಗಿನಿಂದ ಫ್ಯಾನ್ಸ್​ ಹೊರಕ್ಕೆ ಬರಲಿಲ್ಲ.    ಬಿಗ್​ಬಾಸ್​ ಮನೆಯಿಂದ ಬಂದ ಸ್ಪರ್ಧಿಗಳೆಲ್ಲರೂ ಬಹುದೊಡ್ಡ ಸೆಲೆಬ್ರಿಟಿಗಳಾಗಿ ಬದಲಾಗುತ್ತಾರೆ. ಅವರನ್ನು ಒಂದಿಷ್ಟು ಜನರು ನೋಡುವ ದೃಷ್ಟಿಯೇ ಬದಲಾಗುತ್ತದೆ.   ಅದರಲ್ಲಿಯೂ   ಬಿಗ್​ಬಾಸ್ ವಿನ್ನರ್​ ಎಂದರೆ ಅವರ ರೇಂಜೇ ಬೇರೆ. ಅವರ ಅಭಿಮಾನಿಗಳು ಖುಷಿ ಪಡುವ ರೀತಿಯೇ ಬೇರೆ.  ಅದೇ ರೀತಿ ಇದೀಗ ಬಿಗ್​ಬಾಸ್​ ಸೀಸನ್​ 10 ವಿನಯ್​ ಅವರು,  ಬಹುದೊಡ್ಡ ಸೆಲೆಬ್ರಿಟಿಯಾಗಿದ್ದಾರೆ.   ಕಲರ್ಸ್​ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಕೆಂಡಸಂಪಿಗೆ ಸೀರಿಯಲ್​ ಜಾತ್ರೆ ಹೊಸಪೇಟೆಯಲ್ಲಿ ನಡೆದಿದ್ದು, ಅದರಲ್ಲಿ ಬಿಗ್​ಬಾಸ್​ನ ಕೆಲವು ಸ್ಪರ್ಧಿಗಳು ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ. ಬಿಗ್​ಬಾಸ್​ನ ವಿನಯ್​, ಕಾರ್ತಿಕ್​, ಸಂಗೀತಾ ಶೃಂಗೇರಿ ಹಾಗೂ ಡ್ರೋನ್​ ಪ್ರತಾಪ್​ ಕಾಣಿಸಿಕೊಂಡಿದ್ದಾರೆ.  ಇದೇ ವೇದಿಕೆಯ ಮೇಲೆ ಪರ್ಫಾಮ್​ ಮಾಡಿದ್ದಾರೆ. 

ಇದೀಗ ಸೀರಿಯಲ್​ ಸಂತೆ ಮುಗಿದಿದ್ದು, ಅದರ ಬಗ್ಗೆ ಮಾಹಿತಿ ನೀಡಲು ಕೆಲವು ಬಿಗ್​ಬಾಸ್​ ಸ್ಪರ್ಧಿಗಳು ನೇರಪ್ರಸಾರದಲ್ಲಿ ಬಂದಿದ್ದಾರೆ. ಈ ಬಗ್ಗೆ ಜನರ ಜೊತೆ ಮಾತನಾಡಿದ್ದಾರೆ. ಕೆಂಡಸಂಪಿಗೆ ಸೀರಿಯಲ್​ ಜಾತ್ರೆಯ ನೇರಪ್ರಸಾರದ ಕುರಿತು ಮಾತನಾಡಲು ಬಿಗ್​ಬಾಸ್​ ಆನೆ ವಿನಯ್​ ಗೌಡ ಅವರು ನೇರಪ್ರಸಾರದಲ್ಲಿಯೇ ಬಂದು ಮಾಹಿತಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಅವರು ಕೆಲವು ಮಾತುಗಳನ್ನು ಆಡಿದ್ದಾರೆ.

ಹೆಂಡ್ತಿಯನ್ನು ಯಾಕೆ ಅಷ್ಟು ಲವ್​ ಮಾಡ್ತೀರಿ ಅಂತ ಯುವತಿ ಕೇಳಿದಾಗ ಹೀಗೆ ಹೇಳೋದಾ ಬಿಗ್​ಬಾಸ್​ ವಿನಯ್​?

ಬಿಗ್​ಬಾಸ್​ನಲ್ಲಿ ತಮಗೆ ಸಪೋರ್ಟ್​ ಮಾಡಿದ, ಎಷ್ಟೊಂದು ಪ್ರೀತಿ ಕೊಡುತ್ತಿರುವ ಜನರಿಗೆ ಅವರು ಧನ್ಯವಾದ ಸಲ್ಲಿಸಿದ್ದಾರೆ. ಕಲಾವಿದನ ಒಂದೇ ಒಂದು ಆಸೆ ಇರುವುದು ಆತ ಎಲ್ಲಿಯೇ ಹೋದರೂ ಜನರು ಗುರುತಿಸಬೇಕು, ಹೆಸರು ಗೊತ್ತಿರಬೇಕು ಎನ್ನುವುದು. ಅದೆಲ್ಲವೂ ಬಿಗ್​ಬಾಸ್​ ನನಗೆ ನೀಡಿದೆ. ಎಲ್ಲಿಯೇ ಹೋದರೂ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಹೆಸರಿನಿಂದ ಕರೆಯುತ್ತಾರೆ. ಇದು ತುಂಬಾ ಖುಷಿಯಾಗುತ್ತದೆ ಎಂದಿದ್ದಾರೆ ವಿನಯ್​. ಇದೇ ವೇಳೆ ಆನೇ ಆನೆ ಎನ್ನುತ್ತಲೇ ಎಲ್ಲಿಯೇ ಹೋದರೂ ಆನೆಯ ಪೆಂಡೆಂಟ್​, ಫಲಕ ಇಂಥವುಗಳನ್ನೇ ಗಿಫ್ಟ್​ ಕೊಡುವುದು ಹೆಚ್ಚಾಗಿದೆ ಎಂದಿದ್ದಾರೆ. ಹೊಸಪೇಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ 15 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು. ಅವರ ಪ್ರೀತಿ ನೋಡಿ ತುಂಬಾ ಖುಷಿಯಾಯಿತು ಎಂದಿದ್ದಾರೆ. 

ಇದೇ ಸಂದರ್ಭದಲ್ಲಿ, ಕೆಲವೊಂದು ಮಹತ್ವದ ವಿಷಯಗಳನ್ನೂ ವಿನಯ್​ ಗೌಡ ಹೇಳಿದ್ದಾರೆ. ಅದೇನೆಂದರೆ,  ಬಿಗ್​ಬಾಸ್​ನ ಸ್ಪರ್ಧಿ ಮೈಕೆಲ್​ ಜೊತೆಗೂಡಿ ಹೊಸದೊಂದು ಕೆಫೆ ತೆರೆಯುತ್ತಿರುವುದಾಗಿ ಹೇಳಿದ್ದಾರೆ. ಮಾರ್ಚ್​ 7ನೇ ತಾರೀಖು ತಮ್ಮ ಹುಟುಹಬ್ಬವಿದ್ದು ಅಂದು ಕೆಲವೊಂದು ಘೋಷಣೆಗಳನ್ನು ಮಾಡುತ್ತಿರುವುದಾಗಿ ಹೇಳಿದ ವಿನಯ್​ ಅವರು, ಹೊಸ ಸಿನಿಮಾದ ಅನೌನ್ಸ್​ಮೆಂಟ್​ ಕೂಡ ಮಾಡುವುದಾಗಿ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಬಿಗ್​ಬಾಸ್​ನ ಇತರ ಸ್ಪರ್ಧಿಗಳ ಬಗ್ಗೆಯೂ ವಿನಯ್​ ಮಾತನಾಡಿದ್ದಾರೆ. ವಿಶೇಷವಾಗಿ ಸ್ನೇಹಿತ್​ ಕುರಿತು ಹೇಳಿದ ವಿನಯ್​, ಸ್ನೇಹಿತ್​ ನನ್ನ ಬ್ರದರ್​ ಇದ್ದ ಹಾಗೆ. ಬೆಸ್ಟ್​ ಫ್ರೆಂಡ್​ ಕೂಡ. ತುಂಬಾ ಜೆನ್ಯೂನ್​ ಮನುಷ್ಯ,ಷ್ ತುಂಬಾ ಸ್ವೀಟ್​ ಹಾರ್ಟ್​, ತುಂಬಾ ಸಪೋರ್ಟ್​ ಮಾಡಿದ್ದಾನೆ ಎಂದಿದ್ದಾರೆ. ಹೊಸಪೇಟೆಯಲ್ಲಿ ನಡೆದ ಸೀರಿಯಲ್​ ಸಂತೆಯಲ್ಲಿ ಎರಡು ಗಂಟೆ ಡ್ಯಾನ್ಸ್ ಪ್ರಾಕ್ಟೀಸ್​ ಮಾಡಿ ಡ್ಯಾನ್ಸ್​ ಮಾಡಿದ್ದು, ಅದರ ಬಗ್ಗೆ ಕಮೆಂಟ್​ ಹಾಕುವಂತೆ ತಿಳಿಸಿದ್ದಾರೆ.

ಬಿಗ್​ಬಾಸ್​ ಸಂಗೀತಾಗೆ ಕ್ರಷ್​ ಆಫ್​ ಕರ್ನಾಟಕ ಬಿರುದು- ಕರಿಮಣಿ ಮಾಲಿಕ ಯಾರು ಎಂದಾಗ ಹೇಳಿದ್ದೇನು?

 

Follow Us:
Download App:
  • android
  • ios