Asianet Suvarna News Asianet Suvarna News

ನಿವೇದಿತಾ ಗೌಡ-ಚಂದನ್‌ ಶೆಟ್ಟಿ ವಿಚ್ಛೇದನ, ಕ್ಯೂಟ್‌ ಜೋಡಿಗೆ ಮನವಿ ಮಾಡಿದ ಒಳ್ಳೆ ಹುಡುಗ ಪ್ರಥಮ್‌!

chandan shetty and niveditha gowda Life ಚಂದನ್‌ ಶೆಟ್ಟಿ ಹಾಗ ನಿವೇದಿತಾ ಗೌಡ ವಿಚ್ಛೇದನಕ್ಕೆ ನಟ ಪ್ರಥಮ್‌ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಸಾಧ್ಯವಾದರೆ ಈ ಜೋಡಿಯನ್ನು ಒಂದು ಮಾಡುವ ಪ್ರಯತ್ನವನ್ನು ನಿಸ್ಸಂಶಯವಾಗಿ ಮಾಡೋದಾಗಿ ಹೇಳಿದ್ದಾರೆ.

chandan shetty and niveditha gowda Divorce olle hudga pratham Shock and request san
Author
First Published Jun 7, 2024, 4:51 PM IST

ಬೆಂಗಳೂರು (ಜೂ.7): ಸ್ಯಾಂಡಲ್‌ವುಡ್‌ಗೆ ಶಾಕಿಂಗ್‌ನಂತೆ ನಿವೇದಿತಾ ಗೌಡ ಹಾಗೂ ಚಂದನ್‌ ಶೆಟ್ಟಿ ವಿಚ್ಛೇದನ ಸುದ್ದಿ ಹಬ್ಬಿದೆ. ಒಂದು ವಾರದ ಹಿಂದೆ ಇನ್ಸ್‌ಟಾಗ್ರಾಮ್‌ನಲ್ಲಿ ಒಟ್ಟಾಗಿ ರೀಲ್ಸ್ ಮಾಡಿದ್ದ ಜೋಡಿಯೀಗ ಡಿವೋರ್ಸ್‌ಗೆ ಅರ್ಜಿ ಹಾಕಿರುವುದು ಅಚ್ಚರಿಗೆ ಕಾರಣವಾಗಿದೆ. ಈ ಕುರಿತಂತೆ ಚಂದನ್‌ ಶೆಟ್ಟಿ ಅವರ ಆತ್ಮೀಯಸ ಸ್ನೇಹಿತ ಹಾಗೂ ನಟ ಪ್ರಥಮ್‌ ಮಾತನಾಡಿದ್ದಾರೆ. ಹಾಗೇನಾದರೂ ಇವರಿಬ್ಬರ ಸಂಸಾರವನ್ನು ಸರಿ ಮಾಡುವ ಸಣ್ಣ ಅವಕಾಶ ಸಿಕ್ಕರೂ ಅದನ್ನು ಉಪಯೋಗಿಸಿಕೊಳ್ಳಲಿದ್ದೇನೆ ಎಂದಿದ್ದಾರೆ. ನಿವೇದಿತಾ ಗೌಡ ನನಗೆ ಆತ್ಮೀಯ ಸ್ನೇಹಿತೆಯಲ್ಲ. ಆದರೆ, ಪರಿಚಿತರು. ಸಣ್ಣ ಹುಡುಗಿ, ಬುದ್ದಿವಾದ ಹೇಳಿದರೆ, ಕೇಳಬಹುದು ಎನ್ನುವ ವಿಶ್ವಾಸ ನನಗಿದೆ ಎಂದು ಪ್ರಥಮ್‌ ಹೇಳಿದ್ದಾರೆ. ಅದಲ್ಲದೆ, ಈ ಸುದ್ದಿಯನ್ನು ಸ್ವತಃ ಅವರಿಬ್ಬರೂ ಹೇಳುವವರೆಗೂ ನಾನು ಸುಳ್ಳು ಎಂದೇ ನಂಬಿರುತ್ತೇನೆ ಎಂದಿದ್ದಾರೆ. ಹಾಗೇನಾದರೂ ಮಾತನಾಡಿ ಬಗೆಹರಿಸಿಕೊಳ್ಳಬಹುದಾಗಿದ್ದರೆ, ನನ್ನೊಂದಿಗೆ ಧ್ರುವ ಸರ್ಜಾ ಅವರ ಸಹಾಯವನ್ನೂ ತೆಗೆದುಕೊಳ್ಳುತ್ತೇನೆ. ಧ್ರುವ ಹಾಗೂ ಚಂದನ್‌ ಆತ್ಮೀಯ ಸ್ನೇಹಿತರು ಎಂದು ಪ್ರಥಮ್‌ ಹೇಳಿದ್ದಾರೆ.

ಚಂದನ್‌ ತುಂಬಾ ಒಳ್ಳೆ ವ್ಯಕ್ತಿ. ನನ್ನ ಮತ್ತು ಚಂದನ್‌ ನಡುವೆ ತುಂಬಾ ಗೊಂದಲವಿತ್ತು. ಇತ್ತೀಚೆಗೆ ನಾವು ಅದನ್ನು ಬಗೆಹರಿಸಿಕೊಂಡೆವು. ಆ ಬಳಿಕ ಚಂದನ್‌ ನನಗೆ ತೀರಾ ಆಪ್ತರಾಗಿದ್ದರು. ನನ್ನ ಮದುವೆಗಾಗಿ ಅವರು ಬಹಳ ದೂರದಿಂದ ಬಂದಿದ್ದರು. ಇವರಿಬ್ಬರೂ ವಿಚ್ಛೇದನ ಕನ್ಫರ್ಮ್‌ ಮಾಡಿದ್ದರೆ ನಾನು ಖಂಡಿತವಾಗಿ ಅವರೊಂದಿಗೆ ಮಾತನಾಡುತ್ತೇನೆ ಎಂದು ಪ್ರಥಮ್‌ ಹೇಳಿದ್ದಾರೆ.

'ಇವರಿಬ್ಬರ ನಡುವೆ ವಿಚ್ಛೇದನ ಆಗಬಾರದು. ಇಬ್ಬರೂ ನನಗೆ ಒಳ್ಳೆಯ ಸ್ನೇಹಿತರು ನಿವೇದಿತಾ ಗೌಡ ಕೂಡ ಮೈಸೂರಿನವರು. ಮಾತನಾಡಿ ಬಗೆಹರಿಸಬಹುದಾಗಿದ್ದರೆ ಖಂಡಿತಾ ನಾನು ಅವರಿಬ್ಬರೊಂದಿಗೂ ಮಾತನಾಡುತ್ತೇನೆ. ಇನ್ನೂ ಧ್ರುವ ಸರ್ಜಾ ಅವರ ಸಹಾಯ ಕೂಡ ತೆಗೆದುಕೊಳ್ಳುತ್ತೇನೆ. ಧ್ರುವ ಹಾಗೂ ಚಂದನ್‌ ಶೆಟ್ಟಿ ಇಬ್ಬರೂ ಆತ್ಮೀಯ ಸ್ನೇಹಿತರು.  ಒಂದು ಸಂಸಾರ ಉಳಿಯುತ್ತದೆ  ಅಂತಾದರೆ, ನನ್ನ ಪ್ರತಿಷ್ಠೆ ಬಿಟ್ಟು ಮಾತನಾಡುತ್ತೇನೆ.  ಈಗ ಒಂದು ವಾರದ ಹಿಂದೆ ಇಬ್ಬರೂ ರೀಲ್ಸ್‌ ಮಾಡಿರೋ ವಿಡಿಯೋವನ್ನು ನಾನು ನೋಡಿದ್ದೇನೆ' ಎಂದು ಹೇಳಿದ್ದಾರೆ. 

'ಇಬ್ಬರೂ ತುಂಬಾ ಚೆನ್ನಾಗಿದ್ದರೂ, ಅವರವರದೇ ಸ್ವಾತಂತ್ರ್ಯದಲ್ಲಿ ಇಬ್ಬರೂ ಇದ್ದರು. ಇಬ್ಬರೂ ಕಂಪ್ಲೀಟ್‌ ಫ್ರೀಡಮ್‌ ಇತ್ತು. ನಿವೇದಿತಾ ಎಲ್ಲಾ ರಿಯಾಲಿಟಿ ಶೋಗಳಲ್ಲಿ ಪಾಲ್ಗೊಳ್ಳುತ್ತಾ ಇದ್ದರು. ಇನ್ನು ಚಂದನ್‌ ಶೆಟ್ಟಿ ಕೂಡ ತಮ್ಮ ಸ್ವಾತಂತ್ರ್ಯದಲ್ಲಿ ಕೆಲಸ ಮಾಡುತ್ತಿದ್ದರು.  ಇಬ್ಬರ ನಡುವೆ ಯಾವ ಭಿನ್ನಾಭಿಪ್ರಾಯಗಳೂ ಇದ್ದಿರಲಿಲ್ಲ. ನಾನು ಅವರೊಂದಿಗೆ ಈ ಬಗ್ಗೆ ಖಂಡಿತವಾಗಿ ಮಾತನಾಡುತ್ತೇನೆ. 

ಬಿಗ್‌ ಬಾಸ್‌ ಟು ಡಿವೋರ್ಸ್‌..'ಬೊಂಬೆ..' ಬಾಳಿನಲ್ಲಿ ವಿಲನ್‌ ಆಗಿದ್ಯಾರು?

ನನ್ನ ಮಾತಿಗೂ ಅವರು ಒಪ್ಪದೇ ಇದ್ದಲ್ಲಿ, ಧ್ರುವ ಸರ್ಜಾ ಅವರ ಸಹಾಯವನ್ನು ಕೇಳುತ್ತೇನೆ. ಧ್ರುವ ಅವರ ಪೊಗರು ಚಿತ್ರಕ್ಕೆ ಚಂದನ್‌ ಸಂಗೀತ ನಿರ್ದೇಶಕ. ಧ್ರುವ ಮಾತನ್ನು ಚಂದನ್‌ ಖಂಡಿತಾ ಇಲ್ಲ ಅನ್ನೋದಿಲ್ಲ. ನಿವೇದಿತಾ ನನಗೆ ಪರಿಚಿತರು. ಆದರೆ, ಚಂದನ್‌ ಆತ್ಮೀಯ ಸ್ನೇಹಿತ. ಬಗೆಹರಿಸಬಹುದಾದರೆ, ಖಂಡಿತಾಗಿ ಸಹಾಯ ಮಾಡುತ್ತೇನೆ. ನಿವೇದಿತಾ ಚಿಕ್ಕ ಹುಡುಗಿ. ಹೇಳಿದರೆ ಕೇಳುತ್ತಾರೆ ಎನ್ನುವ ಭರವಸೆ ಇದೆ. ಇದು ಸುಳ್ಳಾಗಿರಲಿ ಎನ್ನುವುದೇ ನನ್ನ ಆಶಯ.  ಪರಿಸ್ಥಿತಿ ತುಂಬಾ ಮೀರಿದ್ದರೆ, ಇಂಥವು ಆಗುತ್ತದೆ. ಕಲಾವಿದರು ನಾವು ಮಾರ್ಗದರ್ಶನವಾಗಿರಬೇಕು. ಆಡಿಕೊಳ್ಳುವವರಿಗೆ ನಾವು ವಸ್ತು ಆಗಬಾರದು' ಎಂದು ಹೇಳಿದ್ದಾರೆ.

ಮೈಸೂರು ಯುವ ದಸರಾದಲ್ಲಿ ಚಂದನ್- ನಿವೇದಿತಾ ಪ್ರಪೋಸ್‌, ಅಂದಿನ ಸಚಿವರ ಶಾಪ ತಟ್ಟಿತೇ!?

ಇನ್ನೂ ಇಬ್ಬರಿಗೂ ಮನವಿ ಮಾಡಿದ ಪ್ರಥಮ್‌, ಚಂದನ್‌ ಹಾಗೂ ನಿವೇದಿಯಾ ಇಬ್ಬರನ್ನೂ ಇಷ್ಟಪಡುವ ತುಂಬಾ ಜನ ವ್ಯಕ್ತಿಗಳು ಇದ್ದಾರೆ. ನಿಮ್ಮ ನಡುವೆ ಏನು ಭಿನ್ನಾಭಿಪ್ರಾಯ ಇದಿಯೋ ಗೊತ್ತಿಲ್ಲ. ಆದರೆ, ಒಂದು ಮಾತು, ಬಗೆಹರಿಸಿಕೊಳ್ಳಬಹುದೇ ಆಗಿದ್ದರೆ, ಇಬ್ಬರೂ ಕೂಡ ಪರಿಹರಿಸಿಕೊಳ್ಳಬೇಕು. ನಮ್ಮಲ್ಲೂ ಜಗಳ ಆಗುತ್ತೆ. ನನ್ನ ಪತ್ನಿ ಹಳ್ಳಿ ಹುಡುಗಿ. ಆಕೆಯ ಅಭಿಪ್ರಾಯಗಳೇ ಬೇರೆ, ನನ್ನ ಅಭಿಪ್ರಾಯಗಳೇ ಬೇರೆ. ಆದರೆ, ಎಲ್ಲವನ್ನೂ ನಾವು ಮಾತಿನಲ್ಲಿಯೇ ಬಗೆಹರಿಸಿಕೊಳ್ಳುತ್ತೇವೆ.  ನನ್ನ ಸಿನಿಮಾ ಜೀವನದ ಬಗ್ಗೆ ತಿಳಿಸಿದಾಗ ಆಕೆ ಅರ್ಥಮಾಡಿಕೊಂಡಳು ಎಂದು ಹೇಳಿದ್ದಾರೆ.

Latest Videos
Follow Us:
Download App:
  • android
  • ios