ಬಿಗ್ ಬಾಸ್ ಮನೆಯಲ್ಲಿ ತಮಗೆ ತಾವೇ ಪೂಜೆ ಮಾಡಿಕೊಂಡಿದ್ದಕ್ಕೆ ಚೈತ್ರಾ ಕುಂದಾಪುರ ಸ್ಪಷ್ಟನೆ ನೀಡಿದ್ದಾರೆ. ಅದು 'ಔರ ಕ್ಲೆನ್ಸಿಂಗ್' ಅಥವಾ ಪ್ರಭಾವಳಿ ಶುದ್ಧೀಕರಣದ ಒಂದು ಭಾಗವಾಗಿತ್ತು. ಇದು ದೇಹದ ಏಳು ಚಕ್ರಗಳನ್ನು ಶುದ್ಧೀಕರಿಸುವ ಆಧ್ಯಾತ್ಮಿಕ ಪ್ರಕ್ರಿಯೆ.  

ಈ ಮೇಲಿನ ದೃಶ್ಯ ನೋಡಿದ್ರೆ ನಿಮಗೆ ಖಂಡಿತವಾಗಿಯೂ ಇದು ಏನು ಅನ್ನೋದು ನೆನಪಾಗುತ್ತೆ ಅಲ್ವಾ? ಇದನ್ನೇ ಅಲ್ವಾ? ಬಿಗ್ ಬಾಸ್ ಸೀಸನ್ 11 ರಲ್ಲಿ ಚೈತ್ರಾ ಕುಂದಾಪುರ (Chaithra Kundapura) ಮಾಡಿದ್ದು, ಎಂದು ನೆನಪಿಸಿಕೊಳ್ಳುವಿರಿ ಅಲ್ವಾ? ಹೌದು ಇದು ಅದೇನೆ. ದೊಡ್ಮನೆಯಲ್ಲಿ ಒಂದು ದಿನ ಇದ್ದಕ್ಕಿದ್ದಂತೆ ಚೈತ್ರಾ ದೇವರ ಮುಂದೆ ನಿಂತು, ತಮಗೆ ತಾವೇ ಅಗರಬತ್ತಿ, ಗಂಟೆ ಹಿಡಿದು ಪೂಜೆ ಮಾಡಿದ್ದರು. ಇದನ್ನು ನೋಡಿ ಮನೆಮಂದಿ ಶಾಕ್ ಆಗಿದ್ದರು. ಬಿಗ್ ಬಾಸ್ ನೋಡುತ್ತಿದ್ದ ವೀಕ್ಷಕರು, ಇದನ್ನ ನೋಡಿ ನಕ್ಕಿದ್ದು, I am God, God is Great ಎಂದು ಟ್ರೋಲ್ ಕೂಡ ಮಾಡಿದ್ದರು. ಇದೇನಪ್ಪಾ ದೇವರಿಗೆ ಪೂಜೆ ಮಾಡೋದು ಬಿಟ್ಟು, ಈ ಕುಂದಾಪುರದ ಫೈರ್ ಬ್ರಾಂಡ್ ತಮಗೆ ತಾವೇ ಪೂಜೆ ಮಾಡ್ತಿದ್ದಾರಲ್ಲ ಎಂದು ಕೂಡ ಆಡಿಕೊಳ್ಳಲು ಶುರು ಮಾಡಿದ್ದರು. ಇದೀಗ ಇದೇ ವಿಷಯದ ಬಗ್ಗೆ ಚೈತ್ರಾ ಕುಂದಾಪುರ ಸ್ಪಷ್ಟನೆ ನೀಡಿದ್ದಾರೆ. 

ರಜತ್‌ ಒಳ್ಳೆಯ ಮನುಷ್ಯ, ನಾವು ಅಣ್ಣ ತಂಗಿ ರೀತಿ ಜಗಳವಾಡುತ್ತೀವಿ: ಚೈತ್ರಾ ಕುಂದಾಪುರ

ತಮಗೆ ತಾವೆ ಪೂಜೆ ಮಾಡಿಕೊಂಡಿದ್ದು ಯಾಕೆ? 
ಚೈತ್ರಾ ಕುಂದಾಪುರ ತಮ್ಮ ಯೂಟ್ಯೂಬ್ ಚಾನೆಲ್ (Youtube Channel) ನಲ್ಲಿ ಅಂದು ಬಿಗ್ ಬಾಸ್ ಮನೆಯಲ್ಲಿ ತಮಗೆ ತಾವೇ ಪೂಜೆ ಮಾಡಿದ್ದು ಯಾಕೆ? ಅದರ ಅರ್ಥ ಏನು? ಅದನ್ನು ಯಾಕೆ ಮಾಡುತ್ತಾರೆ ಅನ್ನೋದರ ಬಗ್ಗೆ ಸಂಪೂರ್ಣ ಮಾಹಿತಿಯೊಂದಿಗೆ ಬಂದಿದ್ದಾರೆ. ಅಷ್ಟಕ್ಕೂ ಈ ಕುರಿತು ಚೈತ್ರಾ ಹೇಳಿದ್ದೇನು ಅನ್ನೋದನ್ನು ಹೇಳ್ತೀವಿ ಕೇಳಿ. “ನಾನು ಬಿಗ್ ಬಾಸ್ ಮನೆಯಲ್ಲಿದ್ದಾಗ I am God, God is Great ಎನ್ನುವಂತಹ ನನ್ನ ಕುರಿತಾದ ವಿಡೀಯೋ ಸಿಕ್ಕಾಪಟ್ಟೆ ಟ್ರೋಲ್ ಆಗಿತ್ತು. ಇವತ್ತು ಆ ಟ್ರೋಲ್ ಹಿಂದಿನ ಸತ್ಯಾಸತ್ಯತೆ ಬಗ್ಗೆ ಹೇಳ್ತಿದ್ದೀನಿ. ಆ ಪೂಜೆ ಖಂಡಿತವಾಗಿಯೂ ನಾನು ದೇವರು ಅನ್ನೋದಕ್ಕೆ ಆಗಿರಲಿಲ್ಲ. ಇದನ್ನು ಔರ ಕ್ಸೆನ್ಸಿಂಗ್ ಎನ್ನುತ್ತಾರೆ. ಇದಕ್ಕೆ ಈಗಾಗಲೇ ನಾನು ಉತ್ತರಿಸಿದ್ದೇನೆ. ಇದನ್ನು ಔರ ಕ್ಲೆನ್ಸಿಂಗ್ ಎನ್ನುತ್ತಾರೆ, ಕನ್ನಡದಲ್ಲಿ ಇದಕ್ಕೆ ಪ್ರಭಾವಳಿ ಶುದ್ಧೀಕರಣ ಎನ್ನಲಾಗುವುದು. ಇದನ್ನು ನಿಧಾನವಾಗಿ ಮಾಡಲಾಗುತ್ತೆ. 

Bigg Boss ಮುಗಿದ್ಮೇಲೂ ಬಾಸ್-ಶಿಷ್ಯನ ಜಗಳ ಮುಗಿತಿಲ್ಲ; ಮತ್ತೆ ಕದನಕ್ಕಿಳಿದ ಚೈತ್ರಾ ಕುಂದಾಪುರ, ರಜತ್!‌

ಏನದು ಔರ ಕ್ಲೆನ್ಸಿಂಗ್? ಯಾಕೆ ಇದನ್ನು ಮಾಡುತ್ತಾರೆ? 
ಔರ ಕ್ಲೆನ್ಸಿಂಗ್ ಅಥವಾ ಪ್ರಭಾವಳಿ ಶುದ್ಧೀಕರಣ (Aura Cleansing) ಅನ್ನೋದು ಒಂದು ಆಧ್ಯಾತ್ಮಿಕವಾದ ಪ್ರಕ್ರಿಯೆಯಾಗಿದೆ. ಇದನ್ನು ಜಗತ್ತಿನೆಲ್ಲೆಡೆ ಜನರು ಬೇರೆ ಬೇರೆ ರೂಪದಲ್ಲಿ ಮಾಡಿಕೊಂಡು ಬಂದಿದ್ದಾರೆ. ಇದು ಯಾವುದೇ ಊರಿನ ಆಚರಣೆ ಅಲ್ಲ. ಇದೊಂದು ವಿಧಿವಿಧಾನ ಅಷ್ಟೇ. ಆಧ್ಯಾತ್ಮಿಕತೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು ಇದನ್ನು ಮಾಡುತ್ತಾರೆ. ಧೂಪ ಮತ್ತು ಗಂಟೆ ಬಳಸಿಯೇ ಔರಾ ಕ್ಲೆನ್ಸಿಂಗ್ ಮಾಡಬೇಕು ಅಂತೇನಿಲ್ಲ. ಇದನ್ನು ಬೇರೆ ಬೇರೆ ವಿಧಾನಗಳಲ್ಲಿ ಮಾಡುತ್ತಾರೆ. ಅಮೆರಿಕಾದಲ್ಲಿ ಇದನ್ನು ಸೇಜ್ ಸ್ಮರ್ಜಿಂಗ್ ಎಂದು ಕರೆಯುತ್ತಾರೆ. ಅಂದರೆ ಅಲ್ಲಿ ಬೇರೆ ಬೇರೆ ರೀತಿಯ ಗಿಡಮೂಲಿಕೆಗಳನ್ನು ಸುಟ್ಟು ಇದನ್ನು ಮಾಡುತ್ತಾರೆ. ಇನ್ನು ಸ್ಪಾನಿಶ್ ನಲ್ಲಿ ಇದನ್ನು ಎಗ್ ಕ್ಲೆಂಜಿಂಗ್ ಎನ್ನುತ್ತಾರೆ. ಮೊಟ್ಟೆ, ನಿಂಬೆ ರಸ, ನೀರು ಬೆರೆಸಿ ಇದನ್ನ ಮಾಡಲಾಗುತ್ತೆ. ಜಗತ್ತಿನ ಮೂಲೆ ಮೂಲೆಯಲ್ಲಿ ಬೇರೆ ಬೇರೆ ರೂಪದಲ್ಲಿ ಔರ ಕ್ಲೆನ್ಸಿಂಗ್ ಮಾಡುತ್ತಾರೆ. ನಮ್ಮ ದೇಹದಲ್ಲಿರುವ ಏಳು ಚಕ್ರಗಳನ್ನು ಶುದ್ಧೀಕರಣ ಮಾಡುವ ಕ್ರಿಯೆಯನ್ನು ಔರಾ ಕ್ಲೆನ್ಸಿಂಗ್ ಎಂದು ಕರೆಯುತ್ತಾರೆ. ಇದು ಮೂಲತಃ ಭಾರತದಲ್ಲಿ ಹುಟ್ಟಿಕೊಂಡಂತಹ ಪದ್ಧತಿಯಾಗಿದ್ದು, ಇದನ್ನು ಹಿಂದೂ, ಮುಸ್ಲಿಂ, ಜೈನ, ಬುದ್ಧ ಎಲ್ಲಾ ಧರ್ಮಗಳಲ್ಲೂ ಬೇರೆ ಬೇರೆ ರೂಪದಲ್ಲಿ ಮಾಡಲಾಗುತ್ತೆ. 

ಈ ಕಾರಣಕ್ಕೆ ಪದೇ ಪದೇ ಕೊರಗಜ್ಜನ ಮೊರೆ ಹೋಗುತ್ತಿದ್ರು ಚೈತ್ರಾ ಕುಂದಾಪುರ; ಸತ್ಯ ಲೀಕ್‌ ಆಗೇಬಿಡ್ತು

ಯಾವ ರೀತಿಯಲ್ಲೆಲ್ಲಾ ಔರ ಕ್ಲೆನ್ಸಿಂಗ್ ಮಾಡಬಹುದು? 
ಧೂಪ ಮತ್ತು ಗಂಟೆಯನ್ನು ಬಳಸಿ ಔರ ಕ್ಲೆನ್ಸಿಂಗ್ ಮಾಡಬಹುದು. 
ಇನ್ನೊಂದು ಕಲ್ಲುಪ್ಪು, ನಿಂಬೆ ರಸ, ಅರಿಶಿನ, ಚಕ್ಕೆ ದಾಲ್ಚಿನಿ ಪುಡಿಯನ್ನು ನೀರಿನಲ್ಲಿ ಬೆರೆಸಿ, ಅದನ್ನು ಬಾತ್ ಟಬ್ ನಲ್ಲಿ ಹಾಕಿ, ಅದರಲ್ಲಿ ಮುಳುಗಿ ಸ್ನಾನ ಮಾಡೋದಕ್ಕೆ ಹೋಲಿ ವಾಟರ್ ಕ್ಲೆನ್ಸಿಂಗ್ ಎನ್ನುತ್ತಾರೆ. ವಿದೇಶಗಳಲ್ಲಿ ಈ ಪದ್ಧತಿ ಹೆಚ್ಚು ರೂಢಿಯಲ್ಲಿದೆ. 
ಭಾರತದಲ್ಲಿ ಪವಿತ್ರ ನದಿಗಳಲ್ಲಿ ಪುಣ್ಯ ಅಥವಾ ತೀರ್ಥ ಸ್ನಾನ ಮಾಡೋದು ಸಹ ಔರ ಕ್ಲೆನ್ಸಿಂಗ್ ಮಾಡೊದಕ್ಕೆನೆ. 
ಇದಲ್ಲದೇ ದೇವಾಲಯದಲ್ಲಿ ಗಂಟೆ ಭಾರಿಸುವಾಗ (sound of bells) ಬರುವಂತಹ ತರಂಗಗಳು ಸಹ ನಮ್ಮ ಸುತ್ತಮುತ್ತಲಿನ ನೆಗೆಟಿವಿಟಿಯನ್ನು ದೂರ ಮಾಡಿ, ನಮ್ಮ ಪ್ರಭಾವಳಿಯನ್ನು ಶುದ್ಧೀಕರಣ ಮಾಡುತ್ತೆ. 

ಚೈತ್ರಾ ಕುಂದಾಪುರ ಈ ಕುರಿತು ಬಹಳಷ್ಟು ಮಾಹಿತಿಯನ್ನು ತಮ್ಮ ಯೂಟ್ಯೂಬ್ ನಲ್ಲಿ ತಿಳಿಸಿದ್ದಾರೆ. ಇದನ್ನು ನೀವು ಕೂಡ ಈ ವಿಧಾನವನ್ನು ಪಾಲಿಸಬಹುದು. ಇಲ್ಲಿದೆ ಚೈತ್ರಾ ಕುಂದಾಪುರ ಅವರ ಯೂಟ್ಯೂಬ್ ವಿಡಿಯೋ. ಸಂಪೂರ್ಣ ಮಾಹಿತಿಗಾಗಿ ಚೈತ್ರಾ ನೀಡೀರುವ ಮಾಹಿತಿ ಕೇಳಿ.. 

YouTube video player