ಸಿಡ್ನೀಲಿ ಬಾಲ್ಯದ ಆಸೆ ಈಡೇರಿಸಿಕೊಂಡ ಚಂದನ್ ಶೆಟ್ಟಿ, ಹೊಡೀತು ಜಾಕ್‌ಪಾಟ್‌ ಎಂದ ನೆಟ್ಟಿಗರು!

ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ದಿನಗಳನ್ನು ಕಳೆಯುತ್ತಿರುವ ಚಂದನ್ ಶೆಟ್ಟಿಯವರು, ಅಲ್ಲಿ ತಮ್ಮ ಬಾಲ್ಯದ ಕನಸೊಂದನ್ನು ನನಸು ಮಾಡಿಕೊಂಡಿದ್ದಾರೆ. ಅದನ್ನು ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್‌ನಲ್ಲಿ ಹಂಚಿಕೊಂಡಿದ್ದಾರೆ. ಹಾಗಿದ್ದರೆ ಅದೇನು?..

Chandan Shetty fulfills his childhood dreams in Sydney at Australia srb

ನಟ ಹಾಗೂ ಸಿಂಗರ್-ಮ್ಯೂಸಿಕ್ ಡೈರೆಕ್ಟರ್ ಚಂದನ್ ಶೆಟ್ಟಿ (Chandan Shetty) ಸದ್ಯ ಭಾರತದಲ್ಲಿ ಇಲ್ಲ. ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ದಿನಗಳನ್ನು ಕಳೆಯುತ್ತಿರುವ ಚಂದನ್ ಶೆಟ್ಟಿಯವರು, ಅಲ್ಲಿ ತಮ್ಮ ಬಾಲ್ಯದ ಕನಸೊಂದನ್ನು ನನಸು ಮಾಡಿಕೊಂಡಿದ್ದಾರೆ. ಅದನ್ನು ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್‌ನಲ್ಲಿ ಹಂಚಿಕೊಂಡಿದ್ದಾರೆ. ಹಾಗಿದ್ದರೆ ಅದೇನು? ಯಾವುದಾಗಿತ್ತು ಅವರ ಬಾಲ್ಯದ ಕನಸು? ಈ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.. 

ಹೌದು, ಚಂದನ್ ಶೆಟ್ಟಿಯವರು ಸಿಡ್ನಿಯಲ್ಲಿ ತಮ್ಮ ಚೈಲ್ಡ್‌ಹುಡ್ ಡ್ರೀಮ್ ನನಸು ಮಾಡಿಕೊಂಡಿದ್ದಾರೆ. ಅಲ್ಲಿ ವಿಮಾನ ಚಲಾಯಿಸಿದ್ದಾರೆ. ಅದನ್ನು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿ 'ಕನಸಿನ ನಗರಿ ಸಿಡ್ನಿಯಲ್ಲಿ ಫ್ಲೈಟ್ ಹಾರಿಸುವ ಮೂಲಕ ನಾನು ನನ್ನ ಬಾಲ್ಯದ ಕನಸನ್ನು ನನಸು ಮಾಡಿಕೊಂಡಿದ್ದೇನೆ. ಈ ಅಚ್ಚರಿ ಕೊಟ್ಟಿದ್ದಕ್ಕಾಗಿ ವಿನಯ್ ಗೌಡ ಅವರಿಗೆ ಕೃತಜ್ಞತೆಗಳು.. (Fulfilled my childhood dream of flying a flight in the stunning city of Sydney 💫✈️, thanks for the surprise @vinay_gowda_dlegend 🤍')' ಎಂದು ಬರೆದು ಪೋಸ್ಟ್ ಮಾಡಿದ್ದಾರೆ ಚಂದನ್ ಶೆಟ್ಟಿ.  

ರಜನಿಕಾಂತ್: ನೀನು ಹೀಗೆ ಬಂದ್ರೆ ಚಪ್ಪಲಿಯಲ್ಲಿ ಹೊಡಿತೀನಿ ಅಂದಿದ್ರು ನಂಗೆ!

ಈ ಮೂಲಕ ತಮ್ಮ ಅಭಿಮಾನಿಗಳಿಗೆ ಅಚ್ಚರಿ ಹಾಗೂ ಖುಷಿ ಕೊಟ್ಟಿದ್ದಾರೆ ಸಿಂಗರ್ ಚಂದನ್ ಶೆಟ್ಟಿ. ಸದ್ಯಕ್ಕೆ ಅವರು ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದು, ಅಲ್ಲಿ ಸಿಡ್ನಿಯಲ್ಲಿ ಹಲವು ಸ್ಥಳಗಳನ್ನು ವಿಸಿಟ್ ಮಾಡುತ್ತ, ಸ್ನೇಹಿತರನ್ನು ಭೇಟಿಯಾಗುತ್ತ ಕಾಲ ಕಳೆಯುತ್ತಿದ್ದಾರೆ. ತಮ್ಮ ಸಿನಿಮಾ ಶೂಟಿಂಗ್, ಸಂಗೀತ ನಿರ್ದೇಶನದ ಕೆಲಸಗಳಿಂದ ಸದ್ಯ ಸ್ವಲ್ಪ ಬಿಡುವು ಮಾಡಿಕೊಂಡಿರುವ ನಟ ಚಂದನ್ ಶೆಟ್ಟಿಯವರು, ಈಗ ಲೈಫ್ ಎಂಜಾಯ್ ಮಾಡುತ್ತಿದ್ದಾರೆ. 

ಹೌದು, ಹಲವರಿಗೆ ಟೂರ್ ಮಾಡುವ, ಟ್ರಕ್ಕಿಂಗ್ ಹೋಗುವ ಅಭ್ಯಾಸ ಇರುತ್ತದೆ. ಪ್ರಪಂಚ ಪರ್ಯಟನೆ ಮಾಡುವ ಕನಸು ಇರುತ್ತದೆ. ಜಗತ್ತಿನ ಪ್ರಸಿದ್ಧ ಸ್ಥಳಗಳನ್ನು ನೊಡುವ ಕನಸು ಇರುತ್ತದೆ. ತಾವು ನೋಡಿದ, ಅನುಭವಿಸಿದ ಸುಂದರ ಕ್ಷಣಗಳನ್ನು ತಮ್ಮವರೊಂದಿಗೆ, ಫ್ಯಾನ್ಸ್‌ಗಳೊಂದಿಗೆ ಹಂಚಿಕೊಳ್ಳವ ಅಭ್ಯಾಸ ಕೂಡ ಇರುತ್ತದೆ. ಅದೇ ರೀತಿ ಚಂದನ್ ಶೆಟ್ಟಿಯವರು ಕೂಡ ಸಿಡ್ನಿಯ ಸುಂದರ ಕ್ಷಣಗಳನ್ನು ತಮ್ಮ ಸೋಷಿಯಲ್ ಮೀಡಿಯಾ ಮೂಲಕ ತಮ್ಮವರೊಂದಿಗೆ ಹಂಚಿಕೊಂಡು ಖುಷಿಪಟ್ಟಿದ್ದಾರೆ.

ಕುಡ್ಸು ನನ್ ಮಗ್ನಿಗೆ ಹಾಲು, ಹಂಗಾದ್ರೂ ಬೆಳ್ಳಗಾಗ್ತಾನೇನೋ ಅಂದಿದ್ರಂತೆ ಡಾ ರಾಜ್‌!

 

 

Latest Videos
Follow Us:
Download App:
  • android
  • ios