ಚೈತ್ರಾ ದುಬಾರಿ ಕಾರು ಟೈಯರ್ ಕಟ್. ಏನೆಲ್ಲಾ ಸಮಸ್ಯೆ ಆಯ್ತು ಎಂದು ಯೂಟ್ಯೂಬ್ ವಿಡಿಯೋ ಮಾಡಿದ ನಿರೂಪಕಿ...

ಕನ್ನಡ ಕಿರುತೆರೆ ಜನಪ್ರಿಯ ನಿರೂಪಕಿ, ಸೋಷಿಯಲ್ ಮೀಡಿಯಾ ಸ್ಟಾರ್ ಕಮ್ ಬ್ಯುಸಿನೆಸ್‌ ವುಮೆನ್ ಚೈತ್ರಾ ವಾಸುದೇವನ್ ಕಾರು ಅಪಘಾತವಾಗಿದೆ. ಹೀಗಂತ ಚೈತ್ರಾನೇ ಯೂಟ್ಯೂಬ್ ಚಾನೆಲ್‌ನಲ್ಲಿ ವಿಡಿಯೋ ಮಾಡುವ ಮೂಲಕ ತುರ್ತು ಸಮಯದಲ್ಲಿ ಏನೆಲ್ಲಾ ಕ್ರಮ ಕೈಗೊಳ್ಳಬೇಕು. ಕಷ್ಟದಲ್ಲಿದ್ದಾಗ ಹುಡುಗರು ಸಹಾಯಕ್ಕೆ ಬರುತ್ತಾರೆ ಅದನ್ನು ಗೌರವಿಸಿ ಎಂದಿದ್ದಾರೆ.

ಕಾರು ಅಪಘಾತ:

ಹೌದು! ರಾಜ ರಾಜೇಶ್ವರಿ ನಗರದಲ್ಲಿ ಚೈತ್ರಾ ಕಾರು ಚಲಾಯಿಸುವಾಗ ಅಪೂರ್ಣ ರಸ್ತೆಯಿಂದ ಕಾರಿನ ಟೈಯರ್ ಕಟ್ ಆಗಿ ಪಂಚರ್ ಆಗಿದೆ. ಗೊತ್ತಿಲ್ಲದೆ ಕಾರು ಚಲಾಯಿಸಿದ್ದಾರೆ, ಡೆವಲಪ್ ಆಗಿರುವ ತಂತ್ರಜ್ಞದಿಂದ ಟೈಯರ್ ಹಾಳಾಗಿರುವುದು ತಿಳಿದ ತಕ್ಷಣವೇ ಪಂಚರ್ ಅಂಗಡಿ ಹುಡುಕಿದ್ದಾರೆ. ಹುಡುಗಿಯರು ಕಾರು ಚಲಾಯಿಸುವಾಗ ಗಾಬರಿಗೊಳ್ಳದೆ ಹೇಗೆ ಮ್ಯಾನೇಜ್ ಮಾಡಬೇಕು ಎಂದು ವಿಡಿಯೋದಲ್ಲಿ ಹೇಳಿದ್ದಾರೆ.

'ಸಾವಿರ ಕಿಲೋಮೀಟರ್ ಓಡಿಸಿಲ್ಲ ಆಗಲೇ ಕಾರು ಟೈಯರ್ ಕಟ್ ಆಯ್ತು. ಟೈಯರ್ ಕಟ್ ಆದ್ರೆ ನೀವು ಏನ್ ಏನ್ ಮಾಡಬೇಕು ಎಂದು ಈ ವಿಡಿಯೋದಲ್ಲಿ ತೋರಿಸುವೆ. ಎಮರ್ಜೆನ್ಸಿಗೆಂದು ಸ್ಟೆಪ್ನಿ ಹಾಕಿಸಿರುವೆ ಆದರೆ ನನ್ನ ಓರಿಜಿನಲ್ ಟೈಯರ್‌ಗಿಂತ ಸ್ಟೆಪ್ನಿ ಚಿಕ್ಕದ್ದು. ಗಾಡಿಗಳನ್ನು ತೆಗೆದುಕೊಳ್ಳುವುದಲ್ಲ ಅದನ್ನು ಸಾಕುವುದು ಅಷ್ಟೇ ಕಷ್ಟ ಬಿಳಿ ಆನೆಗನ್ನು ಸಾಕುವಂತೆ ಅನಿಸುತ್ತದೆ. ಹೆಣ್ಣು ಮಕ್ಕಳಿಗೆ ಕಷ್ಟ ಆಗುತ್ತದೆ. ಬಿಬಿಎಂಪಿ ಅವರು ಮಾಡಿರುವ ತಪ್ಪಿದು. ಸಾವಿರ ಕಿಲೋಮೀಟರ್ ಹುಷಾರಾಗಿ ಓಡಿಸಬೇಕು ಅಂದುಕೊಂಡೆ ಆದರೆ ರಸ್ತೆಯಲ್ಲಿ ಅದೇನೋ ಶಾರ್ಪ್‌ ಆಗಿ ಎಡ್ಜ್‌ ಹಾಗೆ ಬಿಟ್ಟಿದ್ದರು. ಅದು ಟಚ್ ಆಗಿ ಟೈಯರ್ ಕಟ್ ಆಯ್ತು. ಕೆಲವು ಸತಿ ಹೇಳುತ್ತಾರೆ ಅಲ್ವಾ ದೃಷ್ಠಿ.' ಎಂದು ಚೈತ್ರಾ ವಿಡಿಯೋ ಆರಂಭಿಸಿದ್ದಾರೆ.

ಕೊನೆಗೂ ಡ್ರೀಮ್ ಕಾರ್ ಖರೀದಿಸಿದ ಚೈತ್ರಾ ವಾಸುದೇವನ್; ದುಬಾರಿ ಕಾರಿನ ಜೊತೆ ಮಸ್ತ್ ಪೋಸ್

'ಪಂಚರ್‌ನಲ್ಲೂ ಮೂರು ನಾಲ್ಕು ರೀತಿ ಇದೆ. ಟೈಯರ್ ವೀಕ್ ಆಗಿದ್ದು ಕ್ರ್ಯಾಕ್ ಆಗಿದ್ದರೆ ಪಂಚರ್ ಆಗುತ್ತದೆ, ಶಾರ್ಪ್ ಆಗಿರುವ ವಸ್ತುಗಳು ಚುಚ್ಚಿ ಪಂಚರ್ ಆಗುತ್ತೆ. ಈಗ ಬರುತ್ತಿರುವ ಕಾರುಗಳು ಟ್ಯೂಬ್‌ಲೆಸ್ ಆಗಿರುವ ಕಾರಣ ಸ್ವಲ್ಪ ಕಿಲೋಮೀಟರ್ ಪ್ರಯಾಣ ಮಾಡಿ ಆನಂತರ ಸರಿ ಮಾಡಿಸಿಕೊಳ್ಳಬಹುದು. ಆದರೆ ನನ್ನ ಕಾರಿನ ಟೈಯರ್ ಕಟ್ ಆಗಿತ್ತು. ಮೊದಲು ಇದಕ್ಕೆ ಮಶ್ರೂಮ್ ಫಿಲಿಂಗ್ ಮಾಡಿಸಲು ಹೇಳಿದ್ದರು ಆನಂತರ ನನಗೆ ಹೇಳಿದರು vulcanization ಮಾಡಬೇಕು ಅಂತ. ರೆಗ್ಯುಲರ್ ಆಗಿ ಓಡಾಡುವ ಕಾರುಗಳ ಕಟ್ ಆಗುವುದು ಜಾಸ್ತಿ. ನಂದು ಸೈಡಲ್ಲಿ ಕಟ್ ಆಗಿರುವ ಕಾರಣ ಇದು ಮಾಡಿಸಿದ್ದರು. vulcanization ಅಂದ್ರೆ ಕಟ್‌ನ ಹೊಲಿದು ಅದಕ್ಕೊಂದು ಗಮ್ ಹಾಕಿ ಅದರ ಮೇಲ್ಲೊಂದು ಪ್ಯಾಚ್ ಹಾಕುತ್ತಾರಂತೆ. ಹೊಸ ಟೈಯರ್ ಆಗಿರುವ ಕಾರಣ 45 ಅಥವಾ 50 ಸಾವಿರ ಕಿಲೋಮೀಟರ್ ಓಡಿಸಬಹುದು ಎಂದಿದ್ದಾರೆ' ಎಂದು ಮಾತನಾಡಿಸಿದ್ದಾರೆ.

'ನನಗೆ ದಾರಿ ಇರಲಿಲ್ಲ ಟೈಯರ್‌ ಫುಲ್ ಫ್ಲಾಟ್ ಆಗಿತ್ತು ಗಾಡಿ ಸ್ವಲ್ಪ ವಾಲಿತ್ತು. ನನ್ನ ಗಾಡಿಯಲ್ಲಿ ವಾರ್ನಿಂಗ್ ತೋರಿಸಲು ಶುರು ಮಾಡಿತ್ತು. ಪ್ರತಿಯೊಂದು ಗಾಡಿಯಲ್ಲೂ TPMS ಬರುತ್ತೆ ಇದರಿಂದ ಟೈಯರ್‌ನಲ್ಲಿ ಎಷ್ಟು ಗಾಳಿ ಇದೆ ಎಂದು ಗೊತ್ತಾಗುತ್ತದೆ. ಗಾಡಿನ ಮೊದಲು ಸೈಡ್‌ಗೆ ಹಾಕಿ ಗೂಗಲ್‌ನಲ್ಲಿ ಪಂಚರ್‌ ಅಂಗಡಿಗಳನ್ನು ಹುಡುಕಿದೆ ಎಲ್ಲಾ ದೂರ ದೂರ ತೋರಿಸಿದ ಕಾರಣ ಕಾರಿನಿಂದ ಇಳಿದು ಇಲ್ಲಿನ ಲೋಕಲ್‌ಗಳನ್ನು ಕೇಳಿದೆ. ಅವರು ಎಲ್ಲಿದೆ ಎಂದು ತಿಳಿಸಿಕೊಟ್ಟರು. ಹುಡುಗರು ಒಳ್ಳೆಯವರಾಗಿರುತ್ತಾರೆ ಎಲ್ಲರನ್ನೂ ಡೌಟ್‌ಫುಲ್ ಆಗಿ ನೋಡಬಾರದು. ಹುಡುಗಿಯರು ಗಾಡಿ ಓಡಿಸುತ್ತಿದ್ದಾರೆ ಅಂದ್ರೆ ಕೆಲವರು ಚಮಕ್ ಕೊಡುತ್ತಾರೆ ಆದರೆ ಕೆಲವು ಹುಡುಗರು ಜೆಂಟಲ್‌ಮ್ಯಾನ್. ಹುಡುಗಿಯರಿಗೆ ನನ್ನದೊಂದು ಮನವಿ. ನಾಚಿಕೆ ಪಡಬೇಡಿ ನಿಮಗೆ ಏನಾದರೂ ಕಷ್ಟ ಇದ್ರೆ ಸಹಾಯ ಬೇಕು ಅಂದ್ರೆ ಹೋಗಿ ಕೇಳಿ ನೀವಾಗಿ ನೀವೇ ಪರಿಹಾರ ಹುಡುಕಿಕೊಳ್ಳಿ ಆಗಲಿಲ್ಲ ಅಂದ್ರೆ ಬೇರೆ ಅವರಿಗೆ ಸಹಾಯ ಕೇಳಿ. ಒಳ್ಳೆ ಹುಡುಗರು ಒಳ್ಳೆ ಹುಡುಗಿಯರು ಇದ್ದಾರೆ' ಎಂದಿದ್ದಾರೆ ಚೈತ್ರಾ.


YouTube video player