ಚಂದನ್ ಶೆಟ್ಟಿ ಹೊಸ ಪಾರ್ಟಿ ಹಾಡು "ಕಾಟನ್ ಕ್ಯಾಂಡಿ"ಯೊಂದಿಗೆ ಈ ಹೊಸ ವರ್ಷಕ್ಕೆ ಸದ್ದು ಮಾಡೋಕೆ ತಯಾರಾಗಿ ನಿಂತಿದ್ದಾರೆ. ಮೂರು ವರ್ಷಗಳ ಬಿಡುವಿನ ನಂತರ ಬರುತ್ತಿರುವ ಈ ಹಾಡು ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದೆ.

ಕನ್ನಡ ಸಿನಿಮಾಗಳಲ್ಲಿ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿರುವ ಗಾಯಕ, ಮ್ಯೂಸಿಕ್ ಕಂಪೋಸರ್, ಲಿರಿಸಿಸ್ಟ್ ಮತ್ತು ರ್‍ಯಾಪರ್ ಅಂದ್ರೆ ಅದು ಚಂದನ್ ಶೆಟ್ಟಿ (Chandan Shetty) ತಮ್ಮ ಹೊಸ ಹೊಸ ಹಾಡುಗಳ ಮೂಲಕ ಯುವ ಜನತೆ ಹುಚ್ಚೆದ್ದು ಕುಣಿಯುವಂತೆ ಮಾಡಿದ್ದಾರೆ. ಇವರ ಪಾರ್ಟಿ ಆಂಥಮ್, ಚಾಕಲೇಟ್ ಗರ್ಲ್ (Chocolate Girl) ಹಾಡು, ಗೆಟ್ ಹೈ ಬ್ಯಾಡ್ ಬಾಯ್, ನೋಡು ಶಿವ ಮೊದಲಾದ ಹಾಡುಗಳು ಸೋಶಿಯಲ್ ಮೀಡೀಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆದಂತಹ ಹಾಡುಗಳು. 

ನಿವೇದಿತಾ ಜೊತೆ ಸಂಬಂಧ ಹೀಗಿತ್ತಾ? ದಾಂಪತ್ಯದ ನೋವು ತೋಡಿಕೊಂಡಿದ್ದ ಚಂದನ್‌ ಶೆಟ್ಟಿ ವಿಡಿಯೋ ವೈರಲ್‌!

ಇದೀಗ ಚಂದನ್ ಶೆಟ್ಟಿ ಹೊಸ ವರ್ಷಕ್ಕೆ ಮತ್ತೊಂದು ಪಾರ್ಟಿ ಹಾಡಿನ (party song) ಜೊತೆ ಸಜ್ಜಾಗಿ ಬಂದಿದ್ದಾರೆ. ಈಗಾಗಲೇ ಟೀಸರ್ ರಿಲೀಸ್ ಮಾಡಿದ್ದು, ಹೊಸ ಹಾಡಿನ ಕುರಿತು ಜನರಲ್ಲಿ ಕುತೂಹಲ ಮೂಡಿದೆ. ಗುಡಿಸುವವರಿಂದ ಹಿಡಿದು, ಪೆಟ್ರೋಲ್ ಪಂಪ್ ನಲ್ಲಿ ಕೆಲಸ ಮಾಡುವವರು, ಆಟೋ ರಿಕ್ಷಾದವರು ಅಚ್ಚರಿಯಿಂದ ಆಕಾಶದತ್ತ ಮುಖ ಮಾಡಿ ನೋಡುತ್ತಿರುವ ಟೀಸರ್ ಇದಾಗಿದ್ದು, ಕೊನೆಗೆ ಕಾಟನ್ ಕ್ಯಾಂಡಿ ಎನ್ನುವ ಟೈಟಲ್ ಆಕಾಶದಲ್ಲಿ ತೇಲಿ ಬರೋದನ್ನು ತೋರಿಸಲಾಗಿದೆ. ಈ ಹೊಸ ವರ್ಷಕ್ಕೆ ತಯಾರಾಗಿ ಕಾಟನ್ ಕ್ಯಾಂಡಿ (Cotton Candy) ಬರ್ತಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಚಂದನ್ ಶೆಟ್ಟಿ ಯೂಟ್ಯೂಬ್ ಚಾನೆಲ್ ನೋಡ್ತಾ ಇರಿ ಎಂದಿದ್ದಾರೆ. 

ಸಿಡ್ನೀಲಿ ಬಾಲ್ಯದ ಆಸೆ ಈಡೇರಿಸಿಕೊಂಡ ಚಂದನ್ ಶೆಟ್ಟಿ, ಹೊಡೀತು ಜಾಕ್‌ಪಾಟ್‌ ಎಂದ ನೆಟ್ಟಿಗರು!

ಪ್ರೊಮೋ ರಿಲೀಸ್ ಆಗುತ್ತಿದ್ದಂತೆ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ. ಈ ಬಾರಿ ಈ ಪಾರ್ಟಿ ಹಾಡಲ್ಲಿ ಯಾರು ಕಾಣಿಸಿಕೊಳ್ಳಲಿದ್ದಾರೆ? ಹಾಡು ಯಾವ ರೀತಿ ಬರಲಿದೆ. ಎನ್ನುವ ಕುತೂಹಲ ಹೆಚ್ಚಾಗಿದೆ. ಚಂದನ್ ಶೆಟ್ಟಿ 2011 ರಿಂದಲೂ ತಮ್ಮ ರ್‍ಯಾಪ್ ಹಾಡುಗಳ (Rap songs) ಮೂಲಕ ಸದ್ದು ಮಾಡಿದ್ದವರು. ಇಲ್ಲಿವರೆಗೆ ಬರೋಬ್ಬರಿ 16 ಹಾಡುಗಳನ್ನು ಇವರು ಕಂಪೋಸ್ ಮಾಡಿ ಹಾಡಿದ್ದಾರೆ. ಅಷ್ಟೇ ಅಲ್ಲದೇ ಸಿನಿಮಾಗಳಲ್ಲೂ ಹಾಡುವ ಮೂಲಕ ಅಲ್ಲೂ ಗೆದ್ದಿದ್ದಾರೆ. ಚಂದನ್ ಶೆಟ್ಟಿಯವರ ಮೂರೇ ಮೂರು ಪೆಗ್ಗಿಗೆ ಹಾಡು, ಇವತ್ತಿಗೂ ಯುವಕರ ಫೇವರಿಟ್ ಆಗಿದೆ. ಅಷ್ಟೇ ಅಲ್ಲದೇ ಲಕಲಕ ಲ್ಯಾಂಬರ್ಗಿನಿ, ನೋಡು ಶಿವ ಹಾಡುಗಳು ಸಹ ಸಖತ್ ಸೌಂಡ್ ಮಾಡಿದ್ದವು. ಆದರೆ ಕಳೆದ ಮೂರು ವರ್ಷಗಳಿಂದ ಚಂದನ್ ಯಾವುದೇ ಹಾಡುಗಳು ಬಿಡುಗಡೆಯಾಗಿರಲಿಲ್ಲ. ಇದೀಗ ಹೊಸ ಹಾಡಿನ ಬಿಡುಗಡೆಗೆ ತಯಾರಿ ನಡೆದಿದ್ದು, ಈ ಹಾಡು ಕೂಡ ಪಾರ್ಟಿ ಆಂಥಮ್ ಆಗಲಿದೆಯೇ? ಅಭಿಮಾನಿಗಳನ್ನು ಕೂತಲ್ಲೇ ಕುಣಿಸಲಿದೆಯೇ? ಕಾದು ನೋಡಬೇಕು. 

View post on Instagram