ನಿವೇದಿತಾ ಜೊತೆ ಸಂಬಂಧ ಹೀಗಿತ್ತಾ? ದಾಂಪತ್ಯದ ನೋವು ತೋಡಿಕೊಂಡಿದ್ದ ಚಂದನ್ ಶೆಟ್ಟಿ ವಿಡಿಯೋ ವೈರಲ್!
ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ ವಿಚ್ಛೇದನವಾಗಿ ಹಲವು ತಿಂಗಳು ಕಳೆದ ಮೇಲೆ ವಿಡಿಯೋ ಒಂದು ವೈರಲ್ ಆಗಿದ್ದು, ಅದರಲ್ಲಿ ಚಂದನ್ ಅವರು ಕೆಲವು ವಿಷಯ ಹೇಳಿದ್ದಾರೆ.
ಬಿಗ್‌ಬಾಸ್ ಖ್ಯಾತಿಯ ನಟಿ ನಿವೇದಿತಾ ಗೌಡ ಹಾಗೂ ಗಾಯಕ ಚಂದನ್ ಶೆಟ್ಟಿ ಅವರ ವಿಚ್ಛೇದನವಾಗಿ ಆರು ತಿಂಗಳಾಗುತ್ತಾ ಬಂದರೂ, ಇದುವರೆಗೂ ಇಬ್ಬರೂ ಇದಕ್ಕೆ ಸೂಕ್ತ ಕಾರಣ ನೀಡಲಿಲ್ಲ. ಆದರೆ ಅಭಿಮಾನಿಗಳಂತೂ ತಮ್ಮದೇ ಆದ ಕಾರಣಗಳನ್ನು ಹುಡುಕಿ ಆಗಿದೆ. ತುಂಬಾ ಒಳ್ಳೆಯ ರೀತಿಯಲ್ಲಿ, ಯಾವುದೇ ಗಲಾಟೆ-ಗದ್ದಲಗಳಿಗೆ ಆಸ್ಪದ ಇಲ್ಲದೇ ವಿಚ್ಛೇದನ ಪಡೆದುಕೊಂಡು ಸುದ್ದಿಯಾಗಿದ್ದ ಜೋಡಿ, ಇದಕ್ಕೆ ಕಾರಣವನ್ನು ಮಾತ್ರ ಎಲ್ಲಿಯೂ ಬಾಯಿ ಬಿಟ್ಟಿಲ್ಲ. ಇದೇ ಕಾರಣಕ್ಕೆ, ನೆಟ್ಟಿಗರು ಹಾಗೂ ಅಭಿಮಾನಿಗಳು ತಮ್ಮದೇ ಆದ ರೀತಿಯಲ್ಲಿ ವಿವರಣೆ ನೀಡುತ್ತಿದ್ದಾರೆ. ಅದರಲ್ಲಿಯೂ ವಿಚ್ಛೇದನದ ಬಳಿಕ ನಿವೇದಿತಾ ಗೌಡ ಅವರು ಇತ್ತೀಚಿನ ದಿನಗಳಲ್ಲಿ ಸಕತ್ ಹಾಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮಿನಿ, ಮಿಡಿ ಎಲ್ಲಾ ಬಿಟ್ಟು ಬ್ಯಾಕ್‌ಲೆಸ್ ಮಟ್ಟಿಗೂ ಬಂದು ನಿಂತಿದ್ದಾರೆ. ಬಳಕುವ ಬಳ್ಳಿಯಂತಿರೋ ನಿವೇದಿತಾ, ಎದೆಗೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡ್ರಾ ಎಂದು ಪ್ರತಿಬಾರಿಯೂ ಅವರಿಗೆ ಕಮೆಂಟ್ಸ್ಗಳ ಸುರಿಮಳೆಯೇ ಆಗುತ್ತಿದೆ. ಇತ್ತೀಚಿನ ದಿನಗಳಲ್ಲಿ ನಟಿ ಧಾರಾಳವಾಗಿ ದೇಹ ಪ್ರದರ್ಶನ ಮಾಡುತ್ತಲೇ ರೀಲ್ಸ್ ಮಾಡುತ್ತಿರುವ ಕಾರಣ, ತೀರಾ ಕೆಟ್ಟದಾಗಿರೋ ಕಮೆಂಟ್ಸ್ ಜಾಸ್ತಿಯಾಗುತ್ತಿವೆ.
ಇದೇ ಕಾರಣಕ್ಕೆ ಚಂದನ್ ಶೆಟ್ಟಿ ಡಿವೋರ್ಸ್ ಪಡೆದುಕೊಂಡದ್ದು, ರೀಲ್ಸ್ ಮಾಡುವುದಕ್ಕಾಗಿಯೇ ವಿಚ್ಛೇದನ ಪಡೆದ ಮೊದಲ ಮಹಿಳೆ... ಹೀಗೆ ಏನೇನೋ ಕಮೆಂಟ್ಸ್ ಮಾಡಿ ನಿವೇದಿತಾರ ತೇಜೋವಧೆ ಮಾಡಲಾಗುತ್ತಿದೆ. ಡಿವೋರ್ಸ್ ಬಳಿಕ ಈಕೆಯನ್ನು ಸುಮ್ಮನೆ ಇರಲು ಬಿಡುತ್ತಲೇ ಇಲ್ಲ, ಸದಾ ಟ್ರೋಲ್ ಮಾಡುತ್ತಲೇ ಕಾಲ ಕಳೆಯುತ್ತಿದ್ದಾರೆ ನೆಟ್ಟಿಗರು. ಆದರೆ ಇದ್ಯಾವುದಕ್ಕೂ ಇದುವರೆಗೆ ನಿವೇದಿತಾ ತಲೆ ಕೆಡಿಸಿಕೊಂಡವರೇ ಅಲ್ಲ! ಆದರೆ ಇದೀಗ ಚಂದನ್ ಶೆಟ್ಟಿ ಅವರು ನಿವೇದಿತಾ ಜೊತೆಗೆ ಮದುವೆಯಾದ ಮೇಲೆ ಅನುಭವಿಸುತ್ತಿರುವ ನೋವಿನ ಬಗ್ಗೆ ನಗುತ್ತಲೇ ಹೇಳಿಕೊಂಡಿರುವ ವಿಡಿಯೋ ಒಂದು ವೈರಲ್ ಆಗಿದೆ. ಅಷ್ಟಕ್ಕೂ ಇದು ಮಜಾ ಟಾಕೀಸ್ ವಿಡಿಯೋ. ಈ ವಿಡಿಯೋ ಅನ್ನು ಕಲರ್ಸ್ ಕನ್ನಡ ಚಾನೆಲ್ ಮತ್ತೊಮ್ಮೆ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದೆ.
ಅಡುಗೆ ಮಾಡ್ತಿರೋ ಯುವಕನ ಪರಿಚಯಿಸಿದ ನಿವೇದಿತಾ! ಗಂಡ ಬಿಟ್ಟಿದ್ದೂ ಇದಕ್ಕೇ ತಾನೆ ಎಂದು ಫ್ಯಾನ್ಸ್ ಗರಂ...
ಈಗ ಆ ಎಪಿಸೋಡ್ ಮತ್ತೊಮ್ಮೆ ಶೇರ್ ಆಗಿರುವುದಕ್ಕೆ ಸೂಕ್ತ ಕಾರಣ ಇಲ್ಲದಿದ್ದರೂ, ಇದರಲ್ಲಿ ನಿವೇದಿತಾ ಹೇಗೆ ವರ್ತಿಸುತ್ತಿದ್ದರು ಎಂಬ ಬಗ್ಗೆ ಚಂದನ್ ಶೆಟ್ಟಿ ಆಡಿರುವ ಮಾತುಗಳನ್ನು ಕೇಳಿದವರು, ಈಗ ಕೊನೆಗೂ ವಿಚ್ಛೇದನದ ಕಾರಣ ತಿಳಿಯಿತು ಬಿಡಿ ಎನ್ನುತ್ತಿದ್ದಾರೆ. ಈ ವಿಡಿಯೋದಲ್ಲಿ ಚಂದನ್ ಶೆಟ್ಟಿ ದಾಂಪತ್ಯದ ಸಾರಮಸ್ಯದ ಬಗ್ಗೆ ಮಾತನಾಡಿದ್ದಾರೆ. ಇಬ್ಬರೂ ಹೇಗೆ ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡು ಹೋಗಬೇಕು ಎಂಬ ಬಗ್ಗೆಯೆಲ್ಲಾ ವಿವರಣೆ ನೀಡಿದ್ದಾರೆ. ಎಲ್ಲವೂ ಸರಿ. ಆದರೆ ಇವರ ದಾಂಪತ್ಯ ಜೀವನ ಮಾತ್ರ ಯಾಕೆ ಹೀಗಾಯ್ತು ಎನ್ನುವುದಕ್ಕೆ ಕೂಡ ಇದೇ ವಿಡಿಯೋದಲ್ಲಿ ಅಭಿಮಾನಿಗಳು ಉತ್ತರ ಕಂಡುಕೊಂಡಿದ್ದಾರೆ!
ಹೌದು. ಈ ವಿಡಿಯೋದಲ್ಲಿ ಚಂದನ್ ಶೆಟ್ಟಿ ಅವರು, ನಿವೇದಿತಾ ಮನೆಯ ಯಾವೊಂದೂ ಕೆಲಸವನ್ನು ಮಾಡದ ಬಗ್ಗೆ ತಿಳಿಸಿದ್ದಾರೆ. ಈಕೆ ಎದ್ದೇಳೋದು 12,1, 32 ಗಂಟೆ ಆಗ್ತನೇ ಇರುತ್ತದೆ. ನಾನು ಏಳು ಗಂಟೆಗೆ ಎಚ್ಚರವಾಗುತ್ತದೆ. ಹೊಟ್ಟೆ ಹಸಿವು ಆಗ್ತಾ ಇರುತ್ತೆ. ಇವಳಿಗೆ ಏಳು ಎಂದರೆ ಏಳೋದೇ ಇಲ್ಲ, ಬೈಯೋಕೆ ಶುರು ಮಾಡ್ತಾಳೆ. ಆಯ್ತು ಅಂತ ನಾನೇ ಹೊಂದಿಕೊಂಡು ಬ್ರೇಕ್‌ಫಾಸ್ಟ್ ಮಾಡಲು ಶುರು ಮಾಡಿದೆ. ಬೆಳಿಗ್ಗೆ ಮಾಡಿದ್ರೆ ಮಧ್ಯಾಹ್ನಕ್ಕೂ ಅದೇ ಆಗುವಂತೆ ಜಾಸ್ತಿನೇ ಮಾಡುತ್ತಿದೆ. ಆದರೆ ತಿಂಗಳಾದರೂ ಇದೇ ಕಂಟಿನ್ಯೂ ಆಯ್ತು, ಫುಲ್ ಟೆನ್ಷನ್ ಆಗೋಯ್ತು. ಏಳುತ್ತಲೇ ಇರಲಿಲ್ಲ. ನಾನೇ ಎಲ್ಲವನ್ನೂ ಮಾಡಬೇಕಿತ್ತು ಮನೆಯ ಕಸ ಗುಡಿಸಬೇಕು, ನೆಲ ಒರೆಸಬೇಕು, ಪಾತ್ರೆ ತೊಳೆಯಬೇಕು ಎಲ್ಲವನ್ನೂ ನಾನೇ ಮಾಡಬೇಕಿತ್ತು. ಇವಳು ನೋಡಿದ್ರೆ ಮಲಗೇ ಇರುತ್ತಿದ್ದಳು ಎಂದು ಚಂದನ್ ಶೆಟ್ಟಿ ಹೇಳಿದ್ದಾರೆ.
ಕೊನೆಗೆ ಒಂದು ಐಡಿಯಾ ಮಾಡಿ, ಯಾರು ಒಂದು ಕೆಲಸ ಮಾಡ್ತಾರೆ ಅವರು ಇನ್ನೊಬ್ಬರಿಗೆ ಇನ್ನೂರು ರೂಪಾಯಿ ಕೊಡಬೇಕು ಎಂದು ಷರತ್ತು ವಿಧಿಸಿದೆ. ಒಂದು ಕೆಲಸಕ್ಕೆ ಇನ್ನೂರು ರೂಪಾಯಿ ಮಾಡುತ್ತಿದ್ದಂತೆಯೇ ಅವಳು ಬೆಳಿಗ್ಗೆ ಏಳಲು ಶುರು ಮಾಡಿದಳು ಎಂದು ಹೇಳಿದ್ದಾರೆ. ಆದರೆ ಅವರು ಕೊಟ್ಟ ಲಿಸ್ಟ್ ನೋಡಿದ ಆಂಕರ್ ಸೃಜನ್ ಲೋಕೇಶ್ ಅವರು, ಆ ಲಿಸ್ಟ್‌ನಲ್ಲಿ ನಿವೇದಿತಾ ಅವರೇ ಹೆಚ್ಚು ದುಡ್ಡು ಕೊಡಬೇಕಾಗಿ ಬಂದಿರುವುದನ್ನು ನೋಡಿದ್ದಾರೆ. ಅಲ್ಲಿಗೇ ಚಂದನ್ ಶೆಟ್ಟಿಯವರೇ ಎಲ್ಲಾ ಕೆಲಸ ಮಾಡುತ್ತಿದ್ದರು ಎನ್ನುವುದು ತಿಳಿದಿದೆ. ಇದರಿಂದಲೇ ದಂಪತಿ ನಡುವೆ ಜಗಳ ಆಗಿರಬಹುದು. ಪತ್ನಿಯಾಗಿ ಇಂಥ ವರ್ತನೆಯನ್ನು ಯಾವ ಗಂಡಸೂ ಸಹಿಸುವುದಿಲ್ಲ. ಇಷ್ಟು ದಿನ ಅವಳ ಜೊತೆ ಬಾಳಿದ್ದೇ ಹೆಚ್ಚು ಎಂದೆಲ್ಲಾ ಕಮೆಂಟಿಗರುಕಮೆಂಟ್ ಮಾಡುತ್ತಿದ್ದಾರೆ.
ಕ್ರಿಸ್‌ಮಸ್ ಡ್ರಿಂಕ್ಸ್ ಮತ್ತಿನಲ್ಲಿ ಫ್ರೆಂಡ್‌ಗೆ ಮುತ್ತು ಕೊಟ್ಟ ನಿವೇದಿತಾ: ಫೋಟೋ ನೋಡಿ ಟ್ರೋಲಿಗರು ಕೇಳ್ಬೇಕಾ?