ಕೊನೆಗೂ ಡ್ರೀಮ್ ಕಾರ್ ಖರೀದಿಸಿದ ಚೈತ್ರಾ ವಾಸುದೇವನ್; ದುಬಾರಿ ಕಾರಿನ ಜೊತೆ ಮಸ್ತ್ ಪೋಸ್
ಖ್ಯಾತ ನಿರೂಪಕಿ ಮತ್ತು ಬಿಗ್ ಬಾಸ್ ಕನ್ನಡ ಸೀಸನ್ 7 ಸ್ಪರ್ಧಿ ಚೈತ್ರಾ ವಾಸುದೇವನ್ ತನ್ನ ಡ್ರೀಮ್ ಕಾರ್ ಖರೀದಿ ಮಾಡಿದ್ದಾರೆ. ಅನೇಕ ಸಮಯದ ಕನಸು ನನಸಾಗಿದೆ ಎಂದು ಚೈತ್ರಾ ವಾಸುದೇವನ್ ಸಂತಸ ಪಟ್ಟಿದ್ದಾರೆ.
ಖ್ಯಾತ ನಿರೂಪಕಿ ಮತ್ತು ಬಿಗ್ ಬಾಸ್ ಕನ್ನಡ ಸೀಸನ್ 7 ಸ್ಪರ್ಧಿ ಚೈತ್ರಾ ವಾಸುದೇವನ್ ತನ್ನ ಡ್ರೀಮ್ ಕಾರ್ ಖರೀದಿ ಮಾಡಿದ್ದಾರೆ. ಅನೇಕ ಸಮಯದ ಕನಸು ನನಸಾಗಿದೆ ಎಂದು ಚೈತ್ರಾ ವಾಸುದೇವನ್ ಹೇಳಿದ್ದಾರೆ.
ಚೈತ್ರಾ ವಾಸುದೇವನ್ ಬಳಿ ಈಗಾಗಲೇ ದುಬಾರಿ ಕಾರು ಇದೆ. ಆದರೀಗ ಮತ್ತೊಂದು ದುಬಾರಿ ಕಾರು ಸೇರ್ಪಡೆಯಾಗಿದೆ. ಚೈತ್ರಾ ರೇಂಜ್ ರೋವರ್ ಕಂಪೆನಿಯ Evoque ಮಾಡೆಲ್ ಎಸ್ಯುವಿ ಅನ್ನು ಖರೀದಿ ಮಾಡಿದ್ದಾರೆ. ಇದರ ಎಕ್ಸ್ ಶೋರೂಂ ಬೆಲೆ 72 ಲಕ್ಷ ರೂಪಾಯಿಯಿಂದ ಆರಂಭ ಆಗಲಿದ್ದು, ಆನ್ ರೋಡ್ ಬೆಲೆ 89 ಲಕ್ಷ ರೂಪಾಯಿ ಇದೆ.
ಈ ಬಗ್ಗೆ ಚೈತ್ರಾ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. 'ನನ್ನ ಮುಂದಿನ ಕಾರ್. ನನ್ನ ಕುಟುಂಬದ ಹೊಸ ಸದಸ್ಯ ಎಂಟ್ರಿ. ರೇಂಜ್ ರೋವರ್, ಗೋಲ್ಡ್' ಎಂದು ಹೇಳಿದ್ದಾರೆ.
ಕಾರು ಖರೀದಿಸಿದ ಸಂತಸವನ್ನು ಹಂಚಿಕೊಳ್ಳುವ ಜೊತೆಗೆ ತನ್ನದೆ ಉಳಿತಾಯದ ಹಣದಲ್ಲಿ ಕಾರು ಖರೀದಿಸಿರುವುದಾಗಿ ಬಹಿರಂಗ ಪಡಿಸಿದ್ದಾರೆ. ಹೌದು, 'ದೀರ್ಘ ಸಮಯದ ಉಳಿತಾಯದ ಹಣದಿಂದ ಕೊನೆಗೂ ಕಾರು ಖರೀದಿಸಿದೆ' ಎಂದು ಹೇಳಿದ್ದಾರೆ.
ಚೈತ್ರಾ ಅವರಿಗೆ ಅನೇಕರು ಅಭಿನಂದನೆ ತಿಳಿಸುತ್ತಿದ್ದಾರೆ. ಕಾರಿನ ಜೊತೆ ಇರುವ ಸಂಭ್ರಮದಿಂದ ಕ್ಯಾಮರಾಗೆ ಪೋಸ್ ನೀಡಿರುವ ಫೋಟೋಗಳನ್ನು ಶೇರ್ ಮಾಡಿದ್ದಾರೆ. ನೀಲಿ ಬಣ್ಣದ ಡ್ರೆಸ್ ನಲ್ಲಿ ಚೈತ್ರಾ ತರಹೇವಾಕರಿ ಪೋಸ್ ನೀಡಿದ್ದಾರೆ. ಚೈತ್ರಾ ಸಂತಸಕ್ಕೆ ಪಾರವೇ ಇಲ್ಲವಾಗಿದೆ.
ಚೈತ್ರಾ ವಾಸುದೇವನ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ವೀಟ್ ಆಗಿದ್ದಾರೆ. ಪ್ರತಿಯೊಂದು ವಿಚಾರಗಳ ಬಗ್ಗೆಯೂ ಅಪ್ ಡೇಟ್ ನೀಡುತ್ತಿರುತ್ತಿರುತ್ತಾರೆ. ಬಿಗ್ ಬಾಸ್ ಮನೆಯಿಂದ ಹೊರಬಂದ ಬಳಿಕ ಅನೇಕ ಸಿನಿಮಾ ಆಫರ್ ಬಂದರೂ ಒಪ್ಪಿಕೊಂಡಿಲ್ಲ. ಸದ್ಯ ಚೈತ್ರಾ ಅವರು ಈವೆಂಟ್ ಮ್ಯಾನೆಜ್ ಮೆಂಟ್ ಕಂಪನಿ ನಡೆಸುತ್ತಿದ್ದಾರೆ.