ಕೈಯಲ್ಲಿ ಕೆಂಪು ಗುಲಾಬಿ ಹಿಡಿದು ಬಂದ ಸೀತಾ-ರಾಮ: ಮುಳ್ಳಾಗಿ ಚುಚ್ಚೇ ಬಿಟ್ಳು ಚಾಂದನಿ: ಮುಂದೇನು?
ಪರಸ್ಪರ ಪ್ರೀತಿ ನಿವೇದನೆಗಾಗಿ ಸೀತಾ ಮತ್ತು ರಾಮ್ ಕೆಂಪು ಗುಲಾಬಿ ಹಿಡಿದು ಬರುವ ಹೊತ್ತಿಗೇ ಮುಳ್ಳಿನಂತೆ ಬಂದಿದ್ದಾಳೆ ಚಾಂದನಿ. ಮುಂದೇನು?
ಇವತ್ತು ಏನಾದ್ರೂ ಆಗ್ಲೇ ಹೋಗಲಿ, ಸೀತಾಳ ಮುಂದೆ ಪ್ರೀತಿ ಹೇಳಿಕೋ ಎಂದು ರಾಮ್ಗೆ ಅಶೋಕ್ ಹುರಿದುಂಬಿಸಿದ್ದಾನೆ. ಹೌದು, ಇನ್ನು ಕಾದು ಕುಳಿತರೆ ಪ್ರಯೋಜನ ಇಲ್ಲ ಎಂದುಕೊಂಡ ರಾಮ್ ಸೀತಾಳಲ್ಲಿ ಪ್ರೀತಿ ನಿವೇದನೆ ಮಾಡಿಕೊಳ್ಳಲು ಗುಲಾಬಿ ಹೂವು ಖರೀದಿಸಿದ್ದಾನೆ. ಒಂದೆಡೆ ರಾಮ್ ಗುಲಾಬಿ ಹಿಡಿದು ಸೀತಾಳಿಗಾಗಿ ಬರುತ್ತಿದ್ದರೆ, ಇತ್ತ ರಾಮ್ನ ಬಗ್ಗೆ ಪ್ರೀತಿ ಹುಟ್ಟಿರೋ ಸೀತಾ ಕೂಡ ಕೆಂಪು ಗುಲಾಬಿ ಹಿಡಿದು ರಾಮ್ಗೋಸ್ಕರ ಬಂದಿದ್ದಾಳೆ. ಇನ್ನೇನು ಇಬ್ಬರೂ ಪ್ರೀತಿ ನಿವೇದನೆ ಮಾಡಿಕೊಳ್ಳಬೇಕು ಎನ್ನುವಷ್ಟರದಲ್ಲಿಯೇ ಚಾಂದನಿ ಹಿಂದಿನಿಂದ ಬಂದು ರಾಮ್ನನ್ನು ತಬ್ಬಿದ್ದಾಳೆ. ಸೀತಾ ಇದನ್ನು ನೋಡಿ ಬೆಚ್ಚಿಬಿದ್ದಿದ್ದಾಳೆ. ಚಾಂದನಿ ರಾಮ್ನ ಪ್ರೇಯಸಿಯಾಗಿದ್ದಳು ಎನ್ನುವ ವಿಷಯ ಸೀತಾಗೆ ತಿಳಿದು ಶಾಕ್ ಆಗಿದ್ದಾಳೆ. ಗುಲಾಬಿ ಹೂವು ಕೆಳಕ್ಕೆ ಬಿದ್ದಿದೆ.
ಚಾಂದನಿ ತನ್ನನ್ನು ತಬ್ಬಿಕೊಂಡಿರುವುದರಿಂದ ಸಿಟ್ಟಿಗೆದ್ದ ರಾಮ್, ನೀನು ನನ್ನ ಮುಗಿದಿರುವ ಅಧ್ಯಾಯ ಎಂದು ಅವಳ ವಿರುದ್ಧ ಕಿಡಿಕಾರಿ ಬಿಡಿಸಿಕೊಂಡಿದ್ದಾನೆ. ಈಗ ರಾಮ್ನ ಪ್ರೀತಿಯನ್ನು ವಾಪಸ್ ಕೊಡಿಸುತ್ತಾಳಾ ಸೀತಾ? ತನ್ನ ಪ್ರೀತಿಯನ್ನು ತ್ಯಾಗ ಮಾಡುತ್ತಾಳಾ? ಸೀತಾಳಿಗಾಗಿ ಮಿಡಿಯುತ್ತಿರುವ ರಾಮ್ ಮುಂದೇನು ಮಾಡುತ್ತಾನೆ? ಇವರಿಬ್ಬರ ಪ್ರೀತಿ ಏನಾಗುತ್ತದೆ ಎನ್ನುವುದು ಈಗಿರುವ ಕುತೂಹಲ. ರಾಮ್ ಮತ್ತು ಸೀತಾ ಒಂದಾಗುವುದನ್ನು ನೋಡಬೇಕು, ಪ್ಲೀಸ್ ಚಾಂದನಿ ಕ್ಯಾರೆಕ್ಟರ್ ಮುಗಿಸಿ ಎನ್ನುತ್ತಿದ್ದಾರೆ ಫ್ಯಾನ್ಸ್. ಇದು ಸೀರಿಯಲ್, ಇಷ್ಟು ಬೇಗ ಕಥೆ ಮುಗಿಯುವುದಿಲ್ಲ ಎಂದು ತಿಳಿದಿದ್ದರೂ ಸೀತಾ ಮತ್ತು ರಾಮ ಯಾವಾಗ ಒಂದಾಗುತ್ತಾರೆ ಎಂದು ನೋಡುವ ಕಾತರ ವೀಕ್ಷಕರದ್ದು.
ಬೆಳ್ಳುಳ್ಳಿ ಕಬಾಬ್ ಮಾಲೀಕಂಗೂ ವಿಕ್ಕಿಪಿಡಿಯಾಗೂ 'ಸಂಧಾನ'! ಗಿಫ್ಟ್ ನೋಡಿ ಚಂದ್ರು ಏನಂದ್ರು?
ಹೌದು. ಸದ್ಯ ಜೀ ಟಿ.ವಿಯಲ್ಲಿ ಪ್ರಸಾರ ಆಗ್ತಿರೋ ಸೀತಾ ರಾಮ ಸೀರಿಯಲ್ ಇದೀಗ ಕುತೂಹಲದ ಘಟ್ಟ ತಲುಪಿದೆ. ಇತ್ತ ಸೀತಾ- ರಾಮ ಒಂದಾಗುವ ಕಾಲ ಬಂದಾಗಿದೆ. ಇವರಿಬ್ಬರನ್ನೂ ಒಂದು ಮಾಡಲು ಅಶೋಕ ಹರಸಾಹಸ ಮಾಡುತ್ತಿರುವ ಕಾಲವು ಕೂಡಿ ಬರುತ್ತಿದೆ. ಈ ಮೊದಲು ಪ್ರೀತಿಯನ್ನು ಹೇಳಿಕೊಂಡು ಬಂದ ರಾಮ್ನನ್ನು ಬೈದು ಸೀತಾ ಮನೆಯಿಂದ ಹೊರಕ್ಕೆ ಕಳಿಸಿದ್ದಳು. ಇದೇ ಅವಮಾನದಲ್ಲಿ ರಾಮ್ ಏನು ಮಾಡಬೇಕು ಎಂದು ತಿಳಿಯುವಷ್ಟರಲ್ಲಿಯೇ ಭಯಾನಕ ಅಪಘಾತ ಸಂಭವಿಸಿತ್ತು. ಅಷ್ಟಕ್ಕೂ ಈ ಆ್ಯಕ್ಸಿಡೆಂಟ್ ಮಾಡಿಸಿದ್ದು, ಖುದ್ದು ಆತನ ಚಿಕ್ಕಮ್ಮ. ಸೀತಾಳಿಗೆ ಮೋಸ ಮಾಡುವ ಉದ್ದೇಶದಿಂದ ಮದುವೆಯಾಗಲು ಹೊರಟಿದ್ದ ರುದ್ರಪ್ರತಾಪ್ನ ಕೈಜೋಡಿಸಿ ಚಿಕ್ಕಮ್ಮ ಅಪಘಾತ ಮಾಡಿಸಿದ್ದಳು. ಜೈಲು ಸೇರಿದ್ದ ರುದ್ರಪ್ರತಾಪ್ನಿಗೆ ಜಾಮೀನು ಕೊಡಿಸಿ ಹೊರಕ್ಕೆ ಕರೆದುಕೊಂಡು ಬಂದಿರುವ ಚಿಕ್ಕಮ್ಮ, ರುದ್ರಪ್ರತಾಪ್ ಕೈಯಲ್ಲಿ ಅಪಘಾತ ಮಾಡಿಸಿದ್ದಳು.
ಭೀಕರ ಅಪಘಾತದಲ್ಲಿ ರಾಮ್ ಆಸ್ಪತ್ರೆಗೆ ಸೇರಿದ್ದ. ಸೀತಾ ರಕ್ತ ಕೊಟ್ಟು ಪ್ರಾಣ ಕಾಪಾಡಿದ್ದಳು. ನಂತರ ರಾಮ್ ಚೇತರಿಸಿಕೊಂಡ. ಮನೆಗೆ ಬಂದ ರಾಮ್ ಸೀತಾಳಿಗೆ ಮೆಸೇಜ್ ಮಾಡಿದ್ದ. ಅದನ್ನು ನೋಡಿ ಸೀತಾಗೆ ಲವ್ ಶುರುವಾಗಿದೆ. ರಾಮ್ ಹುಷಾರಾಗಿದ್ದನ್ನು ಕೇಳಿ ಮನಸ್ಸಿನಲ್ಲಿ ಗೊತ್ತಿಲ್ಲದೇ ಪ್ರೀತಿ ಚಿಗುರುತ್ತಿದೆ. ನಾಳೆ ಆಫೀಸ್‌ಗೆ ಬರುವುದಾಗಿ ರಾಮ್ ಹೇಳಿದಾಗ, ಈ ಸಂತೋಷವನ್ನು ಹೇಗೆ ವ್ಯಕ್ತಪಡಿಸುವುದು ಎಂದು ಆಕೆಗೆ ತಿಳಿಯದೇ ಚಡಪಡಿಸಿದ್ದಳು. ನಂತರ ಅತ್ತ ರಾಮ್, ಇತ್ತ ಸೀತಾ ಪ್ರೇಮ ನಿವೇದನೆಗೆ ಹೋಗುವಷ್ಟರಲ್ಲಿಯೇ ಚಾಂದನಿ ಎಂಬ ಮುಳ್ಳಿನ ಎಂಟ್ರಿ ಆಗಿದೆ. ಮುಂದೇನು?